Benefits Of Crying: ನೀವೇಕೆ ಒಮ್ಮೆ ಮನಸ್ಸು ಬಿಚ್ಚಿ ಅಳಬಾರದು? ಅಳೋದಿಕ್ಕೆ ಐದು ಟಿಪ್ಸ್

By Suvarna News  |  First Published Mar 3, 2022, 3:09 PM IST

ನೀವು ಅಳೋಕೆ ಇಷ್ಟ ಪಡೋಲ್ವಾ? ಅಳೋದರಿಂದ ಎಷ್ಟು ಆರೋಗ್ಯ, ಮಾನಸಿಕ ಲಾಭ ಇದೆ ನಿಮಗೆ ಗೊತ್ತೇ?


ಯಾರೂ ಅಳೋಕೆ (Crying) ಇಷ್ಟಪಡುವುದಿಲ್ಲ, ಅದರಲ್ಲೂ ಇತರರ ಮುಂದೆ. ತುಂಬಾ ದುಃಖದ ಸನ್ನಿವೇಶದಲ್ಲಿ ಯಾರಾದರೂ ಅಳದೆ ಹೋದರೆ, 'ಒಮ್ಮೆ ಅತ್ತು ಬಿಡು, ಹಗುರಾಗ್ತೀಯ' ಅನ್ನುವುದನ್ನು ನೀವು ಕೇಳಿರಬಹುದು. ಪದೇ ಪದೇ ಅಳುವುದರಿಂದ ವ್ಯಕ್ತಿಗಳು ದುರ್ಬಲರೆನಿಸಿಕೊಳ್ತಾರೆ ನಿಜ. ಆದರೆ, ಅಳುವ ವಿಷಯ ಬಂದಾಗ ನಾಚಿಕೆಪಡುವಂಥದ್ದೇನೂ ಇಲ್ಲ. ನಿಜವಾಗಿ, ಅಳುವುದರಿಂದ ಅನೇಕ ವಿಭಿನ್ನ ಆರೋಗ್ಯ ಪ್ರಯೋಜನಗಳು, ಮಾನಸಿಕ ಲಾಭಗಳು ಇವೆ.

ಅಳುವುದರಿಂದ ನಿಮಗೆ ಉಂಟಾಗುವ ಐದು ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

Latest Videos

undefined

ಮನಸ್ಥಿತಿಯನ್ನು ಸುಧಾರಿಸುತ್ತದೆ (mental welness)

ಚೆನ್ನಾಗಿ ಅತ್ತ ನಂತರ ನೀವು ಮೊದಲಿಗಿಂತ ಹೆಚ್ಚು ಹಗುರವಾಗಿರುವುದನ್ನೂ, ಉತ್ತಮವಾಗಿರುವುದನ್ನೂ ಎಂದಾದರೂ ಗಮನಿಸಿದ್ದೀರಾ? ಅದಕ್ಕೊಂದು ಕಾರಣವಿದೆ. ಅತ್ತಾಗ ನಾವು ನಮ್ಮ ದೇಹವನ್ನು ಅಸಂಖ್ಯಾತ ಟಾಕ್ಸಿನ್‌ಗಳು ಮತ್ತು ಕೆಟ್ಟ ಹಾರ್ಮೋನ್‌ಗಳಿಂದ ಮುಕ್ತಗೊಳಿಸುತ್ತೇವೆ. ಇವು ಒತ್ತಡದ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳು. ನಿಮ್ಮ ಅಳು ನಿಮ್ಮ ನಿದ್ರೆ ಉತ್ತಮಪಡಿಸಲು, ದೇಹದ ರೋಗಪ್ರತಿರೋಧ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ನಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ.

ದೃಷ್ಟಿ ಸುಧಾರಿಸುವುದು (Eye vision)

ಬಿಡುವಿಲ್ಲದ ದಿನಗಳಲ್ಲಿ ಹೆಚ್ಚು ನೀರು ಕುಡಿಯಲು ನಿಮಗೆ ಅವಕಾಶವಿಲ್ಲದಿದ್ದಾಗ ಹೇಗೆ ಅನಿಸುತ್ತದೆ? ಸಾಕಷ್ಟು ಬಾಯಾರಿದ ಮತ್ತು ನಿರ್ಜಲೀಕರಣಗೊಂಡ ಫೀಲ್ ಉಂಟಾಗಬಹುದು. ನಮ್ಮ ದೇಹವು ನಮ್ಮನ್ನು ಸಕ್ರಿಯವಾಗಿ ಇಡಲು ನಮಗೆ ನೀರಿನ ಅಗತ್ಯವಿದೆ. ನಮ್ಮ ಕಣ್ಣುಗಳೂ ಹಾಗೆಯೇ. ಅವುಗಳಿಗೂ ಸಹ ನೀರು ಬೇಕು. ನಾವು ಅಳುವಾಗ ನಾವು ನಿಜವಾಗಿಯೂ ನಮ್ಮ ಕಣ್ಣುಗಳನ್ನು ಮರು-ಹೈಡ್ರೇಟ್ ಮಾಡುತ್ತಿರುತ್ತೇವೆ. ಅದು ನಮ್ಮ ಕಣ್ಣುಗಳನ್ನು ಕೇಂದ್ರೀಕರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಮ್ಮ ಒಟ್ಟಾರೆ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Children Health: ಬೇಸಿಗೆಯಲ್ಲಿ ಮಕ್ಕಳ ಶಕ್ತಿ ಹೆಚ್ಚಿಸುತ್ತೆ ಈ ಆಹಾರ

ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ

ಪ್ರತಿದಿನ ನಾವು ಲಕ್ಷಾಂತರ ಧೂಳಿನ, ಕೊಳಕಿನ ಕಣಗಳಿಗೆ ನಮ್ಮ ಕಣ್ಣನ್ನು ಒಡ್ಡಿಕೊಳ್ಳುತ್ತೇವೆ. ಈ ಕಣಗಳು ನಾವು ನೋಡಲು ಸಾಧ್ಯವಿಲ್ಲದಷ್ಟು ಸೂಕ್ಷ್ಮವಾಗಿ ಇರುತ್ತವೆ. ಆದರೂ ಅವು ಅವು ನಮ್ಮ ಕಣ್ಣುಗಳಲ್ಲಿ ಕಿರಿಕಿರಿ ಉಂಟುಮಾಡುತ್ತವೆ. ನಮ್ಮ ದೃಷ್ಟಿಗೂ ಹಾನಿ ಉಂಟುಮಾಡಬಹುದು. ನಾವು ಅಳುವಾಗ, ನಮ್ಮ ಕಣ್ಣುಗಳು ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುತ್ತವೆ. ಇದು ಈ ದೂಳಿನ ಕಣಗಳನ್ನು ತೆಗೆದುಹಾಕಲು ಮತ್ತು ನಮ್ಮ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜೊತೆಗೆ, ಕಣ್ಣೀರು ಲೈಸೋಜೈಮ್ ಅನ್ನು ಹೊಂದಿರುತ್ತದೆ, ಇದು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ರಾಸಾಯನಿಕವಾಗಿದೆ.

ನಮ್ಮ ಮೂಗುಗಳನ್ನು ಸ್ವಚ್ಛಗೊಳಿಸಲು ಸಹ ಸಹಾಯ (Ear clean)

ನಮ್ಮ ಕಣ್ಣೀರಿನ ನಾಳಗಳು ವಾಸ್ತವವಾಗಿ ನಮ್ಮ ಮೂಗಿನ ಒಳಭಾಗಕ್ಕೆ ಸಂಪರ್ಕ ಹೊಂದಿವೆ. ಇದರರ್ಥ, ನಾವು ಅತ್ತಾಗ, ನಮ್ಮ ಕಣ್ಣುಗಳಿಂದ ಮಾಡುವಂತೆ ನಮ್ಮ ಮೂಗಿನಿಂದ ಬ್ಯಾಕ್ಟೀರಿಯಾ ಮತ್ತು ಕಿರಿಕಿರಿಯ ಕಣಗಳನ್ನು ಹೊರಹಾಕುವ ಅದೇ ಪ್ರಯೋಜನವನ್ನು ನಾವು ಪಡೆಯುತ್ತೇವೆ.

Health Tips: ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುವ ಅದ್ಭುತ ಆಹಾರಗಳು

ಇತರರೊಂದಿಗೆ ನಮ್ಮ ಸಂಬಂಧವನ್ನು ಬಲಪಡಿಸುತ್ತದೆ (relations)

ನಾವು ಇತರರ ಮುಂದೆ ಅಳುವುದನ್ನು ತಪ್ಪಿಸಲು ಪ್ರಯತ್ನಿಸುತ್ತೇವೆ. ನಾಚಿಕೆಪಡುತ್ತೇವೆ ಅಥವಾ ಮುಜುಗರಕ್ಕೊಳಗಾಗುತ್ತೇವೆ. ಆದರೂ, ಇತರರ ಮುಂದೆ ಅಳುವುದನ್ನು ಕೆಟ್ಟ ವಿಷಯವೆಂದು ಪರಿಗಣಿಸಬಾರದು. ನಾವು ಇತರರ ಮುಂದೆ ಅತ್ತಾಗ ನಮ್ಮ ಇನ್ನೊಂದು ಮುಖದ ಪರಿಚಯ ಅವರಿಗೆ ಆಗುತ್ತದೆ. ಅವರು ಮಾತಿನಲ್ಲಿ ಹೇಳಲಾಗದ ನಮ್ಮ ಭಾವನೆಗಳನ್ನು ಕಂಡುಕೊಳ್ಳುತ್ತಾರೆ. ಇದನ್ನು ಯಾವುದೇ ಮಾತುಗಳು ವ್ಯಕ್ತಪಡಿಸಲಾರವು. ಇದು ಕುಟುಂಬ, ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನವರ ನಡುವೆ ಆಳವಾದ ಭಾವನಾತ್ಮಕ ಬಂಧವನ್ನು ಸೃಷ್ಟಿಸುತ್ತದೆ.

Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ

ಆದ್ದರಿಂದ, ಮುಂದಿನ ಬಾರಿ ನಿಮ್ಮ ಕಣ್ಣುಗಳು ತುಂಬಲು ಪ್ರಾರಂಭಿಸಿದಾಗ, ಅದನ್ನು ಹಿಡಿದಿಟ್ಟುಕೊಳ್ಳಬೇಡಿ! ಆ ಕಣ್ಣೀರು ನೀಡುವ ಎಲ್ಲಾ ಆರೋಗ್ಯ ಪ್ರಯೋಜನಗಳನ್ನು ಆನಂದಿಸಿ!

 

click me!