ಆಪಲ್‌, ಪಿಯರ್ಸ್‌ ಆರೋಗ್ಯಕ್ಕೊಳ್ಳೆಯದೇ, ಆದ್ರೆ ಗ್ಯಾಸ್ಟ್ರಿಕ್‌ಗೂ ಕಾರಣ ಆಗಬಹುದು!

By Suvarna News  |  First Published Feb 25, 2024, 10:16 AM IST

ಕೆಲವು ಹಣ್ಣು, ಕೆಲವು ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಅಂತ ಚೆನ್ನಾಗಿ ತಿಂತೀವಿ. ಆದರೆ ಈ ಆಹಾರದಿಂದ ಕೆಲವೊಮ್ಮೆ ನಮ್ಮ ಗ್ಯಾಸ್ಟ್ರಿಕ್‌ ಹೆಚ್ಚಾಗುತ್ತದೆ.


ಗ್ಯಾಸ್ಟ್ರಿಕ್‌ ಈ ಕಾಲದಲ್ಲಿ ಎಲ್ಲ ವಯೋಮಾನದವರನ್ನೂ ಕಾಡುತ್ತಿರುವ ಸಮಸ್ಯೆ. ಇದರಿಂದ ಉಂಟಾಗುವ ಸಮಸ್ಯೆ ಒಂದೆರಡಲ್ಲ. ಊಟ ಬೇಡ ಅನಿಸುತ್ತೆ, ಸಣ್ಣಗೆ ತಲೆನೋವು, ಹೊಟ್ಟೆ ಕಟ್ಟಿದ ಹಾಗಾಗೋದು, ಕೆಲವೊಮ್ಮೆ ಉಸಿರಾಡಲೂ ಕಷ್ಟವಾಗೋದು.. ಹೀಗೆ ದೊಡ್ಡ ಲಿಸ್ಟ್ ರೆಡಿ ಮಾಡಬಹುದು. ಮನೆ ಫುಡ್‌ ತಿಂತಿದ್ದೀನಿ, ಹೆಲ್ದಿ ಆಹಾರ ಪದ್ದತಿಯನ್ನೇ ಪಾಲಿಸ್ತಿದ್ದೀನಿ. ಆದರೂ ಯಾಕೆ ಹೀಗಾಗ್ತಿದೆ ಅನ್ನೋದು ಈ ಕಾಲದ ಹಲವರ ಪ್ರಶ್ನೆ. ಆದರೆ ನೀವು ತಿನ್ನೋ ಕೆಲವು ಹೆಲ್ದೀ ಆಹಾರಗಳೇ ಕೆಲವು ಅನ್‌ ಹೆಲ್ದಿ ಕಾರಣಗಳಾಗಬಹುದು.
ತಿನ್ನೋ ಆಹಾರದಲ್ಲಿ ಯಾವ ಆಹಾರಗಳು ನಮಗೆ ಒಳ್ಳೆಯದು ಮತ್ತು ಯಾವ ಆಹಾರ ಯಾವ ಸಮಯದಲ್ಲಿ ತಿಂದರೆ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಂಡರೆ ನಮ್ಮಿಂದ ಕಾಯಿಲೆಗಳು ದೂರ ಉಳಿಯುತ್ತವೆ. 
 
ಗ್ಯಾಸ್ಟ್ರಿಕ್ ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂಬರುವ ದಿನಗಳಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ. ಯಾವುದೇ ಕಾರಣಕ್ಕೂ ಖಾಲಿ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟು ಮಾಡುವ ಆಹಾರಗಳನ್ನು ಸೇವಿಸಬಾರದು. ಪ್ರತಿದಿನ ಇದು ಹೀಗೆ ಮುಂದುವರೆದರೆ ಅತಿಯಾದ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದಿಂದ ಮುಂದಿನ ದಿನಗಳಲ್ಲಿ ಆಹಾರ ಸೇವಿಸಲು ಆಗದೆ ಹೋಗಬಹುದು ಜೊತೆಗೆ ಹೊಟ್ಟೆಯಲ್ಲಿ ಉಲ್ಸರ್ ಕೂಡ ಆಗಬಹುದು.  

ಆದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಲಿನ ಜೊತೆ ನಮ್ಮ ದೇಹ ಸೇರುವ ಹೆಚ್ಚಿನ ಪ್ರಮಾಣದ ಕಾಫಿ ಮತ್ತು ಚಹಾ ನಮಗೆ ಗ್ಯಾಸ್ಟಿಕ್ ಉಂಟು ಮಾಡುತ್ತದೆ. ಅದು ಅಲ್ಲದೆ ಹಾಲು ಎಂದರೆ ಹಲವರಿಗೆ ಅಲರ್ಜಿ. ಇದು ಕೂಡ ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳನ್ನು ತಂದು ಕೊಡುವುದು ಮಾತ್ರವಲ್ಲದೆ ಹೊಟ್ಟೆಯಲ್ಲಿ ಹೆಚ್ಚಿನ ಗ್ಯಾಸ್ ಉತ್ಪತ್ತಿ ಮಾಡುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯ ಇದರಿಂದಲೇ ಹಾಳಾಗುತ್ತದೆ. ಹೀಗಾಗಿ ನಿಮಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡೀಲೇ ಬೇಕು, ಇಲ್ಲಾಂದ್ರೆ ಜೀವನದಲ್ಲೇ ಜಿಗುಪ್ಸೆ ಬರುತ್ತೆ ಅನ್ನೋ ಹಾಗಿದ್ರೆ ಗಿಡಮೂಲಿಕೆ ಚಹಾ ಕುಡಿಯುವುದು ಉತ್ತಮ. ಇದು ಆರೋಗ್ಯಕ್ಕೂ ಒಳ್ಳೆಯದು. ಗ್ಯಾಸ್ಟ್ರಿಕ್ ಸಹ ಆಗಲ್ಲ.

Tap to resize

Latest Videos

undefined

ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿದ್ರೆ ಕಾಡುತ್ತೆ ಬಂಜೆತನ ಸಮಸ್ಯೆ?

ಬೆಳಗಿನ ತಿಂಡಿ ಸಮಯದಲ್ಲಿ ನೀವು ಒಂದು ವೇಳೆ ಗೋಬಿ ಪರೋಟ ಇಷ್ಟಪಟ್ಟು ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದರೆ, ಅದನ್ನು ಈಗಲೇ ಬಿಟ್ಟುಬಿಡಿ. ಏಕೆಂದರೆ ಇದು ಕೂಡ ತುಂಬಾ ಗ್ಯಾಸ್ಟ್ರಿಕ್. ಇದರಲ್ಲಿರುವ ಹಸಿರು ಎಲೆಗಳು ಕಾಂಪ್ಲೆಕ್ಸ್ ಕಾರ್ಬೋ ಹೈಡ್ರೇಟ್ ಅಂಶ ಗಳನ್ನು ಒಳಗೊಂಡಿರುತ್ತದೆ. ಇವು ಬೇಗನೆ ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ ಉತ್ಪತ್ತಿ ಹೆಚ್ಚಾಗುತ್ತದೆ. ಇದರ ಬದಲು ಕಡಿಮೆ ಕಾರ್ಬೋ ಹೈಡ್ರೇಟ್ ಅಂಶ ಇರುವ ಪಾಲಕ್ ಸೊಪ್ಪನ್ನು ನಿಮ್ಮ ಪರೋಟದಲ್ಲಿ ಬಳಸಿ ಸೇವಿಸಬಹುದು.

ಸೇಬು ಹಣ್ಣು ನಮ್ಮ ಹೃದಯಕ್ಕೆ ಬಹಳ ಒಳ್ಳೆಯದು. ಪ್ರತಿ ದಿನ ಸೇಬು ಹಣ್ಣು ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಹೃದಯದ ಕಾಯಿಲೆಯಿಂದ ದೂರ ಉಳಿಯಬಹುದು ಎಂದು ಹೇಳುತ್ತಾರೆ. ಆದರೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣು ಮತ್ತು ಪಿಯರ್ಸ್ ಹಣ್ಣನ್ನು ಸೇವಿಸಬಾರದು. ಏಕೆಂದರೆ ಇದರಲ್ಲಿ ನೈಸರ್ಗಿಕ ಸಿಹಿ ಎನ್ನಲಾದ ಫ್ರಕ್ಟೋಸ್ ಮತ್ತು ನಾರಿನ ಪ್ರಮಾಣ ಅಧಿಕವಾಗಿದೆ. ಇದು ಹೊಟ್ಟೆ ಉಬ್ಬರ ಆಗುವಂತೆ ಮಾಡುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಕೂಡ ಆಗುತ್ತದೆ. ಆದರೆ ಇದರ ಬದಲು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿರುವ ಬೆರ್ರಿ ಹಣ್ಣುಗಳನ್ನು ಸೇವಿಸುವುದು ಉತ್ತಮ.

 ಹೀಗೆ ಕೆಲವು ಹಸಿ ತರಕಾರಿಗಳು, ಹಣ್ಣು, ತಿಂಡಿಗಳಲ್ಲಿ ಕಂಟ್ರೋಲ್ ಮಾಡ್ಕೊಂಡ್ರೆ ಗ್ಯಾಸ್ಟ್ರಿಕ್ ಸಮಸ್ಯೆಗೆ ಗುಡ್‌ ಬೈ ಹೇಳಬಹುದು. 

ಗರ್ಭಿಣಿಯರು ಮಗುವಿನ ಮೂಳೆ ಗಟ್ಟಿಯಾಗೋಕೆ ಇಂಥಾ ಆಹಾರ ತಿನ್ಬೇಕು
 

click me!