ಮಧ್ಯರಾತ್ರಿ ಹಸಿವು ಎಂದು ತಿಂದ್ರೆ ದಪ್ಪ ಆಗ್ತಾರ? ಸಣ್ಣ ಆಗ್ತಾರ?

By Web DeskFirst Published Oct 14, 2019, 1:21 PM IST
Highlights

ಅರ್ಧ ರಾತ್ರಿ. ಗಾಢವಾದ ನಿದ್ದೆ ಕ್ರಮೇಣ ಮಂಪರಾಗಿ ಎಚ್ಚರವಾಗುತ್ತೆ. ಹೊಟ್ಟೆಯೊಳಗೆ ಸಣ್ಣಗೆ ಸಂಕಟ,ಹಸುವು. ಹೊಟ್ಟೆಗೆ ಹಿಟ್ಟು ಬೀಳೋವರೆಗೂ ಬಿಡಲ್ಲ. ಇದಕ್ಕೇನು ಕಾರಣ, ಪರಿಹಾರ ಇದೆಯೋ... 

ಗಾಯತ್ರಿ ಮೂವತ್ತರ ಹರೆಯದ ನವವಧು. ಅರ್ಧ ರಾತ್ರಿ ಅನ್ನೋದು ಆಕೆಗೆ ದುಃಸ್ವಪ್ನ. ಕರೆಕ್ಟಾಗಿ ಅದೇ ಟೈಮ್‌ಗೆ ಎಚ್ಚರಾದರೆ ಬೆಳಗಿನವರೆಗೂ ಹಸಿವಿನಲ್ಲಿ ಒದ್ದಾಟ. ಅತ್ತೆಮನೆಗೆ ಆಗಷ್ಟೇ ಎಂಟ್ರಿಯಾದ ಕಾರಣ ರಾತ್ರಿ ಎದ್ದು ಅಡುಗೆ ಮನೆಗೆ ಹೋಗಲು ಸಂಕೋಚ.

ಕೊನೆಗೆ ಇದಕ್ಕೆ ಪರಿಹಾರವಾಗಿ ಆಕೆ ಬಿಸ್ಕೆಟ್ ಪ್ಯಾಕೆಟ್ ತಂದಿಟ್ಟಕೊಳ್ಳಲಾರಂಭಿಸಿದಳು. ಪರಿಣಾಮ ಮೈ ಊದಿಕೊಳ್ಳಲಾರಂಭಿಸಿತು.  ಈ ಸಮಸ್ಯೆ ನಮ್ಮಲ್ಲಿ ಹಲವರಿಗಿದೆ. ಕೆಲವರು ಈಗಿನ ಡಯೆಟ್‌ನ ಸಿದ್ಧ ಸೂತ್ರವಾದ ರಾತ್ರಿ ಏಳರ ಮೊದಲೇ ಊಟ ಮುಗಿಸಬೇಕು ಅನ್ನುವ ಪಾಲಿಸಿಯನ್ನು ಫಾಲೋ ಮಾಡುವ ಕಾರಣ ಅರಿವಿಲ್ಲದೇ ಈ ಅರ್ಧರಾತ್ರಿಯ ಸಂಕಟಕ್ಕೆ ತುತ್ತಾಗುತ್ತಾರೆ.

ಹಲ್ಲುಗಳಿಗೆ ಬ್ಯಾಟರಿ ಆ್ಯಸಿಡ್‌ನಷ್ಟೇ ಕ್ರೂರ ಹುಳಿ ಕ್ಯಾಂಡಿಗಳು !

ಇನ್ನೂ ಕೆಲವರಿಗೆ ಪೌಷ್ಠಿಕಾಂಶದ ಕೊರತೆಯಿಂದ ಮಧ್ಯರಾತ್ರಿಯ ಹಸಿವು ಕಾಣಿಸಿಕೊಳ್ಳುತ್ತೆ. ಹೀಗಾದಾಗ ನಿದ್ರೆ ಹಾಳಾಗೋದರ ಜೊತೆಗೆ ಸಿಕ್ಕಿದ್ದೆಲ್ಲ ತಿನ್ನೋ ಕಾರಣ ತೂಕ ಹೆಚ್ಚಾಗುವ ತಲೆನೋವೂ ಇದೆ. ಜೊತೆಗೆ ಈ ಸಮಯದಲ್ಲಿ ಎದ್ದು ಲೈಟ್ ಹಾಕಿ ಉಳಿದವರ ನಿದ್ದೆ ಕೆಡಿಸಿದ್ದಕ್ಕೆ ಉಗಿಸಿಕೊಳ್ಳುವ ಕಷ್ಟವೂ ಇದೆ.

ಹಸಿವಿನಿಂದ ಪಾರಾಗೋದು ಹೇಗೆ?

-  ರಾತ್ರಿ ಹೊತ್ತು ತಿನ್ನೋದರಿಂದ ಬೊಜ್ಜು ಬರುತ್ತೆ ಅನ್ನೋದು ತಪ್ಪು ಕಲ್ಪನೆ. ಹಾಗೇನೂ ಆಗಲ್ಲ ಅಂತ ಇತ್ತೀಚಿನ ಸಂಶೋಧನೆಯಿಂದ ಪ್ರೂವ್ ಆಗಿದೆ. ಹಾಗಾಗಿ ಏಳುಗಂಟೆಯ ಬಳಿಕ ತಿನ್ನಲ್ಲ ಅನ್ನುವ ಶಪಥ ಸಡಿಲಿಸಿ.

ಆರೋಗ್ಯಕರವಾಗಿರಲಿ ಮಕ್ಕಳ ಡಯಟ್‌, ದೂರವಿರಲಿ ಬ್ರೆಡ್ ಬಿಸ್ಕೇಟ್ ಡೋನಟ್!

-  ರಾತ್ರಿ ಪೌಷ್ಠಿಕಾಂಶ ಇರುವ ಆಹಾರ ಸೇವಿಸಿ. ಡ್ರೈಫ್ರುಟ್ಸ್, ತರಕಾರಿ ತಿಂದರೆ ಬೊಜ್ಜೂ ಬರಲ್ಲ, ನಿದ್ರಾಭಂಗವಾಗಲ್ಲ.

-  ಸಂಜೆ ಚೆನ್ನಾಗಿ ಎಕ್ಸರ್‌ಸೈಸ್ ಅಥವಾ ಬ್ರಿಸ್ಕ್‌ವಾಕ್ ಮಾಡಿ. ಆಮೇಲೆ ಊಟ ಮಾಡಿ. ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಿರಿ.

 

click me!