Asianet Suvarna News Asianet Suvarna News

ಮಂಕಿಪಾಕ್ಸ್‌ ವೈರಸ್‌ ಸಮುದಾಯ ಪ್ರಸರಣ ಶುರು, ಮಕ್ಕಳು, ಗರ್ಭಿಣಿಯರಿಗೆ ಹೆಚ್ಚು ಅಪಾಯ, WHO ಎಚ್ಚರಿಕೆ

ಜಗತ್ತಿನಾದ್ಯಂತ ಒಂದೆಡೆ ಕೊರೋನಾ ವೈರಸ್ (Corona virus) ಪ್ರಕರಣಗಳು ಹೆಚ್ಚಾಗ್ತಿದ್ರೆ, ಇನ್ನೊಂದೆಡೆ ಮಂಕಿಪಾಕ್ಸ್ (Monkeypox) ಸೋಂಕಿನ ಕುರಿತಾದ ಆತಂಕ ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಹೊಸ ವರದಿಯೊಂದರ ಪ್ರಕಾರ, ಮಂಕಿಪಾಕ್ಸ್‌ ವೈರಸ್‌ನಿಂದ ಮಕ್ಕಳು (Children) ಮತ್ತು ಗರ್ಭಿಣಿಯರು (Pregnant) ಹೆಚ್ಚು ಅಪಾಯದಲ್ಲಿದ್ದಾರಂತೆ. ಆ ಬಗ್ಗೆ ಇಲ್ಲಿದೆ ಮಾಹಿತಿ. 

WHO Confirms Community Transmission Of Monkeypox Virus, Says Children, Pregnant Women At Risk Vin
Author
Bengaluru, First Published Jun 9, 2022, 10:36 AM IST

ಕೋವಿಡ್‌ (Covid) ಸೋಂಕಿನ ಪ್ರಭಾವ ಇನ್ನೇನು ಕಡಿಮೆಯಾಯ್ತು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಕೋವಿಡ್ ಕಾಟ ಶುರುವಾಗಿದೆ. ದೇಶಾದ್ಯಂತ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ವಿಶ್ವಾದ್ಯಂತ ಭೀತಿ ಹುಟ್ಟಿಸಿರೋ ಮಂಕಿಪಾಕ್ಸ್ (Monkeypox) ಸಹ ಎಲ್ಲೆಡೆ ಹಬ್ಬುತ್ತಾ ಹೋಗುತ್ತಿದೆ. ನೈಜೀರಿಯಾದಲ್ಲಿ  (Nigeria) ಮಂಕಿಪಾಕ್ಸ್ ಕಾಯಿಲೆಗೆ ಮೊದಲ ವ್ಯಕ್ತಿ ಸಾವನ್ನಪ್ಪಿದ್ದಾರೆ.  ಆಫ್ರಿಕಾದ ಮತ್ತೊಂದು ರಾಷ್ಟ್ರವಾದ ಕಾಂಗೋದಲ್ಲಿ (Congo) ಈ ವರ್ಷ 9 ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಖಚಿತಪಡಿಸಿದೆ. ವಿವಿಧ ದೇಶಗಳಲ್ಲಿ ವೇಗವಾಗಿ ಹಬ್ಬುತ್ತಿರುವ ಸೋಂಕು ಜನರನ್ನು ಚಿಂತೆಗೀಡು ಮಾಡಿದೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ವೈರಸ್ ಬಗ್ಗೆ ಆತಂಕಕಾರಿ ವಿಚಾರವನ್ನು ಬಹಿರಂಗಗೊಳಿಸಿದೆ.  

ಮಂಕಿಪಾಕ್ಸ್‌ನಿಂದ ಗರ್ಭಿಣಿ, ಮಕ್ಕಳಿಗೆ ಹೆಚ್ಚು ಅಪಾಯ
ಸಮುದಾಯ ಸೋಂಕಿನ ಅಪಾಯಗಳ ಬಗ್ಗೆ WHO ಕಳವಳ ವ್ಯಕ್ತಪಡಿಸಿದೆ. ಕೆಲವು ದೇಶಗಳಲ್ಲಿ ಮಂಕಿಪಾಕ್ಸ್ ಸೋಂಕಿನ ಸಮುದಾಯ ಹರಡುವಿಕೆ ವರದಿಯಾಗಿದ್ದು, ಇದು ಅಪಾಯಕಾರಿಯಾಗಿದೆ. 29 ದೇಶಗಳಿಂದ 1,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ  ಮಂಕಿಪಾಕ್ಸ್ ವೈರಸ್‌ ಸಮುದಾಯ ಪ್ರಸರಣವನ್ನು ಖಚಿತಪಡಿಸುತ್ತದೆ. ಮಕ್ಕಳು ಮತ್ತು ಗರ್ಭಿಣಿಯರು ಅಪಾಯದಲ್ಲಿದ್ದಾರೆ ಎಂದು WHO ಹೇಳಿದೆ. ಜನರ ಮಧ್ಯೆ ಸುಲಭವಾಗಿ ಹರಡುತ್ತಿರುವ ಈ ಸೋಂಕು ಗರ್ಭಿಣಿಯರು, ಮಕ್ಕಳು ಮತ್ತು ದುರ್ಬಲ ವ್ಯಕ್ತಿಗಳಿಗೆ, ರೋಗ ನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳಿಗೆ ಬೇಗನೇ ತಗಲುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಮಂಕಿಪಾಕ್ಸ್ ವೈರಸ್‌ 2017ರಲ್ಲಿ ಕಂಡು ಬಂದ ಸೋಂಕಿಗಿಂತಲೂ ದುರ್ಬಲ, ಆದರೆ ಹೆಚ್ಚು ಅಪಾಯಕಾರಿ !

ಹಲವು ದೇಶಗಳಲ್ಲಿ ಸಮುದಾಯ ಪ್ರಸರಣ ಆರಂಭ
ಕೆಲವು ದೇಶಗಳು ಈಗ ಮಹಿಳೆಯರಲ್ಲಿ ಕೆಲವು ಪ್ರಕರಣಗಳು ಸೇರಿದಂತೆ ಸ್ಪಷ್ಟವಾದ ಸಮುದಾಯ ಪ್ರಸರಣದ ಪ್ರಕರಣಗಳನ್ನು ವರದಿ ಮಾಡಲು ಪ್ರಾರಂಭಿಸಿವೆ. ಸ್ಥಳೀಯವಲ್ಲದ ದೇಶಗಳಲ್ಲಿ ಮಂಕಿಪಾಕ್ಸ್‌ನ ಅಪಾಯವು ನಿಜವಾಗಿದೆ. ಮಕ್ಕಳು ಮತ್ತು ಗರ್ಭಿಣಿಯರು ಸೇರಿದಂತೆ ದುರ್ಬಲ ಗುಂಪುಗಳಿಗೆ ಈ ವೈರಸ್‌ನ ಅಪಾಯಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷವಾಗಿ ಕಾಳಜಿ ವಹಿಸುತ್ತದೆ ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ. 

ರೋಗವು ಸ್ಥಳೀಯವಾಗಿಲ್ಲದ 29 ದೇಶಗಳಿಂದ 1,000ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ, ಈ ದೇಶಗಳಲ್ಲಿ ಇದುವರೆಗೆ ಯಾವುದೇ ಸಾವುಗಳು ವರದಿಯಾಗಿಲ್ಲ. ಏಕಾಏಕಿ ನಿಯಂತ್ರಿಸಲು ಮತ್ತು ಮುಂದೆ ಹರಡುವುದನ್ನು ತಡೆಯಲು ಎಲ್ಲಾ ಪ್ರಕರಣಗಳು ಮತ್ತು ಸಂಪರ್ಕಗಳನ್ನು ಗುರುತಿಸಲು ಪೀಡಿತ ದೇಶಗಳನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.

ಇನ್ನೊಂದೆಡೆ ವಿಜ್ಞಾನಿಗಳ ತಂಡ ಸದ್ಯ ಜಗತ್ತಿನಾದ್ಯಂತ ಇರೋ ಸೋಂಕು (Virus) ಹಲವು ವರ್ಷಗಳ ಹಿಂದೆ ಕಂಡು ಬಂದ ಮಂಕಿಪಾಕ್ಸ್‌ ವೈರಸ್‌ಗಿಂತಲೂ ದುರ್ಬಲ, ಆದ್ರೆ ಅಪಾಯಕಾರಿ ಎಂಬುದನ್ನು ಬಹಿರಂಗಪಡಿಸಿದೆ.  ಮಂಕಿಪಾಕ್ಸ್‌ ಈ ಹಿಂದೆ 2017ರಲ್ಲಿ ಕಂಡು ಬಂದಿತ್ತು. 27 ದೇಶಗಳಲ್ಲಿ 780ಕ್ಕೂ ಹೆಚ್ಚು ಪ್ರಯೋಗಾಲಯ-ದೃಢೀಕೃತ ಪ್ರಕರಣಗಳನ್ನು ಕಂಡಿರುವ ಮಂಕಿಪಾಕ್ಸ್ ವೈರಸ್ ಆಫ್ರಿಕಾದ ಹೊರಗೆ ಹರಡಬಹುದು ಎಂದು ಅದರ ಡಿಎನ್‌ಎ ವಿಶ್ಲೇಷಿಸಿದ ವಿಜ್ಞಾನಿಗಳು ತಿಳಿಸಿದ್ದಾರೆ. ಈ ವೈರಸ್ ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಲ್ಲಿ ಸ್ಥಳೀಯವಾಗಿದೆ ಎಂದು ತಿಳಿದುಬಂದಿದೆ ಮತ್ತು ಏಕಾಏಕಿ ಆಫ್ರಿಕಾದ ಹೊರಗೆ ಭೌಗೋಳಿಕವಾಗಿ ವ್ಯಾಪಕವಾಗಿ ಹರಡಿರುವುದು ಇದೇ ಮೊದಲು ಆಗಿದೆ.

ಜಗತ್ತಿನಾದ್ಯಂತ ಮಂಕಿಪಾಕ್ಸ್ ಭೀತಿ; ಕರ್ನಾಟಕದಲ್ಲಿಯೂ ಹೈ ಅಲರ್ಟ್

ಏಕಕಾಲದಲ್ಲಿ ಅನೇಕ ದೇಶಗಳಲ್ಲಿ ಮಂಕಿಪಾಕ್ಸ್‌ನ ಹಠಾತ್ ಗೋಚರಿಸುವಿಕೆಯು ಸ್ವಲ್ಪ ಸಮಯದಲ್ಲೇ ಇದು ಎಷ್ಟು ತ್ವರಿತವಾಗಿ ಹರಡಿದೆ ಎಂಬುದನ್ನು ಸೂಚಿಸುತ್ತದೆ ಎಂದು WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಯುಕೆ ತಂಡವು ಮಂಕಿಪಾಕ್ಸ್ ವೈರಸ್‌ನ ಜೀನೋಮ್ ಅನುಕ್ರಮವನ್ನು ನಡೆಸಿದ್ದು, ಮತ್ತು ಹೊಸ ಪ್ರಕರಣಗಳಿಗೆ ಕಾರಣವಾದ ವೈರಸ್‌ಗಳು 2017 ಮತ್ತು 201 ರ ನಡುವೆ ಇಸ್ರೇಲ್, ನೈಜೀರಿಯಾ, ಸಿಂಗಾಪುರ್ ಮತ್ತು UK ನಲ್ಲಿ ಕಡಿಮೆ ಸಂಖ್ಯೆಯ ಪ್ರಕರಣಗಳಲ್ಲಿ ಪತ್ತೆಯಾದವುಗಳಿಗೆ ನಿಕಟ ಸಂಬಂಧ ಹೊಂದಿವೆ ಎಂದು ಕಂಡುಹಿಡಿದಿದೆ. ಈ ಕುರಿತು ವಿಜ್ಞಾನಿಗಳು ವಿಸ್ತ್ರತವಾದ ವರದಿ ಸಿದ್ಧಪಡಿಸಿದ್ದಾರೆ. 

Follow Us:
Download App:
  • android
  • ios