ಭಾರತೀಯರಿಗೆ ಬಿಳಿಯಾಗಿ ಕಾಣುವ ಹಂಬಲ ಹೆಚ್ಚು. ಇದಕ್ಕಾಗಿ ಫೇರ್‌ನೆಸ್ ಕ್ರೀಂಗಳ ಮೊರೆ ಹೋಗುತ್ತಾರೆ. ಆದರೆ, ಈ ಕ್ರೀಂಗಳಿಗೂ ಕಿಡ್ನಿ ಸಮಸ್ಯೆಗಳಿಗೂ ಲಿಂಕ್ ಇದೆ ಎನ್ನುತ್ತಿದೆ ಹೊಸ ಅಧ್ಯಯನ.
ಹೊಸದಿಲ್ಲಿ: ಸ್ಕಿನ್ ಫೇರ್‌ನೆಸ್ ಕ್ರೀಮ್‌ಗಳ ಬಳಕೆಯಿಂದ ಭಾರತದಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಚರ್ಮದ ಬಣ್ಣದ ಬಗ್ಗೆ ಭಾರತೀಯರಿಗೆ ಅತಿಯಾದ ಕಾಳಜಿ. ಬೆಳ್ಳಗಿದ್ದರೆ ಚೆಂದ ಎಂಬ ಮೂಢನಂಬಿಕೆ ಆಳವಾಗಿ ಬೇರೂರಿದೆ. ಹಾಗಾಗಿ, ಈ ದೇಶ ಫೇರ್‌ನೆಸ್ ಕ್ರೀಂಗಳಿಗೆ ದೊಡ್ಡ ಮಾರುಕಟ್ಟೆ ಒದಗಿಸಿದೆ. ಆದರೆ, ಹೊಸ ಅಧ್ಯಯನವೊಂದು ಫೇರ್‌ನೆಸ್ ಕ್ರೀಂಗಳ ಅತಿಯಾದ ಬಳಕೆಯು ಕಿಡ್ನಿ ಸಮಸ್ಯೆಗಳಿಗೆ ಕಾರಣವಾಗ್ತಿರೋದನ್ನು ಕಂಡುಹಿಡಿದಿದೆ.
undefined
ಹೌದು, ಫೇರ್‌ನೆಸ್ ಕ್ರೀಂಗಳಲ್ಲಿ ಬಳಸುವ ಪಾದರಸವು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ ಎಂದು ತಿಳಿದುಬಂದಿದೆ.
ಪತಿಯ ಹಳ್ಳಿ ಮನೆಯಲ್ಲಿ ವಿವಾಹದ ಬಳಿಕ ಮೊದಲ ಯುಗಾದಿ ಸಂಭ್ರಮದಲ್ಲಿ ನಟಿ ಪೂಜಾ ಗಾಂಧಿ
ವೈದ್ಯಕೀಯ ಜರ್ನಲ್ ಕಿಡ್ನಿ ಇಂಟರ್‌ನ್ಯಾಶನಲ್‌ನಲ್ಲಿ ಪ್ರಕಟವಾದ ಅಧ್ಯಯನವು, ಹೆಚ್ಚಿನ ಪಾದರಸವನ್ನು ಹೊಂದಿರುವ ಫೇರ್‌ನೆಸ್ ಕ್ರೀಮ್‌ಗಳ ಹೆಚ್ಚಿದ ಬಳಕೆಯು ಮೆಂಬ್ರಾನಸ್ ನೆಫ್ರೋಪತಿ (MN) ಪ್ರಕರಣಗಳಿಗೆ ಕಾರಣವಾಗುತ್ತಿದೆ ಎಂದು ಹೇಳಿದೆ. ಇದು ಮೂತ್ರಪಿಂಡದ ಫಿಲ್ಟರ್‌ಗಳನ್ನು ಹಾನಿಗೊಳಿಸುತ್ತದೆ ಮತ್ತು ಪ್ರೋಟೀನ್ ಸೋರಿಕೆಗೆ ಕಾರಣವಾಗುತ್ತದೆ. ಜುಲೈ 2021 ಮತ್ತು ಸೆಪ್ಟೆಂಬರ್ 2023 ರ ನಡುವೆ ವರದಿಯಾದ MN ನ 22 ಪ್ರಕರಣಗಳನ್ನು ಅಧ್ಯಯನವು ಪರಿಶೀಲಿಸಿದೆ.
ಇದರ ಪರಿಣಾಮವಾಗಿ ನೆಫ್ರೋಟಿಕ್ ಸಿಂಡ್ರೋಮ್ ಉಂಟಾಗುತ್ತದೆ ಮತ್ತು ದೇಹವು ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ಅನ್ನು ಹೊರಹಾಕಲು ಕಾರಣವಾಗುತ್ತದೆ.
'ಪಾದರಸವು ಚರ್ಮದ ಮೂಲಕ ಹೀರಲ್ಪಡುತ್ತದೆ ಮತ್ತು ಮೂತ್ರಪಿಂಡದ ಫಿಲ್ಟರ್‌ಗಳ ಮೇಲೆ ಹಾನಿಯನ್ನುಂಟು ಮಾಡುತ್ತದೆ. ಇದು ನೆಫ್ರೋಟಿಕ್ ಸಿಂಡ್ರೋಮ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ' ಎಂದು ಸಂಶೋಧಕರಲ್ಲಿ ಒಬ್ಬರಾದ ಕೇರಳದ ಆಸ್ಟರ್ ಮಿಮ್ಸ್ ಆಸ್ಪತ್ರೆಯ ಡಾ ಸಜೀಶ್ ಶಿವದಾಸ್, Xನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಬಳಸಿ ಬಿಟ್ರೆ ಚರ್ಮ ಕಪ್ಪಾಗುತ್ತೆ!
'ಭಾರತದ ಅನಿಯಂತ್ರಿತ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಈ ಕ್ರೀಮ್‌ಗಳು ತ್ವರಿತ ಫಲಿತಾಂಶ ಭರವಸೆ ನೀಡುತ್ತವೆ, ಆದರೆ ಬಳಕೆಯನ್ನು ನಿಲ್ಲಿಸುವುದು ಇನ್ನೂ ಗಾಢವಾದ ಚರ್ಮಕ್ಕೆ ಕಾರಣವಾಗುತ್ತದೆ' ಎಂದು ಅವರು ಹೇಳಿದ್ದಾರೆ.
ಜಾಗೃತಿ ಅಗತ್ಯ
ಅಂತಹ ಉತ್ಪನ್ನಗಳನ್ನು ಬಳಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸುವುದು ಮತ್ತು ಈ ಅಪಾಯವನ್ನು ತಡೆಯಲು ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದು ಕಡ್ಡಾಯವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.