ಮದ್ಯ ಪ್ರೇಮಿಗಳಿಗೆ ದಿವ್ಯೌಷಧಿ, ಫುಲ್ ಟೈಟ್ ಆದ್ರೂ ಲಿವರ್ ತಲುಪಲ್ಲ ಆಲ್ಕೋಹಾಲ್!

By Suvarna News  |  First Published Feb 29, 2024, 12:29 PM IST

ಆಲ್ಕೋಹಾಲ್ ಸೇವನೆ ಮಾಡ್ಬೇಕು ಆದ್ರೆ ಕಿಕ್ ಏರ್ಬಾರದು, ಎಷ್ಟೇ ಕುಡಿದ್ರು ಲಿವರ್ ಹಾಳಾಗ್ಬಾರದು ಎನ್ನುವವರಿಗೆ ಖುಷಿ ಸುದ್ದಿ ಇದೆ. ಬ್ರಿಟನ್ ನಲ್ಲಿ ಒಂದು ಔಷಧಿ ಪ್ರಸಿದ್ಧಿ ಪಡೆಯುತ್ತಿದೆ. ಅದ್ರ ಲಾಭ ಕೇಳಿದ್ರೆ ನೀವು ದಂಗಾಗ್ತೀರಿ. 
 


ಆಲ್ಕೋಹಾಲ್ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಇಡೀ ದೇಹ ಹಾಗೂ ಮಾನಸಿಕ ಆರೋಗ್ಯದ ಮೇಲೆ ಆಲ್ಕೋಹಾಲ್ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಲಿವರ್ ಡ್ಯಾಮೇಜ್ ಮಾಡುತ್ತೆ ಎನ್ನುವ ವಿಷ್ಯ ಎಲ್ಲರಿಗೂ ಗೊತ್ತು. ಇಷ್ಟಿದ್ರೂ ಜನರು ತಮ್ಮ ಚಟ ಬಿಡೋದಿಲ್ಲ. ಮದ್ಯ ವ್ಯಸನಿಗಳ ಸಂಖ್ಯೆ ವಿಶ್ವದಾದ್ಯಂತ ದಿನ ದಿನಕ್ಕೂ ಏರಿಕೆ ಆಗ್ತಾನೆ ಇದೆ. ಜನರು ಆಲ್ಕೋಹಾಲ್ ಸೇವನೆ ಕಡಿಮೆ ಮಾಡೋ ಬದಲು ಅದನ್ನು ಹೆಚ್ಚು ಸೇವನೆ ಮಾಡಿದ್ರೂ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಏನು ಮಾಡ್ಬಹುದು ಎಂಬ ಉಪಾಯ ಹುಡುಕ್ತಾರೆ. ಈಗ ಬ್ರಿಟನ್ ನಲ್ಲಿ ಮಾತ್ರೆಯೊಂದು ಸಾಕಷ್ಟು ಚರ್ಚೆ ಮಾಡ್ತಿದೆ. ಅಲ್ಲಿನ ಮದ್ಯ ವ್ಯಸನಿಗಳಿಗೆ ಈ ಮಾತ್ರೆ ತುಂಬಾ ಇಷ್ಟವಾಗ್ತಿದೆ. ಆಲ್ಕೋಹಾಲ್ ಕುಡಿಯುವ ಮೊದಲು ಇದನ್ನು ತಿನ್ನಬೇಕು. ಈ ಮಾತ್ರೆಯ ಎಷ್ಟು ಒಳ್ಳೆಯದು ಎನ್ನಲಾಗ್ತಿದೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಆದ್ರೂ ಈ ಮಾತ್ರೆಯನ್ನು ಅಧಿಕೃತವಾಗಿ ಮಾರಾಟ ಮಾಡಲಾಗ್ತಿದೆ. ನಾವಿಂದು ಆಲ್ಕೋಹಾಲ್ ಸೇವನೆ ಮೊದಲು ತೆಗೆದುಕೊಳ್ಳುವ ಈ ಮಾತ್ರೆಯ ವಿಶೇಷವೇನು ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಬ್ರಿಟನ್ (Britain)  ನಲ್ಲಿ ಮಾರಾಟ ಆಗ್ತಿರುವ ಈ ಮಾತ್ರೆ ಹೆಸರು Myrkl. ಇದನ್ನು ಸ್ವತಂತ್ರವಾಗಿ ಪರೀಕ್ಷಿಸಲಾಗಿದೆ. ಆಲ್ಕೋಹಾಲ್ ಸೇವನೆ ಮುನ್ನ ಇದನ್ನು ತಿಂದ್ರೆ, ಆಲ್ಕೋಹಾಲ್ (Alcohol) ಸೇವನೆ ಮಾಡಿದ 60 ನಿಮಿಷಗಳಲ್ಲಿ ಕುಡಿದ ಶೇಕಡಾ 70ರಷ್ಟು ಆಲ್ಕೋಹಾಲ್ ಅನ್ನು ದೇಹದಿಂದ ನಷ್ಟಮಾಡುವ ಶಕ್ತಿಯನ್ನು ಈ ಮಾತ್ರೆ ಹೊಂದಿದೆ. ಆಲ್ಕೋಹಾಲ್ ನಿಮ್ಮ ಲಿವರ್ (Liver) ತಲುಪದಂತೆ ಇದು ನೋಡಿಕೊಳ್ಳುತ್ತದೆ. 

Tap to resize

Latest Videos

ಅಮಿತಾಬ್ ಬಚ್ಚನ್ ಮಗಳು ಶ್ವೇತಾಗೆ ಈ ಚರ್ಮ ಸಮಸ್ಯೆ ಇದೆಯಂತೆ! ಏನದು?

ಸಸ್ಯಾಹಾರಿ ಮತ್ತು ಶೇಕಡಾ 100ರಷ್ಟು ನೈಸರ್ಗಿಕವಾದ ಈ ಮಾತ್ರೆ ಬ್ಯಾಸಿಲಸ್ ಕೋಗುಲನ್ಸ್ ಮತ್ತು ಬ್ಯಾಸಿಲಸ್ ಸಬ್ಟಿಲಿಸ್ ಎಂಬ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದು ಎಲ್-ಸಿಸ್ಟೈನ್ ಮತ್ತು ವಿಟಮಿನ್ ಬಿ 12 ಅನ್ನು ಹೊಂದಿರುತ್ತದೆ. ಆಲ್ಕೋಹಾಲ್ ಯಕೃತ್ತನ್ನು ತಲುಪುವ ಮೊದಲು ಕರುಳಿನಲ್ಲಿರುವ ಆಲ್ಕೋಹಾಲ್ ಅನ್ನು ನಾಶಪಡಿಸುವ ಗುಣವನ್ನು ಮಾತ್ರೆ ಹೊಂದಿದೆ. ಇದು ದೇಹದಲ್ಲಿ  ಶಕ್ತಿ ಮತ್ತು ರೋಗನಿರೋಧಕ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗ್ತಿದೆ.

ಈ ಔಷಧಿ ತಯಾರಿಸಲು ಬಳಸಿದ ಪದಾರ್ಥಗಳನ್ನು ಯುರೋಪಿಯನ್ ಫುಡ್ ಸೇಫ್ಟಿ ಏಜೆನ್ಸಿ (EFSA) ಮತ್ತು ಅಮೆರಿಕ ಫುಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅನುಮೋದಿಸಿದೆ. ಅವುಗಳನ್ನು ಸುರಕ್ಷಿತವೆಂದು ಪರಿಗಣಿಸಿದೆ.

ಸ್ವತಂತ್ರವಾಗಿ ನಡೆದ ಪರೀಕ್ಷೆಯಲ್ಲಿ ಪಾಲ್ಗೊಂಡ ಜನರಿಗೆ ಎರಡು ಗ್ಲಾಸ್ ವೈನ್ ನೀಡಲಾಗಿತ್ತು. ವೈನ್ ಸೇವನೆ ಮುನ್ನ ಮಾತ್ರೆ ತಿನ್ನುವಂತೆ ಹೇಳಲಾಗಿತ್ತು. ವೈನ್ ಸೇವನೆ ಮಾಡಿದ 30 ನಿಮಿಷಗಳ ನಂತರ ಅವರ ಪರೀಕ್ಷೆ ನಡೆದಿದೆ. ಈ ವೇಳೆ ಅವರ ದೇಹದಲ್ಲಿ ಶೇಕಡಾ 50ರಷ್ಟು ಆಲ್ಕೋಹಾಲ್ ಕಡಿಮೆ ಆಗಿರುವುದು ಪತ್ತೆಯಾಗಿದೆ. 60 ನಿಮಿಷಗಳ ನಂತರ ಶೇಕಡಾ 70ರಷ್ಟು ಕಡಿಮೆ ಆಲ್ಕೋಹಾಲ್ ಇತ್ತು.

ಕಾಟನ್ ಕ್ಯಾಂಡಿ ತಿನ್ನೋದ್ರಿಂದ ಶುಗರ್, ಹೃದಯ ಸಮಸ್ಯೆ ಹೆಚ್ಚುತ್ತೆ!

ಈ ಮಾತ್ರೆ ಆಲ್ಕೋಹಾಲ್ (Alchohol) ನಿಂದ ದೇಹಕ್ಕಾಗುವ ಪ್ರಭಾವವನ್ನು ಕಡಿಮೆ ಮಾಡುತ್ತದೆ.  Myrkl ನ ಎರಡು ಮಾತ್ರೆಯನ್ನು ಮದ್ಯಸೇವನೆ ಮಾಡುವ ಒಂದು ಗಂಟೆ ಮೊದಲು ತೆಗೆದುಕೊಳ್ಳಬೇಕು. ಇದರ ಪ್ರಭಾವ ಹನ್ನೆರಡು ಗಂಟೆಯವರೆಗೆ ಇರುತ್ತದೆ. 

ಸ್ವೀಡಿಷ್ ವೈದ್ಯಕೀಯ ಕಂಪನಿ ಡಿ ಫೇರ್ ಮೆಡಿಕಲ್ (DFM) ಈ ಮಾತ್ರೆಗಳ ಸಂಶೋಧನೆ ನಡೆಸಿದೆ. ಕಳೆದ 30 ವರ್ಷಗಳ ಸಂಶೋಧನೆಯ ಫಲಿತಾಂಶವಾಗಿ ಈ ಮಾತ್ರೆ ಹೊರಬಂದಿದೆ. ಈ ಮಾತ್ರೆಯನ್ನು ಎಲ್ಲರೂ ಸೇವನೆ ಮಾಡುವಂತಿಲ್ಲ. ಗರ್ಭಿಣಿ, ಹಾಲುಣಿಸುವ ಮಹಿಳೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಮಾತ್ರೆ ಸೂಕ್ತವಲ್ಲ. ಅದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.  

click me!