ಹೃದಯಾಘಾತದಿಂದ ಬಚಾವ್ ಆಗಲು ಏನು ಮಾಡಬೇಕು ?

By Suvarna News  |  First Published Apr 18, 2022, 3:38 PM IST

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ (Heart Attack) ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕಣ್ಣ ಮುಂದೆ ಎಷ್ಟೋ ಜನ, ಅದರಲ್ಲೂ ಯುವಜನತೆ (Youth) ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ.  ಹೃದಯಾಘಾತದಿಂದ ಬಚಾವ್ (Escape) ಆಗಲು ನಾವೇನು ಮಾಡಬಹುದು ?


ಯುವಜನರು ಈಗಿಗ ಹೃದಯ (Heart) ಕಾಪಾಡಿಕೊಳ್ಳುವುದು ಹೇಗೆ ಎಂದು ಕೇಳುವುದು ಸಾಮಾನ್ಯವಾಗಿದೆ. ನಮ್ಮ ಹೃದಯವನ್ನು ನಾವೇ ಜತನ ಮಾಡಿಕೊಳ್ಳಬಹುದು. ಹೃದಯದ ಆರೋಗ್ಯ (Health) ಕಾಪಾಡಿಕೊಳ್ಳುವುದು ಶೇ.82ರಿಂದ ಶೇ.90ರಷ್ಟು ನಮ್ಮ ಕೈಯಲ್ಲೇ ಇದೆ. ಜತೆಗೆ ಜೀವನ ಶೈಲಿ (Lifestyle)ಯಲ್ಲಿದೆ ಎಂಬುದನ್ನು ಅರಿತುಕೊಂಡರೆ; ಖಂಡಿತ ಹೃದಯಾಘಾತ (Heartattack)ದಿಂದ ಬಚಾವ್ ಆಗಬಹುದು. ಎರಡು ಬಗೆಯ ಅಂಶಗಳಿಂದ ಹೃದಯ ಕಾಯಿಲೆ ಉಂಟಾಗುತ್ತದೆ. ಒಂದು ಬದಲಾವಣೆ  ಮಾಡಿಕೊಳ್ಳಬಹುದಾದ ಅಂಶ, ಇನ್ನೊಂದು ಬದಲಾವಣೆ ಆಗದ ಅಂಶ. ಬದಲಾವಣೆ ಮಾಡಿಕೊಳ್ಳಬಹುದಾದ ಅಂಶದಲ್ಲಿ ದುಶ್ಚಟಗಳು, ಜೀವನಶೈಲಿ, ಆಹಾರಕ್ರಮ ಸೇರಿವೆ. ಬದಲಾವಣೆ ಆಗದ ಅಂಶದಲ್ಲಿ ವಯಸ್ಸು, ಅನುವಂಶೀಕತೆ ಸೇರಿದೆ. ಹಾಗಿದ್ರೆ ಬದಲಾವಣೆ ಆಗುವ ಅಂಶಗಳು ಯಾವುವೆಲ್ಲಾ ?

ಬದಲಾವಣೆ ಆಗುವ ಅಂಶಗಳು
ಈಗಿನ ಯುವಕರು ಹೆಚ್ಚಿನ ಪ್ರಮಾಣದಲ್ಲಿ ತಂಬಾಕು, ಗುಟ್ಕಾಗಳ ದಾಸರಾಗುತ್ತಿದ್ದಾರೆ. ಜತೆಗೆ ಸಿಗರೇಟು ಸೇದುತ್ತಿದ್ದಾರೆ. ತಂಬಾಕಿನಲ್ಲಿರುವ ನಿಕೋಟಿನ್ ಅಂಶ ಶರೀರಕ್ಕೆ ಸೇರಿ ಹೃದಯದ ಅಭಿದಮನಿ ಗೋಡೆಗಳಲ್ಲಿ ಕೊಬ್ಬು ಶೇಖರಣೆ ಉಂಟು ಮಾಡುತ್ತದೆ. ರಕ್ತನಾಳ ಬ್ಲಾಕ್ ಮಾಡುತ್ತದೆ. ಹೃದಯದ ಗಾತ್ರವನ್ನು ಕಿರಿದು ಮಾಡುತ್ತದೆ. ಹಾಗಾಗಿ ಸಿಗರೇಟು, ತಂಬಾಕು ಸೇವನೆಯಿಂದ ದೂರ ಉಳಿದರೆ ಉತ್ತಮ.

Tap to resize

Latest Videos

ಅಲ್ಕೋಹಾಲ್
ಮದ್ಯಸೇವನೆ ಕೂಡ ಹೃದಯಕ್ಕೆ ಭಾರಿ ತೊಂದರೆಯನ್ನುಂಟು ಮಾಡುತ್ತಾದೆ. ಹೃದಯದ ಮಾಂಸಕ್ಕೆ ಹೊಡೆತ ಬೀಳುತ್ತದೆ. ಹೃದಯದ ಅಂಕುಚಿನ ಪ್ರಸರಣ (ಪಂಪಿಂಗ್)ದ ಶಕ್ತಿ ಕುಂದಿಸುತ್ತದೆ. ಆರೋಗ್ಯವಂತ ವ್ಯಕ್ತಿಯ ಪ್ರತಿ ಬಡಿತಕ್ಕೆ 70ರಿಂದ 100 ಎಂಎಲ್ ರಕ್ತ ಚಲನೆಯಾಗುತ್ತದೆ. ಆದರೆ, ಆಲ್ಕೋಹಾಲ್ (Alcohol) ಸೇವನೆಯಿಂದ ರಕ್ತದ ಚಲನೆ ಶೇ.30 ಎಂಎಲ್‌ಗೆ ಕುಸಿಯಲಿದೆ.

ಈ ದಶ ಸೂತ್ರಗಳು ಹೃದಯಾಘಾತದ ಅಪಾಯವನ್ನು ದೂರ ಮಾಡುತ್ತೆ

ಮಧುಮೇಹ
ಭಾರತದ ಜನಸಂಖ್ಯೆಯ ಶೇ.6ರಿಂದ 10ರಷ್ಟು ಜನರಲ್ಲಿ ಮಧುಮೇಹ (Diabetes) ಇದೆ. ಮಧುಮೇಹ ನಿಯಂತ್ರಣಕ್ಕೂ ಕ್ರಮ ವಹಿಸಬೇಕು. ಆಹಾರ ಸೇವನೆಯಲ್ಲಿ ಬದಲಾವಣೆ, ಔಷಧಿ ತೆಗೆದುಕೊಂಡು ನಿಯಂತ್ರಣ ಮಾಡಿಕೊಳ್ಳಬೇಕು. ಬಿಪಿಯಿಂದಲೂ ಸಮಸ್ಯೆ ಉಂಟಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಬಿಪಿಯಿಂದ ಹೃದಯದ ಗಾತ್ರ ಕಡಿಮೆಯಾಗುತ್ತದೆ. ಹೀಗಾಗಿ ಹೃದಯಾಘಾತ ಉಂಟಾಗಬಹುದು.

ಜೀವನ ವಿಧಾನ/ ಸ್ಥೂಲಕಾಯ
ಈಗಿನ ಜೀವನ ಶೈಲಿಯಿಂದಲೂ ಹೃದಯ ಕಾಯಿಲೆ ಉಂಟಾಗುತ್ತದೆ. ಪರಿಶ್ರಮ ಇಲ್ಲದ ಜೀವನ ವಿಧಾನದಿಂದ ಜಡತ್ವ ಉಂಟಾಗುತ್ತದೆ. ಜತೆಗೆ ಬೇಕರಿ, ಜಂಕ್‌ಫುಡ್‌ಗಳಿಂದಲೂ ಕೊಬ್ಬಿನಾಂಶ ಹೆಚ್ಚಾಗಲಿದೆ. ವಯಸ್ಸಿಗೆ ಮೀರಿ ಹೆಚ್ಚಿನ ಪ್ರಮಾಣದ ತೂಕ ಹೊಂದಿದರೆ ಸಮಸ್ಯೆ ಉಂಟಾಗಲಿದೆ. ವಯಸ್ಸು, ಎತ್ತರಕ್ಕೆ ತಕ್ಕಂತೆ ತೂಕ ಹೊಂದಬೇಕು. 

ದಿನಕ್ಕೊಂದು ಆವಕಾಡೊ ತಿಂದರೆ ಹೃದಯದ ಆರೋಗ್ಯದ ಬಗ್ಗೆ ಭಯ ಬೇಕಿಲ್ಲ

ಜೀವನಶೈಲಿ ಬದಲಾಯಿಸಿಕೊಳ್ಳಿ
ಬದಲಾವಣೆಯಾಗದ ಅಂಶಗಳನ್ನು ನಾವು ಸರಿಪಡಿಸಲು ಆಗುವುದಿಲ್ಲ. ಆದರೆ, ಬದಲಾವಣೆ ಆಗಬಲ್ಲ ಅಂಶಗಳಲ್ಲಿ ನಾವು ಮನಸ್ಸು ಮಾಡಿ ಬದಲಾದರೆ ಖಂಡಿತ ನಗುನಗುತಾ ಜೀವನ ಕಳೆಯಬಹುದು. ಹೃದಯಾಘಾತ, ಮೂತ್ರಕೋಶ ತೊಂದರೆ, ಕಣ್ಣಿನಪೊರೆ ತೊಂದರೆ, ಮಾನಸಿಕ ಕಾಯಿಲೆ, ಮಾನಸಿಕ ಒತ್ತಡ, ಭಯ,ಕಾತರದಿಂದಲೂ ಪಾರಾಗಬಹುದು. ಹಾಗಾಗಿ ನಾವು ಮೊದಲು ತಂಬಾಕಿನ ದಾಸರಾಗಬಾರದು. ಮದ್ಯಪಾನ ಸೇವನೆಯಿಂದ ಆದಷ್ಟು ದೂರ ಇರಬೇಕು. ಮಧುಮೇಹ, ಬಿಪಿ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಜೀವನ ಶೈಲಿ ಬದಲಿಸಿಕೊಂಡು, ಸ್ಥೂಲಕಾಯದಿಂದ ಪಾರಾಗಬೇಕು. ವ್ಯಾಯಾಮ, ಯೋಗ, ಧ್ಯಾನ, ಪ್ರಾಣಾಯಾಮ, ಜಾಗಿಂಗ್, ವಾಕಿಂಗ್ ಮಾಡುವುದರಿಂದ ಜಡತ್ವದಿಂದ ಪಾರಾಗಬಹುದು.  

ಮನಸ್ಸು ಪ್ರಫುಲತೆ ಪಡೆಯಬೇಕು. ಸೂರ್ಯನಮಸ್ಕಾರ ಮಾಡಬೇಕು. ಆದಷ್ಟು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಹಣ್ಣು, ತರಕಾರಿ ಸೇವನೆ ಮಾಡಬೇಕು. ತಾಜಾ ಆಹಾರ ಬಳಕೆ ಮಾಡಬೇಕು. ಮನೆಯಲ್ಲಿ ತಯಾರಿಸಿದ ಅಡುಗೆ ಊಟ ಮಾಡಿದರೆ ಉತ್ತಮ. ಜೀವನಶೈಲಿಯನ್ನು ಸುಧಾರಿಸುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಬಹುದು. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.

ಲೇಖಕರು: ಡಾ.ಮೃತ್ಯುಂಜಯ ಆರ್.ವಸ್ತ್ರದ

click me!