ನಿಯಮಿತವಾಗಿ ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವವರು ಮದ್ಯ ಸೇವನೆ ಮಾಡಬಹುದಾ ?

By Suvarna News  |  First Published May 12, 2022, 2:17 PM IST

ಅನೇಕ ಬಾರಿ ಆ್ಯಂಟಿಬಯೋಟಿಕ್‌ (Antibiotics)ಗಳನ್ನು ತೆಗೆದುಕೊಳ್ಳುವ ಅಗತ್ಯವಿರುವ ಕಾಯಿಲೆ (Disease)ಗಳೊಂದಿಗೆ ಹೋರಾಡುವ ಜನರು ಔಷಧಿಗಳ (Medicine) ಸೇವನೆಯ ಹೊರತಾಗಿಯೂ ಮದ್ಯವನ್ನು ಕಡಿಮೆ ಮಾಡುವುದಿಲ್ಲ.ಆದರೆ ಈ ರೀತಿ ಮಾಡೋದು ಆರೋಗ್ಯಕ್ಕೆ (Health) ಒಳ್ಳೇದಾ ?


ಇವತ್ತಿನ ದಿನಗಳಲ್ಲಿ ಕುಡಿಯೋದೆ ನನ್‌ ವೀಕ್‌ನೆಸ್ಸು ಅನ್ನೋರೆ ಹೆಚ್ಚಿನವರು. ಕೆಲವೊಬ್ರಿಗೆ ದಿನದಲ್ಲಿ ಮೂರು ಹೊತ್ತು ಅಲ್ಕೋಹಾಲ್  (Alcohol)  ಹೊಟ್ಟೆಗೆ ಹೋಗದಿದ್ರೆ ಆಗೋದೆ ಇಲ್ಲ. ಇನ್ನು ಕೆಲವರು ಸೋಷಿಯಲ್‌ ಡ್ರಿಂಕಿಂಗ್ ಅಂತ ಎಲ್ಲರೂ ಜತೆಯಾಗಿ ಸೇರಿದಾಗಲೊಮ್ಮೆ ಕುಡಿಯುತ್ತಾರೆ. ಆದರೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವವರು ಮದ್ಯಸೇವನೆ ಮಾಡಬಹುದಾ ?

ಅನೇಕ ಬಾರಿ ಆ್ಯಂಟಿಬಯೋಟಿಕ್‌ (Antibiotics)ಗಳನ್ನು ತೆಗೆದುಕೊಳ್ಳುವ ಅಗತ್ಯವಿರುವ ಕಾಯಿಲೆ (Disease)ಗಳೊಂದಿಗೆ ಹೋರಾಡುವ ಜನರು ಔಷಧಿಗಳ (Medicine) ಸೇವನೆಯ ಹೊರತಾಗಿಯೂ ಮದ್ಯವನ್ನು ಕಡಿಮೆ ಮಾಡುವುದಿಲ್ಲ. ಅಲ್ಕೋಹಾಲ್ (Alcohol) ಸೇವನೆ ತಮ್ಮ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಆದರೆ ಆರೋಗ್ಯ (Health)ದ ದೃಷ್ಟಿಕೋನದಿಂದ, ಅಲ್ಕೊಹಾಲ್‌ನ ಪ್ರಭಾವದ ಅಡಿಯಲ್ಲಿ ಅಥವಾ ಪ್ರತಿಜೀವಕವನ್ನು ತೆಗೆದುಕೊಂಡ ನಂತರ ಬಲವಾದ ಔಷಧಿಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವಾಗಿದೆಯೇ, ಇಲ್ಲವೇ ಎಂಬುದರ ಕುರಿತು ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ. 

Tap to resize

Latest Videos

ಆಂಟಿ ಬಯೋಟಿಕ್ಸ್‌ ಜೊತೆ ಅಲ್ಕೋಹಾಲ್ ಸೇವಿಸಬಹುದೇ ?
ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಸಾಮಾನ್ಯ ಪ್ರತಿಜೀವಕಗಳನ್ನು ತೆಗೆದುಕೊಳ್ಳುವಾಗ ಮಿತವಾಗಿ ಮದ್ಯಪಾನ ಮಾಡುವುದು ಆರೋಗ್ಯದ ಮೇಲೆ ಹಿನ್ನಡೆಯಾಗುವ ಸಾಧ್ಯತೆಯಿಲ್ಲ. ಆದರೂ, ಇದು ಕೂಡ ಕೆಲವು ಹಂತದ ವರೆಗೆ ಮಾತ್ರ. ಅಸ್ವಸ್ಥಗೊಂಡಾಗ ಅಥವಾ ಔಷಧಿಯನ್ನು ತೆಗೆದುಕೊಳ್ಳುವಾಗ ಮದ್ಯಪಾನ ಸೇವನೆ ಒಳ್ಳೆಯದಲ್ಲ. ಇದರಿಂದ ದೇಹದ ಮೇಲೆ ಔಷಧಿಯ ಪರಿಣಾಮ ಕಡಿಮೆಯಾಗುತ್ತದೆ.

ಅಲ್ಕೋಹಾಲ್‌ ಸೇವನೆಯಿಂದ ಬೊಜ್ಜು ಬರುತ್ತಾ ? ಹೊಸ ಅಧ್ಯಯನದಲ್ಲೇನಿದೆ

ಅಲ್ಕೋಹಾಲ್‌. ಔಷಧಿ ದೇಹಕ್ಕೆ ಪೂರಕವಾಗಿ ಸರಿಯಾಗಿ ಕೆಲಸ ಮಾಡುವುದನ್ನು ತಡೆಯುತ್ತದೆ. ಹೀಗಾಗಿ ಆಂಟಿ ಬಯೋಟಿಕ್ಸ್ ತೆಗೆದುಕೊಳ್ಳುವ ಸಂದರ್ಭ ಮದ್ಯ ಕುಡಿಯುವುದನ್ನು ತ್ಯಜಿಸುವುದು ಜಾಣತನ ಎಂದು ತಜ್ಞರು ಹೇಳುತ್ತಾರೆ.

ಮೇಯೊ ಕ್ಲಿನಿಕ್ ಪ್ರಕಾರ, ಆಲ್ಕೋಹಾಲ್ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಚೇತರಿಕೆಯನ್ನು ವಿಳಂಬಗೊಳಿಸುತ್ತದೆ. ಅಲ್ಕೋಹಾಲ್ ಒಂದು ಮೂತ್ರವರ್ಧಕವಾಗಿದ್ದು ಅದು ನಿರ್ಜಲೀಕರಣವನ್ನು ಉಂಟುಮಾಡುತ್ತದೆ, ಇದು ಅಸ್ವಸ್ಥರಾದಾಗ ಹಾನಿಕಾರಕವಾಗಿದೆ. ಇದಲ್ಲದೆ, ಮದ್ಯವು ಅರೆನಿದ್ರಾವಸ್ಥೆ ಅಥವಾ ತಲೆತಿರುಗುವಿಕೆಯಂತಹ ಅನಾರೋಗ್ಯದ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ.

ಆ್ಯಂಟಿಬಯೋಟಿಕ್‌ಗಳೊಂದಿಗೆ ಆಲ್ಕೊಹಾಲ್ ಸೇವನೆಯು ಯಾವಾಗ ಅಪಾಯಕಾರಿ?
ಮೆಟ್ರೋನಿಡಜೋಲ್ ಅಥವಾ ಟಿನಿಡಾಜೋಲ್‌ನಂತಹ ಕೆಲವು ಪ್ರತಿಜೀವಕಗಳನ್ನು ಅಲ್ಕೋಹಾಲ್‌ನೊಂದಿಗೆ ಎಂದಿಗೂ ಸಂಯೋಜಿಸಬಾರದು. ಈ ಔಷಧಿಗಳನ್ನು ಯೋನಿ ಮತ್ತು ಹಲ್ಲಿನ ಸೋಂಕುಗಳು, ಕಾಲಿನ ಹುಣ್ಣುಗಳು ಅಥವಾ ಒತ್ತಡದ ಮೂಲಗಳನ್ನು ತೆರವುಗೊಳಿಸಲು ಅಥವಾ ಹೆಲಿಕೋಬ್ಯಾಕ್ಟರ್ ಪೈಲೋರಿ - ಕರುಳಿನಿಂದ ಬ್ಯಾಕ್ಟೀರಿಯಾವನ್ನು ತೆರವುಗೊಳಿಸಲು ಬಳಸಲಾಗುತ್ತದೆ. ಅಲ್ಕೊಹಾಲ್ ಜೊತೆಗೆ ಸಂಯೋಜಿಸಿದಾಗ, ಇವುಗಳು ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು:

ಬಿಯರ್ ಕುಡಿಯೋದ್ರಿಂದ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಡಿಮೆಯಾಗುತ್ತಾ ?

ಎದೆ ನೋವು, ವಾಂತಿ, ಅನಿಯಮಿತ ಹೃದಯ ಬಡಿತಗಳು, ತಲೆನೋವು, ಉಸಿರಾಟದ ತೊಂದರೆ, ಲಘು ತಲೆತಿರುಗುವಿಕೆ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು.

ಆ್ಯಂಟಿಬಯೋಟಿಕ್‌ ತೆಗೆದುಕೊಳ್ಳುವ ಮೊದಲು ಒಬ್ಬರು ಎಷ್ಟು ಸಮಯ ಕಾಯಬೇಕು ?
ಕೆಲವೊಮ್ಮೆ, ಔಷಧಿಗಳು ಕುಡಿಯುವುದನ್ನು ತಪ್ಪಿಸಬೇಕಾದ ಅಥವಾ ನಿಲ್ಲಿಸಬೇಕಾದ ಸಮಯದ ಚೌಕಟ್ಟನ್ನು ಸೂಚಿಸುತ್ತವೆ. ಇದು 24 ರಿಂದ 72 ಗಂಟೆಗಳವರೆಗೆ ಇರಬಹುದು. ಇತರ ಸಂದರ್ಭಗಳಲ್ಲಿ, ಚೇತರಿಸಿಕೊಳ್ಳುವವರೆಗೆ ಅಲ್ಕೋಹಾಲ್ ಅನ್ನು ತ್ಯಜಿಸುವುದು ಒಳ್ಳೆಯದು.

ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ಅರ್ಥೈಸಿಕೊಳ್ಳಬಾರದು. ಇದನ್ಮೊನು ಅನುಸರಿಸುವ ಮದಲು ಅಥವಾ ನಿಮ್ಮ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ.

click me!