ನೀರು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ವ್ಯಕ್ತಿಯೊಬ್ಬ ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಬೇಕು ಎಂದು ಸ್ವತಃ ವೈದ್ಯರೇ ಸಲಹೆ ನೀಡುತ್ತಾರೆ. ಆದ್ರೆ ಅತಿಯಾಗಿ ನೀರು ಕುಡಿಯೋ ಅಭ್ಯಾಸ ಸಹ ಅಪಾಯಕಾರಿ. ಹೀಗೆ ವ್ಯಕ್ತಿಯೊಬ್ಬ ಫಿಟ್‌ನೆಸ್ ಚಾಲೆಂಜ್‌ಗಾಗಿ ಹೆಚ್ಚು ನೀರು ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಫಿಟ್‌ನೆಸ್ ಚಾಲೆಂಜ್‌ನ ಭಾಗವಾಗಿ ಕೆನಡಾದ ಟಿಕ್‌ಟೋಕರ್ 12 ದಿನಗಳ ಕಾಲ ನಾಲ್ಕು ಲೀಟರ್ ನೀರು ಕುಡಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ. 75 ಹಾರ್ಡ್ ಎಂದು ಹೆಸರಿಸಲಾದ ಫಿಟ್‌ನೆಸ್ ಚಾಲೆಂಜ್‌ವೊಂದು ಸದ್ಯ ವಿದೇಶದಲ್ಲಿ ವೈರಲ್ ಆಗ್ತಿದೆ. ಈ ಚಾಲೆಂಜ್‌ನಲ್ಲಿ ಭಾಗವಹಿಸುವವರು 75 ದಿನಗಳ ವರೆಗೆ ಸುಮಾರು ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಇದು ಅಲ್ಕೋಹಾಲ್ ಅಥವಾ 'ಚೀಟ್ ಮೀಲ್ಸ್ ಇಲ್ಲದ ಆಹಾರಕ್ರಮವನ್ನು ಅನುಸರಿಸುವುದು, ದಿನಕ್ಕೆ 45 ನಿಮಿಷ ಎಕ್ಸರ್‌ಸೈಸ್ ಮಾಡುವುದು, ಪುಸ್ತಕದ ಹತ್ತು ಪುಟಗಳನ್ನು ಓದುವುದು, ದಿನದ ಚಟುವಟಿಕೆಯ ಫೋಟೋ ತೆಗೆಯುವುದನ್ನು ಒಳಗೊಂಡಿರುತ್ತದೆ. ಹೀಗೆ ಚಾಲೆಂಜ್‌ನಲ್ಲಿ ಭಾಗವಹಿಸಿದ ಮಹಿಳೆ, ಟಿಕ್‌ಟಾಕರ್ ಹೆಚ್ಚು ನೀರು ಕುಡಿದ ನಂತರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಿಚೆಲ್ ಫೇರ್‌ಬರ್ನ್ ಎಂಬವರು ಟಿಕ್‌ಟಾಕ್‌ನಲ್ಲಿ ಚಾಲೆಂಜ್ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನೀರು (Water) ಕುಡಿದ ನಂತರ ನಾನು ಹೇಗೆ ಅಸ್ವಸ್ಥಳಾದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಾಲೆಂಜ್ ಸ್ವೀಕರಿಸಿ ಅದನ್ನು ಅನುಕರಿಸುತ್ತಿರುವಾಗಲೇ ನನಗೆ ಅಸ್ವಸ್ಥತೆಯ ಅನುಭವವಾಗಲು ಶುರುವಾಯಿತು. ನಾನು ವಾಕರಿಕೆ, ಸುಸ್ತು (Tired) ಮೊದಲಾದ ಸಮಸ್ಯೆಯನ್ನು ಅನುಭವಿಸಿದೆ ಎಂದಿದ್ದಾರೆ. ಸತತವಾಗಿ ಅನಾರೋಗ್ಯದ ಅನುಭವ ಆದ ನಂತರ ಮಿಷೆಲ್ ವೈದ್ಯರಲ್ಲಿ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಆಕೆಗೆ ತೀವ್ರವಾದ ಸೋಡಿಯಂ ಕೊರತೆಯಿರೋದು ತಿಳಿದು ಬಂತು. ದಿನಕ್ಕೆ ನಾಲ್ಕು ಲೀಟರ್‌ಗಿಂತ ಹೆಚ್ಚು ನೀರು ಸೇವಿಸುವ ಬದಲು, ದಿನಕ್ಕೆ ಅರ್ಧ ಲೀಟರ್‌ಗಿಂತ ಕಡಿಮೆ ನೀರನ್ನು ಸೇವಿಸುವಂತೆ ಸಲಹೆ ನೀಡಲಾಯಿತು.
ದಿನಕ್ಕೆ ಅಷ್ಟು ನೀರು ಕುಡೀರಿ, ಇಷ್ಟು ನೀರು ಕುಡೀರಿ ಅಂತಾರೆ, ಭರ್ತಿ ನೀರು ಕುಡಿದೋನ ಕಥೆ ಏನಾಗಿತ್ತು?
ಫಿಟ್‌ನೆಸ್ ಪ್ರೋಗ್ರಾಂನ್ನು 2019 ರಲ್ಲಿ ಪಾಡ್‌ಕಾಸ್ಟರ್ ಮತ್ತು ಪೂರಕ ಕಂಪನಿಯ ಸಿಇಒ ಆಂಡಿ ಫ್ರಿಸೆಲ್ಲಾಆರಂಭಿಸಿದರು. ಅವರು ಈ ಚಾಲೆಂಜ್‌ನ್ನು 'ಮೆದುಳಿನ ಆರೋಗ್ಯಕ್ಕೆ (Brain health) ಐರನ್‌ಮ್ಯಾನ್' ಎಂದು ಕರೆದರು. ಆದರೆ ಹಲವು ಆರೋಗ್ಯ ತಜ್ಞರು, ಯಾವುದೇ ಫಿಟ್‌ನೆಸ್ ಚಾಲೆಂಜ್‌ನ್ನು ಸ್ವೀಕರಿಸುವ ಮೊದಲು ವೈದ್ಯರನ್ನು ಅಥವಾ ಆಹಾರತಜ್ಞರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ.
ಅತಿಯಾಗಿ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ
ಹೊಟ್ಟೆ ಉಬ್ಬರಿಸುವ ಸಮಸ್ಯೆ: ದೇಹಕ್ಕೆ (Body) ನೀರಿನ ಅಗತ್ಯವಿರುವುದನ್ನು ಸತ್ಯ. ಹಾಗಂದ ಮಾತ್ರಕ್ಕೆ ಅತೀ ಹೆಚ್ಚು ನೀರು ಕೂಡ ಅವಶ್ಯಕತೆ ಇರುವುದಿಲ್ಲ. ಅತೀ ಹೆಚ್ಚು ನೀರು ಕುಡಿದರೆ, ಹೊಟ್ಟೆ ಉಬ್ಬರಿಸಿದಂತಾಗುವ ಸಮಸ್ಯೆ ಅನುಭವಿಸಬೇಕಾಗುತ್ತದೆ. ಅಲ್ಲದೆ, ಇದು ನಿಮ್ಮ ಜೀರ್ಣಕಾರಿ ಬೆಂಕಿಯನ್ನು ತಗ್ಗಿಸುತ್ತದೆ ಮತ್ತು ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ.
ವಾಕರಿಕೆ: ಅಧಿಕ ಜಲಸಂಚಯನದ ಲಕ್ಷಣಗಳು ನಿರ್ಜಲೀಕರಣದ ಲಕ್ಷಣಗಳಂತೆ ಕಾಣಿಸಬಹುದುದೇಹದಲ್ಲಿ ಹೆಚ್ಚು ನೀರು ಇದ್ದಾಗ, ಮೂತ್ರಪಿಂಡಗಳು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಇದು ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ವಾಕರಿಕೆ, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ.
ಮಣ್ಣಿನ ಪಾತ್ರೆಯಲ್ಲಿ ತುಂಬಿಸಿಟ್ಟ ನೀರು ಕುಡಿದ್ರೆ ಅಸಿಡಿಟಿ ಸಮಸ್ಯೆ ಕಾಡಲ್ಲ
ತಲೆನೋವು. ತಲೆನೋವು ಜಲಸಂಚಯನ ಮತ್ತು ನಿರ್ಜಲೀಕರಣ ಎರಡನ್ನೂ ಸೂಚಿಸುತ್ತದೆ. ದೇಹದಲ್ಲಿನ ಹೆಚ್ಚುವರಿ ನೀರು ದೇಹದ ಉಪ್ಪಿನಂಶವನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಊದಿಕೊಳ್ಳುತ್ತದೆ. ಈ ಒತ್ತಡವು ತಲೆನೋವನ್ನು (Headache) ಉಂಟುಮಾಡುತ್ತದೆ ಮತ್ತು ಮೆದುಳಿನ ದುರ್ಬಲತೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಕೈಗಳು, ಪಾದಗಳು ಮತ್ತು ತುಟಿಗಳ ಬಣ್ಣ: ದೇಹ ಅಧಿಕವಾಗಿ ಹೈಡ್ರೀಕರಿಸಲ್ಪಟ್ಟಾಗ, ಪಾದಗಳು, ಕೈಗಳು ಮತ್ತು ತುಟಿಗಳ ಕೆಲವು ಊತ ಅಥವಾ ಬಣ್ಣ ಬದಲಾಗುವುದನ್ನು ಗಮನಿಸಬಹುದು. ಜೀವಕೋಶಗಳು ಊದಿಕೊಂಡಾಗ ಚರ್ಮವೂ ಊದಿಕೊಳ್ಳುತ್ತದೆ.
ಸ್ನಾಯುಗಳ ಸೆಳೆತ: ಹೆಚ್ಚು ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಮಟ್ಟವು ಕಡಿಮೆಯಾದಾಗ, ದೇಹದ ಸಮತೋಲನವು ಕಡಿಮೆಯಾಗುತ್ತದೆ. ದೇಹದಲ್ಲಿನ ಕಡಿಮೆ ಎಲೆಕ್ಟ್ರೋಲೈಟ್ ಮಟ್ಟಗಳು ಸ್ನಾಯು ಸೆಳೆತ ಮತ್ತು ಸೆಳೆತಕ್ಕೆ ಕಾರಣವಾಗಬಹುದು.