ಬಿಡುವಿಲ್ಲದ ಈ ಜೀವನ ಶೈಲಿಯಲ್ಲಿ ದೇಹದ ಫಿಟ್ನೆಸ್ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಫಿಟ್ನೆಸ್ ಡಯಟ್ ವಿಷಯ ಬಂದಾಗ ದಕ್ಷಿಣ ಭಾರತದ ಆಹಾರ ಪದ್ಧತಿ ಹಾಗು ಉತ್ತರ ಭಾರತದ ಆಹಾರ ಪದ್ಧತಿ ಇವೆರಡರಲ್ಲಿ ಯಾವುದು ಉತ್ತಮ ಎಂಬ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ನಾವು ಊಟದ ಬಗ್ಗೆ ಮಾತನಾಡುವಾಗ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಎರಡು ಬಗೆಯ ಖಾದ್ಯಗಳ ಕುರಿತಾಗಿ ಹೆಚ್ಚಿನ ಆಸಕ್ತಿ ತೋರುತ್ತೇವೆ- ಸೌತ್ ಇಂಡಿಯನ್ ಆಹಾರ South Indian Food) ಹಾಗೂ ನಾರ್ತ್ ಇಂಡಿಯನ್ ಆಹಾರ (North Indian Food). ಭಾರತೀಯ ಆಹಾರ ಪದ್ಧತಿಯಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಆಹಾರಕ್ರಮಗಳು ಬಹಳ ಭಿನ್ನವಾಗಿವೆ. ಉತ್ತರ ಭಾರತದ ಆಹಾರ ಪದ್ಧತಿಯಲ್ಲಿ ಹೆಚ್ಚು ಹಾಲು, ಮೊಸರು, ಪನ್ನೀರ್, ಗೋಧಿ, ತರಕಾರಿಗಳಿಗೆ(vegitables) ಪ್ರಾಮುಖ್ಯತೆ ನೀಡಿದರೆ, ದಕ್ಷಿಣ ಭಾರತದ ಆಹಾರ ಕ್ರಮದಲ್ಲಿ ಹೆಚ್ಚು ಅಕ್ಕಿ, ಸೊಪ್ಪು, ಮಸಾಲೆ ಪದಾರ್ಥಗಳಿಗೆ ಮನ್ನಣೆಯಿದೆ. ಈ ಎರಡು ಆಹಾರ ಕ್ರಮಗಳಲ್ಲಿ ಯಾವುದು ಬೆಸ್ಟ್ ನೋಡೋಣ.
ಅನ್ನವಿಲ್ಲದ ಊಟ ಊಟವೇ ಅಲ್ಲ!
ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಸಸ್ಯಹಾರಿಗಳ ಸಂಖ್ಯೆ ಹೆಚ್ಚು. ಇಲ್ಲಿ ಇಡ್ಲಿ ಹಾಗೂ ದೋಸೆಯ ಬಳಕೆ ಹೆಚ್ಚು. ಊಟವೆಂದರೆ ಅನ್ನ ಇರಲೇಬೇಕು. ಇನ್ನು ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು, ತೆಂಗಿನಕಾಯಿ, ಅರಿಶಿಣದಂಥ ಮಸಾಲೆ ಸಾಮಗ್ರಿಗಳಿಲ್ಲದೆ ಯಾವ ಆಹಾರವೂ ತಯಾರಾಗಲ್ಲ. ಇವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ. ಇನ್ನು ಇಲ್ಲಿನ ಮಾಂಸಾಹಾರಿಗಳ(non-vegitarians) ವಿಷಯಕ್ಕೆ ಬಂದರೆ, ಅವರು ಸಮುದ್ರಾಹಾರವನ್ನು(seafood) ಹೆಚ್ಚು ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಕರಾವಳಿಯ ಮೀನುಗಳು ನಾಲಿಗೆಯಲ್ಲಿ ನೀರೂರಿಸುತ್ತವೆ.
undefined
ರೋಟಿ, ಚಪಾತಿ
ಚಪಾತಿ, ರೋಟಿ, ನಾನ್ ಇಲ್ಲದೆ ನಾನಿಲ್ಲ ಎನ್ನುತ್ತದೆ ನಾರ್ಥ ಇಂಡಿಯನ್ ಫುಡ್. ಗೋಧಿಯನ್ನು ಇಲ್ಲಿ ಬೆಳೆಯುವುದು ಹೆಚ್ಚಾದ್ದರಿಂದ ಅದರ ಬಳಕೆಯೂ ಹೆಚ್ಚು. ಹಾಗಾಗಿ, ಅನ್ನದಷ್ಟು ಕ್ಯಾಲೋರಿ ಗೋಧಿಯಲ್ಲಿರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಉತ್ತರ ಭಾರತದ ಊಟವೇ ಫಿಟ್ನೆಸ್ ಪ್ರಿಯರಿಗೆ ಒಳ್ಳೆಯದು ಎಂದು ನಿಮಗನಿಸಬಹುದು. ಆದರೆ, ನಾವು ಹೆಚ್ಚು ಕ್ಯಾಲೋರಿಯಿಲ್ಲದ ಸಾರು, ಸಾಂಬಾರು ಬಳಸುತ್ತೇವೆ. ಉತ್ತರದಲ್ಲಿ ರೋಟಿಗೆ ಮಾಡುವ ಕರಿ ದಪ್ಪವಾಗಿರುತ್ತದೆ. ಒಟ್ನಲ್ಲಿ ಅಲ್ಲಿಂದಲ್ಲಿಗೆ ಎರಡೂ ಬ್ಯಾಲೆನ್ಸ್ ಆಗುತ್ತವೆ. ಉತ್ತರದವರ ಆಹಾರ ಕ್ರಮ ಮೊಘಲರ ಆಹಾರ ಪದ್ಧತಿಯಿಂದ ಪ್ರಭಾವಿತವಾಗಿದೆ.
ನೆಲದ ಮೇಲೆ ಕುಳಿತು ತಿನ್ನುವ 6 ಅದ್ಭುತ ಪ್ರಯೋಜನಗಳು
ಯಾವುದು ಬೆಸ್ಟ್?
ಈ ಎರಡು ಭಾಗಗಳ ಆಹಾರಕ್ರಮದಲ್ಲಿ ಯಾವುದು ಬೆಸ್ಟ್ ಎಂದು ನೋಡಿದರೆ, ಎರಡೂ ಉತ್ತಮವಾಗಿಯೇ ಕಾಣುತ್ತದೆ. ಎಲ್ಲಕ್ಕಿಂತ ಮೊದಲು ನೀವು ತಿಳಿದಿರಬೇಕಾದುದೇನೆಂದರೆ ನಾವು ವಾಸಿಸುವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯುತ್ತದೋ ಅದೇ ಆಹಾರ ಇಲ್ಲಿಗೆ ಒಗ್ಗಿರುವ ನಮ್ಮ ದೇಹಕ್ಕೆ ಬೆಸ್ಟ್. ಹಾಗಿದ್ದೂ, ನಮ್ಮ ಆಹಾರ ಪದ್ಧತಿಯಲ್ಲಿ ಪ್ರೋಟೀನ್ ಕೊರತೆಯಿದೆ ಅನ್ನಿಸಿದರೆ ಪನ್ನೀರ್, ಹಾಲು, ಮೊಟ್ಟೆಯ ಬಳಕೆ ಹೆಚ್ಚಿಸಬಹದು. ಎರಡೂ ಪದ್ಧತಿಯ ಆಹಾರವನ್ನು ಕ್ಯಾಲೋರಿಗನುಗುಣವಾಗಿ ಹಿತಮಿತವಾಗಿ ಬ್ಲೆಂಡ್ ಮಾಡಿ ಬಳಸುವ ಆಯ್ಕೆ ಒಳ್ಳೆಯದು.
Immunity Booster: ಈ 8 ಸೂಪರ್ ಆಹಾರ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ!
ಏಕೆಂದರೆ, ಫುಟ್ನೆಸ್ ಪ್ರಿಯರು ಆಹಾರ ಪದ್ಧತಿ ನೋಡುವುದಕ್ಕಿಂತ ಕ್ಯಾಲೋರಿ, ಪ್ರೋಟೀನ್ ಸೇವನೆ ಕಡೆ ಗಮನ ಹರಿಸಬೇಕು. ಹೆಚ್ಚು ಕ್ಯಾಲೊರಿ ಇರುವ ಆಹಾರ ಸೇವನೆ ಕಡಿಮೆ ಮಾಡಬೇಕು. ಪ್ರೋಟೀನ್ ಸೇವನೆ ಹೆಚ್ಚಿಸಬೇಕು. ಅನ್ನವೇ ಬೇಕು ಎನ್ನುವವರಾದರೆ ಅದರ ಕ್ವಾಂಟಿಟಿ ಕಡಿಮೆ ಮಾಡಿ, ಜೊತೆಗೆ ಕಾಳುಗಳು, ಬೇಳೆ, ಹಸಿ ತರಕಾರಿಗಳು, ಚಪಾತಿ ಸೇರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳಬಹುದು. ಇದರಿಂದ ಸಮತೂಕದ ಆಹಾರ ಸೇವನೆ ಸಾಧ್ಯವಾಗುತ್ತದೆ.
ಹೆಚ್ಚು ನೀರು ಕುಡಿಯಿರಿ
ಇದರ ಜೊತೆಗೆ ಹೆಚ್ಚು ಹೆಚ್ಚು ನೀರು(water) ಕುಡಿಯುವ ಅಭ್ಯಾಸ ಫಿಟ್ನೆಸ್ ಕಾಪಾಡಿಕೊಳ್ಳಲು ಇರುವ ಉತ್ತಮ ಮಾರ್ಗ. ಸಕ್ಕರೆಯ(sugar) ಬಳಕೆ ಪ್ರಮಾಣ ಕಡಿಮೆ ಮಾಡಿ. ಸಕ್ಕರೆ ಬಳಸುವುದನ್ನೇ ನಿಲ್ಲಿಸಿದರೂ ಒಳ್ಳೆಯದೇ. ಯಾಕೆಂದರೆ ಸಕ್ಕರೆಯಲ್ಲಿ ಅತಿ ಹೆಚ್ಚಿನ ಕ್ಯಾಲೋರೀಸ್ ಇರುತ್ತದೆ. ಆಹಾರ ಪದ್ಧತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಆಹಾರದಲ್ಲಿ ಎಲ್ಲ ಪೋಷಕಸತ್ವಗಳೂ ಸಿಗುತ್ತಿವೆಯೇ ಎಂಬ ಕಡೆ ಗಮನ ಹರಿಸುವುದೊಳಿತು.