ಅಬ್ಬಾ..ಇನ್ನೇನು ಕೊರೋನಾ (Corona) ಸೋಂಕಿನ ಅಲೆಗಳು ಮುಗ್ದು ಹೋಯ್ತು, ಮಾಸ್ಕ್ (Mask) ತೆಗ್ದು ಖುಲ್ಲಂಖುಲ್ಲಂ ಓಡಾಡ್ಬೋದು ಅನ್ನೋವಾಗ್ಲೇ ಹೊಸ ರೂಪಾಂತರಿ ವೈರಾಣು ವಕ್ಕರಿಸಿದೆ. ಈ ವೈರಸ್‌ನ (Virus) ಲಕ್ಷಣಗಳೇನು, ನಾವು ಹೇಗೆ ಮುನ್ನೆಚ್ಚರಿಕೆ ವಹಿಸ್ಬೋದು ಎಂಬುದನ್ನು ತಿಳ್ಕೊಳ್ಳೋಣ.
ಕೊರೋನಾ (Corona) ಸೋಂಕಿನ ಪ್ರಭಾವ ಕಡಿಮೆಯಾಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಹೊಸ ಹೊಸ ರೂಪಾಂತರಗಳು ಬರುತ್ತಲೇ ಇವೆ. ಸದ್ಯ ಪತ್ತೆಯಾಗಿರುವುದು ಎಕ್ಸ್‌ಇ ಎಂಬ ರೂಪಾಂತರಿ ವೈರಾಣು (Virus). ಇದು ಕೊರೋನಾ ಸೋಂಕಿನ ತಳಿಗಳಲ್ಲೇ ಅತ್ಯಂತ ಹೆಚ್ಚು ಪ್ರಸರಣ ಸಾಮರ್ಥ್ಯ ಇರುವ ವೈರಸ್ ಎಂದು ಆರೋಗ್ಯ ತಜ್ಞರು (Health Experts) ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಹೊಸ ಎಕ್ಸ್‌ಇ ವೈರಾಣುವಿನ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.
ಎಕ್ಸ್‌ಇ ರೂಪಾಂತರ ಎಂದರೇನು ?
ಓಮಿಕ್ರಾನ್ ತಳಿಗಳಾದ ಬಿಎ.1 ಮತ್ತು ಬಿಎ.2ಗಳು ಮರು ಸಂಯೋಜನೆಗೊಂಡು ಮಾರ್ಪಾಡಾಗಿದ್ದೇ ಈ ಎಕ್ಸ್‌ಇ ಸೋಂಕಿಗೆ (Covid XE Variant) ಕಾರಣವಾಗಿದೆ. ಈ ರೂಪಾಂತರವು ಹಿಂದಿನ ಓಮಿಕ್ರಾನ್ ತಳಿಗಳಿಗಿಂತ ವೇಗವಾಗಿ ಹರಡುತ್ತದೆ ಮತ್ತು ಮೊದಲಿಗಿಂತ ಹೆಚ್ಚು ಜನರಿಗೆ ಸೋಂಕು ತಗುಲುತ್ತದೆ ಎಂದು ಹೇಳಲಾಗಿದೆ. ತಜ್ಞರು ಹೇಳುವಂತೆ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಆವಿಷ್ಕಾರವಾದಾಗಿನಿಂದ ಎಕ್ಸ್‌ಇ ಸೌಮ್ಯವಾಗಿ ಕಂಡುಬರುತ್ತಿದೆ. ಆದರೂ ಇದರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
Covid XE variant ಕೋವಿಡ್ ಓಮಿಕ್ರಾನ್ XE ಹೊಸ ತಳಿ ಪತ್ತೆ ವರದಿ ನಿರಾಕರಿಸಿದ ಕೇಂದ್ರ!
ಕೊರೋನಾ ವೈರಸ್‌ನ ಎಕ್ಸ್‌ಇ ರೂಪಾಂತರವು ಜನವರಿ 19ರಂದು ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿದೆ ಮತ್ತು ಅಂದಿನಿಂದ 600ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಎಕ್ಸ್‌ಇ ರೂಪಾಂತರ ಮೂಲ ವೈರಸ್‌ಗೆ ಹೋಲಿಸಿದರೆ ಹೆಚ್ಚು ಹರಡುವ ಮತ್ತು 1.1 ರ ಹೆಚ್ಚಿನ ಸಮುದಾಯ ಪ್ರಸರಣ ಸಾಧ್ಯತೆಯನ್ನು ಹೊಂದಿದೆ ಎಂದು ಫರಿದಾಬಾದ್‌ನ ಏಷ್ಯನ್ ಆಸ್ಪತ್ರೆಯ ಅಮೆರಿ ಹೆಲ್ತ್‌ನ ಮುಖ್ಯಸ್ಥ, ಸಲಹೆಗಾರ ವೈದ್ಯ ಮತ್ತು ಸಾಂಕ್ರಾಮಿಕ ರೋಗ ತಜ್ಞ ಡಾ.ಚಾರು ದತ್ ಅರೋರಾ ಹೇಳುತ್ತಾರೆ.
ಎಕ್ಸ್‌ಇ ರೂಪಾಂತರದ ಲಕ್ಷಣಗಳೇನು ?
ಎಕ್ಸ್‌ಇ ವೈರಾಣು, ಓಮಿಕ್ರಾನ್‌ಗಿಂತಲೂ ವಿಭಿನ್ನ ಲಕ್ಷಣಗಳನ್ನು ಹೊಂದಿದೆ. ಎಕ್ಸ್‌ಇ ಸೋಂಕಿಗೆ ಒಳಗಾದವರು ವಾಸನೆ ಮತ್ತು ರುಚಿಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ವಾಸನೆ ಮತ್ತು ರುಚಿಯನ್ನು ಕಳೆದುಕೊಳ್ಳುವುದು ಡೆಲ್ಟಾ ರೂಪಾಂತರದ ಪ್ರಮುಖ ಲಕ್ಷಣವಾಗಿದೆ. ರೂಪಾಂತರದ ರೋಗಲಕ್ಷಣಗಳು ಈಗಾಗಲೇ ಅಸ್ತಿತ್ವದಲ್ಲಿರುವ ರೂಪಾಂತರಗಳಿಗಿಂತ ಭಿನ್ನವಾಗಿವೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಡಾ ರಾವ್ ಹೇಳುತ್ತಾರೆ.
ಡೆಲ್ಟಾ ರೂಪಾಂತರಿಯಿಂದ ಎದ್ದಿದ್ದ ಕೋವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿ ಅನೇಕ ಮಂದಿ ವಾಸನೆ ಮತ್ತು ರುಚಿ ಗ್ರಹಿಸುವ ಶಕ್ತಿ ಕಳೆದುಕೊಂಡಿದ್ದರು. ಅದೇ ರೀತಿ ಅನುಭವ ಎಕ್ಸ್‌ಇ ಸೋಂಕಿತರಿಗೂ ಆಗುತ್ತಿದೆ. ಅದರೊಂದಿಗೆ ಸಾಮಾನ್ಯವಾಗಿ ಕೊರೋನಾ ಬಂದಾಗ ಉಂಟಾಗುವ ಜ್ವರ, ಗಂಟಲು ನೋವು, ಗಂಟಲು ತುರಿಕೆ,ಕೆಮ್ಮು, ಶೀತ ಕಾಣಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.
XE ವೈರಸ್ ಬಗ್ಗೆ ತಜ್ಞರ ವಾರ್ನಿಂಗ್, 4ನೇ ಅಲೆ ಮುನ್ನ ಈ ಶಾಕಿಂಗ್ ವಿಚಾರ ತಿಳಿದುಕೊಳ್ಳಿ!
ಒಮಿಕ್ರೋನ್ ಹಾವಳಿ ಕಡಿಮೆಯಾಯ್ತು, ಇನ್ನೇನು 4ನೇ ಅಲೆ ಭೀತಿ ಇಲ್ಲ ಅನ್ನುವ ಹಂತದಲ್ಲೇ, ಹೊಸ ರೀತಿಯ ಕೋವಿಡ್ ರೂಪಾಂತರಿ ತಳಿಗಳ ಮಿಶ್ರಣದಿಂದ 4ನೇ ಅಲೆ ಬರುವ ಸಾಧ್ಯತೆಯಿದೆಯೇ ಹೊರತು ಒಮಿಕ್ರೋನ್‌ನಿಂದ ಹೊಸ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಕೂಡ ಕೊರೋನಾ ವೈರಸ್‌ನ ಬೇರೆ ಬೇರೆ ರೂಪಾಂತರಿಗಳ ಮಿಶ್ರ ತಳಿಯ ಮೇಲೆ ನಿಗಾ ವಹಿಸಿದೆ.
XE ಹೊಸ ಅಲೆಯನ್ನು ಉಂಟುಮಾಡುತ್ತದೆಯೇ ಅಥವಾ ಹೊಸ, ವಿಭಿನ್ನ ರೂಪಾಂತರವು ಅಲೆಯನ್ನು ಉಂಟುಮಾಡುತ್ತದೆಯೇ, ನಾವು ಊಹಿಸಲು ಸಾಧ್ಯವಿಲ್ಲ. ಈ ಸಾಂಕ್ರಾಮಿಕದ ಜೀವಿತಾವಧಿಯಲ್ಲಿ, ಬಹು ರೂಪಾಂತರಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ಹೆಚ್ಚಿನವು ಶೀಘ್ರವಾಗಿ ಸಾಯುತ್ತವೆ ಎಂದು ಡಾ. ಪವಿತ್ರಾ ವೆಂಕಟಗೋಪಾಲನ್ ಹೇಳುತ್ತಾರೆ.