ಇದೀಗ ಚಳಿಗಾಲ. ಕುಟುಕುಟು ಚಳಿ ಇರುವಾಗ ಬಿಸ್ಸಿಬಿಸಿ ನೀರಿನಲ್ಲಿ ಸ್ನಾನ ಮಾಡಬಯಸುವವರೇ ಅಧಿಕ. ಆದರೆ ಇದು ಆರೋಗ್ಯದ ಮೇಲೆ ಬೀರುವ ಪರಿಣಾಮ ಅಷ್ಟೇನೂ ಒಳ್ಳೆಯದಲ್ಲ. ಅದರಲ್ಲೂ ಕಾಮಾಸಕ್ತಿಯನ್ನು ತಗ್ಗಿಸುತ್ತದೆ. ಬನ್ನಿ, ಇದರ ಬಗ್ಗೆ ತಿಳಿಯೋಣ.
ನೀವು ಸ್ನಾನಕ್ಕೆ ಬಳಸುವ ನೀರಿನ ಬಿಸಿ-ತಣ್ಣಗೆಯ ಪ್ರಮಾಣ ಇವೆಲ್ಲ ನಿಮ್ಮ ಕಾಮಾಸಕ್ತಿಯ ಮೇಲೆ ವಿಭಿನ್ನ ಪರಿಣಾಮ ಬೀರಬಹುದು. ಇದೀಗ ಚಳಿಗಾಲ ಅಂತ ಎಲ್ಲರೂ ಹೆಚ್ಚಾಗಿ ಸುಡುಸುಡು ಬಿಸಿ ನೀರು ಬಳಸುವುದು ಸ್ವಾಭಾವಿಕ. ಆದರೆ ಒಂದು ಮಿತಿಯನ್ನು ಮೀರಿದ ಬಿಸಿ ನೀರು ಆರೋಗ್ಯಕರ ಅಲ್ಲ. ಯಾಕೆ ಗೊತ್ತೆ?
ಬಿಸಿ ನೀರು ಸ್ನಾನವು ಕಾಮಾಸಕ್ತಿಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಬಿಸಿ ನೀರು ನಿಮ್ಮ ವೃಷಣಗಳನ್ನು ಅತಿಯಾಗಿ ಬಿಸಿ ಮಾಡುತ್ತದೆ. ವೀರ್ಯ ಜನಿಸುವ ಜಾಗವಾದ ಇದು ಅತಿಯಾಗಿ ಹೀಟ್ ಆದರೆ ವೀರ್ಯಾಣುಗಳ ಸಂಖ್ಯೆ ಮತ್ತು ಚಲನಶೀಲತೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಯೇ ಬಿಗಿಯಾದ ಅಂಡರವೇರ್ ತೊಡುವುದು ಬೇಡ ಅನ್ನುವುದು ಕೂಡ. ಇನ್ನು ಹೆಚ್ಚಿದ ಶಾಖವು ವೀರ್ಯದ ಡಿಎನ್‌ಎ ಸಮಗ್ರತೆ ಮತ್ತು ಗುಣಮಟ್ಟವನ್ನು ಹಾನಿಗೊಳಿಸುತ್ತದೆ.
ಬಿಸಿ ನೀರಲ್ಲದೆ ಕಾಮಾಸಕ್ತಿಯ ಮೇಲೆ ಇತರ ಅಂಶಗಳಾದ ಹಾರ್ಮೋನ್ ಸಮತೋಲನ, ಒತ್ತಡದ ಮಟ್ಟಗಳು, ದೈಹಿಕ ಚೈತನ್ಯ ಮತ್ತು ನಿದ್ರೆ ಕೂಡ ಪರಿಣಾಮ ಬೀರುತ್ತದೆ. ಇವೆಲ್ಲವೂ ಚಳಿಗಾಲದಲ್ಲಿ ಬಿಸಿ ನೀರಿನ ಜೊತೆ ಸೇರಿಕೊಂಡಾಗ ಡೆಡ್ಲೀ ಆಗಿಬಿಡುತ್ತವೆ. ಹಾಗಾದರೆ ಏನು ಮಾಡಬೇಕು? ಹದವಾದ ಬಿಸಿ- ತಣ್ಣೀರು ಮಿಶ್ರಿತವಾದ ನೀರು ಸ್ನಾನಕ್ಕೆ ಸೂಕ್ತ. ತಣ್ಣೀರು ಸ್ನಾನದಿಂದ ಅನೇಕ ಪ್ರಯೋಜನಗಳಿವೆ.
ತಣ್ಣನೆಯ ನೀರಿನ ಸ್ನಾನ ಮತ್ತು ಐಸ್ ನೀರಿನ ಸ್ನಾನ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಅನ್ನು ಹೆಚ್ಚಿಸುವುದು. ತಣ್ಣೀರಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಹೆಚ್ಚಿಸಬಹುದು, ಇದು ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದ ಹರಿವನ್ನು ಸುಧಾರಿಸುತ್ತದೆ. ಶೀತಕ್ಕೆ ಒಡ್ಡಿಕೊಳ್ಳುವುದು ರಕ್ತನಾಳಗಳನ್ನು ಸಂಕುಚಿಸಿದರೂ ಲೈಂಗಿಕ ಅಂಗಗಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ. ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಐಸ್ ಸ್ನಾನವು ಎಂಡಾರ್ಫಿನ್ ರಶ್ ಅನ್ನು ಪ್ರಚೋದಿಸುತ್ತದೆ. ಅದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಬಿಸಿನೀರು ಸ್ನಾನದಿಂದಲೂ ಪ್ರಯೋಜನಗಳು ಇಲ್ಲದಿಲ್ಲ. ಬಿಸಿ ನೀರು ತಾಪಮಾನವು ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಆದ್ದರಿಂದ ಬಿಸಿನೀರಿನ ಸ್ನಾನ ದೇಹವನ್ನು ಶುದ್ಧಗೊಳಿಸುತ್ತದೆ. ಸ್ನಾಯು ಟೋನ್ ಸುಧಾರಿಸುತ್ತದೆ. ಇದು ಗಂಟಲಿನ ಸ್ನಾಯುಗಳ ವಿಶ್ರಾಂತಿಗೆ ಸಹ ಸಹಾಯ ಮಾಡುತ್ತದೆ. ದೇಹದಲ್ಲಿ ಕಡಿಮೆ ಸಕ್ಕರೆ ಮಟ್ಟವನ್ನು ಉತ್ತೇಜಿಸುತ್ತದೆ, ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಸ್ಟೀಮ್ ವಾಯುಮಾರ್ಗಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ, ನಿಮ್ಮ ಗಂಟಲು ತೆರೆಯಲು, ಉಸಿರು ಕಟ್ಟಿಕೊಳ್ಳುವ ಮೂಗಿಗೆ, ಕೆಮ್ಮು ಮತ್ತು ಶೀತ ಬಂದಾಗ ಪ್ರಯೋಜನಕಾರಿ. ಹಾಗಂತ ಅತಿ ಬಿಸಿ ಬೇಡ.
ವಯಸ್ಸಾದ ಬಳಿಕ ಕಾಡುವ ಸುಕ್ಕಿನ ತ್ವಚೆ, ಹಾರ್ಮೋನ್ ಬದಲಾವಣೆಯಿಂದಾಗುವ ಮೊಡವೆಗಳಿಗೆ ಇಲ್ಲಿದೆ ಪರಿಹಾರ
ಆಯುರ್ವೇದದ ಪ್ರಕಾರ ದೇಹಕ್ಕೆ ಬೆಚ್ಚಗಿನ ನೀರನ್ನು ಮತ್ತು ತಲೆಗೆ ತಣ್ಣನೆಯ ನೀರನ್ನು ಬಳಸಬೇಕು. ಏಕೆಂದರೆ ಕಣ್ಣು ಮತ್ತು ಕೂದಲನ್ನು ಬಿಸಿ ನೀರಿನಿಂದ ತೊಳೆಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀರಿನ ತಾಪಮಾನ ಕೆಲವು ಅಂಶಗಳನ್ನು ಅವಲಂಬಿಸಿರುತ್ತದೆ. ವಯಸ್ಸಿಗೆ ತಕ್ಕಂತೆ ಯುವಕರು ತಣ್ಣೀರಿನಿಂದ ಸ್ನಾನ ಮಾಡಿದರೆ ಉತ್ತಮ. ವೃದ್ಧರು, ಮಕ್ಕಳು ಹದವಾದ ಬಿಸಿನೀರಿನ ಸ್ನಾನ ಮಾಡುವುದು ಉತ್ತಮ. ಏಕೆಂದರೆ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಅನಾರೋಗ್ಯ ಕಾಡಬಹುದು.
ಸಮಯ ಮತ್ತು ಋತುವನ್ನು ಗಮನದಲ್ಲಿಟ್ಟುಕೊಂಡು ಸ್ನಾನದ ನೀರನ್ನು ಸಹ ನೀವು ಆಯ್ಕೆ ಮಾಡಬಹುದು. ಉದಾಹರಣೆಗೆ, ಬೆಳಿಗ್ಗೆ ಬೇಗನೆ ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ. ಆದರೆ ರಾತ್ರಿ ಸ್ನಾನಕ್ಕೆ ಹದವಾದ ಬಿಸಿನೀರು ಉತ್ತಮ. ಅಜೀರ್ಣ ಅಥವಾ ಯಕೃತ್ತಿನ ಅಸ್ವಸ್ಥತೆಗಳಂತಹ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ ತಣ್ಣೀರಿನಿಂದ ಸ್ನಾನ ಮಾಡುವುದು ಉತ್ತಮ. ಕಫ ಅಥವಾ ವಾತ ಸಂಬಂಧಿತ ಅಸ್ವಸ್ಥತೆಗಳಿಂದ ಬಳಲುತ್ತಿದ್ದರೆ, ಬಿಸಿನೀರಿನ ಸ್ನಾನ ಒಳ್ಳೆಯದು.
Heart attack: ಹೃದಯಾಘಾತವಾಗುವ ತಿಂಗಳ ಮೊದಲೇ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚರ!