Health Tips: ಗಾಂಜಾದಲ್ಲೂ ಅದೆಷ್ಟು ಔಷಧೀಯ ಗುಣಗಳು !

Suvarna News   | Asianet News
Published : Mar 10, 2022, 08:34 PM IST
Health Tips: ಗಾಂಜಾದಲ್ಲೂ ಅದೆಷ್ಟು ಔಷಧೀಯ ಗುಣಗಳು !

ಸಾರಾಂಶ

ಗಾಂಜಾ (Cannabis) ಎಂಬ ಪದವನ್ನು ಕೇಳಿದ ಕೂಡಲೇ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಮಾದಕ ದ್ರವ್ಯ ಸೇವನೆ. ಕಾನೂನಿನ ಪ್ರಕಾರ ಗಾಂಜಾ ಬೆಳೆಯುವುದು, ರವಾನಿಸುವುದು ಎಲ್ಲವೂ ಅಪಾಯವೇ. ಆದರೆ ಎಲ್ಲರೂ ಆರೋಗ್ಯ (Health) ಕ್ಕೆ ಮಾರಕ ಎಂದುಕೊಂಡಿರುವ ಗಾಂಜಾ ಅಥವಾ ಭಾಂಗ್‌ನಲ್ಲೂ ಅದೆಷ್ಟು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ?

ಗಾಂಜಾ (Cannabis) ಎಂಬ ಪದವನ್ನು ಕೇಳಿದ ಕೂಡಲೇ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಮಾದಕ ದ್ರವ್ಯ ಸೇವನೆ. ಕಾನೂನಿನ ಪ್ರಕಾರ ಗಾಂಜಾ ಬೆಳೆಯುವುದು, ರವಾನಿಸುವುದು ಎಲ್ಲವೂ ಅಪಾಯವೇ. ಗಾಂಜಾ ಸೇವನೆ ಸಹ ಆರೋಗ್ಯ (Health)ಕ್ಕೆ ಎಲ್ಲಾ ರೀತಿಯಲ್ಲೂ ಮಾರಕ. ಗಾಂಜಾ ಅಥವಾ ಭಾಂಗ್‌ನ ದೀರ್ಘಾವಧಿಯ ಬಳಕೆ ಕೇಂದ್ರ ನರಮಂಡಲ ಮತ್ತು ಬಾಹ್ಯ ನರಮಂಡಲದ ದೀರ್ಘಕಾಲೀನ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು.

ಗಾಂಜಾ (Cannabis) ಎಂಬ ಪದವನ್ನು ಕೇಳಿದ ಕೂಡಲೇ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಮಾದಕ ದ್ರವ್ಯ ಸೇವನೆ. ಕಾನೂನಿನ ಪ್ರಕಾರ ಗಾಂಜಾ ಬೆಳೆಯುವುದು, ರವಾನಿಸುವುದು ಎಲ್ಲವೂ ಅಪಾಯವೇ. ಆದರೆ ಎಲ್ಲರೂ ಆರೋಗ್ಯ (Health) ಕ್ಕೆ ಮಾರಕ ಎಂದುಕೊಂಡಿರುವ ಗಾಂಜಾ ಅಥವಾ ಭಾಂಗ್‌ನಲ್ಲೂ ಅದೆಷ್ಟು ಆರೋಗ್ಯ ಪ್ರಯೋಜನಗಳಿವೆ ಗೊತ್ತಾ ? ಆದರೆ ದುಷ್ಪರಿಣಾಮಗಳು ಅಥವಾ ಅಪಾಯಗಳ ಹೊರತಾಗಿಯೂ, ಗಾಂಜಾ ಅಥವಾ ಭಾಂಗ್ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಆಯುರ್ವೇದ (Ayurveda) ವೈದ್ಯರ ಸಲಹೆಯ ಮೇರೆಗೆ ಗಾಂಜಾವನ್ನು ಬಳಸಿದರೆ, ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ದೊರಕುತ್ತವೆ.

Diabetes and Turmeric: ಪ್ರತಿ ದಿನ ಈ ರೀತಿ ಅರಿಶಿನ ಸೇವನೆ ಮಾಡಿ ಮಧುಮೇಹ ನಿಯಂತ್ರಿಸಿ

ಭಾಂಗ್ ಎಂಬುದು ಗಾಂಜಾ ಸಸ್ಯದ ಮೊಗ್ಗುಗಳು, ಎಲೆಗಳು ಮತ್ತು ಹೂವುಗಳಿಂದ ತಯಾರಿಸಿದ ಮಿಶ್ರಣವಾಗಿದೆ. ಭಾಂಗ್ ಸಸ್ಯವನ್ನು ಹಿಮಾಲಯದಲ್ಲಿ ಕಂಡು ಹಿಡಿಯಲಾಯಿತು ಮತ್ತು ವೇದಗಳಲ್ಲಿ ಐದು ಪವಿತ್ರ ಸಸ್ಯಗಳಲ್ಲಿ ಒಂದೆಂದು ಇದನ್ನು ಉಲ್ಲೇಖಿಸಲಾಗಿದೆ. ಇದು ಅಮಲು ಪದಾರ್ಥವಾಗಿ ಬಳಸುವುದರಿಂದ ವರ್ಷಗಳಿಂದ ಕೆಟ್ಟ ಖ್ಯಾತಿಯನ್ನು ಪಡೆದುಕೊಂಡಿದೆ. ಹೀಗಾಗಿ ಇದರ ಔಷಧೀಯ ಗುಣಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ.

ಸಾಂಪ್ರದಾಯಿಕವಾಗಿ ಆಯುರ್ವೇದದಲ್ಲಿ ಜೀರ್ಣಕಾರಿ ಸಮಸ್ಯೆಗಳು, ತಲೆನೋವು, ನೋವು ಮತ್ತು ಆತಂಕಗಳಿಗೆ ಚಿಕಿತ್ಸೆ ನೀಡಲು ಭಾಂಗ್‌ನ್ನು ಬಳಸಲಾಗುತ್ತದೆ. ಗಾಂಜಾ ಅಥವಾ ಭಾಂಗ್ ನರ ನೋವು, ಸಂಧಿವಾತ ನೋವು, ನಿದ್ರಾಹೀನತೆ ಮತ್ತು ಪೈಲ್ಸ್‌ನಂತಹ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ನಂಬಲಾಗಿದೆ. ಭಾಂಗ್‌ನ್ನು ಅತಿಸಾರ, ಭೇದಿ ಮತ್ತು ಆತಂಕವನ್ನು ನಿವಾರಿಸಲು ಬಳಸಲಾಗುತ್ತದೆ. 

Ayurveda Tips: ಗರ್ಭಪಾತ ತಡೆಯಲು ಆಯುರ್ವೇದ ಸರಳ ಸೂತ್ರಗಳು

ಭಾಂಗ್‌ ಉತ್ತಮವಾದ ನರಗಳ ನೋವು ನಿವಾರಕ ವಸ್ತುವಾಗಿದೆ. ತಲೆನೋವು, ಮೈಗ್ರೇನ್ ಇತ್ಯಾದಿಗಳಿಂದ ಬಳಲುತ್ತಿರುವ ಜನರು ಸಹ ಭಾಂಗ್‌ನಿಂದ ಪ್ರಯೋಜನ ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ಸಂಧಿವಾತ, ನೋವುಗಳು, ಕಾಲೋಚಿತ ಸೋಂಕುಗಳು ಮತ್ತು ನಿದ್ರಾಹೀನತೆಯಂತಹ ಸ್ವಯಂ ನಿರೋಧಕ ಪರಿಸ್ಥಿತಿಗಳನ್ನು ನಿರ್ವಹಿಸಲು ಭಾಂಗ್‌ ನೆರವಾಗುತ್ತದೆ. 

ನಿದ್ರೆಯ ಸಮಸ್ಯೆಗಳಿಗೆ ಭಾಂಗ್‌ ಅತ್ಯುತ್ತಮ ಪರಿಹಾರವಾಗಿದೆ. ಗಸಗಸೆ ಬೀಜಗಳೊಂದಿಗೆ ಭಾಂಗ್‌ನ್ನು ಸೇರಿಸಿ ತಿನ್ನುವುದರಿಂದ ಚೆನ್ನಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ದಣಿದ, ಆತಂಕ ಅಥವಾ ಭಯದಿಂದ ಬಳಲುತ್ತಿರುವ ಜನರಿಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಭಾಂಗ್ ಪೈಲ್ಸ್‌ಗೆ ತುಂಬಾ ಪರಿಣಾಮಕಾರಿಯಾಗಿದೆ. ಪೈಲ್ಸ್ ಎಂಬುದು ಆಯುರ್ವೇದದಲ್ಲಿ ಬಹಳ ಜಟಿಲವಾದ ಸಮಸ್ಯೆಯಾಗಿದೆ, ಇದನ್ನು ಸಾಮ ಪಿತ್ತ ಎಂದು ಸಹ ಕರೆಯುತ್ತಾರೆ. ಇದು ಕರುಳಿನ ಸಮಸ್ಯೆಗೆ ಸಂಬಂಧಿಸಿದೆ. ತುಂಬಾ ನೋವಿನಿಂದ ಕೂಡಿದ ಪೈಲ್ಸ್ ಇರುವವರಿಗೆ ಭಾಂಗ್‌ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಭಾಂಗ್  ಬ್ರಾಂಕೋಸ್ಪಾಸ್ಮ್ ನಿವಾರಕವಾಗಿದೆ. ಕೆಮ್ಮು, ಗಂಟಲುನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಭಾಂಗ್‌ನ ಎಲೆಗಳು ಅಥವಾ ಎಣ್ಣೆ ಎರಡೂ ಸಹ ನೋವು ನಿವಾರಕಗಳಾಗಿವೆ. ಅವುಗಳನ್ನು ಸಂಧಿವಾತಕ್ಕೆ ವ್ಯಾಪಕವಾಗಿ ಬಳಸಲಾಗುತ್ತದೆ.  ಕೀಲುಗಳ ನೋವು, ಉರಿಯೂತದ ಸಮಸ್ಯೆಯನ್ನು ನಿರ್ವಹಿಸಲು ಭಾಂಗ್ ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಎಲೆಗಳು, ಹೂವುಗಳು, ಬೀಜಗಳು, ಕಾಂಡ ಅಥವಾ ನಾರು ಹೀಗೆ ಭಾಂಗ್‌ನ ಪ್ರತಿಯೊಂದು ಭಾಗವು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಭಾಂಗ್ ಪುಡಿಮಾಡಿದ ಎಲೆಯಾಗಿದೆ, ಗಾಂಜಾವನ್ನು ಹೂವಿನ ಭಾಗದಿಂದ ಪಡೆಯಲಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!