
ಮನೆಯಲ್ಲಿ ಅಜ್ಜಿಯರಿದ್ದರೆ ಈಗಿನ ಮಕ್ಕಳು ಧರಿಸುವ ಡೈಪರ್ ಧರಿಸುವುದನ್ನು ನೋಡಿ ಗದರುತ್ತಾರೆ. ಈಗಂತೂ ಪುಟ್ಟ ಮಕ್ಕಳು ಡೈಪರ್ ಧರಿಸುವುದು ಸರ್ವೇ ಸಾಮಾನ್ಯವಾಗಿದೆ. ಹೀಗೆ ದಿನವಿಡೀ ಡೈಪರ್ ಧರಿಸುವುದು ಮಕ್ಕಳಿಗೆ ಬಹಳ ಹಾನಿಕರ. ಹಲವು ವೈಜ್ಞಾನಿಕ ಸಂಶೋಧನೆಗಳು ಕೂಡ ಬಳಸಿ ಬಿಸಾಡುವ ಡೈಪರ್ ಗಿಂತ ಬಟ್ಟೆಯ ನ್ಯಾಪಿ ಬಹಳ ಒಳ್ಳೆಯದು ಎಂದು ಹೇಳುತ್ತಿವೆ.
ಮಕ್ಕಳ (Children) ಹಾಗೂ ತಾಯಂದಿರಿಗೆ ಅನುಕೂಲಕರವಾದ ಡೈಪರ್ (Diaper) ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದು ಹಲವು ತಂದೆ ತಾಯಿಯರಿಗೆ ತಿಳಿದಿಲ್ಲ. 24 ಗಂಟೆ ಮಕ್ಕಳು ಡೈಪರ್ ಧರಿಸುವುದರಿಂದ ಮಕ್ಕಳು ದೊಡ್ಡವರಾದ ಮೇಲೆ ಭಯಾನಕ ಖಾಯಿಲೆಗಳಿಗೆ ಗುರಿಯಾಗುತ್ತಾರೆ. ಏಕೆಂದರೆ ಇಂತಹ ಡೈಪರ್ ಗಳನ್ನು ಸೋರಿಕೆ ನಿರೋಧಕ ಪಾಲಿಮರ್ ಗಳು, ಹೀರಿಕೊಳ್ಳುವ ಪಾಲಿಮರ್ ಗಳು ಮತ್ತು ಕೆಲವು ಸುಗಂಧಿತ ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ.
HEALTH TIPS : ಬೆಳ್ಳಂ ಬೆಳಗ್ಗೆ ಈ ಲಕ್ಷಣ ಕಾಣಿಸಿದ್ರೆ ಕ್ಯಾನ್ಸರ್ ಲಕ್ಷಣವಾಗಿರಬಹುದು!
ಮಕ್ಕಳ ಡೈಪರ್ ಅಲ್ಲಿ ಇರಬಹುದು 10000 ವೈರಸ್ (Virus) :
ನೇಚರ್ ಮೈಕ್ರೊಬಯಾಲಜಿ ಜರ್ನಲ್ ನಲ್ಲಿ ಪ್ರಕಟಿತವಾದ ವರದಿಯ ಪ್ರಕಾರ, ಅಂತರಾಷ್ಟ್ರೀಯ ಸಂಶೋಧಕರ ತಂಡವು ಮಕ್ಕಳ ಡೈಪರ್ ನಲ್ಲಿ 10,000 ಹೊಸ ವೈರಸ್ ಗಳನ್ನು ಕಂಡುಹಿಡಿದಿದೆ. ಈ ವೈರಸ್ ಗಳಲ್ಲಿ ಕೇವಲ 16 ವೈರಸ್ ಮಾತ್ರ ತಿಳಿದ ವೈರಸ್ ಆಗಿದ್ದು ಉಳಿದ ಎಲ್ಲ ವೈರಸ್ ಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಮಗುವಿನ ಮೂತ್ರದ ಹತ್ತುಪಟ್ಟು ಹೆಚ್ಚು ವೈರಸ್ ಡೈಪರ್ ನಲ್ಲೇ ಕಂಡುಬಂದಿದೆ ಎಂಬುದನ್ನು ಸಂಶೋಧಕರು ಹೇಳಿದ್ದಾರೆ.
ನಿಯಮಿತವಾಗಿ ಡೈಪರ್ ಧರಿಸುವುದರಿಂದ ಏನಾಗುತ್ತೆ? :
ಲಿವರ್ (Liver) ಮತ್ತು ಚರ್ಮದ (Skin) ತೊಂದರೆ : ದೀರ್ಘಕಾಲದ ತನಕ ಡೈಪರ್ ಬಳಸುವ ಮಕ್ಕಳ ಚರ್ಮದ ಮೇಲೆ ಗುಳ್ಳೆಗಳು, ಅಸ್ತಮಾದಂತಹ ಉಸಿರಾಟದ ತೊಂದರೆ ಹಾಗೂ ಬರ್ತ್ ಅಬ್ನಾರ್ಮಲಿಟಿಸ್ ಗೆ ಕಾರಣವಾಗಬಹುದು.
ಬಂಜೆತನ (Infertility) : ಚಿಕ್ಕ ಮಕ್ಕಳಿಗೆ ತಪ್ಪದೇ ಡೈಪರ್ ಹಾಕುವುದರಿಂದ ಬಂಜೆತನಕ್ಕೆ ಕಾರಣವಾಗಬಹುದು. ಡೈಪರ್ ನಿಂದ ವೃಷಣದ ಕ್ಯಾನ್ಸರ್ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ವೈದ್ಯರು ಮಕ್ಕಳ ಡೈಪರ್ ಅನ್ನು 2-3 ಗಂಟೆಯ ಒಳಗೆ ಬದಲಿಸಬೇಕು. ಡೈಪರ್ ಹಾಕಿ ಹಲವು ಗಂಟೆಗಳ ಕಾಲ ಮಕ್ಕಳನ್ನು ಹಾಗೇ ಬಿಡಬಾರದು ಎಂದು ಹೇಳುತ್ತಾರೆ.
Health Tips : ಮಲವಿಸರ್ಜನೆ ವೇಳೆ ನೋವಾಗ್ತಿದ್ಯ? ಹೀಗೆ ಮಾಡಿ
ಸೋಂಕಿನ (Infection) ಅಪಾಯ ಹೆಚ್ಚು : ಡೈಪರ್ ಮಗುವಿನ ಮೂತ್ರವನ್ನು ಹೀರಿಕೊಳ್ಳುತ್ತದೆ. ಡೈಪರ್ ಒಳಗೆ ಸರಿಯಾಗಿ ಗಾಳಿಯಾಡದ ಕಾರಣ ಅಲ್ಲಿ ಬ್ಯಾಕ್ಟೀರಿಯಾ ಮತ್ತು ಇತರ ವೈರಸ್ ಗಳು ಉತ್ಪತ್ತಿಯಾಗುತ್ತವೆ. ಇದರಿಂದ ಅನೇಕ ರೀತಿಯ ಸೋಂಕುಗಳು ಹರಡುತ್ತವೆ.
ಮಗುವಿಗೆ ನಡೆಯಲು ತೊಂದರೆ : ಡೈಪರ್ ಹಾಕುವುದರಿಂದ ಮಕ್ಕಳಿಗೆ ನಡೆದಾಡುವುದು ಕಷ್ಟವಾಗುತ್ತದೆ ಅಥವಾ ಅವರ ನಡೆಯುವ ಭಂಗಿ ಬದಲಾಗುತ್ತದೆ. ಡೈಪರ್ ಹಾಕಿದ ಮಗುವಿಗಿಂತ ಬೆತ್ತಲೆಯಾಗಿ ಓಡಾಡುವ ಮಗುವೇ ಸಹಜವಾಗಿ ಓಡಾಡುತ್ತದೆ.
ಮಗುವಿನ ಉತ್ತಮ ಆರೋಗ್ಯಕ್ಕಾಗಿ ಡೈಪರ್ ಬಳಸುವ ಮೊದಲು ಹೀಗೆ ಮಾಡಿ :
• ದಿನದ ಕೆಲ ಗಂಟೆಗಳು ಮಗುವನ್ನು ಬೆತ್ತಲೆ ಮಾಡಿ. ಮಗುವನ್ನು ಹಾಗೇ ಸ್ವತಂತ್ರವಾಗಿ ಆಟವಾಡಲು ಬಿಡಿ. ಅಂತಹ ಸಮಯದಲ್ಲಿ ಯಾವುದೇ ರೀತಿಯ ಡೈಪರ್, ನ್ಯಾಪಿ ಅಥವಾ ಪ್ಯಾಂಟ್ ಗಳನ್ನು ಹಾಕಬೇಡಿ.
• ಮಕ್ಕಳಿಗೆ 7-8 ತಿಂಗಳಾದ ನಂತರ ಅವರು ಮಲ, ಮೂತ್ರ ವಿಸರ್ಜನೆಯ ಸಮಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಂಕೇತಗಳನ್ನು ನೀಡುತ್ತಾರೆ. ಹೆತ್ತವರು ಅವರ ಸಂಜ್ಞೆಗಳನ್ನು ಅರ್ಥಮಾಡಿಕೊಳ್ಳಬೇಕು.
• ಎರಡು ಡೈಪರ್ ಗಳ ನಡುವೆ ಅಂತರವನ್ನು ಇಟ್ಟುಕೊಳ್ಳಿ. ಇದರಿಂದ ಮಕ್ಕಳಿಗೂ ಫ್ರೀ ಆದ ಅನುಭವಔಅಗುತ್ತದೆ ಮತ್ತು ಚರ್ಮಕ್ಕೆ ಗಾಳಿ ಸೋಕುತ್ತದೆ.
• ಲಂಗೋಟಿಯ ಬಳಕೆ ಮಕ್ಕಳಿಗೆ ಉತ್ತಮವಾಗಿದೆ. ಡೈಪರ್ ಬದಲು ಮೆತ್ತನೆಯ ಬಟ್ಟೆಯಿಂದ ಮಾಡಿದ ಲಂಗೋಟಿಯನ್ನು ಮಕ್ಕಳಿಗೆ ಹಾಕುವುದರಿಂದ ಹೆಚ್ಚು ಆರಾಮ ಸಿಗುತ್ತದೆ. ಇದರಿಂದ ಯಾವುದೇ ಸೈಡ್ ಇಫೆಕ್ಟ್ ಕೂಡ ಇರುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.