ಸದಾ ಮೊಬೈಲ್ ಬಳಸ್ತಾನೇ ಇದ್ದರೆ ಈ ಕಾಯಿಲೆ ಒಕ್ಕರಿಸೋದು ಗ್ಯಾರಂಟಿ!

By Suvarna NewsFirst Published Oct 6, 2023, 3:48 PM IST
Highlights

ಮೊಬೈಲ್ ಇಲ್ದೆ ಜೀವನ ಇಲ್ಲ.. ಟಕ್ ಟಕ್ ಅಂತಾ ಮೊಬೈಲ್ ಬಟನ್ ಕುಟ್ಟುತ್ತಾ ಕಾಲ ಕಳೆಯೋರು ನೀವಾಗಿದ್ರೆ ನಿಮ್ಮ ಬೆರಳನ್ನು ಒಮ್ಮೆ ನೋಡ್ಕೊಳ್ಳಿ. ನಿಮ್ಮ ಅತೀ ಮೊಬೈಲ್ ಚಟ, ಬೆರಳಿನ ಆರೋಗ್ಯ ಹಾಳ್ಮಾಡಿರಬಹುದು. 
 

ತಂತ್ರಜ್ಞಾನ ಮುಂದುವರೆದಂತೆ ಎಲ್ಲವೂ ಆನ್ಲೈನ್. ಮೊಬೈಲ್, ಟ್ಯಾಬ್ಲೆಟ್ ನಂತಹ ಟಚ್ ಸ್ಕ್ರೀನ್ ಗಳನ್ನು ನಾವು ಅತೀ ಎನ್ನುವಷ್ಟು ಬಳಸುತ್ತಿದ್ದೇವೆ. ತರಕಾರಿ ಅಂಗಡಿ, ಹಣ್ಣಿನ ಅಂಗಡಿ, ಶಾಪಿಂಗ್ ಮಾಲ್ ಹೀಗೆ ಎಲ್ಲೇ ಹೋದರೂ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತೆ. ಬಹುತೇಕ ಮಂದಿಯ ಕೈಯಲ್ಲಿ ಇಂದು ನಾವು ಸ್ಮಾರ್ಟ್ ಫೋನ್ ಗಳನ್ನೇ ನೋಡ್ತೇವೆ. ಮೊಬೈಲ್ ಬಳಸೋದು ಈಗ ಒಂದು ವ್ಯಸನವಾಗಿದೆ ಅಂದ್ರೆ ಅತೀ ಎನ್ನಿಸೋದಿಲ್ಲ. ಆದ್ರೆ ಈ ಚಟ ಕೂಡ  ಮನುಷ್ಯನಿಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿದೆ.

ಮೊಬೈಲ್ (Mobile) ಬಳಕೆಯಿಂದ ಉಂಟಾಗುವ ಸಮಸ್ಯೆಗಳಲ್ಲಿ ಟ್ರಿಗರ್ ಫಿಂಗರ್ (Trigger Finger) ಸಮಸ್ಯೆ ಕೂಡ ಒಂದು. ಮೊಬೈಲ್ ಹಾಗೂ ಇನ್ನಿತರ ಟಚ್ ಸ್ಕ್ರೀನ್ (Touch screen) ಬಳಕೆ ಮಾಡುವಾಗ ನಮ್ಮ ಬೆರಳುಗಳನ್ನು ಬಳಸುತ್ತೇವೆ. ಇದರಿಂದ ಬೆರಳುಗಳಲ್ಲಿ ನೋವು ಹಾಗೂ ಕೈಗಳ ನೋವು ಮುಂತಾದವು ಎದುರಾಗುತ್ತವೆ. ಮೊಬೈಲ್ ಬಳಕೆಯಿಂದ ಉಂಟಾಗುವ ಇಂತಹ ಕೈ ಅಥವಾ ಸ್ನಾಯುಗಳ ನೋವಿಗೆ ಟ್ರಿಗರ್ ಫಿಂಗರ್ ಎನ್ನುತ್ತಾರೆ. 

ಮಡಿಕೆಯೊಂದಿಗೆ ಮದ್ವೆಯಾಗಲು ಹೇಳಿದ ಪಾಲಕರು, ನ್ಯಾಯ ಕೇಳಿದ ಯುವತಿ

ಟ್ರಿಗರ್ ಫಿಂಗರ್ ಸಮಸ್ಯೆಯಿಂದ ಏನಾಗುತ್ತೆ? : ಟ್ರಿಗರ್ ಫಿಂಗರ್ ಸಮಸ್ಯೆ ಇರುವವರಿಗೆ ಬೆರಳುಗಳಲ್ಲಿ ನೋವು, ಊತ ಮತ್ತು ಬಿಗಿತಗಳು ಉಂಟಾಗುತ್ತವೆ. ಬೆಳಗಿನ ಸಮಯದಲ್ಲಿ ಬೆರಳುಗಳು ಗಟ್ಟಿಯಾಗಿರುತ್ತವೆ ಮತ್ತು ಬೆರಳಿನ ಚಲನೆಯ ಸಮಯದಲ್ಲಿ ಬೆರಳುಗಳಿಂದ ಶಬ್ದ ಕೂಡ ಬರುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರ ಬೆರಳಿನ ಕೆಳಗೆ ಅಂಗೈಯಲ್ಲಿ ನೋವು ಅಥವಾ ಗಂಟುಗಳನ್ನು ಕಾಣಬಹುದು. ಪ್ರಪಂಚದಾದ್ಯಂತ ಇಂದು ಪ್ರತಿಶತ 2 ರಷ್ಟು ಮಂದಿ ಟ್ರಿಗರ್ ಫಿಂಗರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 

ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾದವರ ಬೆರಳುಗಳು ಇದ್ದಕ್ಕಿದ್ದಂತೆ ಬಾಗುತ್ತದೆ. ಬೆರಳುಗಳು ಸ್ವಲ್ಪ ಸಮಯದವರೆಗೆ ಬಾಗಿದ ಸ್ಥಿತಿಯಲ್ಲೇ ಇರಬಹುದು. ಈ ಸಮಸ್ಯೆ ಯಾವುದೇ ಬೆರಳುಗಳಲ್ಲಿ ಕಾಣಬಹುದು ಅಥವಾ ಹೆಬ್ಬರಳಿಗೆ ಉಂಟಾಗಬಹುದು. ಟ್ರಿಗರ್ ಫಿಂಗರ್ ತೊಂದರೆ ಇರುವವರಿಗೆ ಬೆಳಿಗ್ಗಿನ ಸಮಯದಲ್ಲಿ ವಿಪರೀತ ನೋವು ಉಂಟಾಗುತ್ತದೆ.

ವಿಜಯಪುರದಲ್ಲಿ ಹೆಮ್ಮಾರಿಯರ ಆರ್ಭಟ: ಡೆಂಗ್ಯೂ, ಚಿಕನ್‌ ಗುನ್ಯಾ ಹೊಡೆತಕ್ಕೆ ಜನರ ನರಳಾಟ!

ನಾವು ನಿರಂತರವಾಗಿ ಮೊಬೈಲ್ ಬಳಸೋದ್ರಿಂದ ನರಗಳು ಊದಿಕೊಳ್ಳುತ್ತವೆ. ಮೊಬೈಲ್ ಬಳಸುವಾಗ ನಾವು ಪದೇ ಪದೇ ಬೆರಳುಗಳನ್ನು ಬಾಗಿಸುತ್ತೇವೆ ಮತ್ತು ನೇರಗೊಳಿಸುತ್ತೇವೆ. ಇದರಿಂದ ಬೆರಳಿನ ರಕ್ತನಾಳಗಳು ಊದಿಕೊಳ್ಳುತ್ತವೆ. ಹೀಗೆ ಊದಿಕೊಂಡ ರಕ್ತನಾಳಗಳು ತೆಳುವಾದ ಹೊದಿಕೆಯ ಮೂಲಕ ಹಾದುಹೋದಾಗ ಲಟಿಕೆಯಂತಹ ಸಪ್ಪಳ ಕೇಳಿಬರುತ್ತದೆ. ಇದು ಟ್ರಿಗರ್ ಫಿಂಗರ್ ಗೆ ಮುಖ್ಯ ಕಾರಣವಾಗಿದೆ.

ನಿಮ್ಮ ಬೆರಳುಗಳ ಆರೋಗ್ಯ ಕಾಪಾಡಿಕೊಳ್ಳಿ : ಟ್ರಿಗರ್ ಫಿಂಗರ್ ಸಮಸ್ಯೆಯಿಂದ ದೂರವಿರಲು ನಿಮ್ಮ ಬೆರಳುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯವಾಗಿದೆ. ಟ್ರಿಗರ್ ಫಿಂಗರ್ ಸಮಸ್ಯೆಯಿಂದ ಬಳಲುತ್ತಿರುವವವರು ನಿಮ್ಮ ಬೆರಳಿಗೆ ಹೆಚ್ಚು ಆರಾಮ ನೀಡಬೇಕು ಮತ್ತು ಮೊಬೈಲ್ ಬಳಕೆಯನ್ನು ಕಡಿಮೆಮಾಡಬೇಕು ಹಾಗೂ ಬೆರಳುಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಮೃದುವಾಗಿ ಬೆರಳುಗಳನ್ನು ಮಸಾಜ್ ಮಾಡಿಕೊಳ್ಳಬೇಕು ಮತ್ತು ವಾರದಲ್ಲಿ 2-3 ಬಾರಿ ಬಿಸಿ ನೀರಿನಲ್ಲಿ ನಿಮ್ಮ ಕೈಗಳನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಬೆರಳುಗಳಲ್ಲಿರುವ ಸಣ್ಣ ಪುಟ್ಟ ನೋವು ಕಡಿಮೆಯಾಗುತ್ತದೆ.

ಟ್ರಿಗರ್ ಫಿಂಗರ್ ಆರಂಭದ ಹಂತದಲ್ಲಿದ್ದಾಗ ಮಾತ್ರ ಇಂತಹ ಕೆಲವು ಸರಳ ಉಪಾಯಗಳನ್ನು ಮಾಡಿಕೊಳ್ಳಬಹುದು. ಆದರೆ ವಿಪರೀತ ಮೊಬೈಲ್ ಬಳಸಿ ಬೆರಳುಗಳಲ್ಲಿ ಹೆಚ್ಚು ನೋವು ಕಂಡುಬಂದಾಗ ಅಥವಾ ಊತ, ಗಂಟುಗಳು ಕಂಡುಬಂದಾಗ ಮಸಾಜ್ ಮುಂತಾದವುಗಳಿಂದ ಟ್ರಿಗರ್ ಫಿಂಗರ್ ಅಥವಾ ಬೆರಳುಗಳ ನೋವು ಕಡಿಮೆಯಾಗುವುದಿಲ್ಲ. ಅಂತಹ ಸಮಯದಲ್ಲಿ ನೀವು ಮೊದಲು ವೈದ್ಯರನ್ನು ಪರೀಕ್ಷಿಸಬೇಕು. ವೈದ್ಯರು ಟ್ರಿಗರ ಫಿಂಗರ್ ಗೆ ಒಳಗಾದ ಸ್ನಾಯುಗಳಿಗೆ ಶಸ್ತ್ರ ಚಿಕಿತ್ಸೆ ಮಾಡುತ್ತಾರೆ.
 

click me!