
ಲೈಂಗಿಕ ಸಂಪರ್ಕದ ಮೂಲಕ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ 50ಕ್ಕೂ ಹೆಚ್ಚು ಮಂದಿಗೆ ಎಚ್‌ಐವಿ ಹರಡಲು ಪ್ರಯತ್ನಿಸಿದ ಘಟನೆ ಯುಎಸ್‌ನಲ್ಲಿ ನಡೆದಿದೆ. 34 ವರ್ಷದ ವ್ಯಕ್ತಿಗೆ ಕನಿಷ್ಠ 30 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲೆಕ್ಸಾಂಡರ್ ಲೂಯಿ ಎಂಬಾತ 16 ವರ್ಷದ ಓರ್ವ ಹುಡುಗ ಸೇರಿದಂತೆ 30ರಿಂದ 50 ವರ್ಷದ ಹಲವಾರು ಹುಡುಗರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ. ಆದರೆ ಉದ್ದೇಶಪೂರ್ವಕವಾಗಿಯೇ ತನ್ನ ಆರೋಗ್ಯ ಸ್ಥಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿರಲ್ಲಿಲ್ಲ. ತಾನು HIV ಪಾಸಿಟಿವ್ ಎಂಬುದನ್ನು ಯಾರಲ್ಲೂ ಹೇಳಿರಲ್ಲಿಲ್ಲ.
ಕಳೆದ ಆಗಸ್ಟ್‌ನಲ್ಲಿ ಲೂಯಿ ಅವರು 15 ವರ್ಷ ವಯಸ್ಸಿನ ಹುಡುಗನ ಜೊತೆ ಆನ್‌ಲೈನ್‌ನಲ್ಲಿ ಲೈಂಗಿಕ ಸಂಭಾಷಣೆಯನ್ನು ಪ್ರಾರಂಭಿಸಿದ ನಂತರ ಪ್ರಕರಣದ ತನಿಖೆ ಪ್ರಾರಂಭವಾಯಿತು. ತನಿಖೆಯ ನಂತರದ ಹಂತದಲ್ಲಿ ಅಲೆಕ್ಸಾಂಡರ್ ಲೂಯಿ, ಉದ್ದೇಶಪೂರ್ವಕವಾಗಿ ಲೈಂಗಿಕತೆಯ ಮೂಲಕ ಇತರರಿಗೆ ಎಚ್‌ಐವಿ ಹರಡಲು ಪ್ರಯತ್ನಿಸುತ್ತಿದ್ದ ಎಂಬುದು ತಿಳಿದುಬಂತು. ತನಿಖೆಯಲ್ಲಿ, ಲೂಯಿ ತನ್ನ HIV ಔಷಧಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಪೊಲೀಸರು ಕಂಡುಕೊಂಡರು.
ಹೀಗೂ ಉಂಟೇ? ಫೇಶಿಯಲ್ ಮೂಲಕ ಎಚ್‌ಐವಿ ಸೋಂಕಿಗೆ ಒಳಗಾದ ಮಹಿಳೆಯರು!
ಲೂಯಿ ಇಂಟರ್ನೆಟ್ ಮೂಲಕ ಹುಡುಗರನ್ನು ಪ್ರಚೋದಿಸುವುದು, ಅಪ್ರಾಪ್ತ ವಯಸ್ಕರ ಲೈಂಗಿಕ ಬ್ಯಾಟರಿ ಮತ್ತು ದೇಹದ ದ್ರವಗಳನ್ನು ವರ್ಗಾಯಿಸುವ ಪ್ರತಿಯೊಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಒಪ್ಪಿಕೊಂಡರು. ಸದ್ಯ ಇಲ್ಲಿನ ಪೊಲೀಸರು ಅಲೆಕ್ಸಾಂಡರ್ ಲೂಯಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
'ಆರೋಪಿಯ ಪುನರಾವರ್ತಿತ ಮತ್ತು ಅತಿರೇಕದ ಅಪರಾಧಗಳು ಸಮುದಾಯದ ಅನೇಕ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಹೀಗಾಗಿ ನಾವು ಶೀಘ್ರವಾಗಿ ತನಿಖೆ ನಡೆಸಿ ಮತ್ತಷ್ಟು ಅನಾಹುತವಾಗದಂತೆ ಆರೋಪಿಯನ್ನು ಬಂಧಿಸಿದ್ದೇವೆ' ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.