ಹಾಸಿಗೆಯಿಂದ ಎದ್ದ ಕೂಡಲೇ ಸೀನುತ್ತಲೇ ಇರುತ್ತೀರಾ? ಕಾರಣವಿದಿರಬಹುದು

Published : Jan 18, 2023, 03:39 PM ISTUpdated : Jan 18, 2023, 04:05 PM IST
ಹಾಸಿಗೆಯಿಂದ ಎದ್ದ ಕೂಡಲೇ ಸೀನುತ್ತಲೇ ಇರುತ್ತೀರಾ? ಕಾರಣವಿದಿರಬಹುದು

ಸಾರಾಂಶ

ನಮ್ಮ ದೇಹದಲ್ಲಿ ಸಣ್ಣ ಬದಲಾವಣೆಯಾದ್ರೂ ಅದು ಒಂದಲ್ಲ ಒಂದು ರೀತಿಯಲ್ಲಿ ಅದನ್ನು ನಮಗೆ ತೋರಿಸುತ್ತೆ. ಬೇಡದ ವಸ್ತು ದೇಹದ ಒಳಗೆ ಹೋದ್ರೆ ಅದನ್ನು ಹೊರಹಾಕುವ ಪ್ರಯತ್ನ ನಡೆಯುತ್ತಿರುತ್ತದೆ. ನಮಗೆ ಬರುವ ಸೀನಿಗೂ ಇದೇ ಕಾರಣ. ಆದ್ರೆ ಈ ಅಲರ್ಜಿ ಸೀನು ಸುಸ್ತು ಮಾಡ್ತಿದ್ರೆ ಕೆಲ ಮನೆ ಮದ್ದನ್ನು ಟ್ರೈ ಮಾಡಿ.  

ಬೆಳಗ್ಗೆ ಎದ್ದ  ತಕ್ಷಣ ಕೆಲವರು ಒಂದಾದ್ಮೇಲೆ ಒಂದರಂತೆ ಸೀನ್ತಾ ಇರ್ತಾರೆ. ಸ್ವಲ್ಪ ಸಮಯದ ನಂತ್ರ ಸೀನು ನಿಲ್ಲುತ್ತೆ. ಸೀನು ನೆಗಡಿಯಾದಾಗ ಮಾತ್ರವಲ್ಲ ಕೆಲವರಿಗೆ ಪ್ರತಿ ದಿನ ಬೆಳಿಗ್ಗೆ ಕಾಡುತ್ತದೆ. ಇದನ್ನು ವೈದ್ಯಕೀಯ ವಿಜ್ಞಾನದಲ್ಲಿ ಅಲರ್ಜಿಕ್ ರಿನಿಟಿಸ್ ಎಂದು ಕರೆಯಲಾಗುತ್ತದೆ. 

ಈ ಸೀನಿ (Sneeze) ಗೆ ಅನೇಕ ಕಾರಣವಿದೆ. ಏಕಾಏಕಿ ಹವಾಮಾನ (Weather) ಬದಲಾವಣೆಯಾದಾಗ, ಧೂಳು (Dust) ಮೂಗಿನ ಒಳಗೆ ಹೋದಾಗ, ತೇವಾಂಶವಿದ್ದಾಗ, ಬಣ್ಣದ ವಾಸನೆ  ಅಥವಾ ಸ್ಪ್ರೇ ಹಾಗೂ ಮಾಲಿನ್ಯ ವೆಲ್ಲವೂ ಈ ಅಲರ್ಜಿಕ್ (Allergic) ರಿನಿಟಿಸ್ ಸಮಸ್ಯೆಗೆ ಕಾರಣವಾಗುತ್ತದೆ. ನಾವು ಉಸಿರಾಡುವಾಗ ಉಸಿರಿನ ಜೊತೆ ಅಪಾಯಕಾರಿ ಅಂಶ ದೇಹ ಸೇರುತ್ತದೆ. ಮೂಗು, ದೇಹವನ್ನು ಈ ಅಪಾಯಕಾರಿ ಕಣ ತಲುಪದಂತೆ ತಡೆಯುವ ಪ್ರಯತ್ನ ನಡೆಸುತ್ತದೆ. ಒಂದ್ವೇಳೆ ಮೂಗಿನಿಂದ ಈ ಕಣ ದೇಹ ಸೇರಿದಾಗ ದೇಹ ಅದಕ್ಕೆ ಪ್ರತಿಕ್ರಿಯೆ ನೀಡುತ್ತದೆ. ಸೀನುವ ಮೂಲಕ ಅದನ್ನು ಹೊರಹಾಕುವ ಪ್ರಯತ್ನ ನಡೆಯುತ್ತದೆ. 

ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ಸೀನು ಬರ್ತಿದೆ ಅಂದ್ರೆ ಹೆಚ್ಚು ಟೆನ್ಷನ್ ಮಾಡ್ಕೊಳ್ಳಬೇಕಾಗಿಲ್ಲ. ಕೆಲವೊಂದು ಸುಲಭ ಟಿಪ್ಸ್ ಫಾಲೋ ಮಾಡುವ ಮೂಲಕ ನೀವು ಈ ಸೀನಿನ ಕಾಟದಿಂದ ತಪ್ಪಿಸಿಕೊಳ್ಳಬಹುದು. ನಾವಿಂದು ನಿಮ್ಮನ್ನು ಕಾಡುವ ಅಲರ್ಜಿಕ್ ರಿನಿಟಿಸ್ ಗೆ ಮನೆ ಮದ್ದನ್ನು ಹೇಳ್ತೆವೆ. 

ಅನಿರ್ಜಿಕ್  ರಿನಿಟಸ್ ಲಕ್ಷಣವೇನು ? : ಪ್ರತಿ ದಿನ ಬೆಳಿಗ್ಗೆ ನಿಮಗೆ ಸೀನು ಬರುವ ಜೊತೆಗೆ ಗಂಟಲು ನೋಯುತ್ತಿದ್ದರೆ ಅದು ಈ ಅಲರ್ಜಿ ಲಕ್ಷಣವಾಗಿದೆ. ಇದಲ್ಲದೆ ಕೆಮ್ಮು ಕೂಡ ನಿಮಗೆ ಕಾಣಿಸಿಕೊಳ್ಳುತ್ತದೆ. ನೆಗಡಿಯಾದ ಅನುಭವವಾಗುತ್ತದೆ. ಪದೇ ಪದೇ ತಲೆ ನೋವು ಕಾಡುವುದಿದೆ. ಕಣ್ಣಿನ ಕೆಳಗಿನ ಚರ್ಮ ಕಪ್ಪಾಗುವುದಲ್ಲದೆ, ದಣಿವು ಹೆಚ್ಚಾಗುತ್ತದೆ . ಇಂಥ ಲಕ್ಷಣ ನಿಮಗೆ ಕಂಡು ಬಂದ್ರೆ ಅನಿರ್ಜಿಕ್ ರಿನಿಟಸ್ ಗೆ ನೀವು ತುತ್ತಾಗಿದ್ದೀರಿ ಎಂದು ಭಾವಿಸಬಹುದು.  

ಬೆಳಿಗ್ಗೆ ನಿರಂತರವಾಗಿ ಬರುವ ಸೀನಿಗೆ ಮನೆ ಮದ್ದು : 

ಆಹಾರದ ಬಗ್ಗೆ ಇರಲಿ ಗಮನ : ನಿಮಗೆ ಅಲರ್ಜಿಕ್ ರಿನಿಟಿಸ್ ಸಮಸ್ಯೆ ಕಾಡ್ತಿದೆ ಎಂದಾದ್ರೆ ನೀವು ಸೇವಿಸುವ ಆಹಾರದ ಬಗ್ಗೆ ಎಚ್ಚರವಿರಲಿ. ಹೆಚ್ಚು ಲಘು ಆಹಾರ ಸೇವಿಸುವ ರೂಢಿ ಮಾಡ್ಕೊಳ್ಳಿ. ಕಲ್ಲು ಉಪ್ಪನ್ನು ಬಳಸುವ ಜೊತೆಗೆ ನೀವು ಪ್ರತಿ ದಿನ ಬೆಚ್ಚಗಿನ ನೀರನ್ನು ಕುಡಿಯಿರಿ. 

ಡಯಟ್ ಮಾಡದೇನೆ ತೂಕ ಇಳೀತಿದ್ರೆ ಎಚ್ಚರ, ಇದು ಹೊಟ್ಟೆಯ ಕ್ಯಾನ್ಸರ್ ಲಕ್ಷಣ

ತುಳಸಿ ಮದ್ದು : ತುಳಸಿ ಟೀ ಕೂಡ ನಿಮ್ಮ ಈ ಅಲರ್ಜಿ ಸಮಸ್ಯೆಯನ್ನು ಗುಣಪಡಿಸುತ್ತದೆ. ನೀವು ಕೆಲ ವಸ್ತುಗಳನ್ನು ಬಳಸಿ ಟೀ ಮಾಡಿ ಸೇವನೆ ಮಾಡ್ಬೇಕು. ಅದಕ್ಕೆ 10-12 ತುಳಸಿ ಎಲೆಗಳು, 1/4 ಟೀಚಮಚ ಕರಿಮೆಣಸಿನ ಪುಡಿ, ಒಂದೂವರೆ ಚಮಚ ತುರಿದ ಶುಂಠಿ  ಮತ್ತು ಅರ್ಧ ಟೀ ಚಮಚ ವೈನ್ ರೂಟ್ ಪುಡಿ ಅವಶ್ಯಕ.  ಈ ಎಲ್ಲವನ್ನೂ ನೀವು ಒಂದು ಕಪ್ ನೀರಿಗೆ ಹಾಕಿ ಕಡಿಮೆ ಉರಿಯಲ್ಲಿ ಕುದಿಸಬೇಕು. ನೀರು ಚೆನ್ನಾಗಿ ಕುದ್ದ ಮೇಲೆ ಅದನ್ನು ಫಿಲ್ಟರ್ ಮಾಡಿ ಸೇವನೆ ಮಾಡಬೇಕು. ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಇದನ್ನು ಸೇವಿಸ್ತಾ ಬಂದ್ರೆ ಸಮಸ್ಯೆ ಕಡಿಮೆಯಾಗುತ್ತದೆ. 

ಅರಿಶಿನ – ಕಲ್ಲುಪ್ಪು ಬಳಸಿ ನೋಡಿ : ಬೆಳಿಗ್ಗೆ ಎದ್ದ ತಕ್ಷಣ ಸಿಕ್ಕಾಪಟ್ಟೆ ಸೀನ್ ಬರುತ್ತೆ ಎನ್ನುವವರು ಒಂದು ಕಪ್ ಉಗುರುಬೆಚ್ಚಗಿನ ನೀರಿಗೆ  ಅರ್ಧ ಚಮಚ ಅರಿಶಿನ ಮತ್ತು ಕಲ್ಲು ಉಪ್ಪನ್ನು ಬೆರೆಸಿ ಕುಡಿಯಬೇಕು. ಅರಿಶಿನದಲ್ಲಿರುವ ಅಲರ್ಜಿ ವಿರೋಧಿ ಗುಣ ಮತ್ತು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಸಮಸ್ಯೆಯಿಂದ ಹೊರ ಬರಲು ನಿಮಗೆ ನೆರವಾಗುತ್ತದೆ.  

ನೆಲ್ಲಿಕಾಯಿ : ಒಂದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ. 

ಪುದೀನಾ ಟೀ : ಸೀನಿನ ಸಮಸ್ಯೆಗೆ ಪುದೀನಾ ಎಲೆ ಕೂಡ ಔಷಧಿಯಾಗಿದೆ. ನೀವು ಪುದೀನಾ ಟೀ ತಯಾರಿಸಿ ಕುಡಿಯುತ್ತ ಬಂದ್ರೆ ನಿಮ್ಮ ಅಲರ್ಜಿ ದೂರ ಓಡುತ್ತದೆ.

ಮಲಗೋಕೆ ಹೆದರ್ತಾರೆ, ಕನ್ನಡಿ ನೋಡಲೂ ಹೆದರ್ತಾರೆ… ಇಲ್ಲಿವೆ ವಿಚಿತ್ರ ಫೋಬಿಯಾ

ಸ್ಟೀಮ್ ನಿಂದ ಪರಿಹಾರ : ಬರೀ ಮಸಾಲೆಯುಕ್ತ ಟೀ ಮಾತ್ರವಲ್ಲ ಸ್ಟೀಮ್ ಕೂಡ ಪರಿಹಾರವಾಗಿದೆ. ಒಂದು ಲೀಟರ್ ನೀರನ್ನು ಕುದಿಸಿ ಅದಕ್ಕೆ ಸ್ವಲ್ಪ ಕರ್ಪೂರವನ್ನು ಬೆರೆಸಿ 10 ರಿಂದ 15 ನಿಮಿಷಗಳ ಕಾಲ ಸ್ಟೀಮ್  ತೆಗೆದುಕೊಳ್ಳಿ. ಪ್ರತಿ ನಿತ್ಯ ಈ ಕೆಲಸ ಮಾಡಿದ್ರೂ ನಿಮ್ಮ ಸಮಸ್ಯೆ ದೂರವಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!