ಭಾರತದಲ್ಲಿ ಕೊರೋನಾ ಹರಡಲು ಬಿಡುವುದೇ ಮಾರ್ಗವೇ?

ಹರ್ಡ್‌ ಇಮ್ಯುನಿಟಿ ಕಾಯಿಲೆಯನ್ನು ತಡೆಗಟ್ಟುವ ಸುಲಭ ವಿಧಾನ. ಭಾರತದಲ್ಲಿ ನೋಡಿ. ಇಲ್ಲಿನ ಜನಸಂಖ್ಯೆಯ 82 ಶೇಕಡ ಮಂದಿ 50ಕ್ಕಿಂತ ಕಡಿಮೆ ವಯಸ್ಸಿನವರು. ಇವರಲ್ಲಿ ಹೆಚ್ಚಿನವರಿಗೆ ಕೊರೊನಾ ವೈರಸ್‌ ಸೋಂಕಿದರೂ ಯಾವುದೇ ಲಕ್ಷಣಗಳನ್ನೂ ತೋರಿಸದೇ ಹೋಗಬಹುದು. ಭಾರತದಂತಹ ದೇಶದಲ್ಲಿ ಕೊರೋನಾ ವೈರಸ್‌ ಹರಡಲು ಬಿಡುವುದು ಮತ್ತು ಅದರ ವಿರುದ್ಧ ಹರ್ಡ್ ಇಮ್ಯುನಿಟಿ ಸಾಧಿಸುವುದು ಮಾತ್ರ ಅದನ್ನು ಗೆಲ್ಲುವ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿಗಳು ಹೇಳಿದ್ದಾರೆ.

 

Should we allow corona to spread in India

ಹರ್ಡ್ ಇಮ್ಯುನಿಟಿ ಅಂದರೆ ಸಾಮೂಹಿಕ ರೋಗ ಪ್ರತಿರೋಧ ಶಕ್ತಿ. ಸದ್ಯ ವಿಜ್ಞಾನಿಗಳು ಹರ್ಡ್ ಇಮ್ಯುನಿಟಿಯ ಮಾತನ್ನು ಆಡುತ್ತಿದ್ದಾರೆ. ಭಾರತದಂಥ ದೇಶಗಳಲ್ಲಿ ಸದಾಕಾಲ ಲಾಕ್‌ಡೌನ್‌ ಅಥವಾ ಸಾರಿಗೆ ಸಂಪರ್ಕಗಳನ್ನು ಬಂದ್‌ ಮಾಡಿ ಬದುಕಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಕೆಲಸ ನಷ್ಟ, ಸಂಬಳ ನಷ್ಟಗಳಿಂದಾಗಿ ಕುಟುಂಬಗಳು ಹಸಿದು ಸಾಯುವ ಪ್ರಮಾಣವೇ ಹೆಚ್ಚಿದ್ದೀತು. ಹೀಗಾಗಿ ಇಲ್ಲಿ ಹರ್ಡ್ ಇಮ್ಯುನಿಟಿ ಸಾಧಿಸಲು ಬಿಡುವುದೇ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್‌ ಎಂಬವರು ಹೇಳಿದ್ದಾರೆ. ಇವರು ಭಾರತೀಯರು ಎಂಬ ಕಾರಣದಿಂದ ಇವರ ಈ ಮಾತು ಗಮನ ಸೆಳೆದಿದೆ. 

ಕೋವಿಡ್‌ ಅನ್ನು ನಾವು ಹೀಗೇ ನಿಯಂತ್ರಿಸುತ್ತ ಹೋದರೆ ಅದರ ಭೀಕರತೆ ಕಡಿಮೆಯಾಗಲು ನಾಲ್ಕರಿಂದ ಐದು ವರ್ಷ ಬೇಕಾದೀತು. 1918ರಲ್ಲಿ ಜಗತ್ತನ್ನು ಕಾಡಿದ ಇನ್‌ಫ್ಲುಯೆಂಜಾ ಕಾಯಿಲೆ, ಮೂರು ಅಲೆಗಳಲ್ಲಿ ಬಂದು ಅಪ್ಪಳಿಸಿತ್ತು. ಪ್ರತಿ ಅಲೆಯಲ್ಲೂ ಎರಡು ವರ್ಷ ಕಾಟ ಕೊಟ್ಟಿತ್ತು. ಇದಕ್ಕೂ ಸರಿಯಾದ ಲಸಿಕೆ ಕಂಡುಹಿಡಿದಿಲ್ಲ. 1889ರಲ್ಲಿ ಬಂದ ಫ್ಲೂ ಕಾಯಿಲೆ ಐದು ಅಲೆಗಳಲ್ಲಿ ಬಂದು ಅಪ್ಪಳಿಸಿ 1895ರಲ್ಲಿ ಕಡಿಮೆಯಾಗಿತ್ತು. ಈಗಲೂ ಅದಕ್ಕೆ ಲಸಿಕೆಯಿಲ್ಲ. ಆದರೆ ಇವೆರಡರ ಬಗ್ಗೆ ಮಾನವ ಕುಲಕ್ಕೆ ಒಂದು ಬಗೆಯ ಪ್ರತಿರೋಧ ಶಕ್ತಿ ಉತ್ಪನ್ನವಾಗಿದೆ. ಹೀಗಾಗಿ ಇವುಗಳಿಗೆ ತುತ್ತಾದ ದುರ್ಬಲರು, ವಯಸ್ಕರು ಸಾಯುತ್ತಾರೆ. ಪ್ರಬಲರು ಉಳಿದುಕೊಳ್ಳುತ್ತಾರೆ. ಈಗಲೂ ಹಾಗೇ ಆಗಬೇಕಿದೆ ಎಂಬ ಕಟುಸತ್ಯವನ್ನು ಸೌಮ್ಯ ಬಿಚ್ಚಿಡುತ್ತಾರೆ.

ಎಷ್ಟೇ ಬೇಗ ಕೋವಿಡ್‌ಗೆ ಲಸಿಕೆ ಉತ್ಪಾದಿಸುತ್ತೇವೆ ಎಂದು ಇಟ್ಟುಕೊಂಡರೂ ಒಂದೂವರೆ ವರ್ಷ ಬೇಕು.ಇನ್ನು ಜಗತ್ತಿನ 780 ಕೋಟಿ ಜನತೆಗೆ ಅಷ್ಟೂ ಮಂದಿಗೆ ಲಸಿಕೆ ಹಾಕಲು ಕನಿಷ್ಠ ಒಂದ ವರ್ಷ ಬೇಕು. ಅಲ್ಲಿಗೆ ಎರಡುವರೆ ವರ್ಷ. ಈ ಅವಧಿಯಲ್ಲಿ ರೋಗ ಪ್ರತಿರೋಧ ಶಕ್ತಿ ಇದ್ದವರು, ಬೆಳೆಸಿಕೊಂಡವರು ಉಳಿದುಕೊಳ್ಳುತ್ತಾರೆ.ಬಡ ದೇಶಗಳಿಗೆ ಲಸಿಕೆ ತಲುಪುವುದು ಇನ್ನೂ ತಡವಾಗಬಹುದು.

ಲಾಕ್‌ಡೌನ್‌ ಎಫೆಕ್ಟ್‌: ಇನ್ಮುಂದೆ ಆನ್‌ಲೈನ್‌ನಲ್ಲೇ ದೇವರ ದರ್ಶನ..!

ಇದರ ಬದಲಾಗಿ, ಹರ್ಡ್‌ ಇಮ್ಯುನಿಟಿ ಕಾಯಿಲೆಯನ್ನು ತಡೆಗಟ್ಟುವ ಸುಲಭ ವಿಧಾನ. ಭಾರತದಲ್ಲಿ ನೋಡಿ. ಇಲ್ಲಿನ ಜನಸಂಖ್ಯೆಯ 82 ಶೇಕಡ ಮಂದಿ 50ಕ್ಕಿಂತ ಕಡಿಮೆ ವಯಸ್ಸಿನವರು. ಇವರಲ್ಲಿ ಹೆಚ್ಚಿನವರಿಗೆ ಕೊರೊನಾ ವೈರಸ್‌ ಸೋಂಕಿದರೂ ಯಾವುದೇ ಲಕ್ಷಣಗಳನ್ನೂ ತೋರಿಸದೇ ಹೋಗಬಹುದು. ಇವರಲ್ಲಿ ಸಾಯಬಹುದಾದವರ ಸಂಖ್ಯೆ ಶೇ.0.2%ಕ್ಕಿಂತಲೂ ಕಡಿಮೆ. ಇನ್ನು ಜನಸಂಖ್ಯೆಯ ಶೇ.8 ಮಂದಿ 50ರಿಂಧ 59 ವಯಸ್ಸಿನವರು. ಇವರಲ್ಲಿ ಅಪಾಯದ ಮಟ್ಟ ಶೇ.0.4%. ಇನ್ನು 60 ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಹೆಚ್ಚು ಜಾಗರೂಕತೆಯಿಂದ ಸಂರಕ್ಷಿಸಬೇಕು. ಅವರನ್ನು ಪ್ರತ್ಯೇಕವಾಗಿಡಬೇಕು 60 ವರ್ಷಕ್ಕಿಂತ ಕೆಳಗಿನವರು ಸಹಜ ಬದುಕು ಬದುಕುವಂತೆ ಮಾಡಿದರೆ ಸಹಜವಾಗಿಯೇ ಅವರಲ್ಲಿ ಹರ್ಡ್‌ ಇಮ್ಯುನಿಟಿ ಬೆಳೆಯುತ್ತದೆ. ಇದರಿಂದ ಇಡೀ ಸಮುದಾಯ ಮಾತ್ರವಲ್ಲ ಮುಂದಿನ ಪೀಳಿಗೆಯೂ ಕೊರೊನಾ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತದೆ ಎಂದು ಸೌಮ್ಯ ಪ್ರತಿಪಾದಿಸುತ್ತಾರೆ. 

Fact Check| ಡೊನಾಲ್ಡ್‌ ಟ್ರಂಪ್‌ಗೆ ಕೊರೋನಾ ಸೋಂಕು! 

ಆದರೆ ಭಾರತದಲ್ಲಿ ಇದನ್ನು ಸಾಧಿಸುವುದಕ್ಕೆ ಇರುವ ಸಮಸ್ಯೆ ಎಂದರೆ, ಭಾರತದಲ್ಲಿ ಹೆಚ್ಚಿನ ವೃದ್ಧರು ಅವಿಭಕ್ತ ಕುಟುಂಬಗಳಲ್ಲಿದ್ದಾರೆ ಹಾಗೂ ತಮ್ಮ ಮಕ್ಕಳು ಮೊಮ್ಮಕ್ಕಳ ಜೊತೆ ವಾಸಿಸುತ್ತಿರುತ್ತಾರೆ. ಈ ಕುಟುಂಬಗಳಲ್ಲಿನ ಇತರ ಸದಸ್ಯರು ಮುಕ್ತವಾಗಿ ಓಡಾಡಿ ಕೆಲಸ ಮಾಡಿದರೂ ಕೂಡ ಇವರು ತಮ್ಮ ಮನೆಗಳ ಹಿರಿಯರಿಗೆ ಕಾಯಿಲೆಯನ್ನು ತಂದು ಸೋಕಿಸಬಹುದು. ಅದಕ್ಕಾಗಿಯೇ ಇವರನ್ನು ಪ್ರತ್ಯೇಕವಾಗಿಟ್ಟು ನೋಡಿಕೊಳ್ಳುವ ವ್ಯವಸ್ಥೆ ಇರಬೇಕು ಎಂದು ವಿಜ್ಞಾನಿಗಳು ಹೇಳುತ್ತಾರೆ. 

ಲಾಕ್‌ಡೌನ್‌ನಲ್ಲಿ ಗರಿಗೆದರಿದ ಕರಕುಶಲ ಉದ್ಯಮ 

ಈ ಕಾಯಿಲೆ ನಮ್ಮಲ್ಲಿ ನಾಲ್ಕಾರು ವರ್ಷ ಇರುವುದು ಖಚಿತ. ಸಹಜ ಬದುಕಿನತ್ತ ನಾವು ಹೋಗುವ ಮೂಲಕ ತಕ್ಷಣಕ್ಕೆ ಸಾವಿಗಳ ಸಂಖ್ಯೆ ಸ್ವಲ್ಪ ಜಾಸ್ತಿಯಾಗಬಹುದು. ಆದರೆ ದೀರ್ಘಕಾಲಿಕವಾಗಿ ನಮ್ಮಲ್ಲಿ ರೋಗಪ್ರತಿರೋಧ ಶಕ್ತಿ ಜಾಸ್ತಿಯಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಇವರ ಮಾತು ಕೇಳಿದರೆ ನಿಜವೇನೋ ಅನ್ನಿಸಿಬಿಡುತ್ತದೆ. ಆದರೆ ವಯಸ್ಕರ ಗತಿ ನೆನೆಸಿಕೊಂಡರೆ ಮಾತ್ರ ಭಯವಾಗುತ್ತದೆ.

Latest Videos
Follow Us:
Download App:
  • android
  • ios