ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ

Published : Apr 21, 2025, 11:19 AM ISTUpdated : Apr 30, 2025, 04:57 PM IST
ಎರಡೇ ಎರಡೇ ಪುಡಿ- ಬಿಳಿಗೂದಲು ಫುಲ್​ ಮಾಯ: ಪ್ರಖ್ಯಾತ ಆಯುರ್ವೇದ ವೈದ್ಯರ ಸಲಹೆ ಕೇಳಿ

ಸಾರಾಂಶ

ಕ್ಯಾನ್ಸರ್‌ಗೆ ಕೆಮಿಕಲ್‌ಯುಕ್ತ ಹೇರ್‌ಡೈಗಳು ಪ್ರಮುಖ ಕಾರಣ. ಚರ್ಮ, ರಕ್ತ, ಸ್ತನ ಕ್ಯಾನ್ಸರ್‌ಗಳಿಗೆ ಹೇರ್‌ಡೈ ಕಾರಣವಾಗಬಲ್ಲದು. ವಯಸ್ಸಾದಂತೆ ಕಾಣದಿರಲು ಹೇರ್‌ಡೈ ಬಳಕೆ ಹೆಚ್ಚುತ್ತಿದೆ. ಆದರೆ ಮೆಹಂದಿ ಮತ್ತು ನೀಲಿ ಪುಡಿ ಬಳಸಿ ನೈಸರ್ಗಿಕವಾಗಿ ಕೂದಲು ಕಪ್ಪಾಗಿಸಬಹುದು. ಇದು ಕೂದಲು ಬೆಳವಣಿಗೆಗೂ ಸಹಕಾರಿ.

ಕ್ಯಾನ್ಸರ್​ ಎನ್ನುವ ಹೆಸರು ಕೇಳಿದರೇನೇ ಮೈಯೆಲ್ಲಾ ಝುಂ ಎನ್ನುತ್ತದೆ ಅಲ್ಲವೆ? ಈಗ ಕ್ಯಾನ್ಸರ್​ ಎನ್ನುವ ಮಹಾಮಾರಿ ಅದೆಷ್ಟರಮಟ್ಟಿಗೆ ಆವರಿಸಿಕೊಂಡಿದೆ ಎಂದರೆ, ಕ್ಯಾನ್ಸರ್​ ಆಸ್ಪತ್ರೆಗಳ ಸಂಖ್ಯೆ ಹೆಚ್ಚುತ್ತಿರುವುದೇ ಸಾಕ್ಷಿಯಾಗಿದೆ. ಎಲ್ಲಿ ನೋಡಿದರೂ ಕ್ಯಾನ್ಸರ್​ ಕ್ಯಾನ್ಸರ್​. ಇಂದಿನ ಆಹಾರ ಕ್ರಮಗಳಿಂದಲೂ ಕ್ಯಾನ್ಸರ್​ ಬರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೆ ಇದಕ್ಕೆ ಇನ್ನೊಂದು ಮುಖ್ಯ ಕಾರಣ ಏನು ಗೊತ್ತೆ? ನಾವು ಬಳಸುತ್ತಿರುವ ಕೆಮಿಕಲ್​ಯುಕ್ತ ಹೇರ್​ಡೈಗಳು! ಅದರಲ್ಲಿಯೂ ಮಹಿಳೆಯರಿಗೆ ಬ್ರೆಸ್ಟ್​ ಕ್ಯಾನ್ಸರ್​ ಹೆಚ್ಚಾಗಲು ಕಾರಣವೇ ಮಾರುಕಟ್ಟೆಯಲ್ಲಿ ಸಿಗುವ, ಸಿನಿಮಾ ತಾರೆಯರು  ಲಕ್ಷ ಲಕ್ಷ ದುಡ್ಡು ಪಡೆದು ಜಾಹೀರಾತು ನೀಡುವ ಹೇರ್​ಡೈಗಳು ಎನ್ನುವುದು ಇದಾಗಲೇ ಸಾಬೀತಾಗಿ ಬಿಟ್ಟಿದೆ. 

ಹೇರ್​ ಕಲರ್​ನಿಂದಲೂ ಕ್ಯಾನ್ಸರ್​ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬ್ಲಡ್​ ಕ್ಯಾನ್ಸರ್ ಇದರಿಂದಲೇ ಅಧಿಕ  ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು  ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

ಈ ತಿಂಗಳಲ್ಲಿ ಜನಿಸಿದ್ರೆ ಆರೋಗ್ಯದ ವಿಷ್ಯದಲ್ಲಿ ಅದೃಷ್ಟವಂತರು! ಹುಟ್ಟಿದ ಮಾಸದಲ್ಲಿದೆ ಗುಟ್ಟು- ಇಲ್ಲಿದೆ ಡಿಟೇಲ್ಸ್​

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ  ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ.   ಆದರೆ ನೈಸರ್ಗಿಕವಾಗಿಯೂ ತಲೆಗೂದಲನ್ನು ಕಪ್ಪು ಮಾಡಿಕೊಳ್ಳಬಹುದು. ಅದಕ್ಕೆ ಸೂಪರ್​ ಟಿಪ್ಸ್​ ಕೊಟ್ಟಿದ್ದಾರೆ ಶಿರಸಿಯ  ಪ್ರಖ್ಯಾತ ಆಯುರ್ವೇದ ವೈದ್ಯರಾಗಿರುವ ಡಾ.ವಿನಾಯಕ ಹೆಬ್ಬಾರ್​.

ಅವರು ಹೇಳಿರುವಂತೆ ಎರಡೇ ಪುಡಿಗಳು ಸಾಕು. ಒಂದು ಮೆಹಂದಿ ಪುಡಿ, ಇನ್ನೊಂದು ನೀಲಿ ಪುಡಿ ಅರ್ಥಾತ್​ ಇಂಡಿಗೋ ಪೌಡರ್​. ಹಾಗೆಂದು ಮಾರುಕಟ್ಟೆಯಲ್ಲಿ ಬೇಕಾಬಿಟ್ಟೆ ಸಿಗುವ ಮೆಹಂದಿ ಪುಡಿಯಲ್ಲಿಯೂ ಕೆಮಿಕಲ್​ ಮಿಕ್ಸ್​ ಆಗಗಿರುತ್ತದೆ ಎನ್ನುವುದು ನೆನಪಿರಲಿ. ಆದ್ದರಿಂದ ಗ್ರಂಥಿಗೆ ಅಂಗಡಿಯಲ್ಲಿ ಸಿಗುವ ನೈಸರ್ಗಿಕ ಮೆಹಂದಿ ಪುಡಿಯ ಪ್ಯಾಕೆಟ್​ ತನ್ನಿ. ನೀಲಿ ಪುಡಿ ಅಥವಾ ಇಂಡಿಗೋ ಪುಡಿ ಕೂಡ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ. ಇದನ್ನು ಹೇಗೆ ಬಳಕೆ  ಮಾಡಬೇಕು ಎನ್ನುವುದನ್ನು ಡಾ.ವಿನಾಯಕ ಅವರು ಹೇಳಿದ್ದಾರೆ. ಮೊದಲಿಗೆ ಮೆಹಂದಿ ಪೌಡರ್​ಗೆ ನೀರನ್ನು ಹಾಕಿ ಕಲಿಸಿ ಪೇಸ್ಟ್​ ಮಾಡಿ ಅದನ್ನು ಸಂಪೂರ್ಣ ಕೂದಲಿಗೆ ಬುಡದಿಂದಲೂ ಹಚ್ಚಿ head pack ಮಾಡಿ ಎರಡು ಗಂಟೆಯಾದರೂ ತಲೆಯಲ್ಲಿ ಇಟ್ಟುಕೊಳ್ಳಬೇಕು. ನಂತರ ತೊಳೆಯಬೇಕು. ಆಗ ಕೂದಲು ಕೆಂಪಗಾಗುತ್ತದೆ. ಮರುದಿನ ಇಂಡಿಗೋ ಪುಡಿಯನ್ನು ನೀರು ಹಾಕಿ ಪೇಸ್ಟ್​ ಮಾಡಿಕೊಂಡು ಹೆಡ್​ ಪ್ಯಾಕ್​ ಮಾಡಿಕೊಳ್ಳಬೇಕು. 2-3 ಗಂಟೆ ಬಿಟ್ಟು ತೊಳೆದುಕೊಂಡರೆ ನೈಸರ್ಗಿಕ ಹೇರ್​ ಡೈ ನಿಮ್ಮದಾಗುತ್ತದೆ. ಕೂದಲು ಕಪ್ಪಾಗುವುದು ಮಾತ್ರವಲ್ಲದೇ ಇದು ಕೂದಲು ಬೆಳವಣಿಗೆಗೂ ಸಹಾಯಕಾರಿ. ವೈದ್ಯರು ಹೇಳಿರುವಂತೆ ವಾರಕ್ಕೊಮ್ಮೆ ಇಲ್ಲವೇ 10 ದಿನಗಳಿಗೆ ಒಮ್ಮೆ ಹೀಗೆ ಮಾಡುತ್ತಾ ಬಂದರೆ  ಕೂದಲು ಕೂಡ ಬೆಳೆಯುತ್ತದೆ. 

ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಲಿಪ್​ಸ್ಟಿಕ್ಕೂ ಕಾರಣ! 17.49 ಬಿಲಿಯನ್ ಡಾಲರ್​ ಉದ್ಯಮದ ಶಾಕಿಂಗ್​ ಡಿಟೇಲ್ಸ್​ ಇಲ್ಲಿದೆ...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!