
ಮನುಷ್ಯನಿಗೆ ಆರೋಗ್ಯ (Health)ವೇ ಭಾಗ್ಯ. ಆರೋಗ್ಯವಿಲ್ಲದಿದ್ದಾಗ ಮನುಷ್ಯನಿಗೆ ಬೇರೆ ಏನಿದ್ದರೂ ಪ್ರಯೋಜನವಿಲ್ಲ. ಅದೆಷ್ಟೇ ಡಿಗ್ರಿ, ಕೈ ತುಂಬಾ ಸಂಬಳ ನೀಡುವ ಉದ್ಯೋಗವಿದ್ದರೂ ಅನಾರೋಗ್ಯವಿದ್ದಾಗ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ವರ್ಷಕ್ಕೊಮ್ಮೆ ಸಂಪೂರ್ಣವಾಗಿ ದೇಹದ ತಪಾಸಣೆ (Body Checkup)ಯನ್ನು ಮಾಡಬೇಕು ಎಂದು ಹಲವರು ಹೇಳಿರುವುದನ್ನು ಕೇಳಿರಬಹುದು. ಇದರಿಂದ ದಿಢೀರ್ ಆರೋಗ್ಯ ಹದೆಗೆಡುವುದು ತಪ್ಪುತ್ತದೆ. ಆರೋಗ್ಯ ಸಮಸ್ಯೆಗಳಿದ್ದರೆ ಮುಂಚಿತವಾಗಿ ಗೊತ್ತಾಗುತ್ತದೆ ಎಂದು ಹೇಳುತ್ತಾರೆ. ಹಾಗಿದ್ರೆ, ಎಲ್ಲರೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕಾ ? ಯಾಕೆ ಮಾಡಬೇಕು, ಇದರಿಂದೇನು ಉಪಯೋಗ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಯಾರೆಲ್ಲಾ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು ?
ಎಲ್ಲರಿಗೂ ವಾರ್ಷಿಕವಾಗಿ ಪೂರ್ಣ ದೇಹದ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ. ಈ ರೀತಿ ಸಂಪೂರ್ಣ ದೇಹದ ತಪಾಸಣೆ ಮಾಡಲು ನಿಸ್ಸಂದೇಹವಾಗಿ ವಿಭಿನ್ನ ಮಾನದಂಡಗಳಿವೆ. ಅದರ ಆಧಾರದ ಮೇಲೆ ನಿಮಗೆ ವಾರ್ಷಿಕ ತಪಾಸಣೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ನಿರ್ಧರಿಸಬಹುದು.
ಮೂವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ವಾರ್ಷಿಕ ತಪಾಸಣೆಯನ್ನು ಬಿಟ್ಟು ಎರಡು ಮೂರು ವರ್ಷಗಳಿಗೊಮ್ಮೆ ಕಂಪ್ಲೀಂಟ್ ಬಾಡಿ ಚೆಕಪ್ ಮಾಡಬಹುದು. ನಲವತ್ತೈದು ವರ್ಷ ವಯಸ್ಸಿನವರೆಗೂ, ನೀವು ನಿರ್ದಿಷ್ಟ ದೀರ್ಘಕಾಲದ ಆರೋಗ್ಯ ಸ್ಥಿತಿಯನ್ನು ಹೊಂದಿರದ ಹೊರತು ವಾರ್ಷಿಕ ತಪಾಸಣೆಯನ್ನು ನಡೆಸುವುದು ಅಗತ್ಯವಿಲ್ಲ.
ನಿಮ್ಮ ಆರೋಗ್ಯ ತಿಳಿಯೋಕೆ ಯಾವ ಟೆಸ್ಟೂ ಬೇಡ! ಇಲ್ಲಿವೆ ಪ್ರಕೃತಿಯೇ ನೀಡಿದ 8 ಸರಳ ಟೆಸ್ಟ್!
ನಲವತ್ತೈದು ವರ್ಷಗಳನ್ನು ದಾಟಿದ ನಂತರ, ನೀವು ತಪ್ಪದೇ ಸಂಪೂರ್ಣವಾಗಿ ದೇಹ ತಪಾಸಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ವಯಸ್ಸಿನ ಮಾನದಂಡ ಏಕೆ ಎಂದು ನೀವು ಆಶ್ಚರ್ಯ ಪಡಬಹುದು. ಯಾಕೆಂದರೆ, ವಯಸ್ಸಾದ ನಂತರ ಮಾನಸಿಕ ಒತ್ತಡ, ಅನಿಯಮಿತ ರಕ್ತ ಪರಿಚಲನೆ, ಹೃದಯ ಸಮಸ್ಯೆ ಮೊದಲಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ವಾರ್ಷಿಕವಾಗಿ ಸಂಪೂರ್ಣ ದೇಹ ತಪಾಸಣೆ ಮಾಡುವುದರಿಂದ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಜೀವಕ್ಕೇ ಅಪಾಯ (Danger)ವಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
ಸಂಪೂರ್ಣ ದೇಹ ತಪಾಸಣೆ ಏನನ್ನು ಒಳಗೊಂಡಿದೆ ?
ಪೂರ್ಣ ದೇಹದ ವೈದ್ಯಕೀಯ ತಪಾಸಣೆಯನ್ನು ಪಡೆಯಲು ನೀವು ವೈದ್ಯರನ್ನು ಭೇಟಿಯಾದಾಗ, ಅವರು ನಿಮ್ಮ ಕುಟುಂಬದ ವೈದ್ಯಕೀಯ ಇತಿಹಾಸ, ನೀವು ನಡೆಸುವ ಜೀವನಶೈಲಿ (Lifestyle) ಮತ್ತು ನೀವು ಅನುಸರಿಸುವ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ತಪಾಸಣೆಯು ದೈಹಿಕ ಪರೀಕ್ಷೆಯನ್ನು ಸಹ ಒಳಗೊಂಡಿದೆ. ಸಾಮಾನ್ಯ ದೇಹದ ತಪಾಸಣೆಯು ರಕ್ತದೊತ್ತಡ, ಥೈರಾಯ್ಡ್ ಪರೀಕ್ಷೆ, ಮೂತ್ರ ಪರೀಕ್ಷೆ, ಕಣ್ಣಿನ ಪರೀಕ್ಷೆ, ಎದೆಯ ಪರೀಕ್ಷೆ, ಸಾಮಾನ್ಯ ಯೋಗಕ್ಷೇಮ, ಮೆದುಳಿನ ಪ್ರತಿಕ್ರಿಯೆ ಮತ್ತು ಹೆಚ್ಚಿನದನ್ನು ಒಳಗೊಂಡಿರುತ್ತದೆ.
Be Happy: ಟೆನ್ಶನ್ ಆದಾಗ ರಿಲ್ಯಾಕ್ಸ್ ಆಗಲು ಹೀಗೆ ಮಾಡಿ
ಸಂಪೂರ್ಣ ದೇಹದ ವೈದ್ಯಕೀಯ ತಪಾಸಣೆಯನ್ನು ಏಕೆ ಮಾಡಬೇಕು ?
ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಹೋದಾಗ, ನಿಮ್ಮ ದೇಹವನ್ನು ನೀವು ಮೇಲ್ವಿಚಾರಣೆ ಮಾಡುತ್ತಿದ್ದೀರಿ ಎಂದರ್ಥ. ನೀವು ಪರೀಕ್ಷೆಯನ್ನು ನಡೆಸುವ ನಿಯಮಿತ ಮಧ್ಯಂತರಗಳು ನಿಮ್ಮ ದೇಹವನ್ನು ಟ್ರ್ಯಾಕ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಯಾವುದೇ ದೀರ್ಘಕಾಲದ ಕಾಯಿಲೆಯ ಸಣ್ಣ ರೋಗಲಕ್ಷಣವು ಹೊರಹೊಮ್ಮಿದರೂ, ನೀವು ತಕ್ಷಣ ಅದನ್ನು ಗುರುತಿಸಬಹುದು ಮತ್ತು ಅದರ ಪರಿಹಾರವನ್ನು ಒಳಗೊಂಡಿರುವ ಮುಂದಿನ ಹಂತಕ್ಕೆ ಹೋಗಬಹುದು. ವೈದ್ಯಕೀಯ ತಪಾಸಣೆಗಳು ಆರೋಗ್ಯಕ್ಕಿರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಕಾಲಾನಂತರದಲ್ಲಿ ಖರ್ಚು ಮಾಡುವ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡಬಹುದು.
ವಾರ್ಷಿಕ ದೇಹ ತಪಾಸಣೆ ಮಾಡುವುದರ ಪ್ರಯೋಜನಗಳೇನು ?
ವಾರ್ಷಿಕ ದೇಹ ತಪಾಸಣೆಯಲ್ಲಿ ತೊಡಗಿಸಿಕೊಂಡರೆ, ನೀವು ನಿರೀಕ್ಷಿಸಿದ್ದಕ್ಕಿಂತ ಬೇಗ ಸಮಸ್ಯೆಯನ್ನು ಅರಿತುಕೊಳ್ಳುತ್ತೀರಿ. ಕ್ಯಾನ್ಸರ್ ಮತ್ತು ಇತರ ಗಂಭೀರ ಸೋಂಕುಗಳಂತಹ ರೋಗಗಳು ರಾತ್ರೋರಾತ್ರಿ ಬೆಳವಣಿಗೆಯಾಗುವುದಿಲ್ಲ. ಅದು ಕ್ರಮೇಣವಾಗಿ ದೇಹದಲ್ಲಿ ಬೆಳೆಯುತ್ತಾ ಹೋಗುತ್ತದೆ. ಆದರೆ ನೀವು ನಿಯಮಿತ ತಪಾಸಣೆಗಳನ್ನು ತಪ್ಪಿಸಿದರೆ, ಅದೊಂದು ಮುಂದೊಂದು ದಿನ ಕೈ ಮೀರಿದ ಅಪಾಯದ ಸ್ಥಿತಿಯಲ್ಲಿ ಪತ್ತೆಯಾಗುತ್ತದೆ.
ನೀವು ಹಿಂದೆ ಹೃದಯಾಘಾತ (Heart Attack)ದಿಂದ ಬಳಲುತ್ತಿದ್ದೀರಿ ಎಂದು ಭಾವಿಸೋಣ. ನಿಯಮಿತ ದೇಹ ತಪಾಸಣೆಯು ನಿಮ್ಮ ಪರಿಸ್ಥಿತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ಅನೇಕ ಯುವ ವಯಸ್ಕರು ಹೃದಯಾಘಾತ, ಮೈಗ್ರೇನ್, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ಪ್ರಮುಖ ಕಾರಣಗಳಲ್ಲಿ ಒತ್ತಡವೂ ಒಂದು. ಆಹಾರದ ಶೈಲಿ, ನಿದ್ರಾಹೀನತೆಯಂತಹಾ ಪರಿಸ್ಥಿತಿ ಒತ್ತಡ (Stress)ಕ್ಕೆ ಕಾರಣವಾಗಬಹುದು. ನಿಯಮಿತ ಥೈರೋಕೇರ್ ಪೂರ್ಣ ದೇಹ ತಪಾಸಣೆಯು ಒತ್ತಡದ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ನಿಮ್ಮ ವೈದ್ಯರೊಂದಿಗೆ ಚರ್ಚಿಸುವ ಮೂಲಕ ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.