
24/7 ಸಂಸ್ಕೃತಿಯಲ್ಲಿ, ವಿಶ್ರಾಂತಿ ಐಷಾರಾಮಿಯಾಗಿದೆ. ನಿದ್ರೆ (sleep)ಯನ್ನು ಜನರು ಲಘುವಾಗಿ ತೆಗೆದುಕೊಳ್ತಿದ್ದಾನೆ. ನಿದ್ರೆಗಿಂತ ಕೆಲ್ಸ ಮುಖ್ಯ ಎನ್ನುವವರೇ ಹೆಚ್ಚು. ಕೆಲಸ, ಕುಟುಂಬ, ಫೋನ್, ಟಿವಿ ಹೀಗೆ ರಾತ್ರಿಯಿಡಿ ಬ್ಯುಸಿ ಇರುವ ಜನರಿದ್ದಾರೆ. ಇದ್ರಿಂದ ಅವರ ನಿದ್ರೆ ಕಡಿಮೆ ಆಗ್ತಿದೆ. ದೇಹಕ್ಕೆ ವಿಶ್ರಾಂತಿ ಬಹಳ ಮುಖ್ಯ. ನೀವು ಯಾವುದೇ ಕಾರಣಕ್ಕೆ ನಿದ್ರೆ ಬಿಟ್ಟಿರಿ, ನಿಮ್ಮ ದೇಹ ಒಂದಲ್ಲ ಒಂದು ಟೈಂನಲ್ಲಿ ಪ್ರತಿಭಟಿಸೋಕೆ ಶುರುವಾಗುತ್ತೆ. ನಿದ್ರೆ ಕೊರತೆಯಿಂದ ಮಧುಮೇಹ, ಹಾರ್ಟ್ ಸಂಬಂಧಿ ಖಾಯಿಲೆ, ಪಾರ್ಶ್ವವಾಯು ಸೇರಿದಂತೆ ಅನೇಕ ಖಾಯಿಲೆ ನಿಮ್ಮನ್ನು ಆವರಿಸುತ್ತೆ. ಕೆಲ್ಸ ಮುಖ್ಯ, ನಿದ್ರೆಯೂ ಮುಖ್ಯ, ಆದ್ರೆ ಎರಡನ್ನೂ ಬ್ಯಾಲೆನ್ಸ್ ಮಾಡೋಕೆ ಆಗ್ತಿಲ್ಲ ಎನ್ನುವವರಿಗೆ ಇಲ್ಲೊಂದು ಒಳ್ಳೆ ಐಡಿಯಾ ಇದೆ. ಭವಿಷ್ಯಕ್ಕೆ ಅಗತ್ಯ ಅಂತ ನಾವೆಲ್ಲ ಹಣವನ್ನು ಕೂಡಿ ಇಡ್ತೇವೆ. ಅದೇ ರೀತಿ ನೀವು ನಿದ್ರೆಯನ್ನು ಬ್ಯಾಂಕಿಂಗ್ ಮಾಡಿ ಇಡ್ಬಹುದು. ಇತ್ತೀಚಿನ ದಿನಗಳಲ್ಲಿ ಈ ಸ್ಲೀಪ್ ಬ್ಯಾಂಕಿಂಗ್ ಸಾಮಾನ್ಯವಾಗ್ತಿದೆ. ಸ್ಲೀಪ್ ಬ್ಯಾಂಕಿಂಗ್ ಅಂದ್ರೇನು? ಅದ್ರ ಲಾಭ – ನಷ್ಟ ಏನು ಎಂಬ ಮಾಹಿತಿ ಇಲ್ಲಿದೆ.
ಸ್ಲೀಪ್ ಬ್ಯಾಂಕಿಂಗ್ (sleep banking) ಅಂದ್ರೇನು? : ಸ್ಲೀಪ್ ಬ್ಯಾಂಕಿಂಗ್ ಒಂದು ಸಿಂಪಲ್ ಆದ್ರೆ ಇಂಟರೆಸ್ಟಿಂಗ್ ಕಲ್ಪನೆ. ಸದ್ದಿಲ್ಲದೆ ವೈಜ್ಞಾನಿಕ ಒಪ್ಪಿಗೆ ಇದಕ್ಕೆ ಸಿಗ್ತಿದೆ. ನೀವು ಬ್ಯಾಂಕ್ ನಲ್ಲಿ ಹೆಚ್ಚು ಹಣ ಉಳಿತಾಯ ಮಾಡಿದ್ರೆ ಮುಂದೆ ಹೆಚ್ಚು ಖರ್ಚು ಮಾಡ್ಬಹುದು. ಹಾಗೇ ಹೆಚ್ಚು ಹಣವನ್ನು ವಿತ್ ಡ್ರಾ ಮಾಡಿದ್ರೆ, ಬ್ಯಾಂಕ್ ಬ್ಯಾಲೆನ್ಸ್ ಸರಿ ಮಾಡೋಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡ್ತೇವೆ. ಸ್ಲೀಪ್ ಬ್ಯಾಂಕಿಂಗ್ ಕೂಡ ಇದೇ ಆಗಿದೆ. ವಾರಪೂರ್ತಿ ಸರಿಯಾಗಿ ನಿದ್ರೆ ಮಾಡಲು ನಿಮಗೆ ಸಾಧ್ಯವಿಲ್ಲ ಎಂದಾಗ, ಆ ನಿದ್ರೆಯನ್ನೆಲ್ಲ ಮೊದಲೇ ಮಾಡೋದನ್ನು ಸ್ಲೀಪ್ ಬ್ಯಾಂಕಿಂಗ್ ಎಂದು ಕರೆಯಲಾಗುತ್ತದೆ. ಕೆಲಸ ಮುಗಿದ ಮೇಲೆ, ದೇಹ ದಣಿದ ಮೇಲೆ ನಿದ್ರೆ ಮಾಡುವ ಬದಲು ಮೊದಲೇ ಮಾಡುವುದಕ್ಕೆ ತಜ್ಞರು ಹೆಚ್ಚು ಮಾರ್ಕ್ಸ್ ನೀಡ್ತಾರೆ. ಹೊರಗೆ ಹೋಗ್ಬೇಕು ಅಂದಾಗ ನಾವು ಮೊಬೈಲ್ ಫುಲ್ ರಿಚಾರ್ಜ್ ಮಾಡ್ತೇವೆ. ಅದೇ ರೀತಿ, ಮುಂದೆ ಕೆಲಸವಿದೆ ಎಂದಾಗ ಮೊದಲೇ ನಿದ್ರೆ ಮಾಡೋದು.
ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್ನಲ್ಲಿ 2023 ರಲ್ಲಿ ಪ್ರಕಟವಾದ ಅಧ್ಯಯನ ಒಂದರ ಪ್ರಕಾರ, ನೈಟ್ ಶಿಫ್ಟ್ ಮುಂಚಿನ ದಿನಗಳಲ್ಲಿ ಹೆಚ್ಚು ನಿದ್ರೆ ಮಾಡಿದ ಮತ್ತು ರಾತ್ರಿ ಪಾಳಿಯ ವಾರದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ವಿಶ್ರಾಂತಿ ಪಡೆದ ವೈದ್ಯರು ಕೆಲಸದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ದೇಹಕ್ಕೆ ದಿನಕ್ಕೆ 8 ಗಂಟೆಗಳ ನಿದ್ರೆ ಬೇಕು. ಮುಂದಿನ ದಿನಗಳಲ್ಲಿ ಎರಡು ಗಂಟೆ ನಿದ್ರೆ ಕಡಿಮೆ ಮಾಡುವ ಅನಿವಾರ್ಯತೆ ನಿಮಗಿದೆ. ಹಾಗಿರುವಾಗ ಹಿಂದಿನ ದಿನಗಳಲ್ಲಿಯೇ ಆ ಎರಡು ಗಂಟೆಯನ್ನು ನೀವು ಸಾಲವಾಗಿ ಪಡೆಯಬೇಕು. ಒಂದ್ವೇಳೆ ನೀವು ಮೊದಲೇ ನಿದ್ರೆ ಮಾಡಿಲ್ಲವೆಂದ್ರೆ ಏಕಾಗ್ರತೆಯ ಕೊರತೆ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆ ಎದುರಿಸ್ಬೇಕಾಗುತ್ತೆ. ಅನೇಕರು ಇವತ್ತು ನಿದ್ರೆ ಬಿಡೋಣ, ವೀಕೆಂಡ್ ನಲ್ಲಿ ನಿದ್ರೆ ಮಾಡೋಣ ಅಂದ್ಕೊಳ್ತಾರೆ. ಆದ್ರೆ ತಜ್ಞರು ವಾರದ ಸಂಪೂರ್ಣ ನಿದ್ರೆಯನ್ನು ವೀಕೆಂಡ್ ನಲ್ಲಿ ಮಾಡೋ ಬದಲು ಸ್ಲೀಪ್ ಬ್ಯಾಂಕಿಂಗ್ ಉತ್ತಮ ಎಂದಿದ್ದಾರೆ. ಸ್ಲೀಪ್ ಬ್ಯಾಂಕಿಂಗ್ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಸಮತೋಲನದಲ್ಲಿಡುತ್ತದೆ.
ಸ್ಲೀಪ್ ಬ್ಯಾಂಕಿಂಗ್ ಅಲ್ಪಾವಧಿ ಪರಿಹಾರ ಮಾತ್ರ. ಅದು ಉತ್ತಮ ನಿದ್ರೆಗೆ ಪರ್ಯಾಯವಲ್ಲ. ಪ್ರತಿ ದಿನ ರಾತ್ರಿ 7-9 ಗಂಟೆಗಳ ನಿಯಮಿತ, ಗುಣಮಟ್ಟದ ನಿದ್ರೆ ನಿಮ್ಮ ಗುರಿಯಾಗಿರ್ಬೇಕು. ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪಾಲಿಸ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.