Hair Health : ಕೂದಲು ಉದುರಲು ಅತಿಯಾದ ಹಸ್ತಮೈಥುನವೂ ಒಂದು ಕಾರಣ

By Suvarna News  |  First Published May 12, 2022, 11:55 AM IST

ತಲೆ ತುಂಬ ಕೂದಲಿರಬೇಕೆಂಬುದು ಎಲ್ಲರ ಆಸೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೋಳು ತಲೆ ಹುಡುಗರ ಸಂಖ್ಯೆ ಹೆಚ್ಚಾಗ್ತಿದೆ. ನಮ್ಮ ಕೂದಲಿಗೆ ನಾವೇ ಹೊಣೆ. ನಮ್ಮ ಕೆಲ ಅಭ್ಯಾಸಗಳೇ ತಲೆ ಬೋಳಾಗಲು ಕಾರಣವೆಂದ್ರೆ ನಂಬ್ಲೇಬೇಕು. 
 


ಪುರುಷ (Male) ರು ಕೂಡ ಕಪ್ಪು (Black) ಮತ್ತು ದಪ್ಪ ಕೂದಲ (Hair) ನ್ನು ಇಷ್ಟಪಡುತ್ತಾರೆ. ಚೆಂದದ ಕೂದಲಿಗಾಗಿ ಪುರುಷರು ಬಗೆ ಬಗೆಯ ಶಾಂಪೂ, ಕಂಡಿಷನರ್‌ ಗಳನ್ನು ಬಳಸ್ತಾರೆ. ಹಾಗೆ ಪಾರ್ಲರ್ ಗೆ ಹೋಗಿ ಕೂದಲಿನ ಸೌಂದರ್ಯ ವರ್ಧಕಗಳನ್ನು ಬಳಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಪುರುಷರ ತಲೆ ಬೋಳಾಗ್ತಿದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗ್ತಿದೆ. ಪುರುಷರಿಗೆ ಕಾಡುವ ಬೋಳು ತಲೆ ಸಮಸ್ಯೆಯನ್ನು  ಆಂಡ್ರೊಜೆನೆಟಿಕ್ ಅಲೋಪೆಸಿಯಾ (Androgenetic Alopecia) ಎಂದು ಕರೆಯಲಾಗುತ್ತದೆ. 2018 ರಲ್ಲಿ ನಡೆಸಿದ ಸಂಶೋಧನೆ ಪ್ರಕಾರ, ಭಾರತದಲ್ಲಿ 18-35 ವರ್ಷ ವಯಸ್ಸಿನ ಶೇಕಡಾ 47.6 ಪುರುಷರು ಬೋಳು ತಲೆ ಸಮಸ್ಯೆಗೆ ಬಲಿಯಾಗ್ತಿದ್ದಾರೆ.  ಆಂಡ್ರೊಜೆನೆಟಿಕ್ ಅಲೋಪೆಸಿಯಾ ಅಂದ್ರೆ ಪುರುಷರ ತಲೆಯ ಕೆಲವು ಭಾಗಗಳಲ್ಲಿ ಕೂದಲು ಉದುರಲು ಪ್ರಾರಂಭಿಸುತ್ತದೆ. ಆ ಭಾಗದಲ್ಲಿ ಕೂದಲು ಬರುವುದಿಲ್ಲ. ಇತ್ತೀಚೆಗೆ ಕೂದಲು ಕಸಿ ಶಸ್ತ್ರಚಿಕಿತ್ಸಕರು ಕೆಲವು ಪುರುಷರಲ್ಲಿ ಕೂದಲು ಉದುರುವಿಕೆಗೆ ಕಾರಣವನ್ನು ಉಲ್ಲೇಖಿಸಿದ್ದಾರೆ. ಪುರುಷರ ಕೂದಲು ಅಕಾಲಿಕವಾಗಿ ಉದುರಲು ಒಂದು ಅಭ್ಯಾಸ ಕಾರಣವೆಂದು ಅವರು ಹೇಳಿದ್ದಾರೆ. 

ಪುರುಷರ ಕೂದಲು ಉದುರಲು ಇದು ಕಾರಣ : ಹೆಚ್ಚು ಹಸ್ತಮೈಥುನ ಮಾಡುವ ಪುರುಷರ ಕೂದಲು ಬೇಗನೆ ಉದುರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ವಾಸ್ತವವಾಗಿ, ವಿಟಮಿನ್ ಎ ವೀರ್ಯದಲ್ಲಿ ಕಂಡುಬರುತ್ತದೆ. ಇದು ಕೂದಲಿಗೆ ಸಹ ಮುಖ್ಯವಾಗಿದೆ. ನಿರಂತರವಾಗಿ, ದೀರ್ಘಕಾಲದವರೆಗೆ ಅತಿಯಾದ ಹಸ್ತಮೈಥುನವನ್ನು ಮಾಡುತ್ತಿದ್ದರೆ, ಇದು ಅವನ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ಉತ್ತಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಮತ್ತು ಖನಿಜಯುಕ್ತ ಆಹಾರವನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. 

Latest Videos

undefined

MIGRAINE PROBLEM: ನಿಮಗೆ ಮೈಗ್ರೇನ್ ಯಾವಾಗ ಬರುತ್ತೆ?

ಕೂದಲು ಹೆಚ್ಚು ಉದುರುತ್ತಿದ್ದರೆ ವಿಟಮಿನ್ ಎ ಕೊರತೆಯಿರುವ ಸಾಧ್ಯತೆಯಿದೆ. ಹಾಗಾಗಿ ಮೊದಲು ವಿಟಮಿನ್ ಎ ಕೊರತೆ ನೀಗಿಸಿ. ಕೂದಲು ಉದುರುವುದನ್ನು ತಡೆಯಲು ಹಲವು ವಿಟಮಿನ್ ಗಳನ್ನು ತೆಗೆದುಕೊಳ್ಳಬೇಕು. ವಿಟಮಿನ್ ಎ ಕೂಡ ಅವುಗಳಲ್ಲಿ ಒಂದು. ಇದಲ್ಲದೆ ಬಿ ಜೀವಸತ್ವಗಳು, ವಿಟಮಿನ್ ಡಿ ಮತ್ತು ವಿಟಮಿನ್ ಇ ಹೊಂದಿರುವ ಆಹಾರಗಳನ್ನು ಸಹ ಆಹಾರದಲ್ಲಿ ಸೇರಿಸಬೇಕು. ಸತು, ಕಬ್ಬಿಣ, ಸೆಲೆನಿಯಮ್ ಸಹ ಕೂದಲು ಉದುರುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.  

New Study : ಎಸ್ಪ್ರೆಸೊ ಕಾಫಿ ಪ್ರಿಯರಿಗೆ ಶಾಕಿಂಗ್…! ಮಹಿಳೆಯರಿಗಿಂತ ಪುರುಷರಿಗೆ ಅಪಾಯಕಾರಿ ಈ ಪಾನೀಯ

ಸಾಮಾನ್ಯವಾಗಿ ಎಷ್ಟು ಕೂದಲು ಉದುರುತ್ತೆ ಗೊತ್ತಾ? : ಅಮೆರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ಒಬ್ಬ ವ್ಯಕ್ತಿಯು ಪ್ರತಿದಿನ ಸುಮಾರು 50-100 ಕೂದಲನ್ನು ಕಳೆದುಕೊಳ್ಳುವುದು ಸಹಜ. ಪ್ರತಿಯೊಂದು ಕೂದಲು ಕೋಶಕವು ಒಂದು ಚಕ್ರದ ಮೂಲಕ ಹೋಗುತ್ತದೆ. ಮೊದಲ ಹಂತವು ಅನಾಜೆನ್ ಆಗಿದೆ. ಇದರಲ್ಲಿ ಕೂದಲು ಬೆಳವಣಿಗೆಯಾಗುತ್ತದೆ. ಎರಡನೇಯದು ಟೆಲೋಜೆನ್ ಹಂತ.  ಈ ಸಮಯದಲ್ಲಿ ಕೂದಲು ಉದುರುವಿಕೆ ಪ್ರಾರಂಭವಾಗುತ್ತದೆ. ಕೂದಲು ಉದುರುವಿಕೆ ಮತ್ತು ಬೆಳವಣಿಗೆಯ ಈ ಚಕ್ರ ಸಕ್ರಿಯವಾಗಿ  ಮುಂದುವರಿಯುತ್ತದೆ ಮತ್ತು ಹೊಸ ಕೂದಲುಗಳು ಬರುತ್ತಲೇ ಇರುತ್ತವೆ. ಹೆಚ್ಚಿನ ಆರೋಗ್ಯವಂತ ಜನರ ತಲೆಯಲ್ಲಿ 80,000 ರಿಂದ 120,000 ಕೂದಲುಗಳಿರುತ್ತವೆ.

ಕೂದಲಿನ ಶಕ್ತಿಯ ರಹಸ್ಯ : ತಜ್ಞರ ಪ್ರಕಾರ, ಕೂದಲಿನ ಬಲವು ನಿಮ್ಮ ಆಹಾರದಲ್ಲಿನ ಜೀವಸತ್ವಗಳು ಮತ್ತು ಖನಿಜಗಳ ಮೇಲೆ ಅವಲಂಬಿತವಾಗಿದೆ. ಕಬ್ಬಿಣ ಮತ್ತು ವಿಟಮಿನ್ ಬಿ 5 ಕೂದಲು ತೆಳುವಾಗುವುದನ್ನು ತಡೆಯುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಸುತ್ತದೆ.  ಕೂದಲಿನ ಶಕ್ತಿ ಮತ್ತು ಹೊಳಪಿಗೆ ಪ್ರೋಟೀನ್ ಅತ್ಯಗತ್ಯ. ಇದಲ್ಲದೆ, ಹವಾಮಾನ ಸಮಸ್ಯೆಗಳಿಂದ ಕೂದಲಿನ ಗುಣಮಟ್ಟವೂ ಹದಗೆಡುತ್ತದೆ. ಇದಲ್ಲದೆ ಕೆಲವರಿಗೆ ಕೂದಲು ಉದುರುವಿಕೆ ಆನುವಂಶಿಕವಾಗಿಯೂ ಬರುತ್ತದೆ. ತಲೆ ಬೋಳಾಗಲು ಅನೇಕ ಕಾರಣವಿದೆ. ಆರಂಭದಲ್ಲಿಯೇ ಕಾರಣ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದರೆ ಕೂದಲನ್ನು ಉಳಿಸಿಕೊಳ್ಳಬಹುದು. 

click me!