ಕೊರೊನಾ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಒಂದೊಂದು ಸಂಶೋಧನೆಯಲ್ಲಿ ಒಂದೊಂದು ವಿಷ್ಯ ಹೊರ ಬರ್ತಿದೆ. ವೈದ್ಯರೂ ಕೂಡ ಬೇರೆ ಬೇರೆ ಹೇಳಿಕೆ ನೀಡ್ತಿರುವ ಕಾರಣ ಜನರು ಗೊಂದಲಕ್ಕೀಡಾಗಿದ್ದಾರೆ. ಕೊರೊನಾದಿಂದ ನಮ್ಮನ್ನು ರಕ್ಷಿಸಲು ಅತಿ ಹೆಚ್ಚು ನೆರವಾಗ್ತಿರುವ ಮಾಸ್ಕ್ ಬಗ್ಗೆ ಹಬ್ಬಿರುವ ಸುದ್ದಿ ಅನೇಕ ಪ್ರಶ್ನೆ ಹುಟ್ಟು ಹಾಕಿದೆ.
ಕೊರೊನಾ (Corona) ಮೂರನೇ ಅಲೆಯ ಅಬ್ಬರ ಶುರುವಾಗಿದೆ. ಕಳೆದ ಕೆಲವು ವಾರಗಳಿಂದ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಕೊರೊನಾ ಎಂಬ ಭೂತ ಸದ್ಯ ನಮ್ಮನ್ನು ಬಿಡುವಂತೆ ಕಾಣ್ತಿಲ್ಲ. ಎರಡು ವರ್ಷಗಳ ಹಿಂದೆ ಶುರುವಾದ ಕೊರೊನಾ ನಿಯಂತ್ರಣಕ್ಕೆ, ವಿಶ್ವದಾದ್ಯಂತ ನಿರಂತರ ಪ್ರಯತ್ನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆ ಕೂಡ ಫೆಬ್ರವರಿ ನಂತರ ಹೆಚ್ಚಾಗಿತ್ತು. ಈ ಫೆಬ್ರವರಿಯಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜನರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.
ಎರಡೂ ಡೋಸ್ ಲಸಿಕೆ ಪಡೆದವರು ಸಹ ಕೊರೊನಾ ತಡೆಗಟ್ಟುವ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ತಜ್ಞರು ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಕೆಲವೊಂದು ಸುದ್ದಿಗಳು ಹರಿದಾಡ್ತಿವೆ. ಅದ್ರಲ್ಲಿ ಮಾಸ್ಕ್ (Mask )ಬಗ್ಗೆ ಆತಂಕಕಾರಿ ವಿಷ್ಯವನ್ನು ಹಂಚಿಕೊಳ್ಳಲಾಗಿದೆ. ನಿರಂತರವಾಗಿ ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಆಮ್ಲಜನಕ (Oxygen)ದ ಕೊರತೆ ಉಂಟಾಗುತ್ತದೆ. ಇಂಗಾಲದ ಡೈಆಕ್ಸೈಡ್ (Carbon dioxide )ಪ್ರಮಾಣ ಹೆಚ್ಚಾಗುತ್ತದೆ ಎಂಬ ಸುದ್ದಿ ಹರಡಿದೆ. ಇದು ಎಷ್ಟು ಸತ್ಯ? ತಜ್ಞರು ಏನು ಹೇಳ್ತಾರೆ ಎಂಬುದನ್ನು ಇಂದು ಹೇಳುತ್ತೇವೆ.
undefined
ವೈರಲ್ ಆದ ವಿಡಿಯೋದಲ್ಲಿ ಏನಿದೆ? :
ಎಂಬಿಬಿಎಸ್ ವೈದ್ಯರೂ ಆಗಿರುವ ಜಾರ್ಖಂಡ್‌ನ ಜಮ್ತಾರಾದ ಕಾಂಗ್ರೆಸ್ ಶಾಸಕ ಡಾ. ಇರ್ಫಾನ್ ಅನ್ಸಾರಿ ವಿಡಿಯೋ ವೈರಲ್ ಆಗಿದೆ. ದೀರ್ಘಕಾಲದವರೆಗೆ ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಅವರ ಈ ವಿಡಿಯೋ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
Omicron And Delta : ಒಮಿಕ್ರಾನ್ ಅಥವಾ ಡೆಲ್ಟಾ.. ಸೋಂಕು ಪತ್ತೆ ಹಚ್ಚೋದು ಹೇಗೆ?
ಮಾಸ್ಕ್ ಬಗ್ಗೆ ತಜ್ಞರು ಹೇಳೋದೇನು ? :
ಕಳೆದ ಎರಡು ವರ್ಷಗಳಿಂದ ಮಾಸ್ಕ್ ನಮ್ಮ ಜೀವನದ ಒಂದು ಭಾಗವಾಗಿದೆ. ಮನೆಯಿಂದ ಹೊರಗೆ ಕಾಲಿಡುವಾಗ ಮಾಸ್ಕ್ ಧರಿಸುವುದು ಅನಿವಾರ್ಯ. ಮಾಸ್ಕ್ ಕೊರೊನಾ ಅಪಾಯದಿಂದ ನಮ್ಮನ್ನು ಸುರಕ್ಷಿತವಾಗಿಡಬಲ್ಲದು. ಮುಖವಾಡವನ್ನು ಧರಿಸುವುದರಿಂದ ಯಾವುದೇ ಉಸಿರಾಟದ ತೊಂದರೆಗಳು ಉಂಟಾಗುವುದಿಲ್ಲ. ಸೋಂಕಿತರ ವೈರಸ್ ನಮ್ಮ ದೇಹ ತಲುಪುವುದನ್ನು ಮಾಸ್ಕ್ ತಡೆಯುತ್ತದೆ. ಇದು ಉಸಿರಾಟದ ಪ್ರಕ್ರಿಯೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ದೇಹದಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟವನ್ನು ಹೆಚ್ಚಿಸುವುದಿಲ್ಲ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲವೆಂದು ತಜ್ಞರು ಹೇಳಿದ್ದಾರೆ.
ವದಂತಿಗಳಿಗೆ ಕಿವಿಗೊಡಬೇಡಿ ಎಂದ ಸಿಡಿಸಿ :
ಮಾಸ್ಕ್ ಧರಿಸಿದ್ರೆ ದೇಹದಲ್ಲಿ ಕಾರ್ಬನ್ ಡೈಆಕ್ಸೈಡ್ (CO2) ಹೆಚ್ಚಾಗುತ್ತದೆ ಎಂಬುದು ಸಂಪೂರ್ಣವಾಗಿ ತಪ್ಪು ಎಂದು ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಹೇಳಿದೆ. ಇಂತಹ ವದಂತಿಗಳಿಗೆ ಜನರು ತಲೆಕೆಡಿಸಿಕೊಳ್ಳಬಾರದು. ಕೊರೊನಾದಿಂದ ರಕ್ಷಿಸಲು ಮಾಸ್ಕ್ ಧರಿಸುವುದು ಬಹಳ ಮುಖ್ಯ. ಅದರ ಗುಣಮಟ್ಟ ಮತ್ತು ಫಿಟ್ಟಿಂಗ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸಿಡಿಸಿ ಹೇಳಿದೆ.
Health Tips: ಹೆಚ್ಚು ಹಾಲು ಹಾಕಿದ ಟೀ ಕುಡಿದ್ರೆ ಆರೋಗ್ಯ ಸಮಸ್ಯೆನೂ ಹೆಚ್ಚು
ಯಾವ ಮಾಸ್ಕ್ ಉತ್ತಮ ? :
ಮಾರುಕಟ್ಟೆಯಲ್ಲಿ ವಿವಿಧ ಮಾಸ್ಕ್ ಗಳು ಲಭ್ಯವಿದೆ. ಆದ್ರೆ ಕೊರೊನಾ ರಕ್ಷಣೆಗೆ ಎಲ್ಲ ಮಾಸ್ಕ್ ಪರಿಣಾಮಕಾರಿಯಲ್ಲ. ಸರ್ಜಿಕಲ್ ಮಾಸ್ಕ್ ಮತ್ತು ಬಟ್ಟೆಯ ಮಾಸ್ಕ್ ತೊಳೆದಂತೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಶೇಕಡಾ 70ರಷ್ಟು ಈ ಮಾಸ್ಕ್ ಕೊರೊನಾ ತಡೆಯಲು ಸಹಕಾರಿ. ಆದ್ರೆ ಎನ್ -95 ಮಾಸ್ಕ್ ಬಹಳ ಪರಿಣಾಮಕಾರಿ ಎನ್ನಲಾಗಿದೆ. ಹಾಗೆ ಎರಡು ಮಾಸ್ಕ್ ಧರಿಸುವುದು ಕೂಡ ಪರಿಣಾಮಕಾರಿ ಎಂಬುದು ಅನೇಕ ಅಧ್ಯಯನಗಳಿಂದ ಹೊರ ಬಂದಿದೆ. ನೀವು ಯಾವುದೇ ಮಾಸ್ಕ್ ಧರಿಸಿ,ಅದ್ರ ಫಿಟ್ಟಿಂಗ್ ಬಗ್ಗೆ ಹೆಚ್ಚು ಗಮನ ನೀಡಿ ಎಂದು ತಜ್ಞರು ಹೇಳಿದ್ದಾರೆ. ಮೂಗು ಹಾಗೂ ಬಾಯಿ ಎರಡನ್ನೂ ಕವರ್ ಮಾಡುವಂತಹ ಮಾಸ್ಕ್ ಧರಿಸಬೇಕೆಂದು ತಜ್ಞರು ಹೇಳಿದ್ದಾರೆ.