Benefit From Stress: ಟೆನ್ಶನ್ ಮಾಡೋದ್ರಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ

Suvarna News   | Asianet News
Published : Mar 03, 2022, 01:32 PM IST
Benefit From Stress: ಟೆನ್ಶನ್ ಮಾಡೋದ್ರಿಂದ ಎಷ್ಟೊಂದು ಪ್ರಯೋಜನವಿದೆ ನೋಡಿ

ಸಾರಾಂಶ

ಮನುಷ್ಯ ಅಂದ್ಮೇಲೆ ಸಮಸ್ಯೆಗಳು ಇರೋದು ಸಾಮಾನ್ಯ. ಸಮಸ್ಯೆ (Problem)ಗಳಿದ್ದಾಗ ಟೆನ್ಶನ್ ಆಗೋದು ಸಾಮಾನ್ಯ. ಆದ್ರೆ ಟೆನ್ಶನ್ (Tension) ಮಾಡಿದ್ರೆ ಆರೋಗ್ಯ (Health) ಹಾಳಾಗುತ್ತೆ ಅನ್ನೋದೆ ಎಲ್ಲರ ಭಯ. ಆದ್ರೆ ಟೆನ್ಶನ್ ಮಾಡೋದ್ರಿಂದಾನೂ ಪ್ರಯೋಜನ ಇದೆ ಅನ್ನೋದು ನಿಮ್ಗೆ ಗೊತ್ತಾ ?

ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಒಂದಾ ಎರಡಾ ? ಆಫೀಸ್ ಕೆಲ್ಸ, ಮನೆಯ ಜವಾಬ್ದಾರಿ, ಊರಿನಲ್ಲೇನೋ ಪ್ರಾಬ್ಲಂ (Problem). ಎಲ್ಲರ ಜೀವನದಲ್ಲೂ ಸಮಸ್ಯೆಗಳು ನೂರಾರು ಇರುತ್ತವೆ. ಒಂದೊಂದು ಸಾರಿ ಎಲ್ಲವೂ ವಿಪರೀತವಾಗಿ ಮನಸ್ಸಿನ ಮೇಲೆ ಒತ್ತಡ (Pressure) ಬೀಳುತ್ತದೆ. ಟೆನ್ಶನ್ ಮಾಡೋಕಂತೂ ಕಾರಣ ಬೇಕಿಲ್ಲ. ಎಕ್ಸಾಂನಲ್ಲಿ ಮಾರ್ಕ್ಸ್ ಕಡಿಮೆ ಬಂದ್ರೆ ಟೆನ್ಶನ್, ಜಾಬ್ ಇಂಟರ್ ವ್ಯೂ ಹೋಗೋದು ಅಂದ್ರೆ ಟೆನ್ಶನ್, ಲೈಟ್ ಬಿಲ್ ಜಾಸ್ತಿ ಬಂದ್ರೆ ಟೆನ್ಶನ್, ಗರ್ಲ್ ಫ್ರೆಂಡ್ ಇನ್ನೊಬ್ಬನ ಜತೆ ಕಾಣಿಸಿದ್ರೆ ಟೆನ್ಶನ್ (Tension) . ಒಟ್ನಲ್ಲಿ ಎಲ್ಲವೂ ಟೆನ್ಶನ್ ಮಾಡೋ ವಿಷಯಗಳೇ.

ಕೆಲವೊಮ್ಮೆ ಆಲೋಚನೆಗಳು ಹೆಚ್ಚಾಗಿ ವಿಪರೀತ ಟೆನ್ಶನ್ ಹೆಚ್ಚಾಗಿ ತಲೆನೋವು (Headache) ಕೂಡಾ ಬರುವುದಿದೆ. ಈ ರೀತಿ ಟೆನ್ಶನ್ ಮಾಡ್ಬಾರ್ದು ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ವೈದ್ಯರು ಸಲಹೆ ನೀಡ್ತಾರೆ. ಟನ್ಶನ್ ಕಡಿಮೆ ಮಾಡಿ ರಿಲ್ಯಾಕ್ಸ್ ಆಗಿರೋದು ಹೇಗೆ ಎಂದು ಕನ್ಸಲ್ಟೆಂಟ್ಸ್ ಸಲಹೆಗಳನ್ನು ಕೂಡಾ ಕೊಡ್ತಾರೆ. ಆದ್ರೆ ನಿಮ್ಗೆ ಗೊತ್ತಿರದ ವಿಷಯವೊಂದಿದೆ. ಟೆನ್ಶನ್ ಮಾಡೋದ್ರಿಂದ ಉಪಯೋಗ ಕೂಡಾ ಇದೆ ಅನ್ನೋದು ನಿಮ್ಗೆ ಗೊತ್ತಾ ?

Personality Development: ಹ್ಯಾಪ್ ಮೋರೆ ಹಾಕೋದು ಬಿಟ್ವಿಡಿ..ಹ್ಯಾಪಿಯಾಗಿರಿ

ಒತ್ತಡದ ಪರಿಸ್ಥಿತಿಯಿಂದ ಪ್ರಯೋಜನ ಪಡೆಯಬಹುದು
ಮುಖ್ಯವಾಗಿ ಟೆನ್ಶನ್ ಆದಾಗ ನಾವು ಹೆದರಬೇಕಿಲ್ಲ. ಯಾಕೆಂದರೆ ವೇಗದ ಹೃದಯ ಬಡಿತದ ಒತ್ತಡದ ಪ್ರತಿಕ್ರಿಯೆಗಳು, ವೇಗವಾದ ಉಸಿರಾಟ ಹೀಗೆ ನಮ್ಮ ದೇಹವು ಜೈವಿಕವಾಗಿ ಒತ್ತಡವನ್ನು ನಿಭಾಯಿಸಲು ಅತ್ಯುತ್ತಮ ಸ್ಥಿತಿಯಲ್ಲಿದೆ. ಇತ್ತೀಚಿನ ಅಧ್ಯಯನದಲ್ಲಿ ಒತ್ತಡ ಮತ್ತು ಸಾವಿಗಿರುವ ಸಂಬಂಧದ ಕುರಿತಾಗಿ ವಿಶ್ಲೇಷಣೆ ನಡೆಸಲಾಯಿತು. ಇದರಲ್ಲಿ ಒತ್ತಡಕ್ಕೆ ಒಳಗಾದ ಜನರು ಮತ್ತು ಒತ್ತಡವು ತಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ನಂಬಿರುವ ಜನರನ್ನು ಒಳಪಡಿಸಲಾಯಿತು. ಈ ಅಧ್ಯಯನದಿಂದ ತಿಳಿದು ಬಂದಿದ್ದೇನೆಂದರೆ ಒತ್ತಡಕ್ಕೊಳಗಾದ, ಆದರೆ ಅದನ್ನು ಹಾನಿಕಾರಕವೆಂದು ಪರಿಗಣಿಸದ ಜನರು ಕಡಿಮೆ ಸಾವಿನ ಅಪಾಯವನ್ನು ಹೊಂದಿದ್ದಾರೆ.

ಅಧ್ಯಯನದ ಪ್ರಕಾರ, ಸಾವಿಗೆ ಕಾರಣವಾಗುವ ಒತ್ತಡವಲ್ಲ. ಆದರೆ ಒತ್ತಡವು ಹಾನಿಕಾರಕವಾಗಿದೆ ಎಂದು ನಂಬುವ ಮನಸ್ಥಿತಿ ಎಂದು ತಿಳಿದುಬಂದಿದೆ. ಒತ್ತಡದ ಬಗ್ಗೆ ನಾವು ಯೋಚಿಸುವ ವಿಧಾನವನ್ನು ಬದಲಾಯಿಸುವ ಮೂಲಕ, ನಾವು ಒತ್ತಡಕ್ಕೆ ನಮ್ಮ ದೇಹದ ಪ್ರತಿಕ್ರಿಯೆಯನ್ನು ಬದಲಾಯಿಸಬಹುದು.

ಟೆನ್ಶನ್ ಮಾಡೋದ್ರಿಂದ ಏನೆಲ್ಲಾ ಪ್ರಯೋಜನವಿದೆ ?
ತಜ್ಞರು ಮಾನಸಿಕ ಆರೋಗ್ಯ (Mental Health)ಕ್ಕೆ 'ಹೋರಾಟ ಅಥವಾ ಹಾರಾಟ' ಎಂಬ ಸಾಮಾನ್ಯ ಮಾನಸಿಕ ಪರಿಕಲ್ಪನೆಯನ್ನು ವಿವರಿಸುತ್ತಾರೆ.  ನಮ್ಮ ದೇಹವು ಜೈವಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿರುವುದರಿಂದ ಯಾವುದೇ ಸವಾಲನ್ನು ಎದುರಿಸಲು ವೇಗದ ಹೃದಯ ಬಡಿತ, ವೇಗವಾದ ಉಸಿರಾಟ ಮತ್ತು ಮುಂತಾದವುಗಳ ಒತ್ತಡದ ಪ್ರತಿಕ್ರಿಯೆಗಳನ್ನು ಬಳಸಲಾಗುತ್ತದೆ. ಹೀಗಾಗಿ ಯಾವಾಗಲೂ ಒತ್ತಡವನ್ನು ನಿಭಾಯಿಸಲು ಕಲಿತುಕೊಳ್ಳಬೇಕು.

Sleeping Tips: ಪ್ರೀತಿಪಾತ್ರರ ಜೊತೆ ಮಲಗಿದ್ರೆ ಸ್ಟ್ರೆಸ್ ಕಡಿಮೆಯಾಗಿ, ಹಾಯಾಗಿ ನಿದ್ದೆ ಬರುತ್ತಂತೆ !

ಒತ್ತಡದ ಋಣಾತ್ಮಕ ಭಾಗವು ಹೃದಯರಕ್ತನಾಳದ ಕಾಯಿಲೆಗಳಿಗೆ ಸಂಬಂಧಿಸಿರುವ ರಕ್ತನಾಳಗಳಲ್ಲಿನ ನಿರ್ಬಂಧವಾಗಿದೆ ಆದರೆ ಜನರು ಒತ್ತಡವನ್ನು ಸಕಾರಾತ್ಮಕ ವಿದ್ಯಮಾನವಾಗಿ ನೋಡಲು ಕಲಿತಾಗ, ರಕ್ತನಾಳಗಳು ಹೆಚ್ಚು ಸಂಕುಚಿತಗೊಳ್ಳುವುದಿಲ್ಲ.

ಆಕ್ಸಿಟೋಸಿನ್ ಹಾರ್ಮೋನ್ ಆಗಿದ್ದು ಅದು ಸಾಮಾನ್ಯವಾಗಿ ಸಂಬಂಧಗಳಿಗೆ ಸಂಬಂಧಿಸಿದೆ. ಇದನ್ನು ಕೆಲವೊಮ್ಮೆ ಕಡ್ಲ್ ಹಾರ್ಮೋನ್ (Harmone) ಎಂದು ಕರೆಯಲಾಗುತ್ತದೆ. ಆದಾಗ್ಯೂ, ಈ ಹಾರ್ಮೋನ್ ಒತ್ತಡದ ಸಂದರ್ಭಗಳಲ್ಲಿ ಬಿಡುಗಡೆಯಾಗುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ ಮತ್ತು ಒತ್ತಡದ ಪರಿಣಾಮಗಳಿಂದ ಅದನ್ನು ಗುಣಪಡಿಸುತ್ತದೆ. ಒತ್ತಡದ ಸಂದರ್ಭಗಳಲ್ಲಿ ಈ ಹಾರ್ಮೋನ್ ಅನ್ನು ಹೆಚ್ಚು ಬಿಡುಗಡೆ ಮಾಡುವ ಮೂಲಕ, ಒತ್ತಡವನ್ನು ನಿಭಾಯಿಸುವ ಶಕ್ತಿ ಹೆಚ್ಚುತ್ತದೆ. ಹೀಗಾಗಿ, ಒತ್ತಡದ ಪರಿಸ್ಥಿತಿ ದೀರ್ಘಾವಧಿಗೆ ನಮಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಇನ್ಮುಂದೆ ಟೆನ್ಶನ್ ಆದಾಗ ಭಯ ಬೇಕಿಲ್ಲ. ಪರಿಸ್ಥಿತಿಯನ್ನು ಆರಾಮವಾಗಿ ನಿಭಾಯಿಸಿ ಸಾಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ