ಶ್ರವಣ ಸಾಧನಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ

By Suvarna NewsFirst Published Apr 18, 2022, 5:21 PM IST
Highlights

ಇತ್ತೀಚಿಗೆ ಆರೋಗ್ಯ (Health)ದ ಬಗ್ಗೆ ಜನರು ಹೆಚ್ಚು ಕಾಳಜಿ (Care) ವಹಿಸುತ್ತಿದ್ದಾರೆ. ಹಿಂದೆಲ್ಲಾ ಕಿವಿ (Ear) ಕೇಳದಿದ್ದರೆ ಕಿವುಡರು ಎಂದು ಹೀಗಳೆಯುತ್ತಿದ್ದರು. ಆದರೆ ಇವತ್ತಿನ ದಿನಗಳಲ್ಲಿ ಕಿವಿ ಕೇಳದಿರುವ ಸಮಸ್ಯೆ (Problem) ಕಂಡು ಬಂದರೆ ಶೀಘ್ರ ಶ್ರವಣ ಸಾಧನಗಳನ್ನು ಬಳಸುತ್ತಾರೆ. ಆದರೆ ಶ್ರವಣ ಸಾಧನ ಖರೀದಿಸುವುದೇನೋ ಸರಿ, ಆದರೆ ಅದನ್ನು ಆಯ್ಕೆ (Selection) ಮಾಡುವಾಗ ಎಚ್ಚರವಿರಲಿ.

ಇತ್ತೀಚಿನ ವರ್ಷಗಳಲ್ಲಿ ಶ್ರವಣ ಸಾಧನಗಳು ಸಾಮಾನ್ಯವಾಗುತ್ತಿವೆ. ಜನರ ನಡುವೆ ಹೆಚ್ಚು ಜನಪ್ರಿಯವಾಗಿವೆ. ಕೋವಿಡ್ ನಂತರ ತಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂಬ ಅರಿವು ಜನರಲ್ಲಿ ಮೂಡಿದೆ. ಶ್ರವಣ ಸಾಧನಗಳ ವಿಚಾರದಲ್ಲೂ ಜನರಲ್ಲಿ ಇಂಥಹುದೇ ಜಾಗೃತಿ ಮೂಡಿದ್ದನ್ನು ನಾವು ಗಮನಿಸಬಹುದು. ಶ್ರವಣ ಸಾಧನಗಳ ಹೆಚ್ಚುತ್ತಿರುವ ಸ್ವೀಕಾರ ಮತ್ತು ಬೇಡಿಕೆಯೊಂದಿಗೆ, ಶ್ರವಣ ಸಾಧನಗಳನ್ನು ವಿತರಿಸುವ ಅನೇಕ ಮಳಿಗೆಗಳು ನಗರಗಳಲ್ಲಿ ತೆರೆದಿವೆ. ಆದರೆ ನೀವು ರಿಯಾಯಿತಿ ಆಧಾರದ ಮೇಲೆ ನಿಮ್ಮ ಶ್ರವಣ ಆರೋಗ್ಯ ನಿರ್ಧಾರಗಳನ್ನು ಮಾಡುವುದನ್ನು ನಿಲ್ಲಿಸಿ. 

ಶ್ರವಣ ಸಾಧನಗಳನ್ನು ಆಯ್ಕೆ ಮಾಡುವುದು ಹೇಗೆ ?

ಶ್ರವಣದೋಷ ಹೊಂದಿರುವ ಜನರು ಕೆಲವೊಮ್ಮೆ ಆಯ್ಕೆ ವಿಷಯದಲ್ಲಿ ತಪ್ಪುತ್ತಾರೆ. ಶ್ರವಣ ಸಾಧನಗಳನ್ನು ವಿತರಿಸುವ ಔಟ್‌ಲೆಟ್‌ಗಳ
ಸಂಖ್ಯೆಯು ಹೆಚ್ಚಾದಾಗ ಸ್ಪರ್ಧೆಯೂ ಹೆಚ್ಚಾಗುತ್ತದೆ ಮತ್ತು ಅನೇಕ ಬಾರಿ ಈ ಮಳಿಗೆಗಳು ರೋಗಿಗಳನ್ನು ಆಕರ್ಷಿಸಲು ಭಾರಿ ರಿಯಾಯಿತಿಗಳನ್ನು ಘೋಷಿಸಿ ಜಾಹೀರಾತು ನೀಡುತ್ತವೆ. ಶ್ರವಣಸಾಧನಗಳ ಮೇಲಿನ ರಿಯಾಯಿತಿ ತಪ್ಪಲ್ಲ. ಇದು ಹಲವಾರು ಬಳಕೆದಾರರಿಗೆ ಕೆಲವೊಮ್ಮೆ ಉಪಯುಕ್ತವಾಗುತ್ತದೆ. ಆದರೆ ರಿಯಾಯಿತಿಗಳು ನಿರ್ಧಾರ ತೆಗೆದುಕೊಳ್ಳುವ ಏಕೈಕ ಅಂಶವಾಗಿರಬಾರದು.
ಶ್ರವಣ ಸಾಧನಗಳು ಆರೋಗ್ಯ ಸಾಧನಗಳಾಗಿವೆ ಮತ್ತು ಅವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. 

Home Remedy: ಕಿವಿಯ ಸೋಂಕು ನಿವಾರಣೆಗೆ ಈ ಮನೆ ಮದ್ದುಗಳನ್ನು ಬಳಸಿ

ಶ್ರವಣಶಾಸ್ತ್ರಜ್ಞರ ಅನುಭವ, ಅರ್ಹತೆ ಮತ್ತು ಪ್ರಮಾಣೀಕರಣವನ್ನು ಕೇಳಿ

ಶ್ರವಣ ಸಾಧನಗಳು ತನ್ನಿಂದತಾನೇ ಕೆಲಸ ಮಾಡುವುದಿಲ್ಲ. ಅವು ಉತ್ತಮ ಫಲಿತಾಂಶ ನೀಡಬೇಕಾದರೆ ಪ್ರೋಗ್ರಾಂ ಸೆಟ್ಟಿಂಗ್
ಮಾಡಬೇಕು, ಅದಕ್ಕೆ ಒಬ್ಬರು ಸಮರ್ಥ ತಜ್ಞ (ಆಡಿಯಾಲಜಿಸ್‌ಟ್) ಅಗತ್ಯವಿದೆ. ಅನೇಕ ಬಾರಿ ವಿತರಣಾ ಮಳಿಗೆಗಳು ಅನನುಭವಿ ಸಿಬ್ಬಂದಿ ಅಥವಾ ಹೊಸ ಪದವೀಧರರನ್ನು ಹೊಂದಿರುತ್ತಾರೆ. ಅವರು ಗ್ರಾಹಕರನ್ನು ಆಕರ್ಷಿಸಲು ರಿಯಾಯಿತಿ ಘೋಷಿಸುತ್ತಾರೆ.

ಮುಂದಿನ ಬಾರಿ ನೀವು ಶ್ರವಣ ಸಾಧನದ ಕುರಿತು ಚರ್ಚಿಸಲು ಕ್ಲಿನಿಕ್‌ಗೆ ಭೇಟಿ ನೀಡಿದಾಗ, ರಿಯಾಯಿತಿಗಳನ್ನು ಕೇಳುವ ಮೊದಲು,
ಶ್ರವಣಶಾಸ್ತ್ರಜ್ಞರ ಅನುಭವ, ಅರ್ಹತೆ ಮತ್ತು ಪ್ರಮಾಣೀಕರಣವನ್ನು ಕೇಳಿ. ಹಲವು ವರ್ಷಗಳ ಅನುಭವ ಹೊಂದಿರುವ ವೃತ್ತಿಪರರು ರಿಯಾಯಿತಿ ನೀಡಲು ನಿರಾಕರಿಸುತ್ತಾರೆ ಎಂಬುದು ತಿಳಿದಿರಲಿ. ಅಂತಹ ಸನ್ನಿವೇಶದಲ್ಲಿ ನಿಮಗೆ ಕಡಿಮೆ ರಿಯಾಯಿತಿ ಸಿಗಬಹುದು. ಆದರೆ ಒಳ್ಳೆಯ ಸಾಧನ ಮತ್ತು ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.

World Hearing Day: ಯಾವಾಗ್ಲೂ ಇಯರ್ ಫೋನ್ ಹಾಕ್ಕೊಳ್ತೀರಾ ? ಕಿವಿಯೇ ಕೇಳಲ್ಲ ಹುಷಾರ್..!

ಶ್ರವಣ ಸಾಧನವನ್ನು ಖರೀದಿಸುವುದು ಮತ್ತು ಅದನ್ನು ಬಳಸುವುದು ಜೀವಮಾನದ ಪ್ರಕ್ರಿಯೆಯಾಗಿದೆ ಮತ್ತು ಇದಕ್ಕೆ ಆಗಾಗ್ಗೆ ಹೊಂದಾಣಿಕೆಗಳ ಅಗತ್ಯವಿರುತ್ತದೆ. ಅರ್ಹ ಮತ್ತು ಅನುಭವಿ ಶ್ರವಣಶಾಸ್ತ್ರಜ್ಞರು ಮಾತ್ರ ಈ ಅಗತ್ಯಗಳಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅನುಭವ ಮತ್ತು ತಜ್ಞರು ನಿಮ್ಮ ಪ್ರಾಥಮಿಕ ನಿರ್ಧಾರ ತೆಗೆದುಕೊಳ್ಳುವ ಅಂಶಗಳಾಗಿರಬೇಕು ಮತ್ತು
ಕೇವಲ ರಿಯಾಯಿತಿಗಳಲ್ಲ.

ಲೇಖಕರು: ವಿಕ್ರಂ ಪಾಟೀಲ್‌, ವೈದ್ಯರು

click me!