Asianet Suvarna News Asianet Suvarna News

Healthy Food : ದಿನದಲ್ಲಿ ಎಷ್ಟು ಬಾದಾಮಿ ತಿನ್ಬೇಕು ಗೊತ್ತಾ?

ಪ್ರತಿ ದಿನ ಹೇಳ್ತೇವೆ, ಯಾವುದನ್ನೂ ಅತಿಯಾಗಿ ತಿನ್ಬೇಡಿ ಅಂತ. ಆರೋಗ್ಯಕ್ಕೆ ಎಷ್ಟೇ ಒಳ್ಳೆಯದಾಗಿದ್ರೂ ಅದಕ್ಕೊಂದು ಮಿತಿ ಇರುತ್ತದೆ. ಅದ್ರಲ್ಲಿರುವ ವಿಟಮಿನ್, ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿದ್ರೆ ಸಮಸ್ಯೆ ಶುರುವಾಗುತ್ತೆ ಅನ್ನೋದು ತಿನ್ನೋವಾಗ ನೆನಪಿರಬೇಕು.
 

How Many Almonds Should We Eat Day
Author
Bangalore, First Published Jun 30, 2022, 5:28 PM IST

ಬಾದಾಮಿ (Almonds) ಸೇವನೆ ಆರೋಗ್ಯ (Health) ಕ್ಕೆ ಒಳ್ಳೆಯದು ಎಂಬ ಸಂಗತಿ ನಮಗೆಲ್ಲರಿಗೂ ತಿಳಿದಿದೆ. ಬಾದಾಮಿಯಲ್ಲಿ ಪ್ರೋಟೀನ್, ಫೈಬರ್, ಉತ್ತಮ ಕೊಬ್ಬು, ವಿಟಮಿನ್ ಎ, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಕೆಲವರು ನೆನೆಸಿದ ಬಾದಾಮಿಯನ್ನು ತಿನ್ನಲು ಇಷ್ಟಪಡುತ್ತಾರೆ. ಕೆಲವರು ಲಘುವಾಗಿ ತಿಂದ್ರೆ ಮತ್ತೆ ಕೆಲವರು ಅದನ್ನು ಹುರಿದು ಸೇವನೆ ಮಾಡ್ತಾರೆ. ಬಾದಾಮಿಯನ್ನು ಆರೋಗ್ಯಕರ ಡ್ರೈ ಫ್ರೂಟ್ಸ್ (Dry Fruits) ಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು ಬಹಳ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಡಯೆಟ್ ನಲ್ಲಿ ಸೇರಿಸಿಕೊಳ್ಳಬಹುದು. ಹೃದಯದ ಆರೋಗ್ಯಕ್ಕೆ ಬಾದಾಮಿ ಉತ್ತಮವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ರೆ ಇಷ್ಟೆಲ್ಲ ಪ್ರಯೋಜವಿರು ಈ ಬಾದಾಮಿ ತಿನ್ನುವುದರಿಂದ ಹಾನಿಯಾಗ್ಬಹುದು ಎಂದು ಯಾರೂ ಭಾವಿಸುವುದಿಲ್ಲ. ಆದರೆ ಮಿತಿಗಿಂತ ಹೆಚ್ಚು ಬಾದಾಮಿಯನ್ನು ಸೇವಿಸಿದರೆ  ಇದು ನಮ್ಮ ಆರೋಗ್ಯದ ಮೇಲೆ  ಅಡ್ಡ ಪರಿಣಾಮ ಬೀರುತ್ತದೆ. ಅಷ್ಟಕ್ಕೂ ಬಾದಾಮಿಯನ್ನು ಹೆಚ್ಚು ತಿನ್ನುವುದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ನಾವು ಇಂದು ತಿಳಿಯೋಣ.

ಅತಿಯಾದ ಬಾದಾಮಿ ಸೇವನೆಯಿಂದ ಅನಾನುಕೂಲ : 

ಮಲಬದ್ಧತೆ ಮತ್ತು ಗ್ಯಾಸ್ : ಬಾದಾಮಿಯಲ್ಲಿ ಫೈಬರ್ ಹೇರಳವಾಗಿದ್ದು, ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಆದರೆ ಹೆಚ್ಚು ಬಾದಾಮಿಗಳನ್ನು ಸೇವಿಸಿದರೆ ಮಲಬದ್ಧತೆ, ಗ್ಯಾಸ್, ಬೇಧಿ ಸಮಸ್ಯೆ ಶುರುವಾಗುತ್ತದೆ. ಏಕೆಂದರೆ ನಮ್ಮ ದೇಹಕ್ಕೆ ಹೆಚ್ಚಿನ ಫೈಬರ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೆಚ್ಚು ಬಾದಾಮಿ ಸೇವನೆ ಮಾಡಿದ್ರೆ ನಾವು ಹೆಚ್ಚು ನೀರು ಕುಡಿಯಬೇಕು. ಅದು ಅಸಾಧ್ಯವೆನ್ನುವವರು ಬಾದಾಮಿಯನ್ನು ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.

ದೌರ್ಬಲ್ಯ, ಮಂದ ದೃಷ್ಟಿ : 100 ಗ್ರಾಂ (ಅರ್ಧ ಕಪ್) ಬಾದಾಮಿಯು 25 ಗ್ರಾಂ ವಿಟಮಿನ್ ಇ ಅನ್ನು ಹೊಂದಿರುತ್ತದೆ. ನಮಗೆ ಪ್ರತಿ ದಿನ ಬೇಕಾಗಿರುವ ವಿಟಮಿನ್ ಇ ಕೇವಲ 15 ಗ್ರಾಂ ಮಾತ್ರ. ಅಂತಹ ಪರಿಸ್ಥಿತಿಯಲ್ಲಿ, ನೀವು 1 ಕಪ್ ಬಾದಾಮಿ ಸೇವಿಸಿದರೆ, ದೈನಂದಿನ ಅಗತ್ಯಕ್ಕಿಂತ ವಿಟಮಿನ್ ಇ 3 ಪಟ್ಟು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಸಮಸ್ಯೆ ಶುರುವಾಗುತ್ತದೆ. ದೌರ್ಬಲ್ಯ, ದೃಷ್ಟಿ ಮಂದವಾಗುವ ಸಮಸ್ಯೆ ಕಾಡುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಕಾಳಜಿ ಹೇಗೆ ?

ಕಡಿಮೆಯಾಗುತ್ತೆ ಔಷಧಿ ಪರಿಣಾಮ : 100 ಗ್ರಾಂ ಬಾದಾಮಿಯು 2.4 ಮಿಲಿಗ್ರಾಂ ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ. ಪ್ರತಿ ದಿನ ನಮ್ಮ ದೇಹಕ್ಕೆ 2.4 ಮಿಲಿಗ್ರಾಂ ಮ್ಯಾಂಗನೀಸ್ ಸಾಕಾಗುತ್ತದೆ. ಬಾದಾಮಿ  ಹೊರತಾಗಿ  ಧಾನ್ಯಗಳು, ಚಹಾ, ಹಸಿರು ತರಕಾರಿಗಳಲ್ಲಿಯೂ ಮ್ಯಾಂಗನೀಸ್ ಇರುತ್ತದೆ. ದೇಹದಲ್ಲಿ ಮ್ಯಾಂಗನೀಸ್ ಪ್ರಮಾಣವು ಹೆಚ್ಚಾದರೆ, ರಕ್ತದೊತ್ತಡದ ಔಷಧಿ ಸೇರಿದಂತೆ ಕೆಲ ಔಷಧಿಗಳ  ಪರಿಣಾಮವು ನಮ್ಮ ದೇಹದಲ್ಲಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ತೂಕ ಹೆಚ್ಚಾಗುವ ಅಪಾಯ : ಬಾದಾಮಿಯಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಅಧಿಕವಾಗಿರುತ್ತವೆ. 100 ಗ್ರಾಂ ಬಾದಾಮಿಯು ಸುಮಾರು 50 ಗ್ರಾಂ ಮೊನೊಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ನಮ್ಮ ಹೃದಯಕ್ಕೆ ಪ್ರಯೋಜನಕಾರಿಯಾಗಿದೆ. ಅದಕ್ಕೆ ತಕ್ಕಂತೆ ನಾವು ದೈಹಿಕ ಚಟುವಟಿಕೆ ಮಾಡ್ಬೇಕು. ಕುಳಿತು ಕೆಲಸ ಮಾಡುವ ವೇಳೆ ಹೆಚ್ಚು ಬಾದಾಮಿ ಸೇವನೆ ಮಾಡಿದ್ರೆ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದ್ರಿಂದ ತೂಕ ಹೆಚ್ಚಾಗುತ್ತದೆ. 

ಇದನ್ನೂ ಓದಿ: HEALTH TIPS: ಆರೋಗ್ಯಕ್ಕೆ ಒಳ್ಳೇದಂತಾ ಸಿಕ್ಕಾಪಟ್ಟೆ ಪಿಸ್ತಾ ತಿನ್ಬೇಡಿ

ಪ್ರತಿ ದಿನ ಎಷ್ಟು ಬಾದಾಮಿ ಸೇವನೆ ಮಾಡ್ಬೇಕು ಗೊತ್ತಾ? : ಎಫ್‌ಡಿಎ ಅಂದರೆ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಪ್ರತಿ ದಿನ ಮೂರನೇ ಒಂದು ಕಪ್‌ಗಿಂತ ಹೆಚ್ಚು ಅಂದರೆ ಸುಮಾರು 40 ಗ್ರಾಂ (10 ರಿಂದ 15) ಬಾದಾಮಿ ಸೇವಿಸಬಾರದು. ನೆನೆಸಿದ ಬಾದಾಮಿಯನ್ನು ಸೇವಿಸುವುದು ಒಳ್ಳೆಯದು. ಅದರಲ್ಲಿರುವ ಫೈಬರ್ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ ಮತ್ತು ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. 

Follow Us:
Download App:
  • android
  • ios