ಕೊಳಕು ಬೆಡ್ ಶೀಟ್ ನಲ್ಲಿ ಮಲಗುವ ಮಜವೇ ಬೇರೆ. ಇದು ಬ್ಯಾಚ್ಯುಲರ್ಸ್ ಫೆವರೆಟ್ ಡೈಲಾಗ್. ತೊಳೆಯೋಕೆ ಆಲಸ್ಯ. ಚೇಂಜ್ ಮಾಡೋಕೆ ಟೈಂ ಇಲ್ಲ. ಹಾಗಾಗಿ ತಿಂಗಳು, ವರ್ಷಗಟ್ಟಲೆ ಅದೇ ಗಬ್ಬು ನಾರುವ ಬೆಡ್ ಶೀಟ್ ಮೇಲೆ ಮಲಗಿರ್ತಾರೆ. ಅವರು ಮಾತ್ರವಲ್ಲ, ಕುಟುಂಬಸ್ಥರು ಕೂಡ ಬೆಟ್ ಶೀಟ್ ಸೌಂದರ್ಯಕ್ಕೆ ಕೊಟ್ಟಷ್ಟು ಅದ್ರ ಸ್ವಚ್ಛತೆಗೆ ಮಹತ್ವ ನೀಡಲ್ಲ.
ಬೆಡ್ (Bed) ಮೇಲೊಂದು ಬೆಡ್ ಶೀಟ್ (Bed Sheet ) ಇರ್ಲೇಬೇಕು. ಇದು ಹಾಸಿಗೆಯ ಅಂದವನ್ನು ಹೆಚ್ಚಿಸುತ್ತದೆ. ಮಾರುಕಟ್ಟೆಗೆ ಬಗೆ ಬಗೆ ವಿನ್ಯಾಸದ ಬೆಡ್ ಶೀಟ್ ಗಳು ಲಗ್ಗೆಯಿಟ್ಟಿವೆ. ಸುಂದರ (Beautiful) ಬೆಡ್ ಶೀಟ್ಗೆ ಮಾರು ಹೋಗುವ ಜನರು ಅಗತ್ಯಕ್ಕಿಂತ ಹೆಚ್ಚು ಬೆಡ್‌ಶೀಟ್‌ಗಳನ್ನು ಮನೆಗೆ ತಂದಿರ್ತಾರೆ. ಆದ್ರೆ ಅದೆಲ್ಲ ಬೀರುವಿನಲ್ಲಿರುತ್ತದೆ. ಬ್ಯೂಟಿಗೆ ಮಹತ್ವ ನೀಡುವ ನಾವು ಬೆಡ್‌ಶೀಟ್ ಶುಚಿತ್ವದ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಬೆಡ್‌ಶೀಟ್ ಹಾಗೂ ಹೊದಿಕೆ ಕೊಳಕಾಗಿದೆ ಎಂದಾಗ ಅದನ್ನು ಸ್ವಚ್ಛಗೊಳಿಸಲು ಮುಂದಾಗ್ತೇವೆ. ಕೆಲವರು ಹರಿದ ಮೇಲೆ ಅದನ್ನು ಬದಲಿಸುತ್ತಾರೆಯೇ ಹೊರತು ಅದಕ್ಕಿಂತ ಮೊದಲು ಅದಕ್ಕೆ ನೀರು ತಾಗಿಸಿರುವುದಿಲ್ಲ. ಬೆಡ್‌ಶೀಟ್‌ನಲ್ಲಿ ಅಡಗಿರುವ ಆರೋಗ್ಯದ ಗುಟ್ಟು, ಎಷ್ಟು ದಿನಕ್ಕೊಮ್ಮೆ ಬೆಡ್‌ಶೀಟ್ ಬದಲಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅನೇಕ ರೋಗಕ್ಕೆ ಬೆಡ್ ಶೀಟ್ ಮೂಲ : ಯಸ್. ಇದು ಅಚ್ಚರಿ ಎನ್ನಿಸಿದ್ರೂ ಸತ್ಯಸಂಗತಿ. ಕೊರಾನಾ ಅವಧಿಯಲ್ಲಿ ಮಾತ್ರವಲ್ಲ, ಸದಾ ರೋಗನಿರೋಧಕ ಶಕ್ತಿಯ ಅಗತ್ಯತೆ ನಮಗಿದೆ. ಆದ್ರೆ ಒಂದೇ ಬೆಡ್ ಶೀಟನ್ನು ದೀರ್ಘಕಾಲ ಬಳಸುವುದ್ರಿಂದ ನಮ್ಮ ರೋಗನಿರೋಧಕ ಶಕ್ತಿ (Immunity )ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಋತು ಬದಲಾದಂತೆ ಕಾಡುವ ರೋಗ, ಉಸಿರಾಟದ ಕಾಯಿಲೆಗಳು, ಎಸ್‌ಟಿಡಿ ಮತ್ತು ನಿದ್ರೆ ಸಮಸ್ಯೆ ಕಾಡಬಹುದು.
ಸಾಮಾನ್ಯವಾಗಿ ನಾವು ಹಾಸಿಗೆಗೆ ಹೋಗುವ ಮೊದಲು ಕೈಕಾಲುಗಳನ್ನು ತೊಳೆದಿರುತ್ತೇವೆ ನಿಜ. ಆದ್ರೆ ಅನೇಕರು ರಾತ್ರಿ ಮಲಗುವ ಮೊದಲು ಕಾಲು, ತಲೆಗೆ ಎಣ್ಣೆ ಹಾಕಿಕೊಳ್ತಾರೆ. ಇದು ಹಾಸಿಗೆ ಜಿಡ್ಡಿಗೆ ಕಾರಣವಾಗುತ್ತದೆ. ನಮ್ಮ ಕಣ್ಣಿಗೆ ಬೆಡ್ ಶೀಟ್ ಸ್ವಚ್ಛವಾಗಿಯೇ ಕಾಣಬಹುದು. ಅದ್ರಲ್ಲಿರುವ ಸೂಕ್ಷ್ಮ ಧೂಳಿನ ಕಣಗಳು ನಮಗೆ ಕಾಣುವುದಿಲ್ಲ. ಇವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
undefined
ಬೆಡ್‌ಶೀಟ್ ಯಾವಾಗ ತೊಳೆಯಬೇಕು ? : ಬೆಡ್ ಶೀಟಿನಲ್ಲಿ ಕೊಳೆಯಿರುತ್ತದೆ. ಅದು ಅನಾರೋಗ್ಯವನ್ನುಂಟು ಮಾಡುತ್ತದೆ ಎಂಬ ವಿಷ್ಯ ನಮಗೆ ಗೊತ್ತಾಯ್ತು. ಹಾಗಿದ್ರೆ ಎಷ್ಟು ದಿನಕ್ಕೊಮ್ಮೆ ಬೆಡ್ ಶೀಟ್ ಸ್ವಚ್ಛಗೊಳಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ಸಾಮಾನ್ಯವಾಗಿ 3-4 ವಾರಗಳಲ್ಲಿ ಒಮ್ಮೆ ಬೆಡ್ ಶೀಟ್, ಹೊದಿಕೆ ತೊಳೆಯುತ್ತೇವೆ. ಆದ್ರೆ ಇದು ತಪ್ಪು. ಪ್ರತಿ ವಾರಕ್ಕೊಮ್ಮೆ ಬೆಡ್ ಶೀಟ್ ತೊಳೆಯುವುದು ಅತ್ಯುತ್ತಮ. ಸಾಧ್ಯವಿಲ್ಲ ಎನ್ನುವವರು ಎರಡು ವಾರಕ್ಕೊಮ್ಮೆಯಾದ್ರೂ ಬೆಡ್ ಶೀಟ್ ಸ್ವಚ್ಛಗೊಳಿಸಬೇಕು. ನಮ್ಮ ದೇಹವು ಪ್ರತಿದಿನ 40,000 ಸತ್ತ ಚರ್ಮ ಕೋಶಗಳನ್ನು ಬಿಡುಗಡೆ ಮಾಡುತ್ತದೆ. ಇದು ನಮ್ಮ ಆರೋಗ್ಯ, ನಿದ್ರೆಯ ಮೇಲೆ ಪರಿಣಾಮ ಬೀರುವ ಬಹಳಷ್ಟು ಕೆಟ್ಟ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ.
Working Women and Pregnancy: ಪರಿಸ್ಥಿತಿ ಸಂಭಾಳಿಸೋದು ಹೇಗೆ?
ಮೂರ್ನಾಲ್ಕು ವಾರಕ್ಕೊಮ್ಮೆ ನೀವು ಬೆಡ್ ಶೀಟ್ ತೊಳೆದರೆ, ಮೊಡವೆ, ಅಲರ್ಜಿ, ಎಕ್ಸಿಮಾ, ಅಸ್ತಮಾ, ಶೀತ, ಜ್ವರದಂತ ಅನಾರೋಗ್ಯ ನಿಮ್ಮನ್ನು ಪದೇ ಪದೇ ಕಾಡ್ತಿರುತ್ತದೆ. ನ್ಯುಮೋನಿಯಾ ಮತ್ತು ಗೊನೊರಿಯಾಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳು ನಿಮ್ಮ ಹಾಸಿಗೆಯಲ್ಲಿ 7 ದಿನಗಳಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ.
Womans Life : ಮದುವೆ ಬಳಿಕ ಹೆಣ್ಮಕ್ಕಳು ಯಾವೆಲ್ಲಾ ದಾಖಲೆ ಬದಲಿಸಬೇಕು ಗೊತ್ತಾ?
ತಿಂಗಳುಗಟ್ಟಲೆ ಬೆಡ್ ಶೀಟ್ ಬಳಕೆ : ಹಳೆ ಬೆಡ್ ಶೀಟ್ ಮೇಲೆ ಸಂಶೋಧನೆ ನಡೆದಿದೆ. ಸೆವಿಲ್ಲೆ ವಿಶ್ವವಿದ್ಯಾನಿಲಯದ ಜೀವಶಾಸ್ತ್ರ ವಿಭಾಗವು ಸೂಕ್ಷ್ಮದರ್ಶಕದ ಅಡಿಯಲ್ಲಿ 4 ವಾರಗಳ ಹಳೆಯ ಬೆಡ್ ಶೀಟ್ ಪರೀಕ್ಷೆ ಮಾಡಿದೆ. ನ್ಯುಮೋನಿಯಾ, ಗೊನೊರಿಯಾ ಮತ್ತು ಅಪೆಂಡಿಸೈಟಿಸ್‌ಗೆ ಸಂಬಂಧಿಸಿರುವ ಬ್ಯಾಕ್ಟೀರಿಯಾ ಇದ್ರಲ್ಲಿರುವುದು ಕಂಡು ಬಂದಿದೆ. ಗಂಟಲಿನ ಸೋಂಕನ್ನು ಉಂಟುಮಾಡುವ ಫ್ಯೂಸೋಬ್ಯಾಕ್ಟೀರಿಯಾವನ್ನೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ನಿಮ್ಮ ಮನೆಯ ಬೆಡ್ ಶೀಟ್ ಸ್ವಚ್ಛಗೊಳಿಸಿ ಅಥವಾ ಬದಲಿಸಿ ಎಷ್ಟು ದಿನವಾಗಿದೆ ಎಂಬುದನ್ನು ಈಗ್ಲೇ ಲೆಕ್ಕ ಹಾಕಿ. ಎರಡು ವಾರದ ಗಡಿ ಮೀರಿದ್ರೆ ಇಂದೇ ಸ್ವಚ್ಛಗೊಳಿಸಿ.