Health Food : ಬೆಳ್ಳುಳ್ಳಿ ಪೌಡರಿನಲ್ಲಿದೆ ಆರೋಗ್ಯದ ಗುಟ್ಟು!

By Suvarna News  |  First Published Apr 27, 2023, 3:23 PM IST

ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲಿರಿಗೂ ತಿಳಿದಿದೆ. ಆದ್ರೆ ಬೆಳ್ಳುಳ್ಳಿ ಪೌಡರ್ ಬಳಸುವವರ ಸಂಖ್ಯೆ ಬಹಳ ಕಡಿಮೆ. ಬೆಳ್ಳುಳ್ಳಿ ಗಡ್ಡೆ ಬೇಗ ಹಾಳಾಗುತ್ತೆ ಎನ್ನುವವರು ಪೌಡರ್ ಬಳಸಿ ನೋಡಿ. ಇದ್ರಲ್ಲೂ ಸಾಕಷ್ಟು ಔಷಧಿ ಗುಣವಿದೆ. 
 


ಅಜ್ಜಿಯ ಕಾಲದ ಅಡಿಗೆಯಿಂದ ಹಿಡಿದು ಮೊಮ್ಮಗಳ ಕಾಲದ ಸ್ನ್ಯಾಕ್ಸ್ ತನಕವೂ ಬೆಳ್ಳುಳ್ಳು ಪ್ರಮುಖ ಪಾತ್ರವನ್ನೇ ವಹಿಸುತ್ತ ಬಂದಿದೆ. ಇದೊಂದು ಸಾರ್ವಕಾಲಿಕ ಆಹಾರ ಎನ್ನಬಹುದು. ಬೆಳ್ಳುಳ್ಳಿಯ ಸೇವನೆಯಿಂದ ನಮ್ಮ ಶರೀರದಲ್ಲಿ ಅನೇಕ ರೀತಿಯ ಲಾಭಗಳಾಗುತ್ತದೆ. ಚಳಿಗಾಲದಲ್ಲಿ ಇದರ ಸೇವನೆ ನಮ್ಮ ಶರೀರವನ್ನು ಬೆಚ್ಚಗಿಡುತ್ತದೆ. ಶೀತ, ಕೆಮ್ಮು, ಗ್ಯಾಸ್ ಸಮಸ್ಯೆಗೂ ಇದು ಪರಿಹಾರ ಒದಗಿಸುತ್ತದೆ. ಕೊಲೆಸ್ಟ್ರಾಲ್, ಕೀಲುನೋವು, ಮೂಳೆಗಳ ತೊಂದರೆಯನ್ನು ನಿವಾರಿಸಲು ಕೂಡ ಬೆಳ್ಳುಳ್ಳಿ ದಿವ್ಯೌಷಧವಾಗಿದೆ. ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಕಾರಣಕ್ಕಾಗಿಯೇ ಬೆಳ್ಳುಳ್ಳಿ ಭಾರತೀಯರ ಅಡುಗೆಯಲ್ಲಿ ಹಾಸುಹೊಕ್ಕಾಗಿದೆ.

ಬೆಳ್ಳುಳ್ಳಿ (Garlic) ಯನ್ನು ಅಡುಗೆಯಲ್ಲಿ ಬಳಸುವುದು ಎಲ್ಲರಿಗೂ ತಿಳಿದ ವಿಷಯವೇ. ಬೆಳ್ಳುಳ್ಳಿಯಂತೆಯೇ ಬೆಳ್ಳುಳ್ಳಿ ಪುಡಿ ಕೂಡ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಬಹಳ ಕಡಿಮೆ ಮಂದಿ ಬೆಳ್ಳುಳ್ಳಿಯ ಪೌಡರ್ (Powder) ಅನ್ನು ಬಳಸುತ್ತಾರೆ. ಈ ಪೌಡರ್ ಅನ್ನು ತಾಜಾ ಬೆಳ್ಳುಳ್ಳಿಯನ್ನು ಒಣಗಿಸಿ ಅಥವಾ ಡಿಹೈಡ್ರೇಟ್ ಮಾಡಿ ಅಥವಾ ತರಿಯಾಗಿ ರುಬ್ಬಿ ತಯಾರಿಸಲಾಗುತ್ತದೆ. ತಾಜಾ ಬೆಳ್ಳುಳ್ಳಿಯನ್ನು ಬಳಸುವ ಬದಲು ಬೆಳ್ಳುಳ್ಳಿಯ ಈ ಪುಡಿಯನ್ನು ಅಡುಗೆಯಲ್ಲಿ ಬಳಸುವುದರಿಂದ ಅನೇಕ ರೀತಿಯ ಲಾಭಗಳಿವೆ. ಏಕೆಂದರೆ ನಮ್ಮ ಸ್ವಾದಾನುಸಾರ ಎಷ್ಟು ಅವಶ್ಯಕವೋ ಅಷ್ಟೇ ಪುಡಿಯನ್ನು ಹಾಕಿ ಉಳಿದ ಪುಡಿಯನ್ನು ಹಾಗೇ ಶೇಖರಿಸಿ ಇಡಬಹುದಾಗಿದೆ. ಇದನ್ನು ಬಹಳ ದಿನಗಳ ತನಕ ಸ್ಟೋರ್ ಮಾಡಬಹುದು. ತಾಜಾ ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿಯ ಪೌಡರ್ ಗಳ ಪೈಕಿ ಯಾವುದು ಹೆಚ್ಚು ಒಳ್ಳೆಯದು, ಅದನ್ನು ಹೇಗೆ ಸೇವಿಸಬೇಕು ಎಂಬ ಮಾಹಿತಿ ಇಲ್ಲಿದೆ.

Tap to resize

Latest Videos

TRADITION DISHES : ಮಿಸಲ್ ಪಾವ್ ಗೆ ಸಿಕ್ಕಿದೆ ಸಾಂಪ್ರದಾಯಿಕ ಸಸ್ಯಹಾರಿ ಖಾದ್ಯ ಪಟ್ಟಿಯಲ್ಲಿ ಸ್ಥಾನ

ತಾಜಾ ಬೆಳ್ಳುಳ್ಳಿ ಮತ್ತು ಬೆಳ್ಳುಳ್ಳಿ ಪುಡಿಯ ನಡುವೆ ಇರುವ ಅಂತರವೇನು? : ಬೆಳ್ಳುಳ್ಳಿಯನ್ನು ನಾವು ಬಹಳ ದಿನಗಳವರೆಗೆ ಶೇಖರಿಸಿ ಇಡಲು ಸಾಧ್ಯವಿಲ್ಲ. ಅದು ಗಡ್ಡೆಯ ರೂಪದಲ್ಲಿ ಇರುವುದರಿಂದ ಅವು ಬಹಳ ಬೇಗ ಹಾಳಾಗುತ್ತವೆ ಅಥವಾ ಜಿಕ್ಕಾಗುತ್ತದೆ. ಪೂರ್ತಿ ಗಡ್ಡೆಯನ್ನು ಹಾಗೇ ಇಟ್ಟರೆ ಅದರಲ್ಲಿ ಹುಳ (Worm) ಗಳು ಬೆಳೆಯುವ ಸಾಧ್ಯತೆಯೂ ಹೆಚ್ಚು. ಬೆಳ್ಳುಳ್ಳಿಯ ಪುಡಿ ಹಾಗಲ್ಲ ಅದನ್ನು ನಾವು ಬಹಳ ದಿನಗಳ ತನಕ ಕೆಡದೆ ಹಾಗೇ ಇಟ್ಟುಕೊಳ್ಳಬಹುದಾಗಿದೆ. ಬೆಳ್ಳುಳ್ಳಿಯ ಪುಡಿಯ ಪರಿಮಳ ಕೂಡ ಫ್ರೆಶ್ ಆಗೇ ಇರುತ್ತದೆ. ಈ ಪೌಡರ್ ಅನ್ನು ನಾವು ಸಲಾಡ್, ಪಲ್ಯ, ಸೂಪ್, ಪಿಜಾ, ಪಾಪ್ ಕಾರ್ನ್ ಸಾಲ್ಸಾ, ಡಿಪ್ಸ್, ಟೋಸ್ಟ್, ಫ್ರೈಯ್ಡ್ ಚಿಕನ್, ಬರ್ಗರ್, ಬೇಯಿಸಿದ ಆಲೂಗಡ್ಡೆ, ಮೊಟ್ಟೆ, ಟ್ಯಾಕೋ ಮತ್ತು ಸಾಸ್ ಗಳನ್ನು ತಯಾರಿಸಲು ಬಳಸಬಹುದು. ಬೆಳ್ಳುಳ್ಳಿ ಹತ್ತಿರದ ಅಂಗಡಿಗಳಲ್ಲಿ ಎಲ್ಲೂ ಸಿಗದೇ ಇರುವವರಿಗೆ ಬೆಳ್ಳುಳ್ಳಿಯ ಪುಡಿ ಬಹಳ ಪ್ರಯೋಜನಕಾರಿಯಾಗಿದೆ.

Healthy Foods : ಯಾರು ಗೋಧಿ ರೊಟ್ಟಿ ತಿನ್ಬೇಕು,ಯಾರು ತಿನ್ಬಾರದು?

ಅಷ್ಟೇ ಅಲ್ಲದೇ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕಡಿಮೆಯಿದ್ದಾಗಿ ಹೆಚ್ಚಿನ ಪ್ರಮಾಣದ ಬೆಳ್ಳುಳ್ಳಿಯನ್ನು ಖರೀದಿಸಿ ಒಣಗಿಸಿ ಹೀಗೆ ಪೌಡರ್ ತಯಾರಿಸಿ ಇಟ್ಟುಕೊಳ್ಳಬಹುದು. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಅವಸರದಲ್ಲಿ ಬೆಳ್ಳುಳ್ಳಿಯನ್ನು ಬಿಡಿಸುವಷ್ಟು ಸಮಯವಿರುವುದಿಲ್ಲ. ಅಂತವರು ಹೀಗೆ ಪೌಡರ್ ಗಳನ್ನು ತಯಾರಿಸಿ ಇಟ್ಟುಕೊಂಡರೆ ಬೇಗ ಅಡುಗೆಯನ್ನು ತಯಾರಿಸಬಹುದು.

ಬೆಳ್ಳುಳ್ಳಿಯ ಪ್ರಯೋಜನ : 
ಅಡುಗೆಯ ಘಮ ಇಮ್ಮಡಿಗೊಳಿಸುವ ಬೆಳ್ಳುಳ್ಳಿ ಪ್ರೊಟೀನ್, ಖನಿಜ ಮತ್ತು ವಿಟಮಿನ್ ಜೊತೆ ಮ್ಯಾಗ್ನಿಶಿಯಂ ಅನ್ನು ಕೂಡ ಹೊಂದಿದೆ. ಇದರಲ್ಲಿ ಎಂಟಿ ಆಕ್ಸಿಡೆಂಟ್ ಪ್ರಮಾಣವೂ ಹೆಚ್ಚಿಗೆ ಇದೆ.
ನಿಯಮಿತವಾಗಿ ಬೆಳ್ಳುಳ್ಳಿಯ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ತಿಂದರೆ ಉತ್ತಮ ಪರಿಣಾಮವನ್ನು ಕಾಣಬಹುದು.
ಅಧಿಕ ರಕ್ತದೊತ್ತಡದ (High Blood Pressure) ಸಮಸ್ಯೆ ಇರುವವರು ಬೆಳ್ಳುಳ್ಳಿಯನ್ನು ಸೇವಿಸಬೇಕು.
ಶರೀರದಲ್ಲಿ ರೋಗ ನಿರೋಧಕ ಶಕ್ತಿ (Immunity Power) ಹೆಚ್ಚಾಗಲು ಬೆಳ್ಳುಳ್ಳಿ ಸೇವನೆ ಉತ್ತಮ ಮಾರ್ಗವಾಗಿದೆ.
ಬೆಳ್ಳುಳ್ಳಿ ಸೇವನೆಯಿಂದ ನೆಗಡಿ (Cold) ಕೂಡ ದೂರವಾಗುತ್ತದೆ.
 

click me!