ನಿಮಗೆ ಕೊರೋನಾ ಪಾಸಿಟಿವ್ ಇದೆಯಾ ? ವ್ಯಾಕ್ಸೀನ್ ತೆಗೆದುಕೊಳ್ಬೋದಾ ? ಆಗಲೇ ಪಾಸಿಟಿವ್ ಆಗಿ ಟ್ರೇಟ್ಮೆಂಟ್ ತಗೊಂಡು ನೆಗೆಟಿವ್ ಆಯ್ತಾ ? ವ್ಯಾಕ್ಸೀನ್ ಬೇಡ ಅನ್ಕೊಂಡಿದ್ದೀರಾ ? ಮತ್ತೊಮ್ಮೆ ಯೋಚಿಸಿ
ನಿಮಗೆ ಜ್ವರ, ಕೆಮ್ಮು ಮತ್ತು ಇತರ ಕೊರೋನಾ ರೋಗಲಕ್ಷಣಗಳು ಕಾಣಿಸಿಕೊಂಡಿರಬಹದು. ಅದರಿಂದ ನೀವು ಗುಣಮುಖರಾಗಿರಲೂಬಹುದು. ನಿಮಗೆ COVID-19 ಪಾಸಿಟಿವ್ ಬಂದಿದ್ದರೂ ಲಕ್ಷಣಗಳು ಇಲ್ಲದಿರಬಹುದು.
ನಿಮಗೆ ಈಗಾಗಲೇ ಕರೋನವೈರಸ್ ಪಾಸಿಟಿವ್ ಬಂದಾಗಿ ಹುಷಾರಾಗಿದ್ದೀರಿ, ಅದಕ್ಕೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದು ನೀವು ಭಾವಿಸಬಹುದು. ನಿಮ್ಮ ದೇಹ ಈಗ ವೈರಸ್ ವಿರುದ್ಧ ಪ್ರತಿಕಾಯಗಳನ್ನು ನಿರ್ಮಿಸಿದೆ, ಆದ್ದರಿಂದ ನೀವು ಸಂಪೂರ್ಣ ಸೇಫ್ ಎಂದುಕೊಂಡಿದ್ದೀರಾ?
undefined
ಜೀವಕ್ಕೆ ಮಾರಕವಾಗುವ ಮಲೇರಿಯಾ ಸಮಸ್ಯೆ ಕಾಡಬಹುದು.. ಸೊಳ್ಳೆಗಳಿಂದ ದೂರವಿರಿ...
ಸಾಂಕ್ರಾಮಿಕ ರೋಗ ತಜ್ಞ ಕ್ರಿಸ್ಟೆನ್ ಎಂಗ್ಲಂಡ್, ಎಂಡಿ ಹೇಳುವಂತೆ ಈ ಕಲ್ಪನೆಯು ಸತ್ಯಕ್ಕೆ ದೂರ. ಕಡಿಮೆ ಜನರು ಎರಡನೇ ಬಾರಿಗೆ ಕೊರೋನಾ ಸೋಂಕಿತರಾಗುತ್ತಾರೆ ಎಂಬುದು ನಮಗೆ ಗೊತ್ತು. ನಿಮಗೆ ಕೊರೋನಾ ಪಾಸಿಟಿವ್ ಬಂದಿದ್ದರೂ ಲಸಿಕೆ ಪಡೆಯುವುದು ನಿಮಗೆ ಇನ್ನೂ ಮುಖ್ಯ ಎಂದು ಡಾ. ಎಂಗ್ಲಂಡ್ ಹೇಳಿದ್ದಾರೆ.
ನಿಮಗೆ ಎರಡನೇ ಬಾರಿಗೆ ಕೊರೋನಾ ಪಾಸಿಟಿವ್ ಬರದಿದ್ದರೂ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಮತ್ತೆ ಪುನರುಜ್ಜೀವನಗೊಳಿಸುವುದು ಮುಖ್ಯ. ಅದಕ್ಕೆ ಲಸಿಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ನನ್ನನ್ನು ರಕ್ಷಿಸಲು ಪ್ರತಿಕಾಯಗಳು ಬೇಕಾದಷ್ಟಿದೆಯಲ್ಲಾ ?
ನೀವು ಈಗಾಗಲೇ ಸೋಂಕಿಗೊಳಗಾಗಿದ್ದರೆ ಭವಿಷ್ಯದಲ್ಲಿ ನಿಮ್ಮನ್ನು ರಕ್ಷಿಸಲು ವೈರಸ್ ವಿರುದ್ಧ ಹೋರಾಡಲು ನಿಮ್ಮ ದೇಹದ ಪ್ರತಿಕಾಯಗಳಿಗೆ ಸಾಧ್ಯವಿಲ್ಲವೇ? ಆದರೆ ಈ ಪ್ರತಿಕಾಯ ಶಕ್ತಿ ಎಷ್ಟು ಸಮಯ ಉಳಿಯಬಹುದು ಎಂಬುದು ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ ಡಾ. ಎಂಗ್ಲಂಡ್ ಹೇಳುತ್ತಾರೆ.
COVID-19ನಿಂದ ಗುಣಮುಖರಾದ ಮೇಲೆ ರೋಗನಿರೋಧಕ ಶಕ್ತಿ ಎಂಟು ತಿಂಗಳವರೆಗೆ ಇರಬಹುದು ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನ ಕೇವಲ 200 ರೋಗಿಗಳನ್ನು ಮಾತ್ರ ಒಳಗೊಂಡಿದೆ. ಇನ್ನೂ ಹೆಚ್ಚಿನ ಡೇಟಾ ಇಲ್ಲ. ಹಾಗಾಗಿ ವ್ಯಾಕ್ಸೀನ್ ಪಡೆದುಕೊಂಡು ಸುರಕ್ಷಿತ ಎನಿಸಿಕೊಳ್ಳುವುದೇ ಉತ್ತಮ ಎನ್ನುತ್ತಾರೆ ತಜ್ಞರು.
ಡಾ. ಎಂಗ್ಲಂಡ್ ಅವರು ಕೊರೋನಾ ಹೊಂದಿದ್ದ ಮತ್ತು ದೀರ್ಘಾವಧಿಯ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಲಾಂಗ್ ಹೌಲರ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಲಸಿಕೆ ಪಡೆದರೆ ಶಾಶ್ವತ ಲಕ್ಷಣಗಳಿಂದ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳುತ್ತಾರೆ. ವ್ಯಾಕ್ಸೀನ್ ಪಡೆದುಕೊಳ್ಳುವುದು ನಿಮ್ಮ ಆರೋಗ್ಯ ಹಾಳು ಮಾಡುವುದಿಲ್ಲ. ಬದಲಾಗಿ ನಿಮಗೆ ಚೇತರಿಕೆ ಅನುಭವವಾಗಬಹುದು ಎನ್ನುತ್ತಾರೆ ಅವರು.
ನಿಮಗೆ ಕೊರೋನಾ ಬಂದಿದ್ದರೆ ಲಸಿಕೆ ಹಾಕಲು ನೀವು ಎಷ್ಟು ಸಮಯ ಕಾಯಬೇಕು?
COVID-19 ಸೋಂಕಿನ ನಂತರ ಕ್ವಾರೆಂಟೈನ್‌ನಿಂದ ಹೊರಬಂದ ಕೂಡಲೇ ಲಸಿಕೆ ಹಾಕಿಸಿಕೊಳ್ಳಬಹುದು. ನೀವು ಮೊನೊಕ್ಲೋನಲ್ ಪ್ರತಿಕಾಯಗಳನ್ನು ಸ್ವೀಕರಿಸಿದ್ದರೆ, ಲಸಿಕೆ ಸ್ವೀಕರಿಸಲು ನೀವು COVID-19 ನಿಂದ ಚೇತರಿಸಿಕೊಂಡ 90 ದಿನ ಕಾಯಬೇಕು. ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಪ್ರಕಾರ, ಮೊನೊಕ್ಲೋನಲ್ ಪ್ರತಿಕಾಯಗಳು ನಿಮ್ಮ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಅನುಕರಿಸುವ ಪ್ರಯೋಗಾಲಯದಲ್ಲಿ ತಯಾರಿಸಿದ ಪ್ರೋಟೀನ್‌ಗಳಾಗಿವೆ ಎಂದು ಡಾ. ಎಂಗ್ಲಂಡ್ ಹೇಳುತ್ತಾರೆ.
ನೀವು ಆ ಮೊನೊಕ್ಲೋನಲ್ ಪ್ರತಿಕಾಯವನ್ನು ಹೊಂದಿದ್ದರೆ, ಲಸಿಕೆಗೆ ಉತ್ತಮವಾದ, ದೃಢ ಪ್ರತಿಕಾಯ ಅಭಿವೃದ್ಧಿಪಡಿಸುವಲ್ಲಿ ಮೊನೊಕ್ಲೋನಲ್ ನಿಮ್ಮನ್ನು ತಡೆಯುತ್ತದೆ. ಅದಕ್ಕಾಗಿಯೇ ಆ ಮೊನೊಕ್ಲೋನಲ್ ಪ್ರತಿಕಾಯವು ನಿಮ್ಮ ಸಿಸ್ಟಮ್‌ನಿಂದ ಹೊರಬರುವವರೆಗೆ ನಾವು 90 ದಿನಗಳವರೆಗೆ ಕಾಯಬೇಕು ಎನ್ನಲಾಗಿದೆ.
ನೀವು ಲಸಿಕೆ ಪಡೆಯದೆ ಮತ್ತೊಮ್ಮೆ ಪಾಸಿಟಿವ್ ಬಂದರೆ ಅಪಾಯವೇನು ?
ನಿಮಗೆ ಕೊರೋನಾ ಬಂದು ಹೋದಮೇಲೆ ನೀವು ಲಸಿಕೆ ಪಡೆಯದಿದ್ದರೆ ನೀವು ಎರಡನೇ ಬಾರಿ ಸೋಂಕಿತರಾದರೆ ಮತ್ತೆ ಗುಣಮುಖರಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಲಸಿಕೆ ಪಡೆಯುವುದು ಉತ್ತಮ ಎಂದು ಡಾ. ಎಂಗ್ಲಂಡ್ ಸ್ಪಷ್ಟಪಡಿಸಿದ್ದಾರೆ.
ನಿಮಗೆ ಲಸಿಕೆ ನೀಡಿದ್ದರೂ ನಿಮ್ಮಿಂದ ವೈರಸ್ ಅನ್ನು ಇತರರಿಗೆ ಹರಡಬಹುದಾ?
ಲಸಿಕೆ ಹಾಕಿದ ಯಾರಾದರೂ ವೈರಸ್ ವಾಹಕರಾಗಬಹುದೇ ಎಂದು ಸಂಶೋಧಕರು ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ. ಲಸಿಕೆ ವಾಸ್ತವವಾಗಿ ವೈರಸ್ ಹರಡುವಿಕೆಯನ್ನು ಕಡಿತಗೊಳಿಸುತ್ತದೆ. ಆರಂಭಿಕ ಸಂಶೋಧನೆಯು COVID-19 ಗೆ ಲಸಿಕೆ ನೀಡುವುದರಿಂದ ನಿಮಗೆ ರೋಗಲಕ್ಷಣವಿಲ್ಲದ ಸೋಂಕು ಉಂಟಾಗುವ ಸಾಧ್ಯತೆ, ಮತ್ತು ಹರಡುವ ಸಾಧ್ಯತೆ 90% ಕಡಿಮೆಯಾಗುತ್ತದೆ ಎನ್ನಲಾಗಿದೆ.