ಒಂದೊಂದು ನೆಪ ಹೇಳಿ ಮದ್ಯಪಾನ ಮಾಡೋರನ್ನು ನೀವು ನೋಡಿದ್ದೀರಿ. ಟೀ ಕುಡಿಯೋರು ಕೂಡ ಕಾರಣ ಹೇಳಿ ದಿನಕ್ಕೆ ನಾಲ್ಕೈದು ಕಪ್ ಟೀ ಸೇವನೆ ಮಾಡ್ತಾರೆ. ಬಿಡ್ತೇನೆ ಅಂದ್ರೂ ಈ ಟೀ ಚಟ ಬಿಡೋಕೆ ಆಗಲ್ಲ. ಅದ್ರಿಂದ ಹೊರ ಬರೋದು ಸುಲಭವಾಗ್ಬೇಕೆಂದ್ರೆ ಈ ಟಿಪ್ಸ್ ಪಾಲನೆ ಮಾಡಿ.
ಅನೇಕರಿಗೆ ನಿದ್ರೆ (Sleep) ಮಂಪರು ಹೋಗಲಾಡಿಸಿ ಮೂಡ್ ಫ್ರೆಶ್ ಮಾಡೋದೆ ಟೀ (Tea). ಬೆಳಿಗ್ಗೆ ಬೆಡ್ ಟೀ (Bed Tea) ಕುಡಿಯದೆ ದಿನ ಶುರುವಾಗೋದಿಲ್ಲ ಎನ್ನುವವರಿದ್ದಾರೆ. ಇನ್ನು ಕೆಲವರು ಉಪಾಹಾರ ಸೇವನೆ ಮಾಡ್ತಾ ಟೀ ಕುಡಿದ್ರೆ ಮತ್ತೆ ಕೆಲವರು ಉಪಹಾರದ ನಂತ್ರ ಒಂದ್ ಕಪ್ ಚಹಾ ಅಂತಾ ಆರ್ಡರ್ ಮಾಡ್ತಾರೆ. ಟೀ ಪ್ರಿಯರ ಸಂಖ್ಯೆ ಭಾರತದಲ್ಲಿ ಸಾಕಷ್ಟಿದೆ. ಕೆಲಸ ಮಾಡಿ ಸುಸ್ತಾದ್ರೆ ಟೀ, ನಿದ್ರೆ ಮಾಡಿ ಎದ್ದರೆ ಟೀ, ಕೆಲಸಕ್ಕೆ ಹೋಗ್ಬೇಕೆಂದ್ರೆ ಟೀ, ಬಿಸಿ ಬಿಸಿ ಬಜ್ಜಿ ಜೊತೆ ಟೀ ಹೀಗೆ ಟೀ ಕುಡಿಯೋಕೆ ನೆಪ ಹುಡುಕೋರು ಹೆಚ್ಚಿದ್ದಾರೆ. ದಿನದಲ್ಲಿ ಎರಡು ಬಾರಿ ಟೀ ಕುಡಿಯೋದು ತಪ್ಪೇನಿಲ್ಲ. ಇದು ಆರೋಗ್ಯದ ಮೇಲೆ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡೋದಿಲ್ಲ. ಆದ್ರೆ ಎರಡಕ್ಕಿಂತ ಹೆಚ್ಚು ಬಾರಿ ಟೀ ಸೇವನೆ ಮಾಡ್ತಿದ್ದರೆ ಅದ್ರಿಂದ ಹೊರ ಬರೋದು ಒಳ್ಳೆಯದು. ಚಟ ಯಾವುದೇ ಆಗಿರಲಿ, ಅದ್ರಿಂದ ಹೊರಗೆ ಬರೋದು ಬಹಳ ಕಷ್ಟ. ಕೇವಲ ಧೂಮಪಾನ, ಮದ್ಯಪಾನ ಮಾತ್ರವಲ್ಲ, ಟೀ, ಕಾಫಿ ಕುಡಿಯೋ ಚಟದಿಂದ ಹಿಡಿದು ಕಳ್ಳತನದವರೆಗೆ ಚಟ ಅಂಟಿಕೊಂಡ್ರೆ ಅದರಿಂದ ಹೊರ ಬರಲು ಸಾಹಸ ಮಾಡ್ಬೇಕು. ಟೀ ಬಿಡ್ತೇನೆ ಅಂತಾ ಅನೇಕರು ಹೇಳ್ತಾರೆ. ಆದ್ರೆ ಮೂರ್ನಾಲ್ಕು ದಿನಕ್ಕೆ ಮತ್ತೆ ಟೀ ಸೇವನೆ ಶುರುವಾಗಿರುತ್ತೆ. ಇಂದು ನಾವು ದಿನದಲ್ಲಿ ನಾಲ್ಕೈದು ಬಾರಿ ಟೀ ಕುಡಿಯೋ ಚಟವಿದ್ರೆ ಅದನ್ನು ಹೇಗೆ ಬಿಡೋದು ಅಂತಾ ಹೇಳ್ತೇವೆ. ಇದಕ್ಕಿಂತ ಮೊದಲು ಅತಿಯಾದ ಟೀ ಸೇವನೆಯಿಂದ ಏನೆಲ್ಲ ಸಮಸ್ಯೆಯಾಗುತ್ತೆ ಅನ್ನೋದನ್ನು ತಿಳಿದುಕೊಳ್ಳೋಣ :
ಚಹಾ ಕುಡಿಯುವ ಅನಾನುಕೂಲಗಳು :
ಹೊಟ್ಟೆಗೆ ಹಾನಿ : ಅತಿಯಾಗಿ ಟೀ ಕುಡಿಯುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ. ಅತಿಯಾಗಿ ಟೀ ಕುಡಿಯುವುದರಿಂದ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಸಹ ಉಂಟಾಗಬಹುದು. ಹಾಗಾಗಿ ದಿನದಲ್ಲಿ ಎರಡು ಬಾರಿ ಮಾತ್ರ ಟೀ ಸೇವನೆ ಮಾಡಿ. ಸಂಖ್ಯೆ ಮೂರಕ್ಕೆ ಏರ್ತಿದ್ದರೆ ಅದನ್ನು ನಿಯಂತ್ರಿಸಿ.
ಹರಿವೆ ಸೊಪ್ಪಿನಿಂದ ಆರೋಗ್ಯಕ್ಕೆ ನೂರಾರು ಉಪಯೋಗ, ಹೇಗೆ ಬಳಸಬಹುದು?
ಎದೆಯುರಿ ಸಮಸ್ಯೆ : ಅನೇಕ ಜನರು ಸಾಮಾನ್ಯವಾಗಿ ಎದೆಯುರಿ, ಅಜೀರ್ಣ ಮತ್ತು ಹುಳಿ ತೇಗು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ನೀವು ಹೆಚ್ಚು ಚಹಾವನ್ನು ಸೇವಿಸುವುದರಿಂದ ಈ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಇದು ನಿಮ್ಮ ಜೀರ್ಣಕ್ರಿಯೆ ಮೇಲೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.
ಅತಿಯಾಗಿ ಚಹಾ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡುವ ಟಿಪ್ಸ್ :
ಸರಳ ವಿಧಾನ : ಟೀ ಅತಿಯಾಗ್ತಿದೆ ಅದನ್ನು ಕಡಿಮೆ ಮಾಡ್ಬೇಕು ಅಂದುಕೊಂಡಿದ್ದರೆ ಸುಲಭ ವಿಧಾನವನ್ನು ಅನುಸರಿಸಿ. ಅದೇನೆಂದ್ರೆ ನಿಮಗೆ ಚಹಾ ಕುಡಿಯಲು ಅನ್ನಿಸಿದಾಗ ಅದರ ಬದಲಿಗೆ ಆರೋಗ್ಯಕರವಾದದ್ದನ್ನು ಕುಡಿಯಿರಿ. ಟೀ ಕುಡಿಯಬೇಕೆನ್ನಿಸಿದಾಗ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಹಾಲು, ಹಾರ್ಲೆಕ್ಸ್, ಕಷಾಯ ಹೀಗೆ ಯಾವುದನ್ನು ಬೇಕಾದ್ರೂ ಸೇವನೆ ಮಾಡ್ಬಹುದು. ನೀವು ಗ್ರೀನ್ ಟೀ ಸೇವನೆ ಕೂಡ ಮಾಡ್ಬಹುದು.
Corona ಸಂಕಟದಲ್ಲಿದ್ದ ಹೊಟೇಲ್ ಉದ್ಯಮಿಗಳು ಈಗ ಫುಲ್ ಖುಷ್!
ಏಕಾಏಕಿ ನಿರ್ಧಾರ ಬೇಡ : ಚಹಾವನ್ನು ಒಂದೇ ಬಾರಿ ಸಂಪೂರ್ಣ ಬಿಡುವ ಪ್ರಯತ್ನಕ್ಕೆ ಕೈ ಹಾಕ್ಬೇಡಿ. ಅದು ನಿಮಗೆ ಹಾನಿಕಾರಕವಾಗಬಹುದು. ಚಹಾವನ್ನು ಕ್ರಮೇಣ ಬಿಡಬೇಕು. ದಿನಕ್ಕೆ ನಾಲ್ಕು ಕಪ್ ಟೀ ಕುಡಿಯುತ್ತಿದ್ದರೆ ಅದನ್ನು ಮೂರಕ್ಕೆ ಇಳಿಸಿ.
ದ್ರವ ಆಹಾರ : ಟೀ ಸೇವನೆಯನ್ನು ಕಡಿಮೆ ಮಾಡಲು ನೀವು ದಿನವಿಡೀ ಹೆಚ್ಚು ದ್ರವ ಆಹಾರ ಸೇವಿಸಬೇಕು. ಇದು ನಿಮ್ಮ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಚಹಾ ಕುಡಿಯುವ ನಿಮ್ಮ ಹಂಬಲವನ್ನು ಕಡಿಮೆ ಮಾಡುತ್ತದೆ.
ನಿದ್ರೆ : ಉತ್ತಮ ನಿದ್ರೆ ಕೂಡ ನಿಮ್ಮ ಟೀ ಚಟವನ್ನು ಬಿಡಿಸಲು ಸಹಕಾರಿ ಅಂದ್ರೆ ನೀವು ನಂಬ್ಲೇಬೇಕು. ಅನೇಕರು ನಿದ್ರೆ ಸರಿಯಾಗಿ ಮಾಡುವುದಿಲ್ಲ. ಇದ್ರಿಂದ ಹಗಲಿನಲ್ಲಿ ಶಕ್ತಿ ಕಳೆದುಕೊಳ್ತಾರೆ. ದೇಹಕ್ಕೆ ಶಕ್ತಿ ನೀಡಲು ಟೀ ಸೇವನೆ ಮಾಡ್ತಾರೆ. ಅದೇ ಸರಿಯಾದ ನಿದ್ರೆಯಾಗಿದ್ದರೆ ದೇಹ ಟೀಯನ್ನು ಹೆಚ್ಚಾಗಿ ಬಯಸುವುದಿಲ್ಲ.