ದೊಡ್ಡವನಾದ್ರೂ ಬಾತ್‌ರೂಂ ಓಪನ್‌ ಮಾಡ್ಕೊಂಡೇ ಸೂಸೂ ಮಾಡ್ತಾನೆ; ಏನಿದು ಪ್ರಾಬ್ಲಂ?

Suvarna News   | Asianet News
Published : Jan 03, 2020, 02:57 PM ISTUpdated : Jan 03, 2020, 03:04 PM IST
ದೊಡ್ಡವನಾದ್ರೂ ಬಾತ್‌ರೂಂ ಓಪನ್‌ ಮಾಡ್ಕೊಂಡೇ ಸೂಸೂ ಮಾಡ್ತಾನೆ; ಏನಿದು ಪ್ರಾಬ್ಲಂ?

ಸಾರಾಂಶ

ಒಂದು ವಯಸ್ಸಲ್ಲಿ ಮಕ್ಕಳಿಗೆ ನಾಚಿಕೆ, ಮ್ಯಾನರ್ಸ್‌ ಬರುತ್ತೆ ಅಂತಾರೆ. ನನ್ನ ಮಗನಿಗೆ 9 ವರ್ಷ ಆಯ್ತು ಆದರೂ ಬಾತ್‌ರೂಂ ಡೋರ್‌ ಓಪನ್‌ ಆಗಿಟ್ಟೇ ಸೂಸೂ ಮಾಡ್ತಾನೆ. ಯಾಕೆ ಹೀಗೆ?  

ಪ್ರಶ್ನೆ: ನಾನು ಉದ್ಯೋಗಸ್ಥ ಮಹಿಳೆ. ನನಗೆ ಒಬ್ಬನೇ ಮಗ. ಅವನಿಗೀಗ 9 ವರ್ಷ. ಆದ್ರೂ ಮನೆಯವರೆಲ್ಲ  ಅವನು ಬಹಳ ಚಿಕ್ಕವನು ಅನ್ನೋ ಥರ ಬಿಹೇವ್‌ ಮಾಡ್ತಾರೆ. ಮಗನ ವಯಸ್ಸಿನ ಹುಡುಗರೆಲ್ಲ ಈಗಾಗಲೇ ಟಾಯ್ಲೆಟ್‌ ಮ್ಯಾನರ್ಸ್‌ ಕಲಿತಿದ್ದಾರೆ. ಆದರೆ ನನ್ನ ಮಗ ಯಾರಿರಲಿ, ಇಲ್ಲದೇ ಇರಲಿ. ಬಾಗಿಲು ಓಪನ್‌ ಇಟ್ಟುಕೊಂಡೇ ಸೂಸು ಮಾಡ್ತಾನೆ. ಅವನಿಗೆ ಸಾರಿ ಸಾರಿ ಹೇಳಿದ್ದಾನೆ, ನೀನು ಪ್ರೈವೆಸಿ ಮೈಂಟೇನ್‌ ಮಾಡ್ಬೇಕು. ನಿನ್ನ  ಪ್ರೈವೇಟ್‌ ಪಾರ್ಟ್‌ಗಳನ್ನು ಯಾರೂ ನೋಡಬಾರದು. ಆದರೆ ಅವನು ನಾನು ಹೇಳೋದನ್ನು ಕೇಳೋದೇ ಇಲ್ಲ. ಅವನು ಬೆಳೆಯೋ ಹುಡುಗ. ಇನ್ನು ಕೆಲವೇ ವರ್ಷಗಳಲ್ಲಿ ಟೀನೇಜ್‌ಗೆ ಬರುತ್ತಾನೆ. ಅವನು ಉಳಿದ ಹುಡುಗರ ಹಾಗೆ ಅವನ ಪ್ರೈವೇಟ್‌ ಪಾರ್ಟ್‌ಗಳನ್ನು ಗುಪ್ತವಾಗಿಡೋದನ್ನು ಕಲಿಸೋದು ಹೇಗೆ?

ಮಕ್ಕಳ ರಜೆ ನಂಗೆ ಸಜೆ ಎಂಬ ಉದ್ಯೋಗಸ್ಥ ಅಮ್ಮನಿಗೆ 6 ಟಿಪ್ಸ್!

ಉತ್ತರ: ಸ್ವಲ್ಪ ಹಿರಿಯರಾಗಿದ್ದರೆ ನಿಮ್ಮ ಮಾತನ್ನು ಉಡಾಫೆ  ಮಾಡಿ ನಗುತ್ತಿದ್ದರು. ಆದರೆ ನಿಮ್ಮ ಫೀಲಿಂಗ್‌ ಏನು ಅಂತ ಅರ್ಥವಾಗುತ್ತೆ. ಇದು ಹೆಚ್ಚೆನೆಲ್ಲ ಅಮ್ಮಂದಿರ ಇನ್‌ಸೆಕ್ಯೂರಿಟಿ. ಮಗ ಒಂದು ವಯಸ್ಸಲ್ಲಿ ಹೇಗಿರಬೇಕೋ ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಈ ಕಾಲದ ಹೆಚ್ಚಿನ ಹೆತ್ತವರ ಕಾಳಜಿ. ಮೊದಲಾದರೆ ಮನೆಯಲ್ಲಿ ಹತ್ತಾರು ಮಕ್ಕಳು. ಹೀಗೆ ಕಣ್ಣಲ್ಲಿ ಕಣ್ಣಿಟ್ಟು ನೋಡೋದು ಸಾಧ್ಯ ಆಗ್ತಾ ಇರಲಿಲ್ಲ. ಈಗ ಒಂದೊಂದೇ ಮಗು. ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡೋರೇ ಹೆಚ್ಚು. ಇರಲಿ, ನಿಮ್ಮ ನಿಮಗೆ ನಿಮಗನಿಸಿದಷ್ಟು ದೊಡ್ಡವನಾಗಿಲ್ಲ. ಅವನಿನ್ನೂ ಚಿಕ್ಕವನು. ನೀವು ನಿರೀಕ್ಷಿಸುವ ಮ್ಯಾನರ್ಸ್‌ ಅವನು ಅವನಾಗಿಯೇ ಕಲಿಯಲು ಸ್ವಲ್ಪ ದಿನ ಹಿಡಿಯಬಹುದು. ಇಲ್ಲ, ಅವನೀಗಲೇ ಅದನ್ನೆಲ್ಲ ಕಲೀಬೇಕು ಅಂತಿದ್ರೆ ಹೀಗೆ ಮಾಡಬಹುದು. ಮಗ  ಬಾತ್‌ ರೂಂಗೆ ಹೋದಾಗ ಬಾಗಿಲು ಮುಚ್ಚಲು ಹೇಳಿ. ಅವನು ಮುಚ್ಚಿದರೆ ಒಂದು ಚಾಕ್ಲೇಟ್‌ ಕೊಡಿ. ಮೂರ್ನಾಲ್ಕು ಸಲ ಹೀಗೆ ಮಾಡಿ. ಐದನೇ ಸಲ ನೀವು ಚಾಕ್ಲೇಟ್‌ ಕೊಡದಿದ್ರೂ ಅವನು ಬಾಗಿಲು ಮುಚ್ಚುತ್ತಾನೆ. ಅವನಿಗೆ ಅವನ ಪ್ರೈವೇಟ್‌ ಪಾರ್ಟ್‌ನ ಬಗ್ಗೆ ತಿಳುವಳಿಕೆ ಮೂಡಿಸಿ. ಆದರೆ ಅದು ಅವನ ತಿಳುವಳಿಕೆ ಹೆಚ್ಚಿಸುವ ಹಾಗಿರಬೇಕೇ ಹೊರತು ಅವನಿಗೆ ತನ್ನ ಗುಪ್ತಾಂಗದ ಬಗ್ಗೆ ಕುತೂಹಲ ಹೆಚ್ಚುವಂತೆಯೋ, ಗುಪ್ತಾಂಗ ಕಂಡರೆ ಅಪರಾಧ ಅನ್ನೋ ಥರವೋ ಬಿಂಬಿಸಬಾರದು.

ಮಕ್ಕಳ ಜಗಳ ನೀವಂದುಕೊಂಡಷ್ಟು ಸರಳ ಇರೋದಿಲ್ಲ!

ನಮ್ಮ ಗುಪ್ತ ಅಂಗಗಳು ಬಹಳ ಸೂಕ್ಷ್ಮ ಇರುತ್ತವೆ. ಆ ಜಾಗಕ್ಕೆ ಗಾಯಗಳಾದರೆ ಉಳಿದ ಜಾಗಕ್ಕಿಂತ ಹೆಚ್ಚಾಗಿ ನೋವಾಗುತ್ತೆ. ಆ ಕಾರಣಕ್ಕೆ ಗುಪ್ತಾಂಗಗಳನ್ನು ಮುಚ್ಚಿಡಬೇಕು ಅನ್ನೋ ಹಾಗೆ ಹೇಳಿ ಬೆಳೆಸಬೇಕು. ಆದರೆ ನಮ್ಮ ಹೆಚ್ಚಿನ ಪೋಷಕರು ಮಕ್ಕಳನ್ನು ಹೆದರಿಸಿ ಬೆದರಿಸಿ ಅಸಹ್ಯವಾಗಿ ಮಾತನಾಡಿ ಆ ಪಾರ್ಟ್‌ಗಳನ್ನು ಮುಚ್ಚಿಟ್ಟುಕೊಳ್ಳುವಂತೆ ಹೇಳುತ್ತಾರೆ. ಇದು ಮಗುವಿನಲ್ಲಿ ಕುತೂಹಲ ಹೆಚ್ಚಿಸುತ್ತ ಹೋಗುತ್ತದೆ. ಮಗು ಈ ಕುತೂಹಲ ತಣಿಸೋ ದಾರಿಗಳ ಬಗ್ಗೆ ಯೋಚಿಸುತ್ತದೆ. ಹೆತ್ತವರ ಮೊರೆ ಹೋಗೋಣ ಅಂದರೆ ಅವರೆಲ್ಲಿ ಬೈಯ್ಯುತ್ತಾರೋ ಅಂತ ಭಯ. ಕೆಲವು ಮಕ್ಕಳು ಹಾಗೆ ಕೇಳ ಹೊರಟು ಬೈಸಿಕೊಳ್ಳೋದೂ ಇದೆ. ಹೀಗಾಗಿ ಮಗು ಬೇರೆಯದೇ ದಾರಿ ಹುಡುಕಿಕೊಳ್ಳುತ್ತೆ. ಮಗುವಿಗೆ ಸುಲಭವಾಗಿ ಸಿಗೋದು ಮೊಬೈಲ್‌. 9ನೇ ವರ್ಷಕ್ಕೆಲ್ಲ ಇದರಲ್ಲಿ ಸರ್ಚ್‌ ಮಾಡೋದು, ವೀಡಿಯೋ ನೋಡೋದು ಲೀಲಾಜಾಲ. ಅಪ್ಪಿತಪ್ಪಿ ಪೋರ್ನ್‌ ವೀಡಿಯೋಗಳು ಕಣ್ಣಿಗೆ ಬಿದ್ದರೆ ಆ ಎಳೆಯ ಮನಸ್ಸಿನ ಮೇಲೆ ಅದು ಬೀರುವ ಪರಿಣಾಮ ಭೀಕರ.

ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?

ಹೀಗಾಗಿ ಪ್ರೀ ಟೀನ್‌ ಅಂತ ಕರೀತೀವಲ್ಲಾ, ಆ ವಯಸ್ಸಿನ ಮಕ್ಕಳ ಪೋಷಕರು ಮಕ್ಕಳಲ್ಲಿ ಅವರ ಪ್ರೈವೇಟ್‌ ಪಾರ್ಟ್‌ಗಳ ಬಗ್ಗೆ, ಅವರ ಕುತೂಹಲದ ಪ್ರಶ್ನೆಗಳಿಗೆ ಅರಿವು ಮೂಡಿಸುವಂತೆ ವಿವರಿಸಿ. ಮಕ್ಕಳ ಟೀನ್‌ಲೈಫ್‌ ಚೆನ್ನಾಗಿರಲಿ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!