ಲೈಂಗಿಕ ತಜ್ಞರು ಹೇಳುತ್ತಾರೆ- ನಮಗೆ ಇಂಥ ಭಯ ಆತಂಕಗಳ ನಡುವೆ ಖುಷಿ ಖುಷಿಯಾಗಿ ಸೆಕ್ಸ್ ಮಾಡೋಕೂ ಸಾಧ್ಯ ಆಗುತ್ತಿಲ್ಲ ಹೀಗಾಗಿ ನಾವು ಸಂಗಾತಿಯಿಂದ ದೂರ ಕಾಯ್ದುಕೊಂಡಿದ್ದೇವೆ. ಸದ್ಯಕ್ಕೆ ಹಸ್ತಮೈಥುನವೊಂದೇ ನಮ್ಮನ್ನು ಸಂತೃಪ್ತವಾಗಿ ಇಟ್ಟಿದೆ- ಅನ್ನುತ್ತಿದ್ದಾರೆ ಹೆಚ್ಚಿನವರು ಅಂತ.
ಇಂಥ ಸಮೀಕ್ಷೆಗಳೂ ನಡೀತಿರ್ತಾವೆ. ವಿಚಿತ್ರ ಅನ್ನಿಸಿದರೂ ನಂಬಲೇಬೇಕು. ಜರ್ಮನಿಯ ಒಬ್ಬ ಲೈಂಗಿಕ ತಜ್ಞರು ಹೇಳುತ್ತಾರೆ- ನನ್ನ ಜೀವನದಲ್ಲಿ ಇಷ್ಟೊಂದು ಕೇಸುಗಳನ್ನು ನೋಡಿರಲಿಲ್ಲ. ಆದರೆ ಯಾರೂ ಕ್ಲಿನಿಕ್‌ಗೆ ಬರ್ತಿಲ್ಲ. ಫೋನ್‌ನಲ್ಲೇ ಸಲಹೆ ಕೇಳ್ತಾರೆ. ಎಲ್ಲರಿಗೂ ಒಂದೇ ಭಯ. ನಾವು ಹೊರಗಡೆ ಕಚೇರಿ ಅದೂ ಇದೂ ಅಂತ ತಿರುಗಾಡಿ ಬರುತ್ತೇವೆ. ಕೈಗಳನ್ನು ತೊಳೆದುಕೊಳ್ತೇವೆ. ಕ್ಲೀನಾಗಿ ಇರಲು ಪ್ರಯತ್ನ ಮಾಡ್ತಿದೇವೆ. ಆದರೂ ಒಳಗೆಲ್ಲೋ ಅಳುಕು. ನನಗೆ ಈಗಾಗಲೇ ಕೊರೊನಾ ಬಂದಿರಬಹುದಾ? ಬಂದಿದ್ದರೆ, ಅದರಿಂದ ನನ್ನ ಸಂಗಾತಿಗೂ ಅದು ಹರಡಬಹುದಾ? ಅಥವಾ, ನನ್ನ ಸಂಗಾತಿಯಿಂದ ನನಗೆ ಬರಬಹುದಾ? ನಾವೀಗ ಸೆಕ್ಸ್ ಮಾಡೋದು ಸೇಫಾ? ಅಲ್ಲವಾದರೆ ಬೇರೆ ಏನು ಮಾಡೋದು? ಇಂಥ ಆತಂಕಗಳಿಗೆ ಅರ್ಥವಿಲ್ಲ ಅಂತಲೂ ಹೇಳೋ ಹಾಗಿಲ್ಲವಲ್ಲ. ಹಾಗಾಗಿ ಅವರಿಗೆ ಏನಾದರೊಂದು ಸಮಾಧಾನ ಹೇಳಲೇಬೇಕಾಗುತ್ತದೆ. ಹಸ್ತಮೈಥುನ ಮಾಡಿಕೊಂಡು ತೃಪ್ತಿ ಪಡೆಯಿರಿ ಎಂದು ಹೇಳುತ್ತೇವೆ. ಕೆಲವರು ನೇರವಾಗಿಯೇ ಹೇಳುತ್ತಾರೆ- ನಮಗೆ ಇಂಥ ಭಯ ಆತಂಕಗಳ ನಡುವೆ ಖುಷಿ ಖುಷಿಯಾಗಿ ಸೆಕ್ಸ್ ಮಾಡೋಕೂ ಸಾಧ್ಯ ಆಗುತ್ತಿಲ್ಲ ಹೀಗಾಗಿ ನಾವು ಸಂಗಾತಿಯಿಂದ ದೂರ ಕಾಯ್ದುಕೊಂಡಿದ್ದೇವೆ. ಸದ್ಯಕ್ಕೆ ಹಸ್ತಮೈಥುನವೊಂದೇ ನಮ್ಮನ್ನು ಸಂತೃಪ್ತವಾಗಿ ಇಟ್ಟಿದೆ- ಅನ್ನುತ್ತಾರೆ.
ಈ ಭಯ ಆತಂಕ ಅನುಮಾನಗಳು ಅಕಾರಣವೇನಲ್ಲ. ಕೊರೊನಾ ವೈರಸ್ ಸೆಕ್ಸ್‌ನಿಂಧ ಹರಡುತ್ತದೆ ಎನ್ನುವುದಕ್ಕೆ ಸಾಕ್ಷಿಯಿಲ್ಲ. ಆದರೆ ಹರಡುವುದಿಲ್ಲ ಅನ್ನುವುದಕ್ಕೂ ಸಾಕ್ಷಿಯಿಲ್ಲ. ಒಬ್ಬರನ್ನು ಇನ್ನೊಬ್ಬರು ಮುಟ್ಟಿದರೂ ವೈರಸ್ ಹರಡುವ ಸಾಧ್ಯತೆ ಇರುವಾಗ, ಸೆಕ್ಸ್‌ನಿಂಧ ಹರಡುವ ಸಾಧ್ಯತೆ ಇಲ್ಲದೆ ಇರುತ್ತದೆಯೇ? ವೈರಸ್‌ನ ಮುಖ್ಯ ವಾಹಕ ಎಂದು ಎಂಜಲು ಅಥವಾ ಮೂಗಿನ ಸ್ರಾವ. ಇನ್ನೊಬ್ಬರ ಎಂಜಲು ನಮ್ಮ ದೇಹವನ್ನು ಪ್ರವೇಶಿಸಿದರೆ ವೈರಸ್ ವರ್ಗಾವಣೆ ಆಗಬಹುದು. ಸೆಕ್ಸ್ ಸಂದರ್ಭದಲ್ಲಿ ಪರಸ್ಪರ ಚುಂಬಿಸಿಕೊಳ್ಳುವುದು ಸಹಜ ತಾನೆ. ಈ ಚುಂಬನದಿಂದ ವೈರಸ್ ಹರಡುವ ಎಲ್ಲ ಸಾಧ್ಯತೆಯೂ ಇದೆ. ಅದೂ ಸಂಗಾತಿಯಲ್ಲಿ ಇದ್ದರೆ ಮಾತ್ರ. ಆದರೆ ನಿಮ್ಮ ಸಂಗಾತಿ ಹೊರಗಿನಿಂಧ ಕೊರೊನಾ ವೈರಸ್ ತಂದಿಲ್ಲ ಎಂಬ ಖಾತ್ರಿ ನಿಮಗೆ ಇದೆಯೇ? ಇದೇ ಈಗ ಯುರೋಪ್, ಅಮೆರಿಕದ ಬಹುಮಂದಿಯಲ್ಲಿ ಆತಂಕಕ್ಕೆ ಕಾರಣ. ಈ ಆತಂಕದಿಂದಲೇ ಮಧುಮಂಚಗಳೂ ಇಂದು ವಿರಹದಿಂದ ಚಡಪಡಿಸುತ್ತಿವೆ. ನವದಂಪತಿಗಳೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸೆಕ್ಸ್ ಇಂಡಸ್ಟ್ರಿಯೂ ಕುಸಿದು ಬಿದ್ದಿದೆ. ಮುಂಬಯಿ, ಕೋಲ್ಕೊತಾ ಮುಂತಾದೆಡೆಗಳ ರೆಡ್‌ಲೈಟ್ ಏರಿಯಾಗಳಿಗೆ ಗಿರಾಕಿಗಳೇ ಇಲ್ಲ. ಯಾಕೆಂದರೆ ವೈರಸ್‌ನ ಭಯ.
ಸಂಭೋಗದ ನಂತರ ಗಂಡ ಹೀಗ್ ಆಡಿದ್ರೆ ಪತ್ನಿಗಿರೋಲ್ಲ ಲೈಂಗಿಕಾಸಕ್ತಿ!
ಆದರೆ ಮನುಷ್ಯನ ದೇಹ ಕೇಳಬೇಕಲ್ಲ. ತುಂಬಾ ಇಂದ್ರಿಯ ನಿಗ್ರಹ ಇದ್ದವರು ಬ್ರಹ್ಮಚರ್ಯ ಕಾಯ್ದುಕೊಳ್ಳಬಹುದು. ಆದರೆ ಸಂಗಾತಿ ಬಳಿ ಇದ್ದೂ ಭಯದಿಂದ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಲಾಗದವರು ಮಾತ್ರ ಹಸ್ತಮೈಥುನದ ಮೊರೆ ಹೋಗುವುದು ಖಚಿತ. ಈ ಸಂದರ್ಭದಲ್ಲಿ ಸೆಕ್ಸ್ ಮಾಡಬಹುದೇ ಇಲ್ಲವೇ ಎಂದು ಕೇಳಿ ಲೈಂಗಿಕ ತಜ್ಞರಿಗೆ ಫೋನ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆಯಂತೆ. ಸಮಾಧಾನವಾಗಿರಿ, ಕ್ಲೀನ್ಲಿನೆಸ್ ಕಾಪಾಡಿಕೊಳ್ಳಿ, ಹೀಗಿದ್ದರೆ ಸೆಕ್ಸ್‌ಗೇನೂ ಸಮಸ್ಯೆಯಿಲ್ಲ ಎಂದು ತಜ್ಞರು ಹೇಳಿದರೂ ಇವರಲ್ಲಿ ಏನೋ ಅಳುಕು. ಇಂಥ ಸಂದರ್ಭದಲ್ಲಿ ಸುರಕ್ಷಿತ ಸೆಕ್ಸ್ ಅಗತ್ಯ ಅನ್ನುತ್ತಾರೆ ತಜ್ಞರು. ಅದಕ್ಕೆ ಹಲವು ಟಿಪ್ಸ್‌ಗಳನ್ನೂ ನೀಡುತ್ತಾರೆ.
ಸೆಕ್ಸ್ ಮಾಡಬೇಡಿ, ಬೆಂಕಿ ಮೇಲೆ ನಡೀರಿ: ಕೊರೋನಾಗೆ 'ನಿತ್ಯ' ಮದ್ದು!
ಮೊದಲನೆಯದಾಗಿ, ಸಂಗಾತಿ ನಿಮಗೆ ಎಷ್ಟೇ ಪರಿಚಿತರಾಗಿರಲಿ, ನಿಮ್ಮ ಪತಿ- ಅಥವಾ ಪತ್ನಿಯೇ ಆಗಿರಲಿ, ಸೆಕ್ಸ್‌ಗೆ ಮುನ್ನ ಚೆನ್ನಾಗಿ ಸ್ನಾನ ಮಾಡಿಕೊಳ್ಳಿ. ಸೋಪು ಹಚ್ಚಿ ಸ್ನಾನ ಮಾಡಿಕೊಂಡು ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಹೆಚ್ಚು ಸುರಕ್ಷಿತ. ಆಗ ಹೊರಗಿನಿಂದ ಬಂದಿರಬಹುದಾದ ವೈರಸ್‌ಗಳು ನಿಮ್ಮನ್ನು ಸೋಂಕುವ ಸಾಧ್ಯತೆ ಇರೋಲ್ಲ. ಇನ್ನು ಕಾಂಡೋಮ್ ಬಳಸಬೇಕೇ ಬೇಡವೇ ಎಂಬ ಪ್ರಶ್ನೆ. ಜನನಾಂಗಗಳ ಮೂಲಕ ವೈರಸ್ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಹೀಗಾಗಿ ಬಳಸಲೇಬೇಕೆಂದೇನಿಲ್ಲ. ಅಗತ್ಯವಿದ್ದರೆ ಬಳಸಬಹುದು.