Heart Attack: ಹೃದಯಾಘಾತಕ್ಕೂ ಮೊದ್ಲು ಕಣ್ಣುಗಳೇ ಸೂಚನೆ ಕೊಡುತ್ತೆ, ಗಮನಿಸ್ಕೊಳ್ಳಿ

Published : Mar 02, 2023, 03:13 PM IST
Heart Attack: ಹೃದಯಾಘಾತಕ್ಕೂ ಮೊದ್ಲು ಕಣ್ಣುಗಳೇ ಸೂಚನೆ ಕೊಡುತ್ತೆ, ಗಮನಿಸ್ಕೊಳ್ಳಿ

ಸಾರಾಂಶ

ಇತ್ತೀಚಿನ ಕೆಲ ವರ್ಷಗಳಿಂದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಸಾಮಾನ್ಯವಾಗಿ ದಿನಚರಿಯಲ್ಲಿ ತೊಡಗಿಸಿಕೊಂಡಿದ್ದವರು ದಿಢೀರ್ ಸಾವನ್ನಪ್ಪುತ್ತಾರೆ. ಹಾರ್ಟ್ ಅಟ್ಯಾಕ್ ಆಗೋ ಮೊದ್ಲು ಯಾವ್ದೇ ಸೂಚನೆನೂ ಇರ್ಲಿಲ್ಲ ಅಂತ ಹಲವರು ಮಾತನಾಡಿಕೊಳ್ತಾರೆ. ಆದ್ರೆ ಹೃದಯಾಘಾತಕ್ಕೂ ಮೊದಲು ನಿಮ್ಮ ಕಣ್ಣುಗಳಲ್ಲಿ ಈ ಲಕ್ಷಣಗಳು ಗೋಚರಿಸುತ್ತೆ ಅನ್ನೋ ವಿಷ್ಯ ನಿಮ್ಗೆ ಗೊತ್ತಿದ್ಯಾ ?

ಹೃದಯಾಘಾತವು (Heartattack) ಹೃದಯ ಸ್ನಾಯುವಿನ ರಕ್ತದ ಹರಿವು ಅನಿರೀಕ್ಷಿತವಾಗಿ ಕಡಿತಗೊಂಡಾಗ ಮತ್ತು ಹೃದಯ ಸ್ನಾಯುಗಳಿಗೆ ಹಾನಿಯನ್ನುಂಟುಮಾಡಿದಾಗ ಸಂಭವಿಸುವ ಗಂಭೀರ ಸ್ಥಿತಿಯಾಗಿದೆ. ಹಿಂದೆಯೆಲ್ಲಾ ವಯಸ್ಸಾದವರಿಗೆ ಹೃದಯಾಘಾತವಾಗುವ ಅಪಾಯ (Danger) ಹೆಚ್ಚಿತ್ತು. ಆದರೆ ಈಗ ಹಾಗಲ್ಲ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವು ಅತ್ಯಂತ ಅಸಾಮಾನ್ಯವಾಗಿದೆ. ಹೃದಯ ದೇಹದ ಪ್ರಮುಖ ಅಂಗ. ಇದು ಇಡೀ ದೇಹಕ್ಕೆ ರಕ್ತವನ್ನು ಪೂರೈಕೆ ಮಾಡುತ್ತದೆ. ಹಾಗೇ ಕಣ್ಣು ಕೂಡ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಹಾಗಾಗಿ ನಿಮ್ಮ ಹೃದಯದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದರ ಪ್ರಭಾವ ಕಣ್ಣಿನಲ್ಲಿ ಕಾಣಿಸುತ್ತದೆಯಂತೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವೈದ್ಯರ ಬಳಿ ಹೋದಾಗ ಮೊದಲಿಗೆ ಅವರು ಕಣ್ಣನ್ನು (Eyes) ಪರಿಶೀಲಿಸುವುದನ್ನು ನೀವು ನೋಡಿರಬಹುದು. ಯಾಕೆಂದರೆ ಕಣ್ಣನ್ನು ನೋಡಿ ಆರೋಗ್ಯ ಸಮಸ್ಯೆಯನ್ನು (Health problem) ತಿಳಿದುಕೊಳ್ಳಬಹುದು ಎಂಬುದಾಗಿದೆ. ನಾಲಿಗೆಯು ಸುಳ್ಳು ಹೇಳಬಹುದು ಆದರೆ ಆರೋಗ್ಯದ ಬಗ್ಗೆ ಕಣ್ಣು ಎಂದಿಗೂ ಸುಳ್ಳು ಹೇಳುವುದಿಲ್ಲ. ಸಣ್ಣಪುಟ್ಟ ಕಾಯಿಲೆ (Disease)ಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು ಮಾತ್ರವಲ್ಲದೆ ಕಣ್ಣನ್ನು ನೋಡಿ ಹೃದಯಾಘಾತದ (Heartattack) ಸೂಚನೆಯ ಬಗ್ಗೆಯೂ ತಿಳಿದುಕೊಳ್ಳಬಹುದು ಅನ್ನೋ ವಿಚಾರ ನಿಮ್ಗೆ ಗೊತ್ತಿದ್ಯಾ ?

ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಸೇರಿದ್ರೆ ಹೃದಯಾಘಾತ ಚಾನ್ಸಸ್ ಜಾಸ್ತಿನಾ?

ಹೃದಯಾಘಾತಕ್ಕೂ ಮೊದಲು ಕಣ್ಣುಗಳಲ್ಲಿ ಈ ಲಕ್ಷಣಗಳು ಗೋಚರಿಸುತ್ತೆ
ಹೃದಯವು ವ್ಯಕ್ತಿಯ  ಜೀವನಾಡಿಯಾಗಿದೆ. ಹೃದಯ (Heart) ನಿಂತರೆ ಬದುಕು ನಿಲ್ಲುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡುತ್ತದೆ. ಅದರ ನಂತರ ಇಡೀ ದೇಹದಲ್ಲಿ ರಕ್ತದ ಹರಿವು ಇರುತ್ತದೆ. ಹೃದಯವು ಕೆಲವು ತೊಂದರೆಗಳಲ್ಲಿ ಸಿಲುಕಿಕೊಂಡಾಗ, ಇಡೀ ದೇಹದಲ್ಲಿ ರಕ್ತದ ಹರಿವು ಪರಿಣಾಮ ಬೀರುತ್ತದೆ. ಮತ್ತು ಅದರ ನೇರ ಪರಿಣಾಮವು ಕಣ್ಣುಗಳ ಮೇಲೆ ಗೋಚರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರತಿ ವರ್ಷ ಸುಮಾರು 1.79 ಕೋಟಿ ಜನರು ಹೃದಯ ಸಂಬಂಧಿ ಕಾಯಿಲೆಯಿಂದ ಹೃದಯರಕ್ತನಾಳದ ಕಾಯಿಲೆಯಿಂದ ಮೃತಪಡುತ್ತಿದ್ದಾರೆ. ಯಾಕೆಂದರೆ ಇವರ್ಯಾರಿಗೂ ಹೃದಯದ ಸಮಸ್ಯೆಯ ಸೂಚನೆಯ ಬಗ್ಗೆ ಮೊದಲೇ ತಿಳಿದಿರುವುದಿಲ್ಲ. ಹೀಗಿರುವಾಗ ಹೃದಯದ ಸಮಸ್ಯೆ ಕಣ್ಣುಗಳಲ್ಲಿ ಕಾಣಿಸುತ್ತದೆ ಎಂಬ ವಿಚಾರವನ್ನು ನೀವು ತಿಳಿದುಕೊಳ್ಳಬೇಕು.

ರೆಟಿನೋಪತಿ: ಯೂನಿವರ್ಸಿಟಿ ಆಫ್ ಚಿಕಾಗೋ ಪ್ರಕಾರ, ಅಧಿಕ ಬಿಪಿಯಿಂದ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ರೆಟಿನೋಪತಿ ಸಮಸ್ಯೆ ಸಂಭವಿಸಬಹುದು. ಹೀಗಾಗುವುದರಿಂದ, ರಕ್ತವು (Blood) ಕಣ್ಣುಗಳ ರಕ್ತನಾಳಗಳಿಗೆ ಸೇರುತ್ತದೆ. ಅದರ ನಂತರ ರಕ್ತ ಹೆಪ್ಪುಗಟ್ಟುವಿಕೆಯು ಘನೀಕರಿಸಲು ಪ್ರಾರಂಭವಾಗುತ್ತದೆ. ಕಣ್ಣಿನ ರಕ್ತನಾಳಗಳು ಸಿಡಿಯಬಹುದು ಹಾಗೆಯೇ ಬೆಳಕು ಕೂಡ ಹೋಗಬಹುದು. ಈ ಸೂಚನೆಯನ್ನು ಮೊದಲೇ ಗಮನಿಸಿಕೊಳ್ಳಬೇಕು.

ಹಾರ್ಟ್ ಅಟ್ಯಾಕ್ ಆದಾಗ ನೋವಿನ ಅನುಭವ ಹೇಗಿರುತ್ತೆ? ಬದುಕುಳಿದವರು ಹೇಳಿದ್ದಿಷ್ಟು

ಕಣ್ಣಿನ ಪೊರೆ: ಹೃದಯ ಸಂಬಂಧಿ ಕಾಯಿಲೆಯಿಂದ ಕಣ್ಣಿನ ಪೊರೆ ಬರಬಹುದು ಎಂಬುದು ಹಲವು ಸಂಶೋಧನೆಗಳಲ್ಲಿ ಬಹಿರಂಗವಾಗಿದೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ (Operation) ಮಾಡಿಸುವ ಸಮಯದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸುವ ಅಪಾಯವಿರುತ್ತದೆ.

ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ನಿರ್ಮಾಣ:  ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಪ್ರಾರಂಭಿಸಿದಾಗ, ಕಣ್ಣುಗಳನ್ನು ತಲುಪುವ ರಕ್ತ ಕಡಿಮೆಯಾಗುತ್ತದೆ. ಇದು ರೆಟಿನಾವನ್ನು ನಾಶಪಡಿಸುವುದರ ಜೊತೆಗೆ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು.

ಆರಂಭಿಕ ಕಣ್ಣಿನ ಪರೀಕ್ಷೆಗಳಿಂದ ಕಾಯಿಲೆ ತಡಗಟ್ಟಬಹುದು
ಆರಂಭಿಕ ಕಣ್ಣಿನ ಪರೀಕ್ಷೆಗಳು ಭವಿಷ್ಯದ ಪಾರ್ಶ್ವವಾಯು, ಹೃದಯಾಘಾತದ ಅಪಾಯವನ್ನು ತಗ್ಗಿಸಬಹುದು. ರೋಗಿಗಳು ಹೃದ್ರೋಗಕ್ಕೆ ಅಪಾಯಕಾರಿ ಅಂಶಗಳ ಮೌಲ್ಯಮಾಪನಕ್ಕೆ ಒಳಗಾಗುತ್ತಿರುವಾಗ ಅಥವಾ ರೋಗಿಗಳು ಹೃದ್ರೋಗದ ಶಂಕಿತ ಉಪಸ್ಥಿತಿಗಾಗಿ ಮೌಲ್ಯಮಾಪನಕ್ಕೆ ಒಳಗಾದಾಗ ಸಮಸ್ಯೆಯ ಬಗ್ಗೆ ತಿಳಿದುಬರುತ್ತದೆ. ಇದರಿಂದ ವ್ಯಕ್ತಿಗಳು ಆರಂಭಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳನ್ನು ಪಡೆಯಲು ಸಹಾಯ ಮಾಡಬಹುದು, ಇದು ದೀರ್ಘಾವಧಿಯಲ್ಲಿ ಭವಿಷ್ಯದ ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ತಗ್ಗಿಸುತ್ತದೆ. ಜಾಗತಿಕವಾಗಿ, ಹೃದಯರಕ್ತನಾಳದ ಕಾಯಿಲೆಯು ಸಾವಿಗೆ ಮೊದಲ ಕಾರಣವಾಗಿದೆ ಮತ್ತು ದುರದೃಷ್ಟವಶಾತ್ ಅನೇಕ ಜನರಿಗೆ ಹೃದಯ ಸಮಸ್ಯೆಗಳಿರಬಹುದು ಎಂದು ತಿಳಿದಿರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ