ಭಾರತೀಯರು ಕೈಯಲ್ಲೇ ಊಟ ಮಾಡುವುದೇಕೆ? ಇಲ್ಲಿದೆ ವೈಜ್ಞಾನಿಕ ಕಾರಣ

By Bhavani Bhat  |  First Published Jan 7, 2025, 8:35 PM IST

ಪಶ್ಚಿಮದ ಅಮೆರಿಕ, ಉತ್ತರದ ಯುರೋಪ್‌, ಪೂರ್ವ ಚೀನಾ- ಜಪಾನ್‌ ಮೊದಲಾದ ದೇಶಗಳು ಆಹಾರ ಸೇವಿಸಲು ಚಮಚ, ಫೋರ್ಕ್‌, ಚಾಪ್‌ಸ್ಟಿಕ್‌ ಇತ್ಯಾದಿಗಳನ್ನು ಬಳಸುತ್ತವೆ. ಆದರೆ ಭಾರತೀಯರು ಮೊದಲಿನಿಂದಲೂ ಕೈಯಿಂದ ಮಾಡುವ ಊಟದಲ್ಲೇ ಸುಖ ಕಾಣುತ್ತಿದ್ದಾರೆ. ಏನಿದರ ಕಾರಣ?   
 


ಇತ್ತೀಚೆಗೆ ಹೋಟೆಲ್‌ಗಳಲ್ಲಿ ಯಾವುದೇ ತಿಂಡಿ- ತಿನಿಸು ತರುವ ಮೊದಲು ಪ್ಲೇಟು- ಚಮಚ-ಫೋರ್ಕ್‌ ತಂದಿಡುತ್ತಾರೆ. ಹೊಸ ತಲೆಮಾರಿನ ಮಂದಿ ಇವುಗಳಲ್ಲಿ ಆಹಾರ ಸವಿಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹೆಚ್ಚಿನ ಭಾರತೀಯರಿಗೆ ಪಾರಂಪರಿಕವಾಗಿ ಕೈಯಲ್ಲೇ ಆಹಾರ ಸೇವಿಸುವುದು ರೂಢಿ. ಪಶ್ಚಿಮದ ಅಮೆರಿಕ, ಉತ್ತರದ ಯುರೋಪ್‌, ಪೂರ್ವ ಚೀನಾ- ಜಪಾನ್‌ ಮೊದಲಾದ ದೇಶಗಳು ಆಹಾರ ಸೇವಿಸಲು ಚಮಚ, ಫೋರ್ಕ್‌, ಚಾಪ್‌ಸ್ಟಿಕ್‌ ಇತ್ಯಾದಿಗಳನ್ನು ಬಳಸಿದರೂ ನಾವು ಬದಲಾಗಿಲ್ಲ. ಇದರ ಹಿಂದೆ ಭಾರತೀಯರ ಗಟ್ಟಿಯಾದ ಸಾಂಪ್ರದಾಯಿಕ- ವೈಜ್ಞಾನಿಕ ಕಾರಣಗಳಿವೆ. 

ಆಹಾರ ಸೇವನೆಗೆ ಒಂದು ಕ್ರಮ ಇದೆ ಎಂದು ಹಿರಿಯರು ಹೇಳುತ್ತಾರೆ. ತಿನ್ನುವ ಆಹಾರದಿಂದ ನಮ್ಮ ಆರೋಗ್ಯ ವೃದ್ಧಿಸಬೇಕು. ಆದರೆ ನಾವು ಸರಿಯಾದ ಆಹಾರ ಕ್ರಮವನ್ನು ಪಾಲಿಸದೆ ಆರೋಗ್ಯವನ್ನು ಹದಗೆಡಿಸಿಕೊಳ್ಳುತ್ತಿದ್ದೇವೆ. ನಮ್ಮ ಹಿರಿಯರು ಯಾವಾಗಲೂ ಹೊಲ, ಜಮೀನುಗಳಲ್ಲಿ ಬಿಸಿಲು, ಮಳೆಯನ್ನದೆ ಕೆಲಸ ಮಾಡುತ್ತಿದ್ದರು. ಊಟ ಮಾಡುವಾಗ ಮಾತ್ರ ಶುದ್ಧವಾಗಿ ಕೈತೊಳೆದುಕೊಂಡು ಕೈಯಲ್ಲಿ ಊಟ ಮಾಡುತ್ತಿದ್ದರು. ಹಾಗಾಗಿ ಅವರು ಯಾವಾಗಲೂ ಆರೋಗ್ಯದಿಂದ ಇರುತ್ತಿದ್ದರು.

Tap to resize

Latest Videos

ಆಯುರ್ವೇದ ಏನನ್ನುತ್ತದೆ? 

ಆಯುರ್ವೇದ ಶಾಸ್ತ್ರದಲ್ಲಿ ಮನುಷ್ಯನಿಗೆ ಐದು ಮುಖ್ಯ ಪ್ರಾಣ ಅಥವಾ ಜೀವಶಕ್ತಿ ಇರುತ್ತದೆ ಎಂದು ಹೇಳುತ್ತಾರೆ. ಐದು ಜೀವ ಶಕ್ತಿಗಳನ್ನು ಮನುಷ್ಯನ 5 ಕೈ ಬೆರಳುಗಳಿಗೆ ಹೋಲಿಸಿದ್ದಾರೆ. ಆ ಶಕ್ತಿಗಳು ಯಾವುವು ಎಂದರೆ ಅಗ್ನಿ, ವಾಯು, ಆಕಾಶ, ಭೂಮಿ ಮತ್ತು ನೀರು. ನಮ್ಮ ಐದು ಕೈ ಬೆರಳುಗಳು ಇವುಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ ನಮ್ಮ ಹೆಬ್ಬೆರಳು ಅಗ್ನಿ ತತ್ವ, ನಮ್ಮ ತೋರು ಬೆರಳು ವಾಯು ತತ್ವ, ನಮ್ಮ ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ತತ್ವ ಮತ್ತು ನಮ್ಮ ಕಿರುಬೆರಳು ಜಲ ತತ್ವವನ್ನು ಹೊಂದಿರುತ್ತವೆ ಎಂದು ಹೇಳುತ್ತಾರೆ. ಯಾವಾಗ ಇವುಗಳಲ್ಲಿ ಅಸಮತೋಲನ ಉಂಟಾದಾಗ ಆಗ ಬೇರೆ ಬೇರೆ ಬಗೆಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ನಮ್ಮ ಕೈ ಬೆರಳುಗಳಿಂದ ನಾವು ಊಟ ಮಾಡುವುದರಿಂದ ನಮ್ಮ ದೇಹಕ್ಕೆ ಮೇಲಿನ ಎಲ್ಲಾ ಶಕ್ತಿಗಳು ಒಮ್ಮೆಲೇ ಸಿಕ್ಕಂತಾಗಿ ನಮ್ಮ ಜೀವಶಕ್ತಿಗಳು ಸಕ್ರಿಯವಾಗಿ ಸಮತೋಲನ ಕಾಯ್ದುಕೊಂಡು ಆರೋಗ್ಯಕರ ಜೀವನ ನಮಗೆ ಸಿಗುತ್ತದೆ. 

ಸ್ಪೂನ್‌ನಲ್ಲಿ ತಿನ್ನುವುದಕ್ಕಿಂತ ಕೈಯಲ್ಲಿ ತಿಂದರೆ ನಮ್ಮ ಜೀರ್ಣಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ ನಮ್ಮ ಟಚ್ ನಮ್ಮ ಮೆದುಳಿಗೆ ಸಿಗ್ನಲ್ ಕೊಡುತ್ತದೆ. ಇದರಿಂದ ನಾವು ಸೇವಿಸಿದ ಆಹಾರ ಹೊಟ್ಟೆಯಲ್ಲಿ ಚೆನ್ನಾಗಿ ಜೀರ್ಣವಾಗುತ್ತದೆ.

ಚಳಿಗಾಲ ಅಂತ ಸುಡು ಬಿಸಿನೀರಿನಲ್ಲಿ ಸ್ನಾನ ಮಾಡ್ತೀರಾ? ಆ ಆಸಕ್ತಿಯೇ ಹೊರಟುಹೋದೀತು ಹುಷಾರ್!

ಕೈ ಬೆರಳುಗಳಿಂದ ತಿನ್ನುವುದರಿಂದ ನಮ್ಮ ಗಮನ ನಮ್ಮ ತಟ್ಟೆಯಲ್ಲಿರುವ ಊಟದ ಮೇಲೆ ಇರುತ್ತದೆ. ನಾವು ತಿನ್ನುವ ಬಗೆ ಬಗೆಯ ಪಲ್ಯ, ಅನ್ನ ಸಾಂಬಾರ್ ಇತ್ಯಾದಿಗಳು ನಮ್ಮ ಬಾಯಲ್ಲಿ ಹೋಗುತ್ತಿದ್ದಂತೆ ಅದರ ಸ್ವಾದವನ್ನು ಅನುಭವಿಸುವ ಕೆಲಸವನ್ನು ನಮ್ಮ ಮೆದುಳು ಮಾಡುತ್ತದೆ. ಇದರಿಂದ ನಾವು ತಿನ್ನುವ ಆಹಾರ ಹೆಚ್ಚು ರುಚಿಕರ ಎನಿಸುತ್ತದೆ ಮತ್ತು ನಮ್ಮ ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶಗಳು ಸಿಗುತ್ತವೆ.

ಕೆಲವೊಮ್ಮೆ ಸ್ಪೂನಿನಲ್ಲಿ ತಿನ್ನುವ ಸಂದರ್ಭದಲ್ಲಿ ನಾವು ತಿನ್ನುತ್ತಿರುವುದು ತುಂಬಾ ಬಿಸಿ ಅಥವಾ ಉಗುರು ಬೆಚ್ಚಗಿನ ಆಹಾರ ಎನ್ನುವುದು ನಮಗೆ ತಿಳಿಯುವುದಿಲ್ಲ.
ಇದರಿಂದ ಅಪ್ಪಿ ತಪ್ಪಿ ನಾವು ತುಂಬಾ ಬಿಸಿ ಆಹಾರವನ್ನು ತಿಂದು ನಾಲಿಗೆ ಸುಟ್ಟುಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಕೈಯಲ್ಲಿ ತಿನ್ನುವುದರಿಂದ ಬಿಸಿ ಫೀಲ್ ಆಗುತ್ತದೆ. ಇದರಿಂದ ನಮ್ಮನ್ನು ನಾವು ಅತಿಯಾದ ಬಿಸಿ ಆಹಾರದಿಂದ ಕಾಪಾಡಿಕೊಳ್ಳಬಹುದು.

ಮಲಗೋ ಮುನ್ನ ನಿದ್ದೆ ಮಾತ್ರೆ ತಗೊಳ್ತಿದ್ರೆ ತಕ್ಷಣ ನಿಲ್ಲಿಸಿ, ವೈದ್ಯರನ್ನ ಕೇಳದೇ ತಗೊಂಡ್ರೆ ಏನಾಗುತ್ತೆ ಗೊತ್ತಾ?
 

click me!