ಸಾಮಾಜಿಕ ಜಾಲತಾಣ ಎಂದಾಗ ರೀಲ್ಸ್, ಶಾರ್ಟ್ಸ್, ಯುಟ್ಯೂಬ್ ವಿಡಿಯೋ, ಫೇಸ್ಬುಕ್, ವ್ಲಾಗ್ ಹೀಗೆ ನಾನಾ ವಿಷ್ಯಗಳು ಬಂದು ಹೋಗುತ್ವೆ. ಇದನ್ನು ನೋಡೋದ್ರಿಂದ ಮಾತ್ರವಲ್ಲ ಮಾಡೋದ್ರಿಂದ್ಲೂ ನಷ್ಟವಿದೆ. ಚಿಕ್ಕ ಮಕ್ಕಳು ಈ ಚಟಕ್ಕೆ ಬಿದ್ರೆ ಭವಿಷ್ಯ ಹಾಳಾಗುವ ಸಾಧ್ಯತೆ ಹೆಚ್ಚು.
ವ್ಲಾಗರ್ ಗಳ ಸಂಖ್ಯೆ ಈಗ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಲಾಗರ್ ಗಳು ಪ್ರಸಿದ್ಧಿ ಪಡೆಯುವ ಜೊತೆಗೆ ಹಣ ಸಂಪಾದನೆ ಮಾಡ್ತಿದ್ದಾರೆ. ವೃದ್ಧರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ವ್ಲಾಗ್ ಮಾಡುವವರ ಸಂಖ್ಯೆ ಸಾಕಷ್ಟಿದೆ. ಚಿಕ್ಕ ಮಕ್ಕಳ ವ್ಲಾಗ್‌ಗಳನ್ನು ಜನರು ಇಷ್ಟಪಡ್ತಾರೆ. ಆದ್ರೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಸಿದ್ಧಿ ಸಿಕ್ಕಿದ್ರೆ ಹಾಗೂ ಸಂಪಾದನೆ ಶುರು ಮಾಡಿದ್ರೆ ಅದು ಅಪಾಯಕಾರಿ. ಇದ್ರಿಂದ ಮಕ್ಕಳು, ಮಕ್ಕಳಂತೆ ಆಟವಾಡ್ತಾ, ಪಾಠ ಕೇಳ್ತಾ ಆರಾಮವಾಗಿರಲು ಸಾಧ್ಯವಿಲ್ಲ. ಅವರ ಸುತ್ತಮುತ್ತಲಿನ ಜನರು, ಸ್ನೇಹಿತರು ಕೂಡ ಮಕ್ಕಳನ್ನು ನೋಡುವ ದೃಷ್ಟಿ ಬದಲಾಗುತ್ತದೆ. ಮಕ್ಕಳು ರೀಲ್ಸ್, ಶಾರ್ಟ್ ಸೇರಿ ವಿಡಿಯೋಗಳನ್ನು ಮಾಡಲು ತಮ್ಮ ಗಮನ ಹರಿಸ್ತಾರೆಯೇ ವಿನಃ ಶಿಕ್ಷಣಕ್ಕೆ ಆದ್ಯತೆ ನೀಡೋದನ್ನು ಕಡಿಮೆ ಮಾಡ್ತಾರೆ. ಎಲ್ಲರ ಮಧ್ಯೆ ತಾವು ವಿಶೇಷ ವ್ಯಕ್ತಿ ಎಂದು ಭಾವಿಸುವ ಮಕ್ಕಳಿಗೆ ಪ್ರಸಿದ್ಧಿ ನೆತ್ತಿಗೇರಿರುತ್ತೆ. ಇದ್ರಿಂದ ಅವರ ಭವಿಷ್ಯ ಹಾಳಾಗಬಹುದು ಎಂಬ ಭಯ ಪಾಲಕರನ್ನು ಕಾಡೋದಿದೆ.
ನಿರಂತರವಾಗಿ ವ್ಲಾಗ್ (Vlog) ಮಾಡುವ ಅಥವಾ ವಿಡಿಯೋ (Video) ಮಾಡುವ ವ್ಯಕ್ತಿಗಳು ಅದನ್ನು ಬಿಟ್ಟಾಗ ಅಭಿಮಾನಿಗಳು ಗೊಂದಲಕ್ಕೀಡಾಗ್ತಾರೆ. ಪಾಕಿಸ್ತಾನದ ಅತ್ಯಂತ ಕಿರಿಯ ವ್ಲಾಗರ್ ಈಗ ವಿಡಿಯೋ ಮಾಡೋದನ್ನು ನಿಲ್ಲಿಸಿದ್ದಾನೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಸಂಗಾತಿಗೆ ಗರ್ಭ ನಿರೋಧಕ ಮಾತ್ರೆ ನೀಡುವ ಮೊದಲು ಈ ವಿಷ್ಯ ತಿಳ್ಕೊಳಿ
ಪಾಕಿಸ್ತಾನ (Pakistan) ದ ಕಿರಿಯ ವ್ಲಾಗರ್ ಹೆಸರು ಮೊಹಮ್ಮದ್ ಶಿರಾಜ್. ಆತ ಸದ್ಯ ವ್ಲಾಗ್‌ನಿಂದ ವಿರಾಮ ತೆಗೆದುಕೊಂಡಿದ್ದಾನೆ. ಇತ್ತೀಚೆಗೆ ಮೊಹಮ್ಮದ್ ಶಿರಾಜ್ ಯಾವುದೇ ವಿಡಿಯೋವನ್ನು ಹಂಚಿಕೊಂಡಿಲ್ಲ. ಇನ್ನು ಮುಂದೆ ವ್ಲಾಗ್‌ಗಳನ್ನು ಮಾಡುವುದಿಲ್ಲ ಎಂದು ಜನರಿಗೆ ತಿಳಿಸಿದ್ದಾನೆ.
ಮೇ 15 ರಂದು ಮೊಹಮ್ಮದ್ ಶಿರಾಜ್ ಕೊನೆ ವ್ಲಾಗ್ ಮಾಡಿದ್ದಾನೆ. ಲಾಸ್ಟ್ ವ್ಲಾಗ್ ಎಂದು ಶೀರ್ಷಿಕೆ ಅಡಿ ವ್ಲಾಗ್ ಮಾಡಲಾಗಿದೆ. ಗಿಲ್ಗಿಟ್-ಬಾಲ್ಟಿಸ್ತಾನ್‌ನ ಖಪ್ಲು ಗ್ರಾಮದ ನಿವಾಸಿ ಮೊಹಮ್ಮದ್ ಶಿರಾಜ್ ವಯಸ್ಸು 6 ವರ್ಷ. ಆತ ಹಾಗೂ ಆತನ ತಂಗಿ ಸೇರಿ ವ್ಲಾಗ್ ಮಾಡ್ತಿದ್ದರು. ಈಗ ಶಿರಾಜ್ ಅದನ್ನು ನಿಲ್ಲಿಸಿದ್ದು, ತನ್ನ ಕೊನೆಯ ವ್ಲಾಗ್ ನಲ್ಲಿ ಶಿರಾಜ್ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಭಾವನಾತ್ಮಕ ವಿದಾಯ ಹೇಳಿದ್ದಾನೆ. ಇದಾದ್ಮೇಲೆ ಈಗ ಶಿರಾಜ್ ತಂದೆ, ಮಗ ಏಕೆ ವ್ಲಾಗ್ ನಿಲ್ಲಿಸಿದ್ದಾನೆ ಎಂಬ ವಿಷ್ಯವನ್ನು ಸ್ಪಷ್ಟಪಡಿಸಿದ್ದಾರೆ.
ಶಿರಾಜ್ ವ್ಲಾಗ್ ಮಾಡೋದನ್ನು ನಿಲ್ಲಿಸಿದ್ದೇಕೆ? : ವ್ಲಾಗ್ ನಿಂದ ಶಿರಾಜ್ ಗೆ ಸಾಕಷ್ಟು ಖ್ಯಾತಿ ಮತ್ತು ಪ್ರಶಂಸೆ ಸಿಕ್ಕಿತ್ತು. ಆದ್ರೆ ಇದೇ ಪ್ರಸಿದ್ಧಿ ಶಿರಾಜ್ ವ್ಯಕ್ತಿತ್ವ, ಭವಿಷ್ಯದ ಮೇಲೆ ಪರಿಣಾಮ ಬೀರಿತ್ತು ಎಂದು ಶಿರಾಜ್ ತಂದೆ ಹೇಳಿದ್ದಾರೆ. ಗೆಳೆಯರೊಂದಿಗೆ ಶಿರಾಜ್‌ನ ವರ್ತನೆ ಬದಲಾಗಿತ್ತು. ಹಿಂದೆ ಮಕ್ಕಳ ಜೊತೆ ಆಟವಾಡ್ತಿದ್ದ ಶಿರಾಜ್ ನಲ್ಲಿ ನಿಧಾನವಾಗಿ ಬದಲಾಗುತ್ತಿದ್ದ. ಆತನನ್ನು ಸ್ನೇಹಿತರು ನೋಡ್ತಿದ್ದ ದೃಷ್ಟಿ ಕೂಡ ಬದಲಾಗಿತ್ತು ಎಂದು ತಂದೆ ಹೇಳಿದ್ದಾರೆ. ಆತನ ಗೆಳೆಯರ ಜೊತೆ ಬದಲಾದ ವರ್ತನೆ ಒಂದಾದ್ರೆ ಶಿಕ್ಷಣದ ಮೇಲೆ ಆತನ ಗಮನ ಕಡಿಮೆಯಾಗುತ್ತಿರುವುದು ಇನ್ನೊಂದು ಕಾರಣ ಎಂದು ಶಿರಾಜ್ ತಂದೆ ಹೇಳಿದ್ದಾನೆ.
ಸೆರಗು ಜಾರಿ ಬಿಟ್ಟು ಮಾದಕ ನೋಟ ಬೀರಿದ ಸ್ಯಾಂಡಲ್ ವುಡ್ ಬ್ಯೂಟಿ ಶ್ರುತಿ ಹರಿಹರನ್
ಶಿರಾಜ್ ವ್ಲಾಗ್ ನಿಂದ ಹೊರಗೆ ಬಂದಲ್ಲಿ, ಮೊದಲಿನಂತಾಗುತ್ತಾನೆ. ಶಿಕ್ಷಣದ ಮೇಲೆ ಗಮನ ಕೇಂದ್ರೀಕರಿಸುತ್ತಾನೆ ಎಂಬ ಕಾರಣಕ್ಕೆ ಆತನನ್ನು ವ್ಲಾಗ್ ನಿಂದ ದೂರ ಇಡುತ್ತಿರುವುದಾಗಿ ಶಿರಾಜ್ ತಂದೆ ಹೇಳಿದ್ದಾನೆ. ಕೆಲ ದಿನಗಳ ನಂತ್ರ ಆತ ಮತ್ತೆ ವಾಪಸ್ ಬರ್ತಾನೆ ಎಂದ ತಂದೆ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಶಿರಾಜ್ ತಂದೆ ಕೆಲಸವನ್ನು ಬಳಕೆದಾರರು ಶ್ಲಾಘಿಸಿದ್ದಾರೆ. ಎಲ್ಲ ಪಾಲಕರು ಇದನ್ನು ತಿಳಿಯಬೇಕು. ಮಕ್ಕಳಿಗೆ ಅವರ ಬಾಲ್ಯ ನೀಡಬೇಕು ಎಂದು ಕೆಲ ಬಳಕೆದಾರರು ಸಲಹೆ ನೀಡಿದ್ದಾರೆ.