ಗಾಳಿಯಲ್ಲೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್‌, ಮಾಸ್ಕ್ ಹಾಕಿಕೊಳ್ಳುವಂತೆ ತಜ್ಞರ ಸಲಹೆ

By Suvarna News  |  First Published Jun 9, 2022, 2:29 PM IST

ಒಂದೆಡೆ ಕೊರೋನಾ, ಇನ್ನೊಂದೆಡೆ ಮಂಕಿಪಾಕ್ಸ್‌ (Monkeypox). ಸಾಲದ್ದಕ್ಕೆ ಟೊಮೆಟೋ ಫ್ಲೂ, ನೊರೋ ವೈರಸ್, ಸಾಲು ಸಾಲು ಸೋಂಕುಗಳು (Virus) ಜನರನ್ನು ಕಂಗೆಡಿಸುತ್ತಿವೆ. ಈ ಮಧ್ಯೆ ಮಂಕಿಪಾಕ್ಸ್ ಹೆಚ್ಚು ಅಪಾಯಕಾರಿ (Danger)ಯೆಂಬುದು ಬಯಲಾಗಿದೆ. ಗಾಳಿಯಲ್ಲೂ (Air) ಮಂಕಿಪಾಕ್ಸ್ ಸೋಂಕು ಹರಡುತ್ತೆ, ಮಾಸ್ಕ್‌ (Mask) ಹಾಕಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ. 


ಕೋವಿಡ್‌ (Covid) ಸೋಂಕಿನ ಪ್ರಭಾವ ಇನ್ನೇನು ಕಡಿಮೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೋವಿಡ್ ಕಾಟ ಶುರುವಾಗಿದೆ. ದೇಶಾದ್ಯಂತ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ವಿಶ್ವಾದ್ಯಂತ ಭೀತಿ ಹುಟ್ಟಿಸಿರೋ ಮಂಕಿಪಾಕ್ಸ್ (Monkeypox) ಸಹ ಎಲ್ಲೆಡೆ ಹಬ್ಬುತ್ತಾ ಹೋಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಸಮುದಾಯವಾಗಿ ಸೋಂಕು ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಸಮುದಾಯ ಹರಡುವಿಕೆ ವರದಿಯಾಗಿದ್ದು, ಇದು ಅಪಾಯಕಾರಿಯಾಗಿದೆ. 29 ದೇಶಗಳಿಂದ 1,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.

ಮಂಕಿಪಾಕ್ಸ್ ವೈರಸ್‌ ಸಮುದಾಯ ಪ್ರಸರಣವನ್ನು ಖಚಿತಪಡಿಸುತ್ತದೆ. ಮಕ್ಕಳು ಮತ್ತು ಗರ್ಭಿಣಿಯರು ಅಪಾಯದಲ್ಲಿದ್ದಾರೆ ಎಂದು WHO ಹೇಳಿದೆ. ಜನರ ಮಧ್ಯೆ ಸುಲಭವಾಗಿ ಹರಡುತ್ತಿರುವ ಈ ಸೋಂಕು ಗರ್ಭಿಣಿಯರು, ಮಕ್ಕಳು ಮತ್ತು ದುರ್ಬಲ ವ್ಯಕ್ತಿಗಳಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಿಗೆ ಬೇಗನೇ ತಗಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Tap to resize

Latest Videos

ಮಂಕಿಪಾಕ್ಸ್‌ ವೈರಸ್‌ ಸಮುದಾಯ ಪ್ರಸರಣ ಶುರು, ಮಕ್ಕಳು, ಗರ್ಭಿಣಿಯರಿಗೆ ಹೆಚ್ಚು ಅಪಾಯ, WHO ಎಚ್ಚರಿಕೆ

ಈ ಮಧ್ಯೆ ಮಂಕಿಪಾಕ್ಸ್ ವೈರಸ್ ದೂರದವರೆಗೂ ಗಾಳಿಯಲ್ಲಿ ಹರಡಬಹುದು ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್‌ನ ಅಧಿಕಾರಿಗಳು ಶಂಕಿಸಿದ್ದಾರೆ. ಆದ್ದರಿಂದ ನಿಕಟ ಸಂಪರ್ಕದಲ್ಲಿರುವ ಜನರು ಮತ್ತು ಆರೋಗ್ಯ ಕಾರ್ಯಕರ್ತರು ಮಾಸ್ಕ್‌  (Mask)ಗಳನ್ನು ಧರಿಸುವಂತೆ ಸಲಹೆ ನೀಡಲಾಗಿದೆ. ಸಿಡಿಸಿ, ಕಳೆದ ವಾರ ಪ್ರಯಾಣಿಕರಿಗೆ ನವೀಕರಿಸಿದ ಮಾರ್ಗದರ್ಶನದಲ್ಲಿ, ಮುಖವಾಡಗಳನ್ನು ಧರಿಸುವ ಮೂಲಕ ಮಂಗನ ಕಾಯಿಲೆಯಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳುವಂತೆ ಸಲಹೆ ನೀಡಿದೆ. ವಿಶೇಷವಾಗಿ ಉಸಿರಾಟದ ರೋಗಲಕ್ಷಣಗಳನ್ನು ಹೊಂದಿರುವವರು ಸರ್ಜಿಕಲ್ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ.

ಇಲ್ಲಿಯವರೆಗೆ ಆರೋಗ್ಯ ಅಧಿಕಾರಿಗಳು ವಾಯುಗಾಮಿ ಪ್ರಸರಣದ ಸಾಧ್ಯತೆ ಅಥವಾ ಮುಖವಾಡಗಳ ಅಗತ್ಯವನ್ನು ಸ್ಪಷ್ಟವಾಗಿ ತಿಳಿಸಿಲ್ಲ, ಆದರೆ  ಸೋಂಕಿತ ರೋಗಿಗಳು ಮುಟ್ಟಿದ ವಸ್ತುಗಳು ಮತ್ತು ಅವರ ಸಂಪರ್ಕಕ್ಕೆ ಬಂದವರಲ್ಲಿ ವೈರಸ್ ಅಪಾಯ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಮಾತ್ರವಲ್ಲ ಸೋಂಕಿತ ವ್ಯಕ್ತಿ ಕೆಮ್ಮುವುದರಿಂದಲೂ ಗಾಳಿಯಲ್ಲಿ ಸುಲಭಾಗಿ ವೈರಸ್ ಹರಡಬಹುದು ಎನ್ನಲಾಗಿದೆ. ಇದು ಹಲವಾರು ಮೀಟರ್‌ಗಳಲ್ಲಿ ಹರಡುವ ವೈರಸ್ ಅಲ್ಲ ಎಂದು ತಜ್ಞರ ತಂಡ ಹೇಳಿದೆ. ಹೀಗಾಗಿಯೇ ಜನರು ಗುಂಪುಗಳಲ್ಲಿ, ಜನಸಂದಣಿಯಲ್ಲಿ ಸೇರುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ಪ್ರಸರಣದ ನಿಜವಾದ ಅಥವಾ ಪ್ರಬಲವಾದ ಮಾರ್ಗ ಯಾವುದು ಎಂಬುದು ಬಹಳ ಅಸ್ಪಷ್ಟವಾಗಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಶೋಧಕರಾದ ನ್ಯಾನ್ಸಿ ಸುಲ್ಲಿವನ್, ಇತ್ತೀಚಿನ ವಿಶ್ವ ವೈಜ್ಞಾನಿಕ ಸಮ್ಮೇಳನದಲ್ಲಿ ಹೇಳಿದರು. 

ಮಂಕಿಪಾಕ್ಸ್ ಸೋಂಕು ಲೈಂಗಿಕ ಸಂಪರ್ಕದಿಂದ ವೇಗವಾಗಿ ಹರಡ್ತಿದೆ ; ವಿಶ್ವ ಆರೋಗ್ಯ ಸಂಸ್ಥೆ

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತೆ ಸೋಂಕು
ವೈರಸ್ ಸ್ವತಃ ಲೈಂಗಿಕವಾಗಿ ಹರಡುವ ಸೋಂಕಲ್ಲ, ಇದು ಸಾಮಾನ್ಯವಾಗಿ ವೀರ್ಯ ಮತ್ತು ಯೋನಿ ದ್ರವಗಳ ಮೂಲಕ ಹರಡುತ್ತದೆ. ಆದರೆ ಇತ್ತೀಚಿನ ಉಲ್ಬಣವು - WHO ಜೂನ್ 2 ರವರೆಗೆ 27 ದೇಶಗಳಲ್ಲಿ 780 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ಇತರ ಪುರುಷರೊಂದಿಗೆ ಲೈಂಗಿಕತೆ ಹೊಂದಿರುವ ಪುರುಷರಲ್ಲಿ ಇದು ಹೆಚ್ಚು ಹರಡಿರುವುದನ್ನು ಗಮನಿಸಬಹುದು. 

ಇದುವರೆಗೂ ಮಂಕಿಪಾಕ್ಸ್ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಉಸಿರಾಟದ ಪ್ರದೇಶ, ಗಾಯಗಳು, ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಪ್ರವೇಶಿಸಬಹುದು ಎಂದು ತಜ್ಞರು ಭಾವಿಸಿದ್ದರು. ಆದರೆ ಹೊಸ ಪ್ರಕರಣಗಳನ್ನು ಪರೀಕ್ಷಿಸಿದ ನಂತರ, ಮಂಕಿ ವೈರಸ್ ಲೈಂಗಿಕ ಸಂಭೋಗದ (Sex) ಮೂಲಕವೂ ಹರಡಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ನೀವು ಮಂಕಿ ಪಾಕ್ಸ್ ಹೊಂದಿರುವ ಯಾರೊಂದಿಗಾದರೂ ಲೈಂಗಿಕ ಕ್ರಿಯೆ ನಡೆಸಿದರೆ, ಅವರ ಸಂಗಾತಿಗೂ ಮಂಕಿ ಪಾಕ್ಸ್ ಬರುವ ಸಾಧ್ಯತೆಯಿದೆ ಎಂದು ತಜ್ಞರ ವಿಭಾಗವೊಂದು ತಿಳಿಸಿದೆ.

click me!