
ನಿಮಗೆ ಗೊತ್ತಾ, ಬಹಳ ಹೆಲ್ತ್ ಕಾನ್ಷಿಯಸ್ ಆಗಿರುವ ಜೀವನಶೈಲಿ ಹಾಗೂ ಹೈ ಪ್ರೋಟೀನ್ ಡಯಟ್ ಹೊಂದಿರುವ ಮಹಿಳೆಯು ಇತರೆ ಮಹಿಳೆಯರಿಗಿಂತ ಬಹುಬೇಗ ಗರ್ಭ ಧರಿಸಬಲ್ಲರು. ಅಂದರೆ, ಮನುಷ್ಯನ ಫಲವತ್ತತೆ ಮೇಲೆ ಆತನ ಆಹಾರಶೈಲಿ ದೊಡ್ಡ ಪರಿಣಾಮ ಹೊಂದಿದೆ. ಇದರೊಂದಿಗೆ ಗಂಡ ಹೆಂಡತಿ ಇಬ್ಬರ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಿದ್ದರೆ ಮಗು ಹೆರುವುದು ಸುಲಭದ ವಿಷಯ.
ಸೆಕ್ಸ್ ಸಾಮರ್ಥ್ಯ ಹೆಚ್ಚಿಸಲು ಈರುಳ್ಳಿ ಮದ್ದು
ಮಗು ಬೇಕೆಂದು ಬಯಸುವ ದಂಪತಿ ಉತ್ತಮ ಜೀವನಶೈಲಿ ಜೊತೆಗೆ, ಒಳ್ಳೆಯ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ನೀವು ಹಾಗೆ ಮಗುವಿಗೆ ಪ್ಲ್ಯಾನ್ ಮಾಡುತ್ತಿದ್ದರೆ ಅದಕ್ಕೆ ಬೇಕಾದ ಡಯಟ್ ಚಾರ್ಟ್ ಇಲ್ಲಿದೆ.
ಫೋಲಿಕ್ ಆಸಿಡ್; ಪ್ರತಿದಿನ ಫೋಲಿಕ್ ಆ್ಯಸಿಡ್ ಸೇವನೆಯಿಂದ ಮಗುವಿಗೆ ಯಾವುದೇ ಗಂಭೀರ ಮೆದುಳು ಹಾಗೂ ಬೆನ್ನುಹುರಿ ಸಮಸ್ಯೆ ಹುಟ್ಟುವಾಗ ಇರಲಾರದು. ಮೆದುಳಿನ ಉತ್ತಮ ಬೆಳವಣಿಗೆಗಾಗಿ ಫೋಲಿಕ್ ಆ್ಯಸಿಡ್ ಆಗತ್ಯ. ಹಾಗಾಗಿ ಫೋಲಿಕ್ ಆ್ಯಸಿಡ್ ಹೆಚ್ಚಾಗಿರುವ ಪಾಲಕ್ ಸೊಪ್ಪು, ಸಿಟ್ರಸ್ ಹಣ್ಣುಗಳು, ಬೀನ್ಸ್, ಅಕ್ಕಿ ಹೆಚ್ಚಾಗಿ ಸೇವಿಸಿರಿ.
ಐರನ್: ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿದ್ದರೆ ಅದು ಫಲವತ್ತತೆ ಹೆಚ್ಚಿಸುತ್ತದೆ. ಹಾಗಾಗಿ ಐರನ್ ರಿಚ್ ಆಹಾರ ಹೆಚ್ಚಾಗಿ ಸೇವಿಸಿ. ಮಹಿಳೆಯರಿಗೆ ದಿನಕ್ಕೆ ಸುಮಾರು 18 ಎಂಜಿ ಐರನ್ ಬೇಕು. ಅದರಲ್ಲೂ ಗರ್ಭಿಣಿಯರಿಗೆ ದಿನಕ್ಕೆ 27 ಎಂಜಿ ಐರನ್ ಬೇಕು. ಸೊಪ್ಪುಗಳು, ಬೆಲ್ಲ, ಮಾಂಸ, ಬೀನ್ಸ್, ಬಟಾಣಿ, ಕಾಳುಗಳು, ಡ್ರೈಫ್ರೂಟ್ಸ್, ಅಣಬೆ, ತರಕಾರಿಗಳಲ್ಲಿ ಐರನ್ ಹೆಚ್ಚಾಗಿರುತ್ತದೆ.
ಸಂತಾನೋತ್ಪತ್ತಿ ಮೇಲೆ ವಯಸ್ಸಿನ ಪರಿಣಾಮ ಮತ್ತು ಪರಿಹಾರ!
ಫಿಶ್:
ಪ್ರಗ್ನೆನ್ಸಿ ಹಾಗೂ ಅದಕ್ಕೂ ಮುನ್ನಿನ ಹಂತಗಳಲ್ಲಿ ಮೀನಿನ ಸೇವನೆ ಮಾಡಿದರೆ ಮರ್ಕ್ಯುರಿ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯ.
ಕೆಫಿನ್: ಕೆಫಿನ್ ಸೇವನೆ ಹೆಚ್ಚಾದರೆ ಅದು ಫಲವತ್ತತೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಒಂದು ವೇಳೆ ಗರ್ಭ ಕಟ್ಟಿದ್ದರೂ ಅಬಾರ್ಶನ್ ಆಗುವ ಸಾಧ್ಯತೆಗಳಿವೆ. ಹಾಗಾಗಿ, ಕಾಫಿ, ಟೀ ಸೇವನೆ ಮಿತಿಗೊಳಿಸಿ.
ಹ್ರೈಡ್ರೇಟ್: ಆಲ್ಕೋಹಾಲ್ ಅಥವಾ ಕಾರ್ಬೋನೇಟೆಡ್ ಬೇವರೇಜ್‌ಗಳನ್ನು ಸಂಪೂರ್ಣ ಬಿಟ್ಟುಬಿಡಿ. ಬದಲಿಗೆ ಪದೇ ಪದೆ ನೀರು, ಹಣ್ಣಿನ ತಾಜಾ ಜ್ಯೂಸ್‌ಗಳು, ಲೋ ಫ್ಯಾಟ್ ಡೈರಿ ಬಹಳ ಪ್ರಯೋಜನಕಾರಿ.
ಝಿಂಕ್: ಝಿಂಕ್ ಒತ್ತಡವನ್ನು ಕಡಿಮೆ ಮಾಡಿ ವೀರ್ಯದ ಸಂಖ್ಯೆ ಹೆಚ್ಚಿಸುತ್ತದೆ. ಆ ಮೂಲಕ ಪುರುಷರಲ್ಲಿ ಫರ್ಟಿಲಿಟಿ ಹೆಚ್ಚಿಸುತ್ತದೆ. ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ಬೇಳೆಕಾಳುಗಳು, ಡಾರ್ಕ್ ಚಾಕೋಲೇಟ್‌ನಲ್ಲಿ ಝಿಂಕ್ ಹೆಚ್ಚಾಗಿರುತ್ತದೆ.
ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!
ಫೋಲೇಟ್: ಬ್ರೊಕೋಲಿ, ಪಾಲಕ್, ಬೀನ್ಸ್ ಹಾಗೂ ಬೇಳೆಗಳಲ್ಲಿ ಫೋಲೇಟ್ ಅಧಿಕವಾಗಿರುತ್ತದೆ. ಈ ಮಿನರಲ್ ಪುರುಷರಲ್ಲಿ ಫರ್ಟಿಲಿಟಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕ್ಯಾಲ್ಶಿಯಂ: ವೀರ್ಯದ ಚಲನಶೀಲತೆ ಹೆಚ್ಚಿಸಲು ಕ್ಯಾಲ್ಶಿಯಂ ರಿಚ್ ಆಹಾರ ಅಗತ್ಯ. ಹಾಲು, ಮೊಸರು, ಡ್ರೈಫ್ರೂಟ್ಸ್, ಕಾಳುಗಳಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿರುತ್ತದೆ.
ಇನ್ನು ಮಕ್ಕಳನ್ನು ಬಯಸುವ ಪೋಷಕರು ಉತ್ತಮ ಬಾಡಿ ಇಂಡೆಕ್ಸ್ ಮಾಸ್ ನಿಭಾಯಿಸುವುದು ಅಗತ್ಯ. ಸಾಮಾನ್ಯವಾಗಿ 20ರಿಂದ 25ರ ನಡುವೆ ಬಿಎಂಐ ಇದ್ದರೆ ಒಳ್ಳೆಯದು. ಎತ್ತರಕ್ಕೆ ಸರಿಯಾದ ತೂಕ ಮ್ಯಾಚ್ ಆಗಲಿಲ್ಲವೆಂದರೆ ಟೆಸ್ಟೆಸ್ಟೆರೋನ್ ಕಡಿಮೆಯಾಗುತ್ತದೆ. ಇದರಿಂದ ಫಲವತ್ತತೆ ಕಡಿಮೆಯಾಗುತ್ತದೆ. ಜೊತೆಗೆ, ಮಹಿಳೆಯರಲ್ಲಿ ಎಂಬ್ರಿಯೋ ಇಂಪ್ಲ್ಯಾಂಟ್ ಆಗಲು ಕೂಡಾ ಇದರಿಂದ ಸಮಸ್ಯೆಯಾಗುತ್ತದೆ.
ಈ ಆ್ಯಂಟಿ ಆಕ್ಸಿಡೆಂಟ್ ರಿಚ್ ಆಹಾರದೊಂದಿಗೆ ವಿಟಮಿನ್ ಡಿ ಸೇವನೆ ಕೂಡಾ ಅತ್ಯಗತ್ಯ. ಕಿತ್ತಳೆ ಹಣ್ಣು, ಪಾಲಕ್, ಬೀಟ್‌ರೂಟ್, ಬ್ರೋಕೋಲಿ, ವಾಲ್‌ನಟ್, ಪಿಸ್ತಾ ಹಾಗೂ ಬಾರ್ಲಿಯ ಸೇವನೆ ಹೆಚ್ಚಿಸಿ. ಜೊತೆಗೆ ಬೆಳಗಿನ ಹಾಗೂ ಸಂಜೆಯ ಸೂರ್ಯನ ಕಿರಣಗಳು ಮೈಮೇಲೆ ಬೀಳುವಂತೆ ನೋಡಿಕೊಳ್ಳಿ.
ಇದರೊಂದಿಗೆ ಸರಿಯಾದ ಸಮಯಕ್ಕೆ ಸರಿಯಾದ ಹದದಲ್ಲಿ ಊಟತಿಂಡಿ ಮಾಡುವುದು ಕೂಡಾ ಅಷ್ಟೇ ಪರಿಣಾಮ ಬೀರುತ್ತದೆ. ಊಟ ಬಿಡುವುದು, ಬಹಳ ಹೊತ್ತು ಹೊಟ್ಟೆಯನ್ನು ಖಾಲಿ ಬಿಡುವುದು ಕೂಡಾ ಮಹಿಳೆಯರಲ್ಲಿ ಫಲವತ್ತತೆ ಸಂಬಂಧ ಸಮಸ್ಯೆ ತರುತ್ತದೆ.
ವ್ಯಾಯಾಮ
ನಿಯಂತ್ರಿತ ಹಾಗೂ ಸಮತೋಲಿತ ಆಹಾರದೊಂದಿಗೆ ದೈಹಿಕವಾಗಿ ಚಟುವಟಿಕೆಯಿಂದಿರುವುದು, ಪ್ರತಿದಿನ ವ್ಯಾಯಾಮ ಮಾಡುವುದು ಕೂಡಾ ಫರ್ಟಿಲಿಟಿ ಹೆಚ್ಚಿಸುತ್ತದೆ. ವಾರಕ್ಕೆ ಆರು ಗಂಟೆಗಳ ಕಾಲ ಹಗುರ ಏರೋಬಿಕ್ಸ್ ಮಾಡುವುದು ಉತ್ತಮ. ಅತಿಯಾದ ವರ್ಕೌಟ್ ಮಹಿಳೆಯ ದೇಹದ ಫ್ಯಾಟ್ ಪೂರ್ತಿ ಕರಗಿಸಿ ರಿಪ್ರೊಡಕ್ಟಿವ್ ಹಾರ್ಮೋನ್ ಸರಿಯಾಗಿ ಕೆಲಸ ಮಾಡದಂತೆ ನೋಡಿಕೊಳ್ಳುತ್ತದೆ. ಅತಿಯಾದ ಬಾಡಿ ಫ್ಯಾಟ್ ಇದ್ದಾಗಲೂ ಹೀಗೆಯೇ ಆಗಬಹುದು. ಹಾಗಾಗಿ ದೇಹದ ತೂಕ ನಿಯಂತ್ರಿಸುವ ಅಗತ್ಯ ಇದೆ.
ಚಟಗಳು
ಪುರುಷರು ನಿಕೋಟಿನ್ ಸೇವನೆ ಕಡಿಮೆ ಮಾಡಬೇಕು, ಸಂಪೂರ್ಣ ತ್ಯಜಿಸಿದರೆ ಉತ್ತಮ. ನಿಕೋಟಿನ್, ಆಲ್ಕೋಹಾಲ್, ಡ್ರಗ್ ಸೇವನೆಯಿಂದಾಗಿ ವೀರ್ಯದ ಸಂಖ್ಯೆ ಇಳಿಕೆಯಾಗುತ್ತದೆ. ಜೊತೆಗೆ, ಬೇರೆ ರೀತಿಯ ಲೈಂಗಿಕ ಸಮಸ್ಯೆಗಳೂ ಶುರುವಾಗುತ್ತವೆ. ಒಂದು ವೇಳೆ ಎಲ್ಲ ಸರಿಯಾಗಿದ್ದರೆ ಹುಟ್ಟಿದ ಮಗುವಿನಲ್ಲಿ ಕೆಲ ಸಮಸ್ಯೆಗಳು ತಲೆದೋರಬಹುದು. ಹೀಗಾಗಿ, ತಂದೆತಾಯಿಯಾಗ ಬಯಸುವವರು ಚಟಮುಕ್ತರಾಗಿರುವುದು ಅವಶ್ಯಕ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.