ಮುಖದಲ್ಲಿ ಈ ಬದಲಾವಣೆ ಕಂಡರೆ ಎಚ್ಚರ! ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ‘ಫೆರಿಟಿನ್ ಫೇಸ್’ ಭಯ

Published : Oct 11, 2026, 12:54 PM IST
What is ferritin face

ಸಾರಾಂಶ

What is ferritin face? ಕಣ್ಣಿನ ಕೆಳಗಿನ ಕಪ್ಪು ಕಲೆಗಳು ಕೇವಲ ಚರ್ಮದ ಸಮಸ್ಯೆಯಾಗಿರದೆ, ದೇಹದಲ್ಲಿನ ಕಬ್ಬಿಣಾಂಶದ ಕೊರತೆಯ (ಫೆರಿಟಿನ್ ಫೇಸ್) ಲಕ್ಷಣವಾಗಿರಬಹುದು. ಹಸಿರು ಸೊಪ್ಪು, ಡ್ರೈ ಫ್ರೂಟ್ಸ್ ವಿಟಮಿನ್ ಸಿ ಯುಕ್ತ ಆಹಾರ ಸೇವಿಸುವ ಮೂಲಕ ಈ ಸಮಸ್ಯೆಯನ್ನು ಹಾಗೂ ರಕ್ತಹೀನತೆಯನ್ನು ತಡೆಯಬಹುದು.

ಇಂದಿನ ಅನೇಕ ಮಹಿಳೆಯರ ದೊಡ್ಡ ಸಮಸ್ಯೆ ಎಂದರೆ ಎಷ್ಟೇ ಕಾಳಜಿವಹಿಸಿದರೂ ಕಣ್ಣಿನ ಸುತ್ತಲೂ ಕಪ್ಪಾಗುವುದು. ಮುಖ ಹೊಳೆಯುತ್ತಿದ್ದರೂ ಕಣ್ಣುಗಳ ಕೆಳಗೆ ಕಪ್ಪು ಕಲೆಯಿಂದಾಗಿ ಇಡೀ ಮುಖದ ಅಂದವೇ ಹದಗೆಡಿಸಿಬಿಡುತ್ತದೆ. ಕೆಲವರು ಇದನ್ನ ಮರೆಮಾಚಲು ಸ್ಪೆಕ್ಟ್ ಧರಿಸುತ್ತಾರೆ. ಆದರೆ ಕನ್ನಡಕ ಧರಿಸುವುದರಿಂದ ಅದು ಇನ್ನಷ್ಟು ಕಪ್ಪಾಗಿ ಕಾಣುವಂತಾಗುತ್ತೆ. ಕಣ್ಣಿನ ಕೆಳಗಿನ ಕಪ್ಪು ಕಲೆ ಹೋಗಲಾಡಿಸಲು ಇಂದು ಮಾರುಕಟ್ಟೆಯಲ್ಲಿ ವಿವಿಧ ಫೇಶಿಯಲ್ ಕ್ರೀಂಗಳು ಬಂದಿವೆಯಾದರೂ ಯಾವುದು ಪರಿಣಾಮಕಾರಿ ಅನಿಸುತ್ತಿಲ್ಲ.

ಆದರೀಗ ಸೋಷಿಯಲ್ ಮೀಡಿಯಾದಲ್ಲಿ ಸ್ಕಿನ್‌ಕೇರ್ ಒಂದು ಟ್ರೆಂಡ್ ಆಗುತ್ತಿದೆ. ದೇಹದಲ್ಲಿ ಎಷ್ಟು ಕಬ್ಬಿಣದ ಅಂಶವಿದೆ ಎಂಬುದನ್ನು ತಿಳಿಯಲು ಸುಲಭವಾಗುತ್ತಿದೆ. ಅಂದರೆ ಕಣ್ಣಿನ ಕೆಳಗಿನ ಕಪ್ಪು ಕಲೆ ‘ಫೆರಿಟಿನ್ ಫೇಸ್’ (Ferritin Face) ಎಂದು ಕರೆಯಲಾಗುತ್ತದೆ. ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ಅದರ ಲಕ್ಷಣಗಳು ಮುಖದ ಮೇಲೆ ಕಾಣಿಸಿಕೊಳ್ಳಬಹುದು ಎಂಬುದು ಈ ಟ್ರೆಂಡ್‌ನ ವಾದ. ಕಣ್ಣುಗಳ ಕೆಳಗೆ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಚರ್ಮ ಬಿಳಿಚಿಕೊಳ್ಳುವುದು ಅಥವಾ ಬೂದು ಬಣ್ಣಕ್ಕೆ ತಿರುಗುವುದು ದೇಹದಲ್ಲಿ ಕಬ್ಬಿಣದ ಕೊರತೆಯ ಲಕ್ಷಣಗಳಾಗಿರಬಹುದು ಎಂದು ಕೆಲವು ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್‌ಗಳು ಹೇಳುತ್ತಿದ್ದಾರೆ.

ಫೆರಿಟಿನ್ ಎಂಬುದು ದೇಹದಲ್ಲಿ ಕಬ್ಬಿಣದ ಅಂಶವನ್ನು ಸಂಗ್ರಹಿಸಿಡುವ ಪ್ರೋಟೀನ್ ಆಗಿದೆ. ಹೀಗಾಗಿ ರಕ್ತದಲ್ಲಿನ ಫೆರಿಟಿನ್ ಮಟ್ಟವನ್ನು ಪರೀಕ್ಷಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿರುವ ಕಬ್ಬಿಣದ ಪ್ರಮಾಣವನ್ನು ತಿಳಿದುಕೊಳ್ಳಬಹುದು. ರಕ್ತದಲ್ಲಿನ ಕಬ್ಬಿಣದ ಮಟ್ಟ ದಿನವಿಡೀ ಏರಿಳಿತವಾಗುವ ಸಾಧ್ಯತೆ ಇದೆ. ಆದರೆ, ದೇಹದಲ್ಲಿ ಸಂಗ್ರಹವಾಗಿರುವ ಕಬ್ಬಿಣದ ಪ್ರಮಾಣವನ್ನು ತಿಳಿಯಲು ಫೆರಿಟಿನ್ ಪರೀಕ್ಷೆ ಮಾಡುವುದುರಿಂದ ತಿಳಿಯಬಹುದ.

ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಏನಾಗುತ್ತೆ?

ಹಿಮೋಗ್ಲೋಬಿನ್ ಉತ್ಪಾದನೆಗೆ ಕಬ್ಬಿಣದ ಅಂಶ ಅಗತ್ಯವಾಗಿದೆ. ಅಲ್ಲದೆ ದೇಹದಲ್ಲಿ ಶಕ್ತಿ ಉತ್ಪಾದನೆ, ರೋಗನಿರೋಧಕ ಶಕ್ತಿ, ಬೆಳವಣಿಗೆ ಸೇರಿದಂತೆ ಹಲವು ಕಾರ್ಯಗಳಿಗೂ ಕಬ್ಬಿಣದ ಅಂಶ ಬೇಕಾಗುತ್ತದೆ. ದೇಹದಲ್ಲಿ ಕಬ್ಬಿಣದ ಪ್ರಮಾಣ ಕಡಿಮೆಯಾದರೆ ರಕ್ತಹೀನತೆ (ಅನೀಮಿಯಾ) ಉಂಟಾಗುವ ಸಾಧ್ಯತೆಯೂ ಇದೆ. ರಕ್ತಹೀನತೆ ಎಂದರೆ ರಕ್ತವು ದೇಹಕ್ಕೆ ಅಗತ್ಯವಿರುವಷ್ಟು ಆಮ್ಲಜನಕವನ್ನು ಸಾಗಿಸಲು ಸಾಧ್ಯವಾಗದ ಸ್ಥಿತಿಯೇ ರಕ್ತಹೀನತೆ.

ದೇಹದಲ್ಲಿ ಕಬ್ಬಿಣಾಂಶ ಕೊರತೆ ತಡೆಯಲು ಏನು ಮಾಡಬೇಕು?

ದೇಹದಲ್ಲಿ ಕಬ್ಬಿಣಾಂಶದ ಕೊರತೆಯಾಗದಂತೆ ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದರಿಂದ ರಕ್ತಹೀನತೆ ತಡೆಯಬಹುದಾಗಿದೆ. ಅಂದರೆ ಆಹಾರದಲ್ಲಿ ಕಬ್ಬಿಣಾಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸುವುದು ಬಹಳ ಮುಖ್ಯ.

ಯಾವ ಪದಾರ್ಥದಲ್ಲಿ ಕಬ್ಬಿಣಾಂಶ ಹೆಚ್ಚಿದೆ?

ಹಸಿರು ಸೊಪ್ಪುಗಳಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ. ಪ್ರತಿದಿನ ನಿಯಮಿತವಾಗಿ ಸೊಪ್ಪು ಸೇವನೆ ಉತ್ತಮ. ಪಾಲಕ್ ಸೊಪ್ಪು, ಅಗಸೆ ಸೊಪ್ಪು, ಮೆಂತ್ಯೆ, ನುಗ್ಗೆ ಸೊಪ್ಪು ಬೇಳೆಕಾಳುಗಳು, ಕಡಲೆ, ಹೆಸರುಕಾಳು, ರಾಜ್ಮಾ, ಎಳ್ಳು, ಕುಂಬಳಕಾಯಿ ಬೀಜ, ಒಣದ್ರಾಕ್ಷಿ, ಖರ್ಜೂರದಂತಹ ಡ್ರೈ ಫ್ರೂಟ್‌ಗಳಲ್ಲಿಯೂ ಕಬ್ಬಿಣಾಂಶ ಹೇರಳವಾಗಿದೆ. ಹೀಗಾಗಿ ನಿಯಮಿತವಾಗಿ ಪ್ರತಿದಿನದ ಆಹಾರ ಪದಾರ್ಥದಲ್ಲಿ ಇವುಗಳು ಇರುವಂತೆ ನೋಡಿಕೊಳ್ಳಬೇಕು. ಇನ್ನು ನೀವು ಮಾಂಸಾಹಾರ ತಿನ್ನುವವರಾಗಿದ್ದರೆ ಮಾಂಸ, ಮೀನುಗಳನ್ನು ಊಟದಲ್ಲಿ ಸೇರಿಸಿಕೊಳ್ಳಬಹುದು. ಏಕೆಂದರೆ ಇವುಗಳ ಸೇವನೆಯಿಂದ ದೇಹಕ್ಕೆ ಕಬ್ಬಿಣಾಂಶ ಸಿಗುತ್ತದೆ. ಇದರ ಜೊತೆಗೆ ಉತ್ತಮವಾಗಿ ಹೀರಿಕೊಳ್ಳಲು ನಿಂಬೆಹಣ್ಣು ನೆಲ್ಲಿಕಾಯಿ, ಪೇರಳೆ ಮತ್ತು ಕಿತ್ತಳೆಯಂತಹ ವಿಟಮಿನ್‌ ಸಿ ಹೆಚ್ಚಿರುವ ಆಹಾರಗಳನ್ನೂ ಸೇವಿಸುವುದು ಒಳ್ಳೆಯದು.

ದೇಹದಲ್ಲಿ ರಕ್ತದ ಕೊರತೆ ಇದೆ ಎಂದು ಹೇಗೆ ತಿಳಿಯುವುದು?

ದೇಹದಲ್ಲಿ ರಕ್ತದ ಕೊರತೆಯಿಂದ ಹಲವು ಲಕ್ಷಣಗಳು ಕಂಡುಬರುತ್ತವೆ. ಉದಾಹರಣೆ ಮೇಲೆ ಹೇಳಿದಂತೆ ಕಣ್ಣಿನ ಸುತ್ತ ಕಪ್ಪು ಕಲೆಯಾಗುವದು ಇನ್ನಿತರ ಲಕ್ಷಣಗಳು ಗೋಚರಿಸುತ್ತವೆ. ಹೀಗಾಗಿ ಕಾಲಕಾಲಕ್ಕೆ ವೈದ್ಯರ ಬಳಿ ರಕ್ತಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಇದ್ದರೆ ವೈದ್ಯರ ಸಲಹೆ ಪಡೆದು ಆಹಾರದಲ್ಲಿ ಬದಲಾವಣೆ ಮಾಡುವುದು ಉತ್ತಮ.

ಗಮನಿಸಿ: ಆರೋಗ್ಯ ನಿಯತಕಾಲಿಕೆಯಿಂದ ಸಂಗ್ರಹಿಸಿದ ಈ ಲೇಖನ ಕೇವಲ ಪ್ರಾಥಮಿಕ ಮಾಹಿತಿಯಾಗಿದೆ. ರಕ್ತಹೀನತೆ, ಕಬ್ಬಿಣಾಂಶ ಕೊರತೆಯ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರನ್ನ ಸಂಪರ್ಕಿಸಿ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಿವನ ಮೇಲಾಣೆ.. ಬಿಲ್ವಪತ್ರೆ ಮಾಮೂಲಿ ಎಲೆ ಅಲ್ಲ, ಅದರಲ್ಲಿರೋ ಭಾರೀ ಸೀಕ್ರೆಟ್ ಹಲವರಿಗೆ ಗೊತ್ತೇ ಇಲ್ಲ!
Diet plan: 115 ಕೆಜಿಯಿಂದ 70 ಕೆಜಿಗೆ ಬಂದ ಮಹಿಳೆ; ವೈರಲ್ ಆಯ್ತು ಇವರ ತೂಕ ಇಳಿಕೆಯ ಡಯಟ್ ಪ್ಲಾನ್!