
ಒಂದು ದಾಳಿಂಬೆ (Pomegranate) ನೂರು ರೋಗಗಳಿಗೆ ಮದ್ದು. ದಾಳಿಂಬೆ ಶತಮಾನಗಳಿಂದಲೂ ಅತ್ಯಂತ ಶಕ್ತಿಶಾಲಿ, ಪೌಷ್ಟಿಕಾಂಶದ ಹಣ್ಣೆಂದೇ ಗುರುತಿಸಲ್ಪಟ್ಟಿದೆ. ಈ ಹಣ್ಣು ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ. ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ. ಪ್ರತಿ ದಿನ ನೀವು ದಾಳಿಂಬೆ ರಸ (pomegranate juice) ಕುಡಿಯೋದು ಸಾಕಷ್ಟು ಪ್ರಯೋಜನಕಾರಿ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ರಸ ಸೇವನೆ ಮಾಡೋದ್ರಿಂದ ಟೈಪ್ 2 ಮಧುಮೇಹದಂತ ಅಪಾಯವನ್ನು ಕಡಿಮೆ ಮಾಡ್ಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಪರಿಣಾಮಕಾರಿ.
• ಆಂಟಿ ಆಕ್ಸಿಡೆಂಟ್ : ದಾಳಿಂಬೆ ರಸ, ಆಂಟಿ ಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ವಿಶೇಷವಾಗಿ ಪ್ಯೂನಿಕಾಲಾಜಿನ್ಗಳು ಮತ್ತು ಆಂಥೋಸಯಾನಿನ್ಗಳು, ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಉತ್ಕರ್ಷಣ ನಿರೋಧಕಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ನಾಟಿ ಕೋಳಿ ತಿನ್ನೋದ್ರಿಂದ ಹತ್ತಲ್ಲ, ಇಪ್ಪತ್ತಲ್ಲ ನಲವತ್ತು ಪ್ರಯೋಜನಗಳಿವೆ
• ಹೃದಯ ಆರೋಗ್ಯಕ್ಕೆ ಒಳ್ಳೆಯದು : ದಾಳಿಂಬೆ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡುತ್ತದೆ. ಉತ್ತಮ ಕೊಲೆಸ್ಟ್ರಾಲ್ (HDL) ಹೆಚ್ಚಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ದಾಳಿಂಬೆ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.
• ಉರಿಯೂತ ನಿವಾರಕ : ದೀರ್ಘಕಾಲದ ಉರಿಯೂತ ಸಂಧಿವಾತ, ಮಧುಮೇಹ ಮತ್ತು ಹೃದ್ರೋಗ ಸೇರಿದಂತೆ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗಿದೆ. ದಾಳಿಂಬೆ ರಸ ಉರಿಯೂತ ನಿವಾರಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ಹೆಚ್ಚಿನ ಮಟ್ಟದ ಪಾಲಿಫಿನಾಲ್ಗಳಿವೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದ ಉರಿಯೂತ ಕಡಿಮೆಯಾಗಿ, ಎಲ್ಲ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
• ಉತ್ತಮ ಜೀರ್ಣಕ್ರಿಯೆ : ಜೀರ್ಣಕಾರಿ ಸಮಸ್ಯೆಯಿಂದ ನೀವು ಬಳಲ್ತಿದ್ದರೆ ದಾಳಿಂಬೆ ರಸ ಇದಕ್ಕೆ ಪರಿಹಾರ ನೀಡುತ್ತದೆ. ದಾಳಿಂಬೆ ರಸ, ಫೈಬರ್ ಹೊಂದಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ದಾಳಿಂಬೆ ರಸವು ಉತ್ತಮ ಕರುಳಿನ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
• ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಟ : ದಾಳಿಂಬೆ ರಸವು ಕ್ಯಾನ್ಸರ್-ವಿರೋಧಿ ಗುಣಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು, ವಿಶೇಷವಾಗಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ತಡೆಯುವ ಶಕ್ತಿ ಹೊಂದಿದೆ.
ವಿಟಮಿನ್ D2 ಸಪ್ಲಿಮೆಂಟ್‌ಗಳು ವಿಟಮಿನ್ D3 ಮಟ್ಟವನ್ನು ಕಡಿಮೆ ಮಾಡಬಹುದು: ವಿಜ್ಞಾನಿಗಳ ಎಚ್ಚರಿಕೆ!
• ಚರ್ಮದ ಆರೋಗ್ಯಕ್ಕೆ ಉತ್ತಮ : ದಾಳಿಂಬೆ ರಸವು ನಿಮ್ಮ ಆಂತರಿಕ ಅಂಗಗಳಿಗೆ ಮಾತ್ರವಲ್ಲದೆ ಚರ್ಮಕ್ಕೂ ಉತ್ತಮ. ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ದಾಳಿಂಬೆ ರಸವು UV ಹಾನಿಯಿಂದ ರಕ್ಷಿಸುವ ಮೂಲಕ ಮತ್ತು ಚರ್ಮದ ಕೋಶಗಳ ಪುನರುತ್ಪಾದನೆಗೆ ಸಹಾಯ ಮಾಡುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
• ತೂಕ ಇಳಿಕೆ : ತೂಕ ಇಳಿಕೆಗೆ ದಾಳಿಂಬೆ ರಸ ಉತ್ತಮ ಮದ್ದು. ದಾಳಿಂಬೆ ರಸವು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕೊಬ್ಬಿನ ವಿಭಜನೆಯನ್ನು ಸುಧಾರಿಸುತ್ತದೆ. ಇದು ದೇಹದ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಇದ್ರಿಂದ ತೂಕ ಇಳಿಯುತ್ತದೆ.
• ಮೆದುಳಿಗೆ ಉತ್ತಮ : ದಾಳಿಂಬೆ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ದಾಳಿಂಬೆ ರಸವು ಸ್ಮರಣಶಕ್ತಿ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಆಲ್ಝೈಮರ್ನಂತಹ ವಯಸ್ಸಿಗೆ ಸಂಬಂಧಿಸಿದ ಮಿದುಳಿನ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.