ಮಕ್ಕಳು ಹುಟ್ಟಿದಾಗ ಅವರ ಮೈಮೇಲೆ ಕೆಲ ಕಲೆ ಕಾಣಿಸುತ್ತದೆ. ಅದ್ರ ಬಗ್ಗೆ ನೀವು ಟೆನ್ಷನ್ ಮಾಡಿಕೊಳ್ಳಬೇಕಾಗಿಲ್ಲ. ಅದು ಮಗುವಿನ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. ಆದ್ರೆ ಯಾವಾಗ ಚಿಕಿತ್ಸೆ ಅಗತ್ಯ ಎಂಬುದು ನಿಮಗೆ ತಿಳಿದಿರಬೇಕು.
ಮನುಷ್ಯರು ಒಬ್ಬರನ್ನೊಬ್ಬರು ಗುರುತಿಸಿಕೊಳ್ಳುವುದು ಅವರವರ ಹೆಸರು, ಊರು ಅಥವಾ ಮುಖಚರ್ಯೆಯಿಂದ. ಕೆಲವೊಮ್ಮೆ ಅವರ ಶರೀರದಲ್ಲಿನ ವಿಶಿಷ್ಠ ಗುರುತುಗಳಿಂದಲೂ ಪರಿಚಯಿಸಲಾಗುತ್ತದೆ. ಅನೇಕ ಮಕ್ಕಳ ಶರೀರದಲ್ಲಿ ಹುಟ್ಟುತ್ತಲೇ ಗುರುತುಗಳು ಇರುತ್ತವೆ. ಇಂತಹ ಗುರುತನ್ನು ಬರ್ತ್ ಮಾರ್ಕ್ ಎನ್ನುತ್ತಾರೆ. ಕೆಲವೊಬ್ಬರಿಗೆ ಬರ್ತ್ ಮಾರ್ಕ್ ಆನುವಂಶಿಕವಾಗಿಯೂ ಬರುತ್ತದೆ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಆಕಾರ ಹಾಗೂ ಬಣ್ಣದ ಬರ್ತ್ ಮಾರ್ಕ್ ಗಳನ್ನು ಕಾಣಬಹುದು.
ಹುಟ್ಟಿನಿಂದಲೇ ಬರುವ ಈ ಬರ್ತ್ ಮಾರ್ಕ್ (Birthmark) ಕೆಲವೊಮ್ಮೆ ತಂದೆ ತಾಯಿಯರನ್ನು ಚಿಂತೆಗೀಡುಮಾಡುತ್ತದೆ. ಇದರಿಂದ ಮುಂದೆ ಏನಾದರೂ ತೊಂದರೆಯಾಗಬಹುದೇ ಎಂಬ ಚಿಂತೆ ಅವರನ್ನು ಕಾಡುತ್ತದೆ. ಆದರೆ ಇದರಿಂದ ಯಾವುದೇ ರೀತಿಯ ಸಮಸ್ಯೆ (problem) ಯಾಗುವುದಿಲ್ಲ. ಮಕ್ಕಳಿಗೂ ಕೂಡ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.
undefined
ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಖಿನ್ನತೆ… ಪರಿಹಾರ ತಿಳಿಯಿರಿ
ಮಕ್ಕಳಿ (Children) ಗೆ ಬರ್ತ್ ಮಾರ್ಕ್ ಏಕಿರುತ್ತೆ? : ಹುಟ್ಟಿದ ಮಗುವಿನ ಶರೀರದಲ್ಲಿ ಕೆಂಪು ಬಣ್ಣದ ಅಥವಾ ನೀಲಿ ಬಣ್ಣದ ಜನ್ಮ ಗುರುತುಗಳು ಇರುತ್ತವೆ. ಮಕ್ಕಳ ಶರೀರದಲ್ಲಿ ಇದು ಏಕೆ ಇರುತ್ತೆ ಎಂಬುದರ ಕುರಿತು ವೈಜ್ಞಾನಿಕವಾಗಿಯೂ ಕೂಡ ಯಾವುದೇ ಆಧಾರಗಳಿಲ್ಲ. ಕೆಲವು ಸಂಶೋಧನೆಗಳು ಗರ್ಭಾವಸ್ಥೆಯ ಕೆಲವು ಹಂತಗಳಲ್ಲಿ ಇಂತಹ ಗುರುತುಗಳು ಕಾಣಿಸಿಕೊಳ್ಳುತ್ತವೆ ಎಂದು ಹೇಳುತ್ತವೆ. ಹೆಚ್ಚಿನ ಮಕ್ಕಳಿಗೆ ಜನ್ಮ ಗುರುತಿನಿಂದ ಯಾವುದೇ ರೀತಿಯ ನಷ್ಟ ಉಂಟಾಗುವುದಿಲ್ಲ.
ಬರ್ತ್ ಮಾರ್ಕ್ ನಲ್ಲಿ ಎಷ್ಟು ವಿಧ : ಜನ್ಮ ಗುರುತಿನಲ್ಲಿ ಎರಡು ವಿಧಗಳಿವೆ
ವರ್ಣ್ರ ದ್ರವ್ಯದ ಜನ್ಮ ಗುರುತು : ಜೀವಕೋಶಗಳ ಅತಿಯಾದ ಬೆಳವಣಿಗೆಯಿಂದಾಗಿ ಚರ್ಮವು ವರ್ಣ ದ್ರವ್ಯವಾಗುತ್ತದೆ. ಇದರಿಂದಲೇ ವರ್ಣದ್ರವ್ಯದ ಜನ್ಮ ಗುರುತುಗಳು ಉಂಟಾಗುತ್ತವೆ. ಇಂತಹ ಬರ್ತ್ ಮಾರ್ಕ್ ಗಳು ಕಂದು, ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಇವು ಸಾಮಾನ್ಯ ಬರ್ತ್ ಮಾರ್ಕ್ ಗಳಾಗಿದ್ದು ವೃತ್ತಾಕಾರ ಅಥವಾ ಮೊಟ್ಟೆಯ ಆಕಾರದಲ್ಲಿರುತ್ತವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಕೇಫ್-ಔ-ಲೈಟ್ ಸ್ಪಾಟ್ ಎನ್ನಲಾಗುತ್ತದೆ.
Mom Tips: ಡೈಪರ್ ಹಾಕಿ ಮಕ್ಕಳ ಆರೋಗ್ಯ ಹಾಳ್ಮಾಡೋ ಬದಲು ಬೆತ್ತಲೆ ಬಿಡಿ
ನಾಳೀಯ ಜನ್ಮ ಗುರುತು : ಈ ತರಹದ ಬರ್ತ್ ಮಾರ್ಕ್ ಗಳು ನರಗಳಿಗೆ ಸಂಬಂಧಿಸಿದೆ. ಇಂತಹ ಜನ್ಮ ಗುರುತುಗಳು ರಕ್ತನಾಳಗಳ ಬೆಳವಣಿಗೆಯಿಂದಾಗಿ ಚರ್ಮದ ಮೇಲೆ ಸಂಭವಿಸುತ್ತದೆ. ನಾಳೀಯ ಬರ್ತ್ ಮಾರ್ಕ್ ಗಳು ಗುಲಾಬಿ, ಕೆಂಪು, ನೇರಳೆ ಬಣ್ಣದಲ್ಲಿ ಇರುತ್ತದೆ. ಹೆಮಾಂಜಿಯೋಮಾಸ್ ಹೆಸರಿನ ಜನ್ಮ ಗುರುತುಗಳು ಕೂಡ ನಾಳೀಯ ಬರ್ತ್ ಮಾರ್ಕ್ ಆಗಿದೆ. ಹೆಮಾಂಜಿಯೋಮಾಸ್ ಕೆಂಪು ಬಣ್ಣದ ಬರ್ತ್ ಮಾರ್ಕ್ ಆಗಿದ್ದು ಶರೀರದ ಯಾವುದೇ ಅಂಗದಲ್ಲಿ ಆಗಬಹುದು.
ಮಚ್ಚೆ : ಮಚ್ಚೆ ಶರೀರದ ಯಾವ ಭಾಗದಲ್ಲಿ ಬೇಕಾದರೂ ಇರಬಹುದು. ಇದು ಕೂಡ ಹುಟ್ಟಿನಿಂದಲೇ ಬರುತ್ತದೆ. ಇದು ಗಾತ್ರದಲ್ಲಿ ದೊಡ್ಡದಾಗಿದ್ದು ಗಾಢ ಬಣ್ಣದಲ್ಲಿರುತ್ತದೆ. ಪಿಗ್ಮೆಂಟ್ ಕೋಶಗಳ ಬೆಳವಣಿಗೆಯಿಂದ ಇದು ಶರೀರದಲ್ಲಿ ಹುಟ್ಟುತ್ತದೆ. ಹೆಚ್ಚಿನ ಸಮಯದಲ್ಲಿ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲವಾದರೂ ಕೆಲವೊಮ್ಮೆ ಇದರಿಂದ ಚರ್ಮದ ಕ್ಯಾನ್ಸರ್ ಉಂಟಾಗಬಹುದು.
ಹೆಮಾಂಜಿಯೋಮಾಸ್ : ದೇಹದ ಒಂದು ಪ್ರದೇಶದಲ್ಲಿ ರಕ್ತನಾಳಗಳ ಅಸಹಜ ಪ್ರಸರಣವಾದಾಗ ಚರ್ಮದಲ್ಲಿ ಹೆಮಾಂಜಿಯೋಮಾಸ್ ಬೆಳವಣಿಗೆಯಾಗುತ್ತದೆ. ಇದು ಯಕೃತ್ತು, ಜೀರ್ಣಾಂಗ ವ್ಯವಸ್ಥೆಯ ಭಾಗಗಳು, ಮೆದುಳು ಹಾಗೂಉಸಿರಾಟದ ಅಂಗಗಳ ಮೇಲೂ ಬೆಳೆಯಬಹುದು. ಸಾಮಾನ್ಯವಾಗಿ ಇದು ಮುಖ, ಕುತ್ತಿಗೆಯಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಹುಟ್ಟಿದ ಕೆಲವು ವಾರಗಳು ಇದು ಚಿಕ್ಕದಾಗಿ ಹಾಗೂ ತಿಳಿ ಬಣ್ಣದಲ್ಲಿ ಇರಬಹುದು.
ಬರ್ತ್ ಮಾರ್ಕ್ ಗೆ ಯಾವಾಗ ಚಿಕಿತ್ಸೆ ಬೇಕು? : ಮಕ್ಕಳು ಚಿಕ್ಕವರಾಗಿದ್ದಾಗ ಚಿಕ್ಕದಾಗಿರುವ ಮಚ್ಚೆ ಅವರು ಬೆಳೆದಂತೆ ದೊಡ್ಡದಾದರೆ ಅದರಿಂದ ಗಡ್ಡೆಗಳು ಉಂಟಾಗಬಹುದು. ಈಗಿನ ಮುಂದುವರೆದ ತಂತ್ರಜ್ಞಾನದಲ್ಲಿ ಲೇಜರ್ ಮತ್ತು ಕಾಸ್ಮೆಟಿಕ್ ವಿಧಾನಗಳನ್ನು ಬಳಸಿ ಇಂತಹ ಬರ್ತ್ ಮಾರ್ಕ್ ಅಥವಾ ಮಚ್ಚೆಗಳನ್ನು ತೆಗೆಯಲಾಗುತ್ತದೆ. ಆದರೆ ಇಂತಹ ತಂತ್ರಜ್ಞಾನವನ್ನು ಬಳಸುವ ಮುನ್ನ ಒಮ್ಮೆ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.