ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಹತ್ತಿರತ್ತಿರ ನೂರು ಮಂದಿ ಮಾತ್ರ!

By Suvarna NewsFirst Published May 24, 2020, 9:26 AM IST
Highlights

ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್- ಅಂದರೆ ಬಾಚಲು ಸಾಧ್ಯವಿಲ್ಲದ ಕೂದಲಿನ ಸಮಸ್ಯೆ ಬಗ್ಗೆ ಕೇಳಿದ್ದೀರಾ? ಜಗತ್ತಲ್ಲಿ ಸುಮಾರು 100ರಷ್ಟು ಮಂದಿ ಮಾತ್ರ ಈ ಅಪರೂಪದ ಲಕ್ಷಣ ಹೊಂದಿದ್ದಾರೆ. 

ನ್ಯೂಯಾರ್ಕ್‌ನ ಶಿಲ್ಹಾ ಎಲ್ಲಿ ಹೋದರೂ ಎಲ್ಲರ ಚಿತ್ತ ಅವಳತ್ತ ತಿರುಗುತ್ತದೆ. ಕೆಲವರು ಅವಳನ್ನು ನೋಡಿ ಹುಬ್ಬೇರಿಸಿದರೆ ಮತ್ತೆ ಕೆಲವರು ಅಯ್ಯೋ ಪಾಪ ಎನ್ನುತ್ತಾರೆ. ಆದರೆ ಶಿಲ್ಹಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತನ್ನ ತಲೆಕೂದಲು ವಿಶಿಷ್ಠವಾಗಿರುವುದೇ ತನ್ನ ವೈಶಿಷ್ಠ್ಯತೆ ಎಂದು ಆಕೆಗೆ ಗೊತ್ತಿದೆ. ಈಕೆಯ 360 ಡಿಗ್ರಿಯಲ್ಲಿ ನಿಂತುಕೊಳ್ಳುವ ಕೂದಲನ್ನು ಕಟ್ಟಿ ಹಾಕುವ ಭೂಪರಾರೂ ಇನ್ನೂ ಹುಟ್ಟಿಲ್ಲ ಎಂಬುದನ್ನು ಹೆಗ್ಗಳಿಕೆಯಾಗಿಯೇ ತೆಗೆದುಕೊಳ್ಳಬಹುದಲ್ಲವೇ?

ಹೌದು, ಶಿಲ್ಹಾಳ ಕೂದಲು ತನಗೂ ಗುರುತ್ವಾಕರ್ಷಣೆಗೂ ಸಂಬಂಧವೇ ಇಲ್ಲವೇನೋ ಎಂಬಂತೆ ದಶದಿಕ್ಕಿಗೂ ಹರಡಿ ನಿಲ್ಲುತ್ತದೆ. ಯಾವ ಬಾಚಣಿಗೆಗೂ ಬಗ್ಗದ, ಬ್ಯಾಂಡ್‌ಗಳಿಗೆ ಎಟುಕದ ಕೂದಲವು. ಈ ಕೂದಲು ಉದುರಿದರೆ ಬೇರುಸಮೇತ ಉದುರುತ್ತವೆ. ಹಾಗಾಗಿ, ಅವುಗಳ ಆರೈಕೆಗೆ ಎಕ್ಸ್ಟ್ರಾ ಸಮಯ ಕೊಡಬೇಕು ಆಕೆಯ ಪೋಷಕರು. ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ತಲೆ ಸ್ನಾನ ಮಾಡಿಸಬಹುದು. ಜೊತೆಗೆ ಆಗಾಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಾಗುತ್ತಿರುತ್ತದೆ. ಸಾಫ್ಟ್ .ಬ್ರಶ್ ಹಾಗೂ ಕಂಡಿಶನರ್ ಬಳಸುವುದನ್ನು ಸೂಚಿಸಲಾಗುತ್ತದೆ. ಇದೇ ಅತಿ ಅಪರೂಪದ ಸಮಸ್ಯೆ ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್. 

ವೈವಾಹಿಕ ಜೀವನ ಬೋರಿಂಗ್ ಎನ್ನುವವರಿಗೆ..

ನಾವೆಲ್ಲ ಕೂದಲು ಸ್ವಲ್ಪ ಸಿಕ್ಕಾಗುವುದಕ್ಕೇ ಗೊಣಗಿಕೊಂಡು, ಕಿರಿಕಿರಿ ಮಾಡಿಕೊಂಡು ನನ್ನ ಕೂದಲು ಹೀಗಿರಬೇಕಿತ್ತು, ಹಾಗಿರಬೇಕಿತ್ತು ಎಂದುಕೊಳ್ಳುತ್ತೇವಲ್ಲ... ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್ ಇರುವ ಶಿಲ್ಹಾ ಮಾತ್ರ ತಾನು ಯೂನಿಕಾರ್ನ್‌ನಂತೆ ಸ್ಪೆಶಲ್, ನನ್ನದು ನಿಮ್ಮೆಲ್ಲರಂತೆ ಬೋರಿಂಗ್ ತಲೆಕೂದಲಲ್ಲ ಎನ್ನುತ್ತಾಳೆ. ಪಾಸಿಟಿವ್ ಆ್ಯಟಿಟ್ಯೂಡ್ ಎಂದರೆ ಹೀಗಿರಬೇಕಲ್ಲವೇ?

ಅಪರೂಪದಲ್ಲಿ ಅಪರೂಪ
ಈ ಸಿಂಡ್ರೋಮ್ ಇರುವವರನ್ನು ಜಗತ್ತೆಲ್ಲ ಹುಡುಕಿದರೂ ಹೆಚ್ಚೆಂದರೆ ನೂರು ಜನ ಸಿಗಬಹುದಷ್ಟೇ. ಹೌದು, ಇವರ ಕೂದಲು ಗುಂಗುರು ಗುಂಗುರಾಗಿ ಸುತ್ತಿಕೊಳ್ಳದೆ ನೇರವಾಗಿ ಫ್ಲ್ಯಾಟ್ ಆಗಿ, ಅಥವಾ ಹೃದಯಾಕಾರದಲ್ಲಿ ನಿಲ್ಲುತ್ತವೆ. ಇದಕ್ಕೆ ಮುಖ್ಯ ಕಾರಣ ಜೆನೆಟಿಕ್ ಮ್ಯುಟೇಶನ್. ಹೌದು, ಜೀನ್‌ಗಳ ರೂಪಾಂತರದಿಂದ ಹೀಗಾಗುತ್ತದೆ. 2016ರ ಅಧ್ಯಯನದ ಪ್ರಕಾರ ಪಿಎಡಿಐ3, ಟಿಜಿಎಂ3 ಹಾಗೂ ಟಿಸಿಎಚ್ಎಚ್ ಜೀನ್‌ಗಳು ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್‌ಗೆ ಪ್ರಮುಖ ಕಾರಣ. ಇವೆಲ್ಲವೂ ನಮ್ಮ ಕೂದಲ ರಚನೆ, ವಿನ್ಯಾಸಕ್ಕೆ ಕಾರಣವಾಗುವ ಜೀನ್‌ಗಳು. ಇವುಗಳಲ್ಲೊಂದು ರೂಪಾಂತರ ಹೊಂದಿದರೆ ಆಗ ಕೂದಲ ವಿನ್ಯಾಸದಲ್ಲಿ ಹೀಗೆ ಅಪರೂಪದ ಬದಲಾವಣೆ ಕಾಣಿಸಬಹುದು.

ಮಕ್ಕಳಲ್ಲಿ ಕಾಣಿಸುವ ಸಮಸ್ಯೆ
ಸಾಮಾನ್ಯವಾಗಿ ಪುಟ್ಟ ಮಕ್ಕಳಲ್ಲಿ ಕಾಣಿಸುವ ಈ ಸಮಸ್ಯೆಗೆ ಯಾವುದೇ ಚಿಕಿತ್ಸೆಯಿಲ್ಲ. ಆದರೆ, ಹದಿಹರೆಯದ ಸಮಯದಲ್ಲಿ ಇದು ತಾನಾಗಿಯೇ ಬಹುತೇಕ ಪರಿಹಾರವಾಗುತ್ತದೆ. ಶಿಲ್ಹಾಳ ಕೇಸ್‌ನಲ್ಲಿ 3ನೇ ತಿಂಗಳಿನಿಂದ ಆಕೆಯ ಕೂದಲು ಹೀಗೆ ನಿಲ್ಲಲು ಆರಂಭವಾಗಿದೆ. ಈ ಸಿಂಡ್ರೋಮ್ ಇದ್ದವರಲ್ಲಿ ಕೂದಲ ಬೆಳವಣಿಗೆ ನಿಧಾನಗತಿಯಲ್ಲಿರುತ್ತದೆ. ನಿಧಾನವಾಗಿ ಕೂದಲು ಸಿಕ್ಕಾಪಟ್ಟೆ ಶುಷ್ಕವಾಗುತ್ತಾ ಹೋಗುತ್ತದೆ, ಬಣ್ಣ ಬದಲಾಗುತ್ತದೆ. ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್ ಮೊದಲ ಬಾರಿಗೆ ವರದಿಯಾಗಿದ್ದು 1912ರಲ್ಲಿ. 1980ರಲ್ಲಿ ಇದಕ್ಕೆ ಸ್ಪನ್ ಗ್ಲಾಸ್ ಹೇರ್ ಎಂದು ಹೆಸರಿಸಲಾಯಿತು. 

ಭಾರತದಲ್ಲಿ ಕೊರೋನಾ ಹರಡಲು ಬಿಡುವುದೇ ಮಾರ್ಗವೇ?

ಫ್ಯಾಮಿಲೀಲಿ ಇಲ್ಲ?
ಇದು ಜೆನೆಟಿಕ್ ಡಿಸಾರ್ಡರ್ ಎಂದ ಮೇಲೆ ತಂದೆ ತಾಯಿ ಬಂಧು ಬಳಗದಲ್ಲಿ ಯಾರಿಗಾದರೂ ಇರಲೇಬೇಕಲ್ಲ, ಆದರೆ ಅನ್‌ಕೂಂಬೇಬಲ್ ಹೇರ್ ಸಿಂಡ್ರೋಮ್ ಇರುವ ಮನೆಯವರು ಮೊದಲ ಬಾರಿಗೆ ವೈದ್ಯರ ಬಳಿ ಹೇಳುವ ಮಾತೇ ನಮ್ಮನೆಯಲ್ಲಿ ಯಾರಿಗೂ ಈ ಸಮಸ್ಯೆ ಇಲ್ಲ ಎಂಬುದು. ಆದರೆ, ಅವರ ಕೂದಲನ್ನು ಮೈಕ್ರೋಸ್ಕೋಪ್ ಮುಖಾಂತರ ನೋಡಿದರೆ ಕೂದಲೆಳೆಗಳು ಒಂದೇ ತ್ರಿಕೋನಾಕಾರವಾಗಿ ಇಲ್ಲವೇ ಕಿಡ್ನಿ ಆಕಾರದಲ್ಲಿ ಇರುತ್ತವೆ. ಅವರಲ್ಲಿ ಆ ಜೀನ್ ಡಾಮಿನೆಂಟ್ ಇಲ್ಲದ್ದರಿಂದ ಅವರ ಕೂದಲು ಹಾಗೆ ನೆಟ್ಟಗೆ ನಿಲ್ಲಲಿಲ್ಲವಷ್ಟೇ. 

click me!