ಬಿಸಿಲಲ್ಲಿ ಹೋಗ್ಬೇಕಾಗಿಲ್ಲ, ಟೆನ್ಶನ್ (Tension) ಆಗ್ಬೇಕಿಲ್ಲ. ಆದ್ರೂ ಮುಖ ಹಾಗೂ ತಲೆ ವಿಪರೀತ ಬೆವರು (Sweat) ತ್ತದೆ. ಈ ಸಮಸ್ಯೆಯನ್ನು ಹಲವರು ಅನುಭವಿಸುತ್ತಾರೆ. ಮುಜುಗರವನ್ನೂ ಅನುಭವಿಸುತ್ತಾರೆ. ಈ ಸಮಸ್ಯೆ (Problem)ಯನ್ನು ಹೋಗಲಾಡಿಸುವುದು ಹೇಗೆ ?
ಬೆವರುವುದು (Sweating) ದೇಹದಲ್ಲಿ ಕಂಡು ಬರುವ ಸಾಮಾನ್ಯ ಪ್ರಕ್ರಿಯೆ.ಆದರೆ ಕೆಲವರಲ್ಲಿ ಅತಿಯಾಗಿ ಬೆವರುವ ಸಮಸ್ಯೆ ಇರುತ್ತದೆ. ಅದರಲ್ಲೂ ಕೆಲವೊಬ್ಬರಲ್ಲಿ ಕಂಕುಳು ಅತಿಯಾಗಿ ಬೆವರುವುದು, ಕೈ ಅತಿಯಾಗಿ ಬೆವರುವುದು, ಮುಖ (Face) ಹೆಚ್ಚು ಬೆವರುವ ಸಮಸ್ಯೆ ಕಂಡು ಬರುತ್ತದೆ. ಈ ರೀತಿ ಬೆವರುವುದರಿಂದ ಮುಜುಗರಕ್ಕೂ ಒಳಗಾಗಬೇಕಾಗುತ್ತದೆ. ಅದರಲ್ಲೂ ಮುಖದಲ್ಲಿ ಅತಿಯಾಗಿ ಬೆವರುವ ಸಮಸ್ಯೆ ಅಂಥವರು ಸಾರ್ವಜನಿಕವಾಗಿ ಬೆರೆಯಲು ಹಿಂಜರಿಯುವಂತೆ ಮಾಡುತ್ತದೆ.
ದೇಹವು ಸ್ವತಃ ತಣ್ಣಗಾಗಲು ತಾಪಮಾನ ನಿಯಂತ್ರಣದ ಒಂದು ರೂಪವಾಗಿ ಬೆವರನ್ನು ಬಳಸುತ್ತದೆ. ಆದರೆ ಅತಿಯಾದ ಬೆವರುವಿಕೆ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಬೆವರುವಿಕೆಯನ್ನು ವೈದ್ಯಕೀಯವಾಗಿ ಹೈಪರ್ಹೈಡ್ರೋಸಿಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಬಿಸಿಲಿನಲ್ಲಿ ಹೆಚ್ಚು ಓಡಾಡುವಾಗ, ಗಾಬರಿ, ಆತಂಕ ಉಂಟಾದಾಗ, ಹೆಚ್ಚು ವ್ಯಾಯಾಮ ಮಾಡಿದಾಗ ಬೆವರುವುದು ಸಹಜ. ಆದರೆ ಈ ರೀತಿ ಮುಖ, ತಲೆಯಲ್ಲಿ ಬೆವರುವುದು ನಮ್ಮ ಆತ್ಮವಿಶ್ವಾಸವನ್ನು ಕಡಿಮೆಗೊಳಿಸಬಹುದು.
ಅಂಗೈ, ಪಾದದಲ್ಲಿ ಸಿಕ್ಕಾಪಟ್ಟೆ ಬೆವರು: ಮನೆಯಲ್ಲೇ ಇದೆ ಮದ್ದು!
ಸ್ಕಿನ್‌ಕ್ರಾಫ್ಟ್ ಲ್ಯಾಬ್ಸ್‌ನ ಮುಖ್ಯಸ್ಥ ಡಾ.ಕೌಸ್ತವ್ ಗುಹಾ ಹೇಳುವ ಪ್ರಕಾರ, ಹಲವರಲ್ಲಿ ಅತಿಯಾಗಿ ಮುಖ ಹಾಗೂ ತಲೆ (Head) ಬೆವರುವ ಸಮಸ್ಯೆ ಇರುತ್ತದೆ. ಬೆವರುವುದು ಸಾಮಾನ್ಯವಾಗಿ ಉತ್ತಮವಲ್ಲದ ಅನುಭವವಾಗಿದ್ದರೂ, ಸಾಮಾನ್ಯ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬೆವರುವುದು ಅತ್ಯಗತ್ಯ. ಆದರೆ, ನೀವು ಅತಿಯಾದ ಬೆವರುವಿಕೆಯ ಪ್ರವೃತ್ತಿಯನ್ನು ಹೊಂದಿದ್ದರೆ, ಹೈಪರ್ಹೈಡ್ರೋಸಿಸ್ ಮೂಲ ಕಾರಣವಾಗಿರಬಹುದು ಎಂದು ಹೇಳುತ್ತಾರೆ.
ಡಾ.ಕೌಸ್ತವ್ ಗುಹಾ ಹೇಳುವಂತೆ, ಬೆವರುವ ಮುಖ ಮತ್ತು ತಲೆಯು ಕ್ರೇನಿಯೊಫೇಶಿಯಲ್ ಹೈಪರ್ಹೈಡ್ರೋಸಿಸ್‌ನ್ನು ಅರ್ಥೈಸಬಲ್ಲದು. ನಿಮ್ಮ ದೇಹವು ಬೆವರು ಬಿಡುಗಡೆ ಮಾಡುವ ಕಾರಣ ದೇಹದ ಉಷ್ಣತೆಯನ್ನು ತಂಪಾಗಿಸುತ್ತದೆ. ಆದರೆ ಹೈಪರ್ಹೈಡ್ರೋಸಿಸ್‌ನ ಸಂದರ್ಭದಲ್ಲಿ, ನಿಮ್ಮ ದೇಹ (Body)ಕ್ಕೆ ಅಗತ್ಯವಿಲ್ಲದಿದ್ದರೂ ಸಹ ಯಾವುದೇ ಕಾರಣವಿಲ್ಲದೆ ನೀವು ಹೆಚ್ಚು ಬೆವರುತ್ತೀರಿ. 100ರಲ್ಲಿ ಸುಮಾರು 2ರಿಂದ 3 ಜನರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.
ಸುಡು ಬೇಸಿಗೆ, ಬೆವರಿನದ್ದೇ ಕಾಟ, ಪರಿಹಾರವೇನು?
ಅತಿಯಾದ ಬೆವರುವಿಕೆಗೆ ಕಾರಣಗಳು
ಹೈಪರ್ಹೈಡ್ರೋಸಿಸ್ ಎಂದರೆ ಮುಖದಲ್ಲಿ ಅತಿಯಾದ ಬೆವರುವಿಕೆ ಜೆನೆಟಿಕ್ಸ್, ಹವಾಮಾನ ಪರಿಸ್ಥಿತಿಗಳು, ವಿಪರೀತ ಒತ್ತಡಕ್ಕೊಳಗಾಗುವುದರಿಂದ ಉಂಟಾಗಬಹುದು ಎಂದು ಡಾ.ಕೌಸ್ತವ್ ಗುಹಾ ಬಹಿರಂಗಪಡಿಸುತ್ತಾರೆ. ಮಾತ್ರವಲ್ಲ ಕೆಲವು ಔಷಧಿಗಳ ಅಡ್ಡ ಪರಿಣಾಮ ಸಹ ಮುಖ ಮತ್ತು ತಲೆಯ ಮೇಲೆ ಅತಿಯಾದ ಬೆವರುವಿಕೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.
ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿರುವ ಕಾಯಾದಲ್ಲಿನ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಹಿತಾಶಾ ಪಾಟೀಲ್, ಎಕ್ರಿನ್ ಗ್ರಂಥಿಗಳ ಅತಿಯಾದ ಪ್ರಚೋದನೆಯಿಂದಾಗಿ ಮುಖದ ಹೈಪರ್ಹೈಡ್ರೋಸಿಸ್ ಉಂಟಾಗುತ್ತದೆ. ಇದು ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ನಿರ್ದಿಷ್ಟ ಕಾರಣವನ್ನು ಹೊಂದಿಲ್ಲ. ಆದರೆ ಇದು ಆನುವಂಶಿಕವಾಗಿರಬಹುದು. ಇದು ಆತಂಕ, ಮಾದಕ ವ್ಯಸನ, ಋತುಬಂಧ, ಹೈಪರ್ ಥೈರಾಯ್ಡಿಸಮ್ ಅಥವಾ ಇನ್ಸುಲಿನ್, ಪೈಲೊಕಾರ್ಪೈನ್ ಮುಂತಾದ ಔಷಧಿಗಳಿಂದಲೂ ಉಂಟಾಗಬಹುದು ಎಂದು ಹೇಳುತ್ತಾರೆ.
ಅತಿಯಾದ ಬೆವರುವಿಕೆಯನ್ನು ನಿಲ್ಲಿಸುವುದು ಹೇಗೆ ?
ಅತಿಯಾದ ಬೆವರುವಿಕೆ ವ್ಯಕ್ತಿಗೆ ಕಿರಿಕಿರಿಯುಂಟು ಮಾಡುತ್ತದೆ. ಸಾಮಾಜಿಕವಾಗಿ ಬೆರೆಯಲು ಅಡ್ಡಿಯನ್ನುಂಟು ಮಾಡುತ್ತದೆ. ಆದ್ದರಿಂದ ಚಿಕಿತ್ಸೆ ನೀಡುವುದು ಮುಖ್ಯ. ಡಾ ಹಿತಾಶಾ ಪಾಟೀಲ್ ಅವರು ಮುಖದ ಹೈಪರ್ಹೈಡ್ರೋಸಿಸ್‌ನ್ನು ಕಡಿಮೆ ಮಾಡುವ ವಿಧಾನಗಳನ್ನು ಪಟ್ಟಿ ಮಾಡುತ್ತಾರೆ. ಅತಿಯಾದ ಬೆವರುವಿಕೆಗೆ ಕಾರಣವಾಗುವ ಅಂಶಗಳಾಗಿದ್ದರೆ ಖಿನ್ನತೆ ಅಥವಾ ಆತಂಕದಂತಹ ಪರಿಸ್ಥಿತಿಗಳಿಗೆ ಔಷಧಿಗಳನ್ನು ತೆಗೆದುಕೊಳ್ಳಬಹುದು. ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡಲು ಪುಡಿಯನ್ನು ಬಳಸುವಂತಹ ಸಾಮಾನ್ಯ ಮುನ್ನೆಚ್ಚರಿಕೆಗಳು ಸಹ ಸೂಕ್ತವಾಗಿದೆ ಎಂದು ಹೇಳುತ್ತಾರೆ.
ಡಾ ಕೌಸ್ತವ್ ಗುಹಾ, ಬೆವರುವುದನ್ನು ಕಡಿಮೆ ಮಾಡಲು ಸರಳವಾದ ಉಪಾಯಗಳನ್ನು ತಿಳಿಸುತ್ತಾರೆ. ನಿಯಮಿತವಾಗಿ ಸ್ನಾನ (Bath) ಮಾಡುವಂತೆ, ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವಂತೆ ಸೂಚಿಸುತ್ತಾರೆ. ಮಾತ್ರವಲ್ಲ ಕೆಫೀನ್ ಸೇವನೆಯನ್ನು ಮಿತಿಗೊಳಿಸುವುದ, ಮಸಾಲೆಯುಕ್ತ ಆಹಾರವನ್ನು ತಪ್ಪಿಸುವುದು ಮುಖ, ತಲೆ ಹೆಚ್ಚಾಗಿ ಬೆವರುವುದನ್ನು ತಡೆಯಲು ಅತ್ಯುತ್ತಮ ಮಾರ್ಗವಾಗಿದೆ ಎಂದಿದ್ದಾರೆ.