Urine Leakage: ಪದೇ ಪದೇ ಮೂತ್ರ ವಿಸರ್ಜನೆ ಆಗ್ತಿದ್ಯಾ ? ಅದಕ್ಕೇನು ಕಾರಣ ತಿಳ್ಕೊಳ್ಳಿ

Suvarna News   | Asianet News
Published : Mar 11, 2022, 11:32 AM ISTUpdated : Mar 11, 2022, 11:33 AM IST
Urine Leakage: ಪದೇ ಪದೇ ಮೂತ್ರ ವಿಸರ್ಜನೆ ಆಗ್ತಿದ್ಯಾ ? ಅದಕ್ಕೇನು ಕಾರಣ ತಿಳ್ಕೊಳ್ಳಿ

ಸಾರಾಂಶ

ಪದೇ ಪದೇ ಮೂತ್ರ (Urine) ವಿಸರ್ಜನೆ ಆಗ್ತಿದ್ಯಾ ? ಇದ್ರಿಂದ ಮನೆಯಿಂದ ಹೊರಬರೋಕೆ ಮುಜುಗರ ಆಗ್ತಿದ್ಯಾ ? ಅರ್ಜೆಂಟ್‌ ಸಮಸ್ಯೆ (Problem) ಯಿಂದ ಎಲ್ಲಾ ಹಾಳಾಗ್ತಿದೆ ಎಂದು ತಲೆಕೆಡಿಸ್ಕೊಂಡಿದ್ದೀರಾ ? ಮೂತ್ರ ಸೋರಿಕೆಗೆ ಕಾರಣವೇನು ? ಪರಿಹಾರಗಳೇನು ತಿಳ್ಕೊಳ್ಳಿ.

ಪದೇ ಪದೇ ಮೂತ್ರ (Urine) ವಿಸರ್ಜನೆ ಮಾಡಬೇಕಾದ ಸಮಸ್ಯೆ ಹಲವರಲ್ಲಿ ಕಂಡು ಬರುತ್ತದೆ. ಈ ಸ್ಥಿತಿಯಲ್ಲಿ ಕೆಮ್ಮುವಾಗ, ಸೀನುವಾಗ, ಕುಣಿಯುತ್ತಿರುವಾಗ, ಓಡುತ್ತಿರುವಾಗ ಕೆಲವೊಮ್ಮೆ ಇದ್ದಕ್ಕಿದ್ದಂತೆ ಸ್ವಲ್ಪ ಮೂತ್ರ ವಿಸರ್ಜನೆಯಾಗುತ್ತದೆ. ಅರ್ಜೆಂಟ್‌ ಎಂದು ಶೌಚಾಲಯಕ್ಕೆ ಹೋಗುವಷ್ಟರಲ್ಲಿ ಮೂತ್ರ ವಿಸರ್ಜನೆಯಾಗಿ ಬಿಟ್ಟಿರುತ್ತದೆ. ಈ ರೀತಿಯಾಗುವವರು ಮನೆಯಿಂದ ಹೊರಹೋಗಲು ಹಿಂಜರಿಯುತ್ತಾರೆ. ಗುಂಪಿನಲ್ಲಿರುವುದರಿಂದ ಕಿರಿಕಿರಿಯಾಗುವುದೆಂದು ಮುಜುಗರ ಪಡುತ್ತಾರೆ. ಕೆಲವೊಬ್ಬರು ಇಂಥಾ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಪದೇ ಪದೇ ಮೂತ್ರ ವಿಸರ್ಜನೆಯಾಗುವ ಸಮಸ್ಯೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ (Treatment) ಪಡೆಯುವುದು ಮುಖ್ಯವಾಗಿದೆ.

ವೈದ್ಯಕೀಯ ಪರಿಭಾಷೆಯಲ್ಲಿ ಸೋರುವ ಮೂತ್ರಕೋಶದ ಕಂತುಗಳನ್ನು ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ ಮತ್ತು ಇದು ತುಂಬಾ ಸಾಮಾನ್ಯವಾಗಿದೆ. ಕೆಲವೊಮ್ಮೆ ಮೂತ್ರ ಬಂದಂತೆ ಅನಿಸುತ್ತದೆ, ಮೂತ್ರ ಬರುವುದಿಲ್ಲ. ಕೆಲವೊಮ್ಮೆ ಕೆಲವು ಹನಿಗಳಷ್ಟೇ ಮೂತ್ರ ಹೋಗುತ್ತದೆ. ಪದೇ ಪದೇ ಮೂತ್ರ ಸೋರಿಕೆಗೆ ಕಾರಣಗಳೇನು ? ಇದಕ್ಕೇನು ಪರಿಹಾರ ಎಂಬುದನ್ನು ತಿಳಿಯೋಣ.

ಮಹಿಳೆಯರು ದೀರ್ಘಕಾಲ ಮೂತ್ರ ತಡೆಯುವುದು ಅಪಾಯ!

ಮೂತ್ರ ಸೋರಿಕೆಗೆ ಕಾರಣಗಳೇನು ?
ಒಂದು ಸಾರಿ ಮೂತ್ರ ಬಂದಾಗ ಶೌಚಾಲಯಕ್ಕೆ ಹೋಗಿ ಸರಿಯಾಗಿ ಮೂತ್ರ ಮಾಡದೆ ಬಂದಾಗ ಇಂಥಾ ಸಮಸ್ಯೆ ಉಂಟಾಗುತ್ತದೆ. ಸ್ವಲ್ಪ ಸಮಯದಲ್ಲೇ ಮೂತ್ರ ಸೋರಿಕೆಯನ್ನು ಅನುಭವಿಸಬಹುದು ಅಥವಾ ಮೂತ್ರ ಬರುವ ಹಠಾತ್ ಪ್ರಚೋದನೆಯನ್ನು ಅನುಭವಿಸಬಹುದು. ಕೆಲವರಲ್ಲಿ ಇದು ಪ್ರತಿದಿನ ಕಂಡು ಬರುವ ಸಮಸ್ಯೆಯಾಗಿದೆ. ಇನ್ನು ಕೆಲವರಿಗೆ ಇದು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಸಂಭವಿಸಬಹುದು. 

ನಗುವುದು, ವ್ಯಾಯಾಮ (Exercise) ಮಾಡುವುದು, ಕೆಮ್ಮುವುದು ಮುಂತಾದ ದೈಹಿಕ ಚಟುವಟಿಕೆಯಿಂದ ಸಹ ಪದೇ ಪದೇ ಮೂತ್ರ ಸೋರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂಥಾ ಸಂದರ್ಭಗಳಲ್ಲಿ, ಮೂತ್ರಕೋಶವು ನಿಯಂತ್ರಣವನ್ನು ಕಳೆದುಕೊಳ್ಳಬಹುದು ಮತ್ತು ನೀವು ಸ್ವಲ್ಪ ಮೂತ್ರ ವಿಸರ್ಜನೆ ಮಾಡಬಹುದು. ಇದು ಸಾಕಷ್ಟು ಸಾಮಾನ್ಯವಾಗಿದೆ ಮತ್ತು ಆತಂಕಕಾರಿ ಪರಿಸ್ಥಿತಿ ಅಲ್ಲ. ಸರಿಯಾಗಿ ಮೂತ್ರ ಮಾಡದಿದ್ದಾಗ ಸಹ ಈ ರೀತಿಯ ಸಮಸ್ಯೆಯಾಗುತ್ತದೆ. ಈ ಪರಿಸ್ಥಿತಿಯಲ್ಲಿ, ನೀವು ಮೂತ್ರ ವಿಸರ್ಜಿಸುವಾಗ ನಿಮ್ಮ ಮೂತ್ರಕೋಶವನ್ನು ಸಂಪೂರ್ಣವಾಗಿ ಖಾಲಿ ಮಾಡದೇ ಇದ್ದಾಗ ಒಳಉಡುಪಿನಲ್ಲೇ ಮೂತ್ರ ಸೋರಿಕೆಯಾಗಬಹುದು. 

Asafoetida : ಅಡುಗೆಯ ರುಚಿ ಹೆಚ್ಚಿಸುವ ಈ ಇಂಗು, ಆರೋಗ್ಯಕ್ಕೂ ಬೇಕು, ಅತಿಯಾಗಬಾರದಷ್ಟೇ!

ವಯಸ್ಸಾದ ಕಾರಣ ದುರ್ಬಲ ಮೂತ್ರಕೋಶ, ಕ್ಯಾನ್ಸರ್‌ನಿಂದಾಗಿ ಮೂತ್ರಕೋಶದ ಮೇಲೆ ಒತ್ತಡ, ಬುದ್ಧಿಮಾಂದ್ಯತೆ ಅಥವಾ ಆಲ್ಝೈಮರ್‌ನಂತಹ ನರವೈಜ್ಞಾನಿಕ ಪರಿಸ್ಥಿತಿಗಳು, ಮೂತ್ರದ ಸೋಂಕು, ಮೂತ್ರನಾಳದ ಸೋಂಕು, ಮೂತ್ರಪಿಂಡದ ಸೋಂಕು ಅಥವಾ ಮೂತ್ರಪಿಂಡದ ಕಲ್ಲುಗಳಂತಹ ಸಮಸ್ಯೆಗಳಿಂದಲೂ ಮೂತ್ರ ಸೋರಿಕೆಯಾಗುತ್ತದೆ.

ಕೆಲವು ದೈಹಿಕ ಚಟುವಟಿಕೆಯ ಸಮಯದಲ್ಲಿ ಪದೇ ಪದೇ ಮೂತ್ರ ಬಂದರೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಉಳಿದ ಸಂದರ್ಭಗಳಲ್ಲೂ ಇದೇ ರೀತಿ ಸಮಸ್ಯೆಯಾದರೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಆದ್ದರಿಂದ, ನೀವು ತಿಂಗಳಲ್ಲಿ ಕೆಲವು ಬಾರಿ ಈ ಮುಜುಗರದ ಪರಿಸ್ಥಿತಿಯನ್ನು ಎದುರಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ ಮತ್ತು ಅದನ್ನು ಪರೀಕ್ಷಿಸಿ. ಕೆಲವು ಸಂದರ್ಭಗಳಲ್ಲಿ, ಅಸಂಯಮ ಮೂತ್ರ ಸೋರಿಕೆ ವೈದ್ಯಕೀಯ ತುರ್ತುಸ್ಥಿತಿಯ ಸಂಕೇತವಾಗಿರಬಹುದು. 

ಮೂತ್ರ ಸೋರಿಕೆಗೆ ಚಿಕಿತ್ಸೆಯೇನು ?
ಮೂತ್ರ ಸೋರಿಕೆಯ ಸಮಸ್ಯೆಗೆ ಹಲವಾರು ಕಾರಣಗಳಿವೆ. ಘಟನೆಯ ಕಾರಣವನ್ನು ಅವಲಂಬಿಸಿ, ವೈದ್ಯರು ನಿಮ್ಮ ಔಷಧಿಗಳನ್ನು ಶಿಫಾರಸು ಮಾಡಬಹುದು. ಮೂತ್ರ ಸೋರದಂತೆ ಸ್ನಾಯುಗಳನ್ನು ಬಲಪಡಿಸಲು ಕೆಲವು ವ್ಯಾಯಾಮಗಳನ್ನು ಮಾಡಲು ಶಿಫಾರಸು ಮಾಡಬಹುದು. ತೂಕ ಹೆಚ್ಚಳ. ಕೆಫೀನ್, ಆಲ್ಕೋಹಾಲ್ ಮತ್ತು ಆಮ್ಲೀಯ ಆಹಾರಗಳ ಸೇವನೆ ಮೂತ್ರಕೋಶದ ಉದ್ರೇಕಕಾರಿಗಳ ಅತಿಯಾದ ಸೇವನೆಯಿಂದಾಗಿ ಉಂಟಾದರೆ ವೈದ್ಯರು ಆಹಾರಶೈಲಿಯನ್ನು ಬದಲಾಯಿಸಲು ಸಲಹೆ ನೀಡುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊಟ್ಟೆ ಸೇವಿಸುವ ಮುನ್ನ ಎಚ್ಚರ.. ಜನಪ್ರಿಯ ಬ್ರಾಂಡ್‌ನಲ್ಲೇ ಕ್ಯಾನ್ಸರ್ ಕಾರಕ ಅಂಶ ಪತ್ತೆ!
ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?