
ಕೆಲ ಪುರುಷ (Male) ರ ಖಾಸಗಿ ಅಂಗ (Penis) ದಿಂದ ವಾಸನೆ (Smell ) ಬರ್ತಿರುತ್ತದೆ. ಈ ವಾಸನೆ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಮೌಖಿಕ ಸಂಭೋಗದ ಆನಂದವನ್ನು ಇದು ಹಾಳು ಮಾಡುತ್ತದೆ. ಮೌಖಿಕ ಸಂಭೋಗದ ಸುಖ ಬೇಕೆನ್ನುವವರು ಖಾಸಗಿ ಅಂಗಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಖಾಸಗಿ ಅಂಗದಿಂದ ವಾಸನೆ ಬರುವುದು ಅಸಾಮಾನ್ಯವೇನಲ್ಲ. ಆದರೆ ಈ ವಾಸನೆ ಬದಲಾಗಿದ್ದರೆ ಅಥವಾ ತೀವ್ರಗೊಂಡಿದೆ ಅದ್ರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಇದಕ್ಕೆ ಸುಲಭವಾಗಿ ಚಿಕಿತ್ಸೆ ಪಡೆಯಬಹುದು. ಆದ್ರೆ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಮಾಡಿದ್ರೆ ಸೋಂಕು ನಿಮ್ಮನ್ನು ಕಾಡುತ್ತದೆ. ಖಾಸಗಿ ಅಂಗದ ವಾಸನೆಗೆ ಕಾರಣವೇನು ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಖಾಸಗಿ ಅಂಗದಿಂದ ವಾಸನೆ ಬರಲು ಕಾರಣವೇನು?: ಲೈಂಗಿಕವಾಗಿ ಹರಡುವ ಸೋಂಕುಗಳು (STI) ಶಿಶ್ನದ ದುರ್ವಾಸನೆಗೆ ಕಾರಣವಾಗುತ್ತದೆ.
ಸ್ಮೆಗ್ಮಾ (Smegma): ಸ್ಮೆಗ್ಮಾವು ಖಾಸಗಿ ಅಂಗದ ಶಾಫ್ಟ್ ಸುತ್ತಲೂ ತೇವಾಂಶ, ಎಣ್ಣೆ ಮತ್ತು ಚರ್ಮದ ಕೋಶಗಳ ಸಂಗ್ರಹವನ್ನು ಸೂಚಿಸುತ್ತದೆ. ಹೆಚ್ಚು ಬೆವರು ಬಂದಾಗ ಅಥವಾ ಖಾಸಗಿ ಅಂಗವನ್ನು ನಿಯಮಿತವಾಗಿ ತೊಳೆಯದೇ ಇರುವಾಗ ಸ್ಮೆಗ್ಮಾ ನಿರ್ಮಾಣವಾಗುತ್ತದೆ. ಇದು ಬ್ಯಾಕ್ಟೀರಿಯಾವನ್ನು ಆಶ್ರಯಿಸಬಲ್ಲ ದುರ್ವಾಸನೆಯ ಬಿಳಿ ದದ್ದುಗೆ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ಅತ್ಯಗತ್ಯ. ಇಲ್ಲವೆಂದ್ರೆ ಗಂಭೀರ ಸೋಂಕಿಗೆ ತುತ್ತಾಗಬೇಕಾಗುತ್ತದೆ.
ಇದನ್ನೂ ಓದಿ: ಹೃದ್ರೋಗದ ಭಯವಿದ್ರೆ ಹೀಗ್ ಮಾಡಿ ಸಾಕು
ನೀವೇನು ಮಾಡ್ಬಹುದು ಗೊತ್ತಾ? : ಖಾಸಗಿ ಅಂಗದಲ್ಲಿ ಕಾಣಿಸಿಕೊಂಡಿರುವ ಸ್ಮೆಗ್ಮದಿಂದ ಮುಕ್ತಿ ಪಡೆಯಲು ಶಿಶ್ನವನ್ನು ಸೌಮ್ಯವಾದ ಸೋಪ್ ಮತ್ತು ನೀರಿನಿಂದ ತೊಳೆಯಬೇಕು. ಖಾಸಗಿ ಅಂಗವನ್ನು ಮೃದುವಾದ ಹತ್ತಿ ಬಟ್ಟೆಯಿಂದ ಸ್ವಚ್ಛಗೊಳಿಸಬೇಕು. ರಬ್ ಮಾಡಬಾರದು. ಸ್ಮೆಗ್ಮಾವನ್ನು ತೊಳೆದ ನಂತರ ವಾಸನೆ ಕಣ್ಮರೆಯಾಗಬೇಕು. ಸ್ಮೆಗ್ಮಾ ಮುಂದುವರಿದ್ದರೆ ದಿನಕ್ಕೊಮ್ಮೆ ಸ್ವಚ್ಛಗೊಳಿಸಿ. ಒಂದು ವೇಳೆ ಕಡಿಮೆಯಾಗಿಲ್ಲವೆಂದ್ರೆ ರೋಗಲಕ್ಷಣಗಳನ್ನು ಗಮನಿಸಿದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಮೂತ್ರನಾಳದ ಸೋಂಕು : ಮೂತ್ರನಾಳದ ಭಾಗವು ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿಗೆ ಒಳಗಾದಾಗ ಯುಟಿಐ ಗಳು ಸಂಭವಿಸುತ್ತವೆ. ಲೈಂಗಿಕ ಚಟುವಟಿಕೆ, ಮೂತ್ರವನ್ನು ತಡೆಹಿಡಿದಾಗ, ಮೂತ್ರಕೋಶದಲ್ಲಿ ಕಲ್ಲು ಕಾಣಿಸಿಕೊಂಡಾಗ, ಮಧುಮೇಹದಿಂದ ಈ ಸಮಸ್ಯೆ ಕಾಡುತ್ತದೆ. ಯುಟಿಐ ಕಾಣಿಸಿಕೊಂಡ್ರೆ ನಿಮ್ಮ ಶಿಶ್ನದಿಂದ ಮೀನಿನಂಥ ವಾಸನೆ ಬರುತ್ತದೆ. ಮೂತ್ರ ವಿಸರ್ಜಿಸುವಾಗ ಉರಿ,ನೀಲಿ ಅಥವಾ ಗುಲಾಬಿ ಮೂತ್ರ ಇದ್ರ ಲಕ್ಷಣವಾಗಿದೆ. ಯುಟಿಐಗಳು ಯಾವಾಗಲೂ ಗಂಭೀರವಾಗಿರುವುದಿಲ್ಲ, ಆದರೆ ಚಿಕಿತ್ಸೆ ನೀಡದೆ ಬಿಟ್ಟರೆ ಅವು ಮೂತ್ರಪಿಂಡದ ಸೋಂಕಿಗೆ ಕಾರಣವಾಗಬಹುದು.
ಇದನ್ನೂ ಓದಿ: Healthy Food : ದಿನದಲ್ಲಿ ಎಷ್ಟು ಬಾದಾಮಿ ತಿನ್ಬೇಕು ಗೊತ್ತಾ?
ನೀವು ಏನು ಮಾಡಬಹುದು?: ಯುಟಿಐ ಅನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗ್ಬೇಕು. ನಿಮಗೆ ಯುಟಿಐ ಕಾಣಿಸಿಕೊಂಡಿದೆ ಎಂಬುದು ದೃಢವಾದ್ರೆ ಸೋಂಕನ್ನು ಕಡಿಮೆ ಮಾಡಲು ಎಂಟಿಬಯೋಟಿಕ್ಸ್ ನೀಡ್ತಾರೆ.
ಯೀಸ್ಟ್ ಸೋಂಕು : ಯೀಸ್ಟ್ ಸೋಂಕಿನಿಂದಲೂ ಖಾಸಗಿ ಅಂಗ ವಾಸನೆ ಬರುತ್ತದೆ. ಖಾಸಗಿ ಅಂಗ ಕೆಂಪಾಗುವುದು, ಕಿರಿಕಿರಿ, ತುರಿಕೆ, ಉರಿ ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಖಾಸಗಿ ಅಂಗವನ್ನು ಸ್ವಚ್ಛಗೊಳಿಸದೆ ಹೋದ್ರೆ ಯೀಸ್ಟ್ ಸೋಂಕು ಕಾಣಿಸಿಕೊಳ್ಳುತ್ತದೆ.
ಗೊನೊರಿಯಾ : ಗೊನೊರಿಯಾ ಲೈಂಗಿಕವಾಗಿ ಹರಡುವ ಸೋಂಕು (STI). ಇದು ಸೋಂಕಿಗೆ ಒಳಗಾದವರ ಯೋನಿ, ಗುದದ್ವಾರ ಅಥವಾ ಬಾಯಿಯ ಸಂಪರ್ಕದ ಮೂಲಕ ಹರಡುತ್ತದೆ. ಇದು ಶಿಶ್ನ ಹಾಗೆಯೇ ಗುದನಾಳ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರಬಹುದು. ಮೂತ್ರ ವಿಸರ್ಜಿಸುವಾಗ ಉರಿ, ಶಿಶ್ನದಿಂದ ಹಸಿರು, ಹಳದಿ ಅಥವಾ ಬಿಳಿ ವಿಸರ್ಜನೆ,ರಕ್ತಸ್ರಾವ ಅಥವಾ ಜನನಾಂಗಗಳು ಅಥವಾ ಗುದದ್ವಾರದ ಸುತ್ತಲೂ ತುರಿಕೆ ಕಾಣಿಸಿಕೊಂಡ್ರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ. ವಿಶೇಷ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು 7 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ನೀವು ಲೈಂಗಿಕ ಕ್ರಿಯೆಯನ್ನು ತಪ್ಪಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.