Human Urine Recycling: ಮಲ ಮೂತ್ರದಲ್ಲೂ ಜೀವ ಉಳಿಸೋ ಕೋಶ ಹುಡುಕಿದ ವಿಜ್ಞಾನ, ಹಲ್ಲು, ಮೂಳೆ ಬೆಳೆಸಲು ಸಾಧ್ಯವಂತೆ!

Published : Jun 21, 2025, 12:35 PM IST
 Human urine

ಸಾರಾಂಶ

ಮೂತ್ರ ಬರೀ ತ್ಯಾಜ್ಯ ಅಂದ್ಕೊಳ್ಬೇಡಿ. ಅದಕ್ಕೆ ಹೆಚ್ಚಿನ ಬೇಡಿಕೆ ಬರೋ ಸಾಧ್ಯತೆ ಇದೆ. ವಿಜ್ಞಾನಿಗಳು ಮೂತ್ರದಿಂದ ಇಂಪ್ಲಾಂಟ್ ತಯಾರಿಕೆಗೆ ಮುಂದಾಗ್ತಿದ್ದಾರೆ. 

ವಿಶ್ವದಾದ್ಯಂತ ವಿಜ್ಞಾನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ. ಇದು ವೈದ್ಯಕೀಯ ಜಗತ್ತಿನ ದಾರಿಯನ್ನು ಬದಲಿಸ್ತಿದೆ. ಹೃದಯ, ಕಿಡ್ನಿ, ಮೆದುಳು, ಕ್ಯಾನ್ಸರ್, ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ಅನೇಕ ರಿಸರ್ಚ್ ನಡೆಯುತ್ತಿದೆ. ಹೃದಯ, ಕಿಡ್ನಿ ಕಸಿ ಹಳೆಯದಾಯ್ತು. ರೋಬೋಟ್ ಚಿಕಿತ್ಸೆ, ಎಐ ಚಿಕಿತ್ಸೆಗಳು ಈಗ ವೇಗ ಪಡೆದುಕೊಂಡಿವೆ. ಈ ಮಧ್ಯೆ ವಿಜ್ಞಾನಿಗಳು ಹೊಸ ಪ್ರಯೋಗದತ್ತ ಹೆಜ್ಜೆ ಹಾಕಿದ್ದಾರೆ. ಪ್ರತಿ ನಿತ್ಯ ನಾವು ಸಾಕಷ್ಟು ತ್ಯಾಜ್ಯವನ್ನು ಮನೆಯಿಂದ ಹೊರಗೆ ಹಾಕ್ತಿರ್ತೇವೆ. ಬರೀ ಮನೆಯಿಂದ ಮಾತ್ರವಲ್ಲ ನಮ್ಮ ದೇಹದಿಂದಲೂ ತ್ಯಾಜ್ಯ ಹೊರ ಹೋಗ್ತಿರುತ್ತೆ. ಇನ್ಮುಂದೆ ಮೂತ್ರ ವಿಸರ್ಜನೆ (urination) ಮಾಡ್ವಾಗ ನೀವು ಇದನ್ನು ತ್ಯಾಜ್ಯ ಅಂತ ಪರಿಗಣಿಸ್ಬೇಕಾಗಿಲ್ಲ. ಇದೊಂದು ಅಮೂಲ್ಯ ದ್ರವ ಅಂದ್ಕೊಳ್ಬಹುದು. ಯಾಕೆಂದ್ರೆ ಇಷ್ಟು ದಿನ ಶೌಚಾಲಯ ಸೇರ್ತಿದ್ದ ಮಾನವನ ಮೂತ್ರದ ಮೇಲೆ ಮಹತ್ತರವಾದ ಸಂಶೋದನೆ ನಡೆಯುತ್ತಿದೆ. ಅದನ್ನು ಇಂಪ್ಲಾಂಟ್ ಗಳನ್ನು ತಯಾರಿಸಲು ಬಳಸುವ ಪ್ರಯೋಗಕ್ಕೆ ವಿಜ್ಞಾನಿಗಳು ಮುಂದಾಗಿದ್ದಾರೆ.

ಸಂಸ್ಕರಿಸಿದ ಮಾನವ ಮೂತ್ರವನ್ನು ಗೊಬ್ಬರ ಮತ್ತು ಶೌಚಾಲಯದ ನೀರಾಗಿ ಬಳಕೆ ಮಾಡ್ತಿರೋದು ನಿಮಗೆ ಗೊತ್ತೇ ಇದೆ. ಕೆಲವರು ಸೌಂದರ್ಯದ ಹೆಸರಿನಲ್ಲಿ ತಮ್ಮ ಮೂತ್ರ ಸೇವನೆ ಮಾಡ್ತಿದ್ದಾರೆ. ಮೂತ್ರದಲ್ಲಿ ವಿಶೇಷವಾಗಿ ಸಾರಜನಕ ಮತ್ತು ಪೊಟ್ಯಾಸಿಯಮ್ ಅಧಿಕವಾಗಿದ್ದು, ಬೋರಾನ್, ಸತು ಮತ್ತು ಕಬ್ಬಿಣದಂತಹ ಲೋಹಗಳ ಅಲ್ಪ ಪ್ರಮಾಣವನ್ನು ಸಹ ಹೊಂದಿರುತ್ತದೆ. ಮಲವು ಸೈದ್ಧಾಂತಿಕವಾಗಿ ಮಣ್ಣಿಗೆ ರಂಜಕ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಥವಾ ಅಮೂಲ್ಯವಾದ ಸಾವಯವ ಇಂಗಾಲದಂತಹ ಇತರ ಪೋಷಕಾಂಶಗಳನ್ನು ಹೊಂದಿದೆ. ಇವು ಮನುಷ್ಯನ ಕೂದಲು ಹಾಗೂ ಹಲ್ಲಿನ ಬೆಳವಣಿಗೆಗೆ ಸಹಕಾರಿ ಎಂಬ ಮಾಹಿತಿಯನ್ನು ಈ ಹಿಂದೆ ವಿಜ್ಞಾನಿಗಳು ನೀಡಿದ್ದರು. ಈಗ ಮೂತ್ರವನ್ನು ಬಳಸಿಕೊಂಡು ದಂತ ಮತ್ತು ಮೂಳೆ ಇಂಪ್ಲಾಂಟ್ಗಳನ್ನು ತಯಾರಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ದಂತ ಮತ್ತು ಮೂಳೆ ಇಂಪ್ಲಾಂಟ್ ಗೆ ನೀರನ್ನು ಬಳಕೆ ಮಾಡಲಾಗ್ತಿದೆ. ಇದ್ರಿಂದ ನೀರು ಪೋಲಾಗ್ತಿದೆ. ನೀರನ್ನು ಉಳಿಸುವ ನಿಟ್ಟಿನಲ್ಲಿ, ಮಾನವನ ಮೂತ್ರವನ್ನು ಮರುಬಳಕೆ ಮಾಡಲು ವಿಜ್ಞಾನಿಗಳು ಪ್ರಯೋಗ ನಡೆಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು, ಅಮೇರಿಕನ್ ಮತ್ತು ಜಪಾನೀಸ್ ಸಂಸ್ಥೆಗಳ ಸಹಯೋಗದೊಂದಿಗೆ, ಕೃತಕ ಯೀಸ್ಟ್ ರಚಿಸಿದ್ದಾರೆ. ಇದು ಮೂತ್ರವನ್ನು ಹೈಡ್ರಾಕ್ಸಿಅಪಟೈಟ್ (HAp) ಆಗಿ ಪರಿವರ್ತಿಸುತ್ತದೆ. ಇದು ಹಲ್ಲಿನ ದಂತಕವಚ ಮತ್ತು ಮೂಳೆ ಖನಿಜದ ಮುಖ್ಯ ರಚನಾತ್ಮಕ ಅಂಶ, ಇದು ಗಡಸುತನವನ್ನು ಒದಗಿಸುತ್ತದೆ. 2030 ರ ವೇಳೆಗೆ HAp ನ ಮಾರುಕಟ್ಟೆ 3.5 ಬಿಲಿಯನ್ ಯುಎಸ್ ಡಾಲರ್ ಮೀರುತ್ತದೆ ಎಂದು ಅಧ್ಯಯನವು ಹೇಳುತ್ತದೆ.

ಮೂಳೆ ರೂಪಿಸುವ ಕೋಶಗಳ ಜೈವಿಕ ಕಾರ್ಯವಿಧಾನದಿಂದ ಪ್ರೇರಿತರಾಗಿ, ನಾವು ಕೃತಕ ಯೀಸ್ಟ್ ಆಸ್ಟಿಯೋಯೀಸ್ಟ್ ಅನ್ನು ಅಭಿವೃದ್ಧಿಪಡಿಸಿದ್ದೇವೆ, ಇದು ಕಿಣ್ವಗಳನ್ನು ಬಳಸಿಕೊಂಡು ಯೂರಿಯಾವನ್ನು ಒಡೆಯುತ್ತದೆ ಮತ್ತು ಸುತ್ತಮುತ್ತಲಿನ ಪರಿಸರದ pH ಅನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಒಂದೇ ಸಮಯದಲ್ಲಿ ಎರಡು ಕೆಲಸವನ್ನು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದೆಡೆ, ಇದು ತ್ಯಾಜ್ಯನೀರಿನಿಂದ ಮಾನವ ಮೂತ್ರವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಪರಿಸರ ಮಾಲಿನ್ಯ ಮತ್ತು ಅನಗತ್ಯ ಪೋಷಕಾಂಶಗಳ ಸಂಗ್ರಹ ಕಡಿಮೆಯಾಗುತ್ತದೆ. ಮತ್ತೊಂದೆಡೆ, ವಾಣಿಜ್ಯಿಕವಾಗಿ ಮಾರಾಟ ಮಾಡಬಹುದಾದ ವಸ್ತುವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಇಲ್ಲಿ ಸುರಕ್ಷತೆ ಮುಖ್ಯ. ರೋಗಗಳು ಹರಡದಂತೆ ತಡೆಯಲು ಮಾನವ ಮೂತ್ರವನ್ನು ಸರಿಯಾಗಿ ಸಂಸ್ಕರಿಸಬೇಕಾಗುತ್ತೆ. ಮೂತ್ರದ ಮರುಬಳಕೆಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಡೆತಡೆ ಎದುರಾಗಬಹುದು. ಇದನ್ನು ಸ್ವೀಕರಿಸುವ ಮನೋಭಾವ ಬೆಳೆಸಲು ಶಿಕ್ಷಣ ಮತ್ತು ಜಾಗೃತಿ ಅಭಿಯಾನ ಅಗತ್ಯ ಎಂದು ಸಂಶೋಧಕರು ಹೇಳಿದ್ದಾರೆ. ಒಟ್ಟಾರೆಯಾಗಿ, ಮಾನವ ಮೂತ್ರದ ಮರುಬಳಕೆ, ನೀರಿನ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಅವಕಾಶಗಳನ್ನು ನೀಡುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!