ಆತ್ಮಹತ್ಯೆಗೆ ಪ್ರೇರೇಪಿಸುವ ನೋವು: ಟ್ರೈಜಿಮಿನಲ್ ನ್ಯೂರಾಲ್ಜಿಯಾ ಕಾಯಿಲೆ ಲಕ್ಷಣಗಳು ಮತ್ತು ಚಿಕಿತ್ಸೆ

By Suvarna News  |  First Published Aug 26, 2024, 2:38 PM IST

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬುದು ಟ್ರೈಜಿಮಿನಲ್ ನರದ ಮೇಲೆ ಒತ್ತಡ ಉಂಟಾದಾಗ ಸಂಭವಿಸುವ ರೋಗ. ಈ ಕಾಯಿಲೆಯು ತೀವ್ರವಾದ ಮುಖದ ನೋವನ್ನು ಉಂಟುಮಾಡುತ್ತದೆ, ಇದು ಆತ್ಮಹತ್ಯೆಯ ಆಲೋಚನೆಗಳಿಗೆ ಕಾರಣವಾಗಬಹುದು. ಆದರೆ, ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ.


ಇಂದಿನ ಪೀಳಿಗೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಮಾನಸಿಕ ಆರೋಗ್ಯವೋ ಅಥವಾ ಜೀವನ ಶೈಲಿಯೋ ಗೊತ್ತಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಾಗಲೋ ಅಥವಾ ಸಣ್ಣ ಪುಟ್ಟದಲ್ಲಿ ಸೋಲು ಅನುಭವಿಸಿದಾಗಲೂ ಜೀವ ತೆಗೆದುಕೊಳ್ಳುವಂಥ ನಿರ್ಧಾರಕ್ಕೆ ಸಣ್ಣ ಪುಟ್ಟವರು ಮುಂದಾಗುತ್ತಿರುವುದು ನಿಜಕ್ಕೂ ಆಘಾತಕಾರ ವಿಷಯ. ಏನಿದು ಆತ್ಮಹತ್ಯೆ ಕಾಯಿಲೆ? ಇದಕ್ಕಿರುವ ಚಿಕಿತ್ಸೆಗಳೇನು?

ಆತ್ಮಹತ್ಯೆ ಕಾಯಿಲೆಯನ್ನು ವೈದ್ಯಕೀಯವಾಗಿ ಟ್ರೈಜಿಮಿನಲ್ ನ್ಯೂರಾಲ್ಜಿಯಾ (TN) ಎನ್ನುತ್ತಾರೆ. ಟ್ರೈಜಿಮಿನಲ್ ನರದ ಮೇಲೆ ಒತ್ತಡ ಉಂಟಾದಾಗ ಸಂಭವಿಸೋ ರೋಗ. ಇತ್ತೀಚಿನ ವರದಿಗಳನ್ನು ಆಧರಿಸಿ ನೋಡಿದರೆ, ವ್ಯಕ್ತಿ ತುಂಬಾ ಸಂಕಟದಲ್ಲಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಹೆಚ್ಚಿವೆ. ಅತೀ ಕಡಿಮೆ ವಯಸ್ಸಿನ ಹಾಗೂ ಕನಿಷ್ಠ 6 ವರ್ಷದ ಮಗುವಿಗೂ ಈ ಸಮಸ್ಯೆ ಕಾಡಬಹುದು. ಈ ಕಾಯಿಲೆಯು ಕೈ ಕಾಲು ಕತ್ತರಿಸುವ ವೇಳೆ ಅಥವಾ ಹೆರಿಗೆ ವೇಳೆ ಎದುರಾಗುವ ನೋವಿಗೆ ಸಮನಾದದ್ದು  ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್‌ ಡಾ. ಪ್ರಥಮ್ ಬೈಸಾನಿ ಹೇಳಿದ್ದಾರೆ. 
 
ಆತ್ಮಹತ್ಯೆ ಕಾಯಿಲೆ ಎಂಬುದು ಮಾನಸಿಕವಾಗಿ ವಿಪರೀತ ನೋವನ್ನು ಹೊಂದಿರುವ ವ್ಯಕ್ತಿಯ ನರಗಳ ಮೇಲೆ ಪ್ರಭಾವ ಬೀರುತ್ತದೆ. ನೋವನ್ನು ತುಂಬಿಕೊಂಡ ವ್ಯಕ್ತಿಯಲ್ಲಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತವೆ. ಇದರಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾಗುತ್ತಾರೆ. ಈ ರೀತಿಯ ಸಮಸ್ಯೆಗೆ ಒಳಗಾದವರು ಆಗಾಗ್ಗೆ ಮುಖ ಹಾಗೂ ಕತ್ತಿನ ಕೆಳಗೆ ಹೆಚ್ಚು ನೋವಿನಿಂದ ಬಳಲುತ್ತಿರುತ್ತಾರೆ. ಸಣ್ಣದೊಂದು ಸ್ಪರ್ಶ ಅಥವಾ ಚಳಿಯಿಂದಲೂ ಅವರು ಉದ್ವೇಗಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ಮೈಗ್ರೇನ್‌ ಅಥವಾ ಮುಖಕ್ಕೆ  ಸಂಬಂಧಿಸಿದ ನೋವುಗಳು ಕಂಡುಬರುತ್ತವೆ. ಈ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚುವುದು ಕಷ್ಟದ ಸಂಗತಿ. 

ಸಲ್ಮಾನ್ ಖಾನ್‌ಗಿದ್ದ ಈ 'ಸೂಸೈಡ್ ಡಿಸೀಸ್' ಏನು?

Latest Videos

undefined

ಏನಿದು ಟ್ರೈಜಿಮಿನಲ್ ನ್ಯೂರಾಲ್ಜಿಯಾ?
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವುದು ಟ್ರೈಜಿಮಿನಲ್ ನರದ ಮೇಲೆ ಬೀಳುವ ಒತ್ತಡದ ಸಮಸ್ಯೆ. ಕಿವಿ, ಮುಖ, ಗಲ್ಲ, ದವಡೆ, ತುಟಿ ಮತ್ತು ಮೂಗಿನ ಸುತ್ತ ಈ ನರ ಹಬ್ಬಿರುತ್ತದೆ. ವ್ಯಕ್ತಿ ಸಂಕಟಕ್ಕೆ ಒಳಗಾದಾಗ ಟ್ರೈಜಿಮಿನಲ್‌ ನರದ ಮೇಲೆ ಪ್ರಭಾವ ಬೀರುತ್ತದೆ. ಆಗ ವ್ಯಕ್ತಿಯ ಮುಖದ ಕೆಳಗೆ, ಮೇಲೆ ಅಥವಾ ಮುಂಭಾಗ ನೋವು ಕಾಣಿಸಿಕೊಳ್ಳಬಹುದು ಅಥವಾ  ಮುಖದ ಎರಡೂ ಬದಿಯಲ್ಲೂ ನೋವುಂಟಾಗಬಹುದು. ಈ ರೀತಿಯ ನೋವು ಸಾಮಾನ್ಯವಾಗಿ 50 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ಅಮೇರಿಕನ್ ಅಸೋಸಿಯೇಷನ್ ಆಫ್ ನ್ಯೂರೋಲಾಜಿಕಲ್ ಸರ್ಜನ್ಸ್ ಹೇಳುವ ಪ್ರಕಾರ ಯುಎಸ್‌‌ನಲ್ಲಿ ವಾರ್ಷಿಕವಾಗಿ ಸುಮಾರು ಒಂದೂವರೆ ಲಕ್ಷ ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ದೈನಂದಿನ ಜೀವನದ ಮೇಲೆ ದುಷ್ಪರಿಣಾಮ
ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಸಮಸ್ಯೆ ವ್ಯಕ್ತಿಯ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆತ ಸಾಮಾಜಿಕವಾಗಿ ಬೆರೆಯುವುದು ಮತ್ತು ಇತರರೊಂದಿಗೆ ಊಟ ಮಾಡುವುದು ಅಥವಾ ಮಾತನಾಡುವುದಕ್ಕೆ ಹಿಂದೇಟು ಹಾಕುತ್ತಾನೆ. ಈ ಸಮಸ್ಯೆಯುಳ್ಳ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾದ ಹಂತಕ್ಕೆ ತಲುಪುತ್ತಾರೆ. ಈ ಸಮಸ್ಯೆ ರೋಗಲಕ್ಷಣಗಳು ಸಂಕ್ಷಿಪ್ತ, ತೀವ್ರವಾದ ನೋವಿನಿಂದ (TN1) ಹಿಡಿದು ದೀರ್ಘಕಾಲದ ನೋವಿನವರೆಗೂ (TN2) ತಲುಪಬಹುದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ್ಗೆ ಬೆಳಕು, ಧ್ವನಿ ಕೇಳಿದಾಗ ಕಿರಿಕಿರಿಯಾಗುವುದು ಮತ್ತು ವಾಕರಿಕೆ ಹಾಗೂ ವಾಂತಿಯೂ ಆಗೋದಿದೆ. ಹೀಗಾಗಿ ಟ್ರೈಜಿಮಿನಲ್ ನರಶೂಲೆಯ ರೋಗನಿರ್ಣಯವು ನಿರ್ಮೂಲನ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕೇವಲ ಒಂದು ಪರೀಕ್ಷೆಯ ಮೂಲಕ ಟ್ರೈಜಿಮಿನಲ್‌ ನ್ಯೂರಾಲ್ಜಿಯಾ ಸಮಸ್ಯೆಯನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಗಳ ಜೊತೆಗೆ ಎಂಆರ್‌ಐ ಮಾಡಿಸಿಯೇ ಟ್ರೈಜಿಮಿನಲ್‌ ನರಗಳ ಮೇಲೆ ಒತ್ತಡ ಬೀರುವ ಟ್ಯೂಮರ್‌ಗಳನ್ನು ಪತ್ತೆ ಹಚ್ಚಲಾಗುತ್ತದೆ. ಕೆಲವು ಔಷಧಿ ಅಥವಾ ಟ್ರೈಸೈಕ್ಲಿಕ್‌ ಖಿನ್ನತೆ ಶಮನಕಾರಿಗಳ ಮೂಲಕವೂ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಇದೆಯೋ, ಇಲ್ಲವೋ ಎಂಬುದನ್ನು ಕಂಡು ಹಿಡಿಯಬಹುದು. 

ನಿಮ್ಮ ಲೈಫ್‌ಸ್ಟೋರಿ ಹೇಳಿ, ಹತ್ತು ರೂಪಾಯಿ ಕೊಡ್ತೀನಿ!

ಚಿಕಿತ್ಸೆಗಳೇನು?
ಟ್ರೈಜಿಮಿನಲ್ ನ್ಯೂರಾಲ್ಜಿಯಾ ನಿರ್ವಹಿಸಲು ಹಲವು ಚಿಕಿತ್ಸಾ ವಿಧಾನಗಳಿವೆ. ಕಾರ್ಬಮಾಜೆಪೈನ್ ಮತ್ತು ಗ್ಯಾಬಪೆಂಟಿನ್‌ನಂತಹ ಆಂಟಿಕನ್ವಲ್ಸೆಂಟ್ ಔಷಧಿಗಳ ಬಳಕೆಯ ಮೂಲಕ ನರಗಳ ಉರಿ ನಿಯಂತ್ರಿಸಬಹುದು. ಟ್ರೈಸೈಕ್ಲಿಕ್ ಖಿನ್ನತೆ-ಶಮನಕಾರಿಗಳಾದ ಅಮಿಟ್ರಿಪ್ಟಿಲೈನ್‌ನಂತಹ ಔಷಧಿಗಳನ್ನು ಬಳಸಿ ನೋವು ನಿವಾರಿಸಬಹುದು. ಔಷಧಿಗಳಿಂದ ಗುಣಮುಖರಾಗದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ.  ನರ ದೌರ್ಬಲ್ಯ ಅಥವಾ ತೀವ್ರ ನೋವಿಗೆ ಒಳಗಾಗಿದ್ದಲ್ಲಿ ಗ್ಲಿಸರಾಲ್ ಚುಚ್ಚುಮದ್ದು ಮತ್ತು ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್‌ನಂತಹ ಪೆರ್ಕ್ಯುಟೇನಿಯಸ್ ಕಾರ್ಯವಿಧಾನಗಳ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು. ಸ್ಟೀರಿಯೊಟಾಕ್ಟಿಕ್ ರೇಡಿಯೊ ಸರ್ಜರಿಯಲ್ಲಿ ವಿಕಿರಣಗಳನ್ನು ಬಳಸುವ ಮೂಲಕ ನೋವು ತಡೆಗಟ್ಟಬಹುದು. ಅಲ್ಲದೆ ನೋವನ್ನು ಪಸರಿಸುವ ನರಗಳ ಬ್ರಾಂಚಸ್‌ಗಳನ್ನು ಕತ್ತರಿಸುವ ಮೂಲಕವೂ ನೋವು ನಿಯಂತ್ರಿಸಬಹುದು. ಈ ಎಲ್ಲ ವಿಧಾನಗಳು ತಾತ್ಕಾಲಿಕ ಉಪಶಮನವನ್ನು ನೀಡುತ್ತದೆ. ಆದರೆ ಈ ಸಮಸ್ಯೆ ಉಳ್ಳವರಲ್ಲಿ ಕ್ರಮೇಣ ನೋವು ಕಾಣಿಸಿಕೊಳ್ಳಲಿದೆ ಎಂದು ವೈದ್ಯರು ತಿಳಿಸಿದರು.

ನಿಮ್ಮ ಲೈಫ್‌ಸ್ಟೋರಿ ಹೇಳಿ, ಹತ್ತು ರೂಪಾಯಿ ಕೊಡ್ತೀನಿ!

ಪರಿಣಾಮಕಾರಿ ಚಿಕಿತ್ಸೆಗಳು ಏನಿದೆ ?
ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ (MVD) ಶಸ್ತ್ರ ಚಿಕಿತ್ಸೆಯನ್ನು ಅತ್ಯಂತ ಪರಿಣಾಮಕಾರಿ ದೀರ್ಘಕಾಲೀನ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಈ ಪ್ರಕ್ರಿಯೆ ತಲೆಬುರುಡೆಯಲ್ಲಿ ಕಂಡುಬರುವ ಟ್ರೈಜಿಮಿನಲ್ ನರವನ್ನು ಗುರುತಿಸಿ, ನರ ಮತ್ತು ರಕ್ತನಾಳದ ನಡುವೆ ಟೆಫ್ಲಾನ್ನ ಕುಶನ್ ಅನ್ನು ಇರಿಸುವುದನ್ನು ಒಳಗೊಂಡಿರುತ್ತದೆ. ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ ಚಿಕಿತ್ಸೆಯಿಂದ ಮುಖ ಮರಗಟ್ಟುವಿಕೆ ತೊಂದರೆ ಕಾಣಿಸಿ ಕೊಂಡರೂ ದೀರ್ಘಕಾಲದ ನೋವಿನಿಂದ ಮುಕ್ತಿ ಪಡೆಯಬಹುದು. ಕಿವಿ ಕೇಳಿಸದಿರುವುದು, ಮುಖ ಮರಗಟ್ಟುವಿಕೆ, ಅತೀ ವಿರಳ ಪ್ರಕರಣಗಳಲ್ಲಿ ಹೃದಯಾಘಾತದಂತಹ ಅಡ್ಡ ಪರಿಣಾಮಗಳು ಕಂಡುಬರುವ ಸಾಧ್ಯತೆಗಳಿದ್ದಾಗಲೂ ಕೂಡ ಮೈಕ್ರೋವಾಸ್ಕುಲರ್ ಡಿಕಂಪ್ರೆಶನ್ ಚಿಕಿತ್ಸೆ ಸುರಕ್ಷಿತ.

ಡಾ. ಪ್ರಥಮ್ ಬೈಸಾನಿ, ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್‌, ವಾಸವಿ ಆಸ್ಪತ್ರೆ, ಬೆಂಗಳೂರು.

click me!