
ಅರಿಶಿನವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಎಲ್ಲಾ ರೀತಿಯ ಅಡುಗೆಯಲ್ಲೂ ಅರಿಶಿನವನ್ನು ಬಳಸುತ್ತಾರೆ. ಇದು ಆಹಾರದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಹಾಕುತ್ತದೆ ಎಂದು ಹಿರಿಯರು ನಂಬುತ್ತಾರೆ. ಮಾತ್ರವಲ್ಲ ಅರಿಶಿನವು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಹೀಗಾಗಿಯೇ ಕೊರೋನಾ ಸೋಂಕು ಹರಡುವ ಸಮಯದಲ್ಲಿ ಅರಿಶಿನ ಬೆರೆಸಿದ ನೀರು ಕುಡಿಯಲು, ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿಶಿನವನ್ನು ಬೆರೆಸಲು ಸಲಹೆ ನೀಡಲಾಗಿತ್ತು. ಅರಿಶಿನವನ್ನು ಸೇವಿಸುವ ಅಸಂಖ್ಯಾತ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ಹಿಂದಿನಿಂದಲೂ ಹೇಳಲಾಗಿದೆ, ಆದರೆ ಈ ಉತ್ಕರ್ಷಣ ನಿರೋಧಕ ಮಸಾಲೆ ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋ ವಿಷಯ ನಿಮಗೆ ತಿಳಿದಿದೆಯಾ ?
ಅರಿಶಿನದಲ್ಲಿರುವ ಕರ್ಕ್ಯುಮಿನ್ ಆರೋಗ್ಯಕ್ಕೆ ಹಾನಿಕಾರಕವೇ ?
ಕರ್ಕ್ಯುಮಿನ್ ಎಂಬ ಅಂಶ ಅರಿಶಿನ (Turmeric)ವನ್ನು ಸೂಪರ್ ಫುಡ್ ಮಾಡುತ್ತದೆ. ನೋವು ವಾಸಿ ಮಾಡುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ, ಸೋಂಕು ನಿವಾರಕವನ್ನು ದೂರವಿಡುವವರೆಗೆ, ಈ ಮಸಾಲೆ (Spice) ಎಲ್ಲವನ್ನೂ ಸರಿಪಡಿಸಬಹುದು. ಆದರೆ, ಈ ಮಸಾಲೆಯ ಹೆಚ್ಚಿನ ಸೇವನೆಯು ದೇಹದ (Body) ಮೇಲೆ ಹಲವಾರು ರೀತಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮನೆ ಮದ್ದು ಅರಿಶಿಣ, ಸರ್ವಕಾಲದ ಚರ್ಮ ರೋಗಕ್ಕೂ ಮದ್ದು
ಅರಿಶಿನ ಮೂತ್ರಪಿಂಡಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಆರೋಗ್ಯಕ್ಕೆ ಅರಿಶಿನ ಸೇವನೆ ಉತ್ತಮವಾಗಿದ್ದರೂ, ಮೂತ್ರಪಿಂಡಗಳ (Kidney) ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದುಬಂದಿದೆ. ಏಕೆಂದರೆ ಅರಿಶಿನದಲ್ಲಿರುವ ಕರ್ಕ್ಯುಮಿನ್ ಹೆಚ್ಚಿನ ಪ್ರಮಾಣದ ಆಕ್ಸಲೇಟ್‌ಗಳನ್ನು ಹೊಂದಿದ್ದು ಅದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ಜೊತೆಗೆ, ಕರ್ಕ್ಯುಮಿನ್ ಬಿಸಿ ಸಾಮರ್ಥ್ಯವನ್ನು ಹೊಂದಿದೆ, ಇದು ಸಾಮಾನ್ಯವಾಗಿ ಅತಿಸಾರ, ಅಜೀರ್ಣ, ಇತರ ವಿಷಯಗಳ ಜೊತೆಗೆ ಸಂಬಂಧಿಸಿದೆ. ಇದಲ್ಲದೆ, ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ರಕ್ತ ತೆಳುವಾಗಲು ಕಾರಣವಾಗಬಹುದು. ಏಕೆಂದರೆ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿನದ ಅತಿಯಾದ ಸೇವನೆಯು ಯಕೃತ್ತಿನ ಆರೋಗ್ಯದ (Health) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿದೆ.
ಅರಿಶಿನ ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ ?
ಅರಿಶಿನದಲ್ಲಿ ಕರ್ಕ್ಯುಮಿನ್ ಇರುವಿಕೆಯು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಫೈಬ್ರಾಯ್ಡ್‌ಗಳ ಪ್ರಗತಿಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅರಿಶಿನದ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಯಕೃತ್ತನ್ನು ಆರೋಗ್ಯಕರವಾಗಿಸುತ್ತದೆ. ಆದರೆ ಅದನ್ನು ಮಿತವಾಗಿ ಸೇವಿಸಿದಾಗ ಮಾತ್ರ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಪಿತ್ತಜನಕಾಂಗದ ಕಾರ್ಯನಿರ್ವಹಣೆಯ ಅಧ್ಯಯನದ ಪ್ರಕಾರ ಅರಿಶಿನದ ಅಧಿಕವು ಅಸ್ಥಿರ ಸೀರಮ್ ಕಿಣ್ವಗಳ ಕಡಿಮೆ ದರದೊಂದಿಗೆ ಸಂಬಂಧಿಸಿದೆ.
ಬೇಗ ಸಣ್ಣಗಾಗ್ಬೇಕಾ ? ಅರಿಶಿನ ಸೇರಿಸಿದ ಹಾಲು ಕುಡೀರಿ ಸಾಕು
ಒಂದು ದಿನದಲ್ಲಿ ನೀವು ಎಷ್ಟು ಅರಿಶಿನ ತಿನ್ನಬೇಕು ?
ಆರೋಗ್ಯ ತಜ್ಞರ ಪ್ರಕಾರ, ಅರಿಶಿನದ ದೈನಂದಿನ ಸೇವನೆಯು 2000 ಮಿಗ್ರಾಂ ಮೀರಬಾರದು. ಮತ್ತು ಕನಿಷ್ಠ 500 ಮಿಗ್ರಾಂ ಆರೋಗ್ಯಕರ ಸೇವನೆಯನ್ನು ಖಚಿತಪಡಿಸಿಕೊಳ್ಳಬೇಕು.
ಇಂಥಾ ಆರೋಗ್ಯ ಸಮಸ್ಯೆಯಿರುವವರು ಅರಿಶಿನ ಹಾಲು ಕುಡಿಬೇಡಿ
ನಿಮಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದು, ಆ ಸಮಯದಲ್ಲಿ ಅರಿಶಿನ ಹಾಲನ್ನು(Turmeric milk) ಸೇವಿಸಿದರೆ, ಅದು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತೆ. ಮೂತ್ರಪಿಂಡದ ಕಲ್ಲು, ಮೂತ್ರಪಿಂಡದ ಉರಿಯೂತ, ಮೂತ್ರಪಿಂಡದ ವೈಫಲ್ಯ ಮುಂತಾದ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಒಬ್ಬ ವ್ಯಕ್ತಿಯು ಬಳಲುತ್ತಿದ್ದರೆ, ಅರಿಶಿನದ ಹಾಲಿನ ಸೇವನೆ ತಪ್ಪಿಸಬೇಕು. ಏಕೆಂದರೆ ಅರಿಶಿನವು ಆಕ್ಸಲೇಟ್ ಹೊಂದಿರುತ್ತೆ, ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ಪ್ರಚೋದಿಸುತ್ತೆ. ಒಬ್ಬ ವ್ಯಕ್ತಿಯು ಈಗಾಗಲೇ ಮೂತ್ರಪಿಂಡದ ಸಮಸ್ಯೆಯನ್ನು ಹೊಂದಿದ್ದರೆ, ಅರಿಶಿನದ ಹಾಲು ಪರಿಸ್ಥಿತಿಯನ್ನು ಗಂಭೀರಗೊಳಿಸಬಹುದು.
ಅರಿಶಿನ ಹಾಲನ್ನು ಸೇವಿಸೋದರಿಂದ ಲೊ ಬ್ಲಡ್ ಶುಗರ್ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಆಗಬಹುದು, ಏಕೆಂದರೆ ಅರಿಶಿನವು ಕರ್ಕ್ಯುಮಿನ್ ಹೊಂದಿರುತ್ತೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತೆ. ಆದ್ದರಿಂದ, ಇದು ಕಡಿಮೆ ರಕ್ತದೊತ್ತಡ ಹೊಂದಿರುವ ರೋಗಿಗಳಿಗೆ ಸಮಸ್ಯೆಯನ್ನು ಹೆಚ್ಚಿಸಬಹುದು. ಒಬ್ಬ ವ್ಯಕ್ತಿಯು ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆಯುಬ್ಬರ, ಎದೆಯ ಕಿರಿಕಿರಿ ಅಥವಾ ಆಸಿಡ್ ರಿಫ್ಲಕ್ಸ್, ಮಲಬದ್ಧತೆ, ಅಜೀರ್ಣ, ಇತ್ಯಾದಿಗಳಂತಹ ಜೀರ್ಣಕಾರಿ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದರೆ, ಆಗ ಅರಿಶಿನ ಹಾಲನ್ನು ಸೇವಿಸೋದರಿಂದ ಹೊಟ್ಟೆಯ ಸಮಸ್ಯೆ ಹೆಚ್ಚಾಗಬಹುದು. ಆದ್ದರಿಂದ, ಹೊಟ್ಟೆಯ ಸಮಸ್ಯೆಗಳಿದ್ದರೆ ಅರಿಶಿನದ ಹಾಲನ್ನು ಸೇವಿಸೋದನ್ನು ತಪ್ಪಿಸೋದು ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.