Barefoot Walk: ಬರಿಕಾಲಿನಲ್ಲಿ ನಡೆಯುವುದರಿಂದ ಬಹಳಷ್ಟು ಪ್ರಯೋಜನ

By Suvarna News  |  First Published Jan 14, 2022, 4:21 PM IST

ಇತ್ತೀಚಿಗಂತೂ ಜನರು ಚಪ್ಪಲಿ ಧರಿಸದೇ ಹೊರಗೆ ಕಾಲೆ ಇಡುವುದಿಲ್ಲ, ಕೆಲವರಂತೂ ಮನೆಯ ಒಳಗೂ ಕೂಡ ಚಪ್ಪಲಿ ಧರಿಸಿಯೇ ನಡೆದಾಡುತ್ತಾರೆ. ನೀವೂ ಕೂಡ ಈ ಗುಂಪಿಗೆ ಸೇರಿದ್ದೀರಾ? ಹಾಗದರೆ ಬರಿಗಾಲಿನಲ್ಲಿ ಓಡಾಡುವುದರಿಂದ ಆಗುವ ಉಪಯೋಗಗಳನ್ನು ಈಗಲೇ ತಿಳಿದುಕೊಳ್ಳಿ.


ಜನರು ಪಾದರಕ್ಷೆಗಳು (slippers) ಇಲ್ಲದೆ ಯಾವುದೇ ಕೆಲಸವನ್ನೂ ಮಾಡುವುದಿಲ್ಲ. ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳಲ್ಲಿಯೂ ಪಾದ ರಕ್ಷೆಗಳು ಸಾಕ್ಷಿಯಾಗಿರುತ್ತವೆ. ಆದರೆ ಯಾವಾಗಲೂ ಚಪ್ಪಲಿಯನ್ನು ಹಾಕಿಕೊಂಡೇ ಇರುವುದರಿಂದ ಅನಾರೋಗ್ಯ ಉಂಟಾಗಬಹುದು ಎಂಬುದು ಹಲವಾರು ಜನರಿಗೆ ತಿಳಿದಿರುವುದಿಲ್ಲ.

ಬೆಳಗ್ಗೆ (Morning) ಎದ್ದಾಗಿನಿಂದ ರಾತ್ರಿ ಮಲಗುವವರೆಗೆ.

Latest Videos

ಬೆಳಗ್ಗೆ ಎದ್ದ ಕೂಡಲೇ ಪಾದಗಳಿಗೆ ಚಪ್ಪಲಿ ಧರಿಸಿಕೊಂಡರೆ ರಾತ್ರಿ ಮಲಗುವಾಗಲೇ ಪಾದಗಳಿಗೆ ಚಪ್ಪಲಿ ಯಿಂದ ಮುಕ್ತಿ. ಅದರಲ್ಲಿಯೂ ಹಲವಾರು ವಿಧದ ಚಪ್ಪಲಿಗಳನ್ನು ಧರಿಸುತ್ತೀವಿ. ಹಾಸಿಗೆಯಿಂದ ಮೇಲೆದ್ದಾಗ ಮೃದು (soft) ಬಟ್ಟೆಯಂತಹ ಚಪ್ಪಲಿಯಾದರೆ, ಬಾತ್ ರೂಮಿನೊಳಗೆ ಬೇರೆಯೇ ಚಪ್ಪಲಿ ಇರುತ್ತದೆ, ಬೆಳಗ್ಗಿನ ವ್ಯಾಯಾಮ ಅಥವಾ ಜಾಗಿಂಗ್ ಮಾಡಲೆಂದು ಶೂಗಳನ್ನು ಧರಿಸಿದರೆ ಮನೆಯಿಂದ ಹೊರ ಹೋಗುವಾಗ ಬೇರೆಯೇ ಸ್ಯಾಂಡಲ್ ಗಳನ್ನು ಬಳಸುವಂತಹ ಕಾಲಮಾನದವರಾಗಿದ್ದೇವೆ. ಆದರೆ ಇದರಿಂದ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗಬಹುದು. ಇದರ ಬದಲಿಗೆ ಬರಿ ಕಾಲಿನಲ್ಲಿ ನಡೆಯುವುದರಿಂದ ಹಲವಾರು ಉಪಯೋಗಗಳಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. 

  • ನಡೆಯುವ ಭಂಗಿಯಲ್ಲಿ (walking style) ಬದಲಾವಣೆ

ಚಪ್ಪಲಿ ಇಲ್ಲದೆ ನಡೆಯುವಾಗ ಒಳ್ಳೆಯ ಭಂಗಿಯಲ್ಲಿ ನೇರವಾಗಿ ನಡೆಯುತ್ತಿರುತ್ತೀವಿ, ಆದರೆ ಚಪ್ಪಲಿ ಹಾಕಿ ನಡೆಯುವಾಗ ನಮಗೇ ತಿಳಿಯದ ಹಾಗೆ ನಮ್ಮ ಭಂಗಿ ಬದಲಾಗುತ್ತದೆ. ಅದರಲ್ಲಿಯೂ ಹೈ ಹೀಲ್ಡ್‌ ಚಪ್ಪಲಿ ಧರಿಸಿದರಂತೂ ಕೇಳುವುದೇ ಬೇಡ. ಇದರಿಂದಾಗಿ ಕಾಲು ನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ.

  • ಜೀರ್ಣಕ್ರಿಯೆಗೆ (Digestion) ಹಾಗೂ ರಕ್ತಸಂಚಾರಕ್ಕೆ ಸಹಕಾರಿ

undefined

ಬರಿಕಾಲಿನಲ್ಲಿ ನಡೆಯುವಾಗ ಕಾಲು ಹೊಟ್ಟೆಯಮೇಲೆ ಒತ್ತಡ ಹಾಕುವ ಕಾರಣ ಜೀರ್ಣಕ್ರಿಯೆ ಸುಗಮವಾಗಿರುತ್ತದೆ ಆದರೆ ಚಪ್ಪಲಿ ಧರಿಸಿದಾಗ ಹೀಗೆ ಆಗುವುದಿಲ್ಲ. ಇದರ ಜೊತೆಗೆ ಚಪ್ಪಲಿ ಇಲ್ಲದೆ ನಡೆಯುವುದರಿಂದ ರಕ್ತಸಂಚಲನೆಯೂ ಕೂಡ ಉತ್ತಮವಾಗಿರುತ್ತದೆ. ಹಾಗಾಗಿ ರಕ್ತದೊತ್ತಡವು ಕೂಡ ಕಡಿಮೆಯಾಗುತ್ತದೆ.

Diet to fight Omicron: ಒಮಿಕ್ರೋನ್‌ನಿಂದ ಬಚಾವ್ ಆಗ್ಬೇಕಂದ್ರೆ ಹೀಗ್ ಮಾಡಿ!

ಕಾಲಿಗೆ ಮಸಾಜ್‌ (Massage) ದೊರೆಯುತ್ತದೆ ಹಾಗೂ ಮನಸ್ಸಿಗೆ ಉಲ್ಲಾಸವಾಗುತ್ತದೆ.

ಬರಿ ಕಾಲಿನಲ್ಲಿ ನಡೆಯುತ್ತಿರುವಾಗ ಮರಳು ಹಾಗು ಕಲ್ಲಿನಂತಹ ವಸ್ತುಗಳು ನಮ್ಮ ಕಾಲನ್ನು ಮೃದುವಾಗಿ ಸ್ಪರ್ಶ ಮಾಡುವುದರಿಂದ ದೇಹದಲ್ಲಿ ದೇಹದ ಸರ್ವಾಂಗೀಣ ನರಮಂಡಲ ವ್ಯವಸ್ಥೆಯೂ ಕಾಲಿನಲ್ಲಿ ಒಂದಕ್ಕೊಂದು ಜೋಡಣೆಯಾಗಿರುವ ಕಾರಣ ಇಡೀ ನರಮಂಡಲ ವ್ಯವಸ್ಥೆಗೆ ವ್ಯಾಯಾಮವಾದಂತಾಗುತ್ತದೆ ಪಾದಗಳಿಗೆ ಹೊಸ ಸ್ಪರ್ಶದಿಂದಾಗಿ ಮನಸ್ಸಿಗೆ ಉಲ್ಲಾಸ ಇರುತ್ತದೆ, ಮಾನಸಿಕ ಸ್ಥತಿ ಉತ್ತಮವಾಗಿರುತ್ತದೆ. ಇದರಿಂದಾಗಿ ಸಹನೆ ಹೆಚ್ಚುತ್ತದೆ.

  • ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆ

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗೂ ಪಾದ ರಕ್ಷೆ ಧರಿಸದೇ ವ್ಯಾಯಾಮ ಮಾಡುವುದರಿಂದ ಹೃದಯ ಸಂಬಂಧಿ ರೋಗಗಳು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಬರಿ ಕಾಲಿನಲ್ಲಿ ನಡೆದಾಡುವಾಗ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು (Negative energy) ಭೂಮಿಯು ಆಕರ್ಶಿಸುತ್ತದೆ ಇದರಿಂದಾಗಿ ಸಕಾರಾತ್ಮಕ (positivity) ಗುಣಗಳು ಹೆಚ್ಚುತ್ತವೆ. ಇನ್ನು ಮೈಗ್ರೇನ್ ನಂತಹ ರೋಗಗಳು ದೂರಾಗುತ್ತವೆ.
Beauty Tips: ಪಾದದ ಸಮಸ್ಯೆಗಳಿಗೆ ಇಲ್ಲಿವೆ ಸುಲಭ ಉಪಾಯ!

  • ನರಗಳ ಸಂವೇದನೆ (Sensation) ಹೆಚ್ಚುತ್ತದೆ.

ನಮ್ಮ ದೇಹದಲ್ಲಿನ 72000 ನರಗಳ ತುದಿಯು ಅಂಗಾಲಿನಲ್ಲಿ ಇರುತ್ತದೆಯಂತೆ ಚಪ್ಪಲಿ ಧರಿಸಿ ನಡೆಯುವುದರಿಂದ ಇವು ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಬರಿ ಕಾಲಿನಲ್ಲಿ ನಡೆಯುವುದರಿಂದ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಬಹದಾಗಿದೆ, ಎನರ್ಜಿಲೆವೆಲ್ ಹೆಚ್ಚುವುದರಿಂದ ದಿನವಿಡೀ ಆಕ್ಟೀವ್ ಆಗಿರಲು ಇದು ಸಹಕಾರಿ. ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.

ಯಾವಾಗಲು ಚಪ್ಪಲಿ ಧರಿಸಿಕೊಂಡೆ ಇರುವುದನ್ನು ಇಷ್ಟು ದಿನಗಳಿಂದ ರೂಢಿ ಮಾಡಿಕೊಂಡು ಬಂದಿರುವುದರಿಂದ ಒಂದೇ ಸಲಕ್ಕೆ ಈ ಅಭ್ಯಾಸ ಬಿಡಲು ಸಾಧ್ಯವಿಲ್ಲದ ಮಾತು ಆದರೆ ದಿನದ ಒಂದು 2 ರಿಂದ 3 ಗಂಟೆಗಳ ಕಾಲವಾದರೂ ಬರಿ ಕಾಲಿನಲ್ಲಿ ನಡೆದಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. 

click me!