Healthy Sleep: ರಾತ್ರಿ ಫ್ಯಾನ್ ಹಾಕಿ ಮಲಗೋದ್ರಿಂದ ಇಷ್ಟೆಲ್ಲಾ ಪ್ರಯೋಜನವಿದೆ

By Suvarna NewsFirst Published Jan 20, 2022, 11:35 AM IST
Highlights

ಬೇಸಿಗೆಯಲ್ಲಿ ಫ್ಯಾನ್ (Fan) ಇಲ್ಲದೆ ಮಲಗುವುದು ಕಷ್ಟ. ಆದರೆ ಕೆಲವೊಬ್ಬರು ಎಲ್ಲಾ ಕಾಲದಲ್ಲೂ ಫ್ಯಾನ್ ಆನ್ ಇಟ್ಟುಕೊಂಡೇ ಮಲಗುತ್ತಾರೆ. ಇನ್ನು ಕೆಲವೊಬ್ಬರು ಎಷ್ಟೆ ಸೆಕೆಯಾದ್ರೂ ಫ್ಯಾನ್‌ನ ಶಬ್ದದಿಂದ ನಿದ್ದೆ (Sleep) ಬರೋದಿಲ್ಲ ಎಂದು ಫ್ಯಾನ್ ಬಳಸುವುದನ್ನೇ ಬಿಟ್ಟು ಬಿಡುತ್ತಾರೆ. ಆದ್ರೆ ಫ್ಯಾನ್ ಹಾಕಿಕೊಂಡು ಮಲಗುವುದರಿಂದಲೂ ಹಲವು ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ ?

ಫ್ಯಾನ್‌ನ ಅತ್ಯಂತ ಮುಖ್ಯ ಪ್ರಯೋಜನವೆಂದರೆ ಅದು ನಿದ್ದೆ ಮಾಡುವಾಗ ತಂಪಾದ ಗಾಳಿ ನೀಡುತ್ತದೆ. ಇದು ಆರಾಮದಾಯಕವಾಗಿ ನಿದ್ದೆ ಮಾಡಲು ಕಾರಣವಾಗುತ್ತದೆ. ರಾತ್ರಿಯಲ್ಲಿ ವಾತಾವರಣ ತುಂಬಾ ಬಿಸಿಯಾಗಿದ್ದರೆ ನಿದ್ರಿಸುವುದು ಕಷ್ಟ. ಹೆಚ್ಚು ಬೆವರಲು ಆರಂಭವಾಗುತ್ತದೆ. ಇದರಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಖನಿಜಗಳ ನಷ್ಟಕ್ಕೆ ಕಾರಣವಾಗಬಹುದು. ಫ್ಯಾನ್ ಹಾಕಿ ಮಲಗೋದ್ರಿಂದ ಇವಿಷ್ಟು ಅಲ್ಲದೆಯೂ ಹಲವು ಪ್ರಯೋಜನಗಳಿವೆ.

ಹೆಚ್ಚು ಸುಲಭವಾಗಿ ಉಸಿರಾಡಬಹುದು
ಮಲಗುವ ಕೋಣೆಯಲ್ಲಿ ಫ್ಯಾನ್ (Fan) ಆನ್ ಮಾಡುವುದರಿಂದ ಗಾಳಿಯ ಗುಣಮಟ್ಟದಲ್ಲಿ ಏನೇನೂ ಬದಲಾವಣೆಯಾಗುವುದಿಲ್ಲ ಎಂದು ನೀವು ಭಾವಿಸಬಹುದು. ಆದರೆ, ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಮಲಗುವ ಕೋಣೆಯಲ್ಲಿ ಫ್ಯಾನ್ ಆನ್ ಮಾಡುವುದರಿಂದ  ಗಾಳಿ (Air) ಸುತ್ತಲೂ ಸಂಚಾರವಾಗುತ್ತದೆ. ಈ ರೀತಿ ಗಾಳಿ ಎಲ್ಲಾ ಕಡೆಯೂ ಹರಡುವುದರಿಂದ ಹೆಚ್ಚು ಸುಲಭಗಾಗಿ ಉಸಿರಾಡಬಹುದು. ಮಲಗುವ ಸಮಯದಲ್ಲಿ ಫ್ಯಾನ್ ಆನ್ ಮಾಡಿಡುವುದರಿಂದ ಮಲಗುವಾಗ ಸಾವು (Death) ಸಂಭವಿಸುವ ಸಾಧ್ಯತೆ ತುಂಬಾ ಕಡಿಮೆಯೆಂದು ಅಧ್ಯಯನದಿಂದ ತಿಳಿದುಬಂದಿದೆ. ಫ್ಯಾನ್ ಆನ್ ಆಗಿದ್ದರೆ ಸಾಯುವ ಸಾಧ್ಯತೆ 72 ಪ್ರತಿಶತದಷ್ಟು ಕಡಿಮೆಯಾಗಿದೆ. ಕೆಲವು ಸಂಶೋಧನೆಗಳು ರಾತ್ರಿಯ ಸಮಯದಲ್ಲಿ ಫ್ಯಾನ್ ಆನ್ ಇರುವುದು ಶಿಶುಗಳಲ್ಲಿ ಹಠಾತ್ ಶಿಶು ಮರಣ ಸಿಂಡ್ರೋಮ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ತಿಳಿಸಿದೆ.

ನಿದ್ದೆಗೆ ಭಂಗ ಉಂಟಾಗುವುದಿಲ್ಲ
ನೀವು ಮಧ್ಯರಾತ್ರಿಯಲ್ಲಿ ಆಗಾಗ ಎಚ್ಚರಗೊಳ್ಳುತ್ತೀರಾ ? ಸಣ್ಣ ಸಣ್ಣ ಸದ್ದು ಕೂಡಾ ಬೆಚ್ಚಿ ಬೀಳುವಂತಾಗಿ ನಿಮ್ಮ ನಿದ್ದೆಗೆ ಭಂಗ ತರುತ್ತದಾ. ಹಾಗಿದ್ದಾಗ ಫ್ಯಾನ್ ಆನ್ ಮಾಡಿ ಮಲಗುವುದು ಸೂಕ್ತ. ಹಾಸಿಗೆಯ ಪಕ್ಕದಲ್ಲಿ ನೀವು ಫ್ಯಾನ್ ಆನ್ ಮಾಡಿ ಇರಿಸಿದಾಗ ನಿಮಗೆ ಆ ನಿರ್ಧಿಷ್ಟ ಮಟ್ಟದ ಶಬ್ದ ಮಾತ್ರ ಕೇಳುತ್ತಿರುತ್ತದೆ. ಫ್ಯಾನಿನ ಶಬ್ದದ ಮುಂದೆ ಇತರ ಸಣ್ಣಪುಟ್ಟ ಶಬ್ದಗಳು ಕೇಳುವುದಿಲ್ಲ. ಹೀಗಾಗಿ ನೆಮ್ಮದಿಯಿಂದ ನಿದ್ದೆ (Sleep) ಮಾಡಲು ಸಾಧ್ಯವಾಗುತ್ತದೆ.

Winter Heart Attacks: ಚಳಿಗಾಲದಲ್ಲಿ ಹೃದಯಾಘಾತ ತಪ್ಪಿಸಲು ಹೀಗೆ ಮಾಡಿ

ಗಾಳಿಯನ್ನು ಸ್ವಚ್ಛಗೊಳಿಸುತ್ತದೆ
ರೂಮು (Room) ಕ್ಲೀನ್ ಮಾಡಲು ಸಮಯ ಸಿಕ್ಕಿಲ್ವಾ. ಪರವಾಗಿಲ್ಲ ಫ್ಯಾನ್ ಆನ್ ಮಾಡಿ ಮಲಗಿ ಯಾವುದೇ ದುರ್ವಾಸನೆಯಿಲ್ಲದೆ ನೆಮ್ಮದಿಯಾಗಿ ನಿದ್ದೆ ಮಾಡಬಹುದು. ಯಾಕೆಂದರೆ ಫ್ಯಾನ್ ಯಾವುದೇ ಅಹಿತಕರ ವಾಸನೆ (Smell)ಯನ್ನು ಮರೆಮಾಚುತ್ತದೆ. ಫ್ಯಾನ್ ಗಾಳಿಯನ್ನು ಸುತ್ತಲೂ ಚಲಿಸುವಂತೆ ಮಾಡುವುದರಿಂದ, ಅಹಿತಕರ ವಾಸನೆಗಳು ಚದುರಿಹೋಗುತ್ತವೆ. ಇದು ವಾಸನೆಯನ್ನು ಕಡಿಮೆ ಮಾಡುತ್ತದೆ. 

ದುಷ್ಪರಿಣಾಮಗಳು
ಇವಿಷ್ಟು ಫ್ಯಾನ್ ಮಾಡಿ ಮಲಗುವುದರಿಂದ ಇರುವ ಪ್ರಯೋಜನಗಳಾದರೆ, ಫ್ಯಾನ್ ಆನ್ ಇಟ್ಟು ಮಲಗುವುದರಿಂದ ಹಲವು ದುಷ್ಪರಿಣಾಮಗಳೂ ಇವೆ. ನೀವು ಅಲರ್ಜಿಯನ್ನು ಹೊಂದಿದ್ದರೆ, ಫ್ಯಾನ್ ಆನ್ ಮಾಡಿಟ್ಟು ಮಲಗುವ ಅಭ್ಯಾಸ ಒಳ್ಳೆಯದಲ್ಲ. ಯಾಕೆಂದರೆ, ಇದರಿಂದ ಧೂಳಿನ ಕಣಗಳು ನಿಮ್ಮ ನಿದ್ದೆಗೆ ಅಡ್ಡಿಯುಂಟು ಮಾಡಬಹುದು. ಧೂಳು (Dust), ಕಣ್ಣುಗಳು, ಮೂಗು ಮತ್ತು ಗಂಟಲಿನೊಳಗೆ ಸೇರಿ ಕಿರಿಕಿರಿಗೆ ಕಾರಣವಾಗಬಹುದು. ಕೋಣೆಯಲ್ಲಿ ನಿರಂತರ ಗಾಳಿಯ ಹರಿವು ಸ್ವಲ್ಪ ನಿರ್ಜಲೀಕರಣದ ಭಾವನೆಯನ್ನು ಉಂಟುಮಾಡಬಹುದು. ಅದಕ್ಕಾಗಿಯೇ ನೀವು ಯಾವಾಗಲೂ ನಿಮ್ಮ ಫ್ಯಾನ್ ಅನ್ನು ಕಡಿಮೆ ಸೆಟ್ಟಿಂಗ್‌ನಲ್ಲಿ ಇರಿಸಬೇಕು ಮತ್ತು ಅದನ್ನು ನಿಮ್ಮ ಮುಖಕ್ಕೆ ನೇರವಾಗಿ ಬೀಸಲು ಬಿಡಬೇಡಿ.

Vaastu Tips: ನಿದ್ದೆನೇ ಬರ್ತಿಲ್ಲ ಅಂದ್ರೆ ಹೀಗ್ ಮಾಡಿ ನೋಡಿ..

ಯಾವ ರೀತಿಯ ಫ್ಯಾನ್ ಅನ್ನು ಹೊಂದಿದ್ದೀರಿ ?
ನೀವು ರಾತ್ರಿಯಲ್ಲಿ ಫ್ಯಾನ್  ಬಳಸುವವರಾಗಿದ್ದರೆ, ಪೋರ್ಟಬಲ್ ಫ್ಯಾನ್ ಖರೀದಿಸುವುದು ಉತ್ತಮ. ಇದ್ದರಿಂದ ನೀವು ಅದನ್ನು ಬೇಕಾದ ರೀತಿ ಇಟ್ಟುಕೊಳ್ಳಬಹುದು. ಫ್ಯಾನ್ ಅನ್ನು 2ರಿಂದ 3 ಅಡಿ ದೂರದಲ್ಲಿ ಇಟ್ಟುಕೊಳ್ಳುವುದು ಕೇಂದ್ರೀಕೃತ ಗಾಳಿಯ ಹರಿವಿನಿಂದ ನಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ಫ್ಯಾನ್ ಆನ್ ಮಾಡಿ ಮಲಗುವ ಮುನ್ನ ನಿಮ್ಮ ಫ್ಯಾನ್ ಬ್ಲೇಡ್‌ಗಳು ಧೂಳಿನಿಂದ ಮುಕ್ತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಫ್ಯಾನ್, ರೂಮ್ ಎರಡನ್ನೂ ಆಗಾಗ ಸ್ವಚ್ಛಗೊಳಿಸುವುದು ಮುಖ್ಯವಾಗಿದೆ.

click me!