ಮಕ್ಕಳ ಆಹಾರ ಸರಿಯಾಗಿದೆಯೇ, ಅವರಿಗೆ ಪೋಷಕಸತ್ವಗಳು ಸರಿಯಾಗಿ ದೊರೆಯುತ್ತಿದೆಯೇ ಎಂದು ಬಹುತೇಕ ಪೋಷಕರಿಗೆ ಆಗಾಗ ಚಿಂತೆಯಾಗುತ್ತಲೇ ಇರುತ್ತದೆ. ಮಕ್ಕಳ ಚಟುವಟಿಕೆ ಹೆಚ್ಚುತ್ತಾ ಹೋದಂತೆಲ್ಲ ಏನಪ್ಪಾ ತಿನ್ನಲು ಕೊಡುವುದು, ವಿಟಮಿನ್‌ ಕಡಿಮೆಯಾಗುತ್ತಿದೆಯೋ ಏನೋ, ಕ್ಯಾಲ್ಶಿಯಂ ಸರಿಯಾಗಿ ಸಿಗುತ್ತಿದೆಯೇ ಎಂದೆಲ್ಲ ಅಮ್ಮಂದಿರು ಯೋಚಿಸುವುದುಂಟು.

ಜೇನುತುಪ್ಪ ನಾಲಿಗೆಗಷ್ಟೇ ಅಲ್ಲ, ತ್ವಚೆಗೂ ಸಿಹಿ!

ಅದರಲ್ಲೂ ಅತ್ತೆ, ಅಮ್ಮ, ದೊಡ್ಡಮ್ಮರ ಅನುಭವ ಕಥನಗಳು, ಹೇರಿಕೆಗಳು ಸಾಲದೆಂಬಂತೆ ಜಾಹಿರಾತುಗಳು, ಲೇಖನಗಳು ಎಲ್ಲ ಕಲಸುಮೇಲೋಗರವಾಗಿ ಎಷ್ಟು ಕೊಟ್ಟರೂ ಕಡಿಮೆ, ಏನು ಕೊಟ್ಟರೂ ಆತಂಕ ಎಂಬಂತಾಗುತ್ತದೆ. ಅದಕ್ಕೇ ಹೇಳುವುದು ಇಗ್ನೋರೆನ್ಸ್ ಈಸ್ ಬ್ಲಿಸ್ ಅಂತ. ಮಕ್ಕಳ ಒಟ್ಟಾರೆ ಆರೋಗ್ಯಕ್ಕಾಗಿ ಹೇಗಿರಬೇಕು ಆಹಾರ ಎಂದು ಸರಳವಾಗಿ ಇಲ್ಲಿ ಕೊಡಲಾಗಿದೆ ನೋಡಿ.

ತಿಂಡಿ

ಮಗುವಿನ ಬೆಳಗಿನ ಮೊದಲ ಆಹಾರ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್ ಹಾಗೂ ಬಹುತೇಕ ಪೋಷಕಸತ್ವಗಳನ್ನು ಹೊಂದಿರಬೇಕು. ಯಾವುದೋ ಪ್ಯಾಕೆಟ್‌ನಿಂದ ಕೊಡುವ ತಿಂಡಿಗೆ ಮನೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ. ಸೆರೀಲ್ಸ್, ಟೆಟ್ರಾ ಪ್ಯಾಕ್ ಜ್ಯೂಸ್‌, ಕಾರ್ನ್ ಫ್ಲೇಕ್ಸ್, ನೂಡಲ್ಸ್, ಪ್ರೊಸೆಸ್ಡ್ ಬ್ರೆಡ್ ಬಿಸ್ಕೆಟ್‌ಗಳನ್ನೆಲ್ಲ ಎಂದಾದರೂ ನಿಮ್ಮ ಅಮ್ಮ, ಅಜ್ಜಿ ಎಲ್ಲ ತಿಂಡಿ ಎಂದು ನೀಡಿದ್ದಾರೆಯೇ? ಅವೇನಿದ್ದರೂ ಅಪರೂಪಕ್ಕೆ ಬಾಯಾಡಿಸಲು ಅಷ್ಟೇ.

ಕೇಸರಿಗೇಕೆ ಇಷ್ಟು ಬೆಲೆ? ಆರೋಗ್ಯಕ್ಕೇಕೆ ಬೇಕಿದು?

ತಿಂಡಿಗೆ ಯಾವಾಗಲೂ ಇಡ್ಲಿ, ದೋಸೆ, ಚಪಾತಿ, ರೊಟ್ಟಿ, ಉಪ್ಪಿಟ್ಟು, ಶಾವಿಗೆ ಮುಂತಾದ ಮನೆಯಲ್ಲೇ ಆಗಷ್ಟೇ ತಯಾರಿಸಿದ ಆಹಾರವೇ ಇರಬೇಕು. ಮನೆಯಲ್ಲೇ ಹಿಟ್ಟನ್ನು ಕೂಡಾ ತಯಾರಿಸಿರಬೇಕು. ಇದನ್ನೇ ಬಾಕ್ಸ್‌ಗೆ ಕೂಡಾ ಹಾಕಿ ಕಳುಹಿಸಬಹುದು. ಸೈಡ್ಸ್‌ಗೆ ಕಾಳಿನ ಪಲ್ಯ, ಸಾಂಬಾರ್, ಚಟ್ನಿ ಇತ್ಯಾದಿಗಳಿದ್ದರೆ ಮಧ್ಯೆ ಮಧ್ಯೆ ಹಸಿವಾಗುವುದೂ ಇಲ್ಲ, ನ್ಯೂಟ್ರಿಶನ್ ಕೊರತೆಯಾಗುವುದೂ ಇಲ್ಲ. ಇನ್ನು ಸ್ನ್ಯಾಕ್ಸ್ ಬೇಕೆಂದರೆ ಹಣ್ಣು ಕತ್ತರಿಸಿ ಕೊಡಬಹುದು. ಇನ್ನು ಬ್ರೇಕ್‌ಫಾಸ್ಟ್ ಬಿಸ್ಕೇಟ್ಸ್, ಎನರ್ಜಿ ಬಾರ್‌ಗಳಿಗೆ ಬೈಬೈ ಹೇಳಿ ಕಾಳುಗಳಿಂದ ಲಡ್ಡು, ಉಂಡೆ ತಯಾರಿಸಿ. 

ಮಲ್ಟಿವಿಟಮಿನ್ಸ್ ಹಾಗೂ ಹೆಲ್ತ್ ಡ್ರಿಂಕ್ಸ್

ನಿಮ್ಮ ಮಕ್ಕಳು ಟಾಲರ್, ಶಾರ್ಪರ್, ಸ್ಮಾರ್ಟರ್ ಹಾಗೂ ಆರೋಗ್ಯವಂತರಾಗಲು ನೀವು ಮಾಡಬೇಕಾದುದಿಷ್ಟೇ, ಮೊದಲು ಆ ಮಲ್ಟಿವಿಟಮಿನ್ ಹಾಗೂ ಹೆಲ್ತ್ ಡ್ರಿಂಕ್ಸ್‌ಗಳನ್ನು ಕೊಡುವುದು ನಿಲ್ಲಿಸಿ. ಮಾರ್ಕೆಟಿಂಗ್ ಜಗತ್ತಿನ ಮೋಸಗಳಿಗೆ ತಕ್ಕಂತೆ ಕುಣಿಯಬೇಡಿ. ಬದಲಿಗೆ ಮನೆಯಲ್ಲೇ ಡ್ರೈ ಫ್ರೂಟ್ ಪೌಡರ್ ಮಾಡಿಟ್ಟುಕೊಳ್ಳಬಹುದು. ಇದರಲ್ಲೇ ಹೆಲ್ತ್ ಡ್ರಿಂಕ್ ತಯಾರಿಸಬಹುದು. ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಇದೆ. ಅಂದ ಮೇಲೆ ಹೊರ ಹೋಗುವಾಗ ಮಕ್ಕಳೊಂದಿಗೆ ವಾಕ್ ಮಾಡಿ. 

ಸ್ನಾನ ಮಾಡಿದ್ರೆ ಉಲ್ಬಣವಾಗುತ್ತಾ ಜ್ವರ?

ಹಾಲು

ನನ್ನ ಮಗ ಹಾಲು ಕುಡಿಯುವುದೇ ಇಲ್ಲ ಎಂಬುದು ನಿಮ್ಮ ದೂರಾಗಿದ್ದರೆ, ಪರವಾಗಿಲ್ಲ ಬಿಡಿ. ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕಾಗಿ ಹಾಲು ಕುಡಿಯಲೇಬೇಕೆಂಬ ಯಾವ ನಿಯಮವೂ ಇಲ್ಲ. ರಾಗಿ, ಮಿಲೆಟ್ಸ್, ಬೆಲ್ಲ, ಬಾದಾಮಿ, ಕರ್ಜೂರ, ದಾಲ್, ಮೊಟ್ಟೆ ಮುಂತಾದವನ್ನು ಕೂಡಾ ಕೊಡಬಹುದು. 

ಆಹಾರದ ಕುರಿತ ಮೂಢನಂಬಿಕೆ

ಕಾಸ್ಟ್ಲಿಯಾಗಿದ್ದೆಲ್ಲ ಹೆಲ್ದೀ ಎಂದು ಸರಾಗವಾಗಿ ನಂಬಿಬಿಡುತ್ತೇವೆ ನಾವು. ನಮ್ಮ ಈ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ರೇಟ್ ಫಿಕ್ಸ್ ಮಾಡುತ್ತವೆ ಕಂಪನಿಗಳು. ಕಿವಿ, ದ್ರಾಕ್ಷಿಯಲ್ಲಿರುವುದಕ್ಕಿಂತಾ ಹೆಚ್ಚು ವಿಟಮಿನ್ ಸಿ ನೆಲ್ಲಕಾಯಿ, ನಿಂಬೆಯಲ್ಲಿದೆ. ಓಟ್ಸ್‌ಗಿಂತ ಮಿಲೆಟ್ಸ್ ಉತ್ತಮ. ಹಾಗಾಗಿ, ಇನ್ನಾದರೂ ಕಡಿಮೆ ರೇಟಿನ ಆಹಾರದಲ್ಲಿ ಕಡಿಮೆ ಸತ್ವಗಳಿರುತ್ತವೆ ಎಂದು ತಿಳಿಯುವ ಮನಸ್ಥಿತಿಯಿಂದ ಹೊರಬನ್ನಿ. ಜಗತ್ತಿನ ಎಲ್ಲ ರುಚಿಗಲನ್ನೂ ಟ್ರೈ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಮಕ್ಕಳ ಆರೋಗ್ಯದ ವಿಷಯದಲ್ಲಿ ಪ್ರಯೋಗ ಬೇಡ. ಅವರಿಗೆ ಎಲ್ಲವೂ ಹೋಂಮೇಡ್ ಜೊತೆಗೆ ದೇಸಿ ಆಹಾರಗಳನ್ನೇ ನೀಡಿ.

ಆಹಾರದ ಮಟ್ಟ

ನಾಲಿಗೆ ಕುಲ ಹೇಳಿದ್ರೆ, ಅದರ ಬಣ್ಣ ಆರೋಗ್ಯ ಹೇಳುತ್ತೆ!

ಅಯ್ಯೋ ಇವತ್ತು ಒಂದೇ ರೊಟ್ಟಿ ತಿಂದಿದ್ದು, ಬರೀ ಬಾಳೆಹಣ್ಣು ತಿಂದು ಶಾಲೆಗೆ ಹೋಗಿದಾನೆ ಎಂದೆಲ್ಲ ಕೊರಗುವುದನ್ನು ಮೊದಲು ಬಿಡಿ. ಮಕ್ಕಳು ಒಂದೊಂದು ದಿನ ಕಡಿಮೆ ತಿಂದರೆ ಏನೂ ಆಗುವುದಿಲ್ಲ. ಅಲ್ಲದೆ, ಅವಕ್ಕೆ ಹಸಿವಾಗುತ್ತಲೇ ಏನನ್ನಾದರೂ ತಿನ್ನಲರಸಿಕೊಂಡು ಬಂದೇ ಬರುತ್ತವೆ. ಹಾಗಾಗಿ, ಮಕ್ಕಳ ಗಂಟಲಿಗೆ ಒತ್ತಾಯದಿಂದ ಆಹಾರ ತುರುಕುವುದನ್ನು ಬಿಡಿ. ಹೀಗೆ ಒತ್ತಾಯದಿಂದ ತುಂಬಿದ್ದನ್ನು ದೇಹ ಒಪ್ಪಿಕೊಳ್ಳುವುದಿಲ್ಲ.

ಮಕ್ಕಳು ಖುಷಿಯಾಗಿ ತಿಂದದ್ದಷ್ಟೇ ದಕ್ಕುವುದು. ಇನ್ನು ಅವು ಊಟ ಮಾಡಲಿಲ್ಲವೆಂದು ಜಂಕ್ ಕೊಟ್ಟು ಹೊಟ್ಟೆ ತುಂಬಿಸಲು ನೋಡಬೇಡಿ. ಪ್ರತಿ ದಿನ ಒಂದೇ ಸಮಯಕ್ಕೆ ಊಟ ತಿಂಡಿ ಅಭ್ಯಾಸ ಮಾಡಿಸಿ. ಜೊತೆಗೆ ನೆಲದ ಮೇಲೆ ಕುಳಿತು ಚಕ್ಕಳಮಕ್ಕಳ ಹಾಕಿ ಕುಳಿತು ಕೈಯಿಂದ ತಿನ್ನುವ ಅಭ್ಯಾಸ ಉತ್ತಮ. ಈ ಸಂದರ್ಭದಲ್ಲಿ ಗ್ಯಾಜೆಟ್ಸ್, ಟಿವಿಯಿಂದ ಮಕ್ಕಳನ್ನು ದೂರವಿಡಿ. ಊಟವಾದ ಮೇಲೆ ಕೂಡಾ ಟಿವಿ ಟೈಂ ಇಲ್ಲದಿದ್ದರೆ ಜೀರ್ಣವೂ ಚೆನ್ನಾಗಾಗುತ್ತದೆ, ನಿದ್ರೆಯೂ ಚೆನ್ನಾಗಿ ಬರುತ್ತದೆ.